ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಪಟ್ಟಿ 2021-22
ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಒಂದು ಸರ್ಕಾರಿ ಯೋಜನೆಯಾಗಿದ್ದು, ಇದು ಸಮಾಜದ ದುರ್ಬಲ ವರ್ಗಗಳಿಗೆ ಕೈಗೆಟಕುವ ವಸತಿ ಒದಗಿಸುವ ಗುರಿ ಹೊಂದಿದೆ. ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು 31 ಮಾರ್ಚ್ 2022ರ ಒಳಗೆ ನಗರ ಪ್ರದೇಶದ ಬಡವರಿಗೆ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಇದು ಹಲವಾರು ಸೌಲಭ್ಯಗಳನ್ನು ಹೊಂದಿದ್ದು, ಇವನ್ನು ಪಡೆಯಲು ನೀವು ಫಲಾನುಭವಿಯಾಗಿ ಅರ್ಹರಾಗಬೇಕು. ಈ ಮಾಹಿತಿಯು ಪಿಎಂಎವೈ ಪಟ್ಟಿಯಲ್ಲಿ ಲಭ್ಯವಿದೆ.
ಪಿಎಂಏವೈ ಫಲಾನುಭವಿಗಳಿಗೆ ಅನೇಕ ಪ್ರಯೋಜನಗಳನ್ನು ವಿಧಿಸಿದೆ. ಅದರಲ್ಲಿ ಒಂದು ಸಿಎಲ್‌ಎಸ್‌ಎಸ್ ಅಥವಾ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್. ಆ ಸ್ಕೀಮ್ ಅಥವಾ ಯೋಜನೆಯು ಮನೆ ಕಟ್ಟಲು, ಕೊಳ್ಳಲು ಅಥವಾ ಇರುವ ಮನೆಗಳ ನವೀಕರಣಗಳನ್ನು ಮಾಡಲು ಭಾರತದಲ್ಲಿ ಹೋಮ್ ಲೋನ್‌ಗಳ ಬಡ್ಡಿ ಮೊತ್ತಕ್ಕೆ ಸಬ್ಸಿಡಿ ಅಂದರೆ ಸಹಾಯಧನ ಒದಗಿಸುತ್ತದೆ. ಆದಾಗ್ಯೂ, ಈ ಪ್ರಯೋಜನವನ್ನು ಪಡೆಯಲು, ನಿಮ್ಮ ಹೆಸರು ಪಿಎಂಏವೈ ಫಲಾನುಭವಿ ಪಟ್ಟಿಯಲ್ಲಿ ಇರಬೇಕು.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಫೀಚರ್‌ಗಳು
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಫೀಚರ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಓದಿ.. ಪಿಎಂಎವೈನ ಫೀಚರ್‌ಗಳು ಹೀಗಿವೆ:
- 20 ವರ್ಷಗಳವರೆಗಿನ ಅವಧಿಯೊಂದಿಗೆ, ಫಲಾನುಭವಿಗಳು ತಮ್ಮ ಹೌಸಿಂಗ್ ಲೋನ್‌ಗಳ ಮೇಲೆ 6.5% ವರೆಗೆ ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದು
- ಸಬ್ಸಿಡಿ ಮೊತ್ತವು ಒಂದು ಆದಾಯ ಗುಂಪಿನಿಂದ ಇನ್ನೊಂದಕ್ಕೆ ಬದಲಾಗುತ್ತದೆ
- ಈ ಯೋಜನೆಯಡಿ ನಿರ್ಮಿಸಲಾದ ಮನೆಗಳು ಪರಿಸರ-ಸ್ನೇಹಿ ಮತ್ತು ಸುಸ್ಥಿರ ವಸ್ತು/ತಂತ್ರಜ್ಞಾನವನ್ನು ಮಾತ್ರ ಬಳಸುತ್ತವೆ
- ಗ್ರೌಂಡ್ ಫ್ಲೋರ್ ವಸತಿಯನ್ನು ಹಂಚುವಾಗ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಆದ್ಯತೆ ನೀಡಲಾಗುತ್ತದೆ
- ಈ ಯೋಜನೆಯು ಅರ್ಜಿದಾರರಿಗೆ ಯಾವುದೇ 4,041 ಶಾಸನಬದ್ಧ ಪಟ್ಟಣಗಳಲ್ಲಿ ಸುರಕ್ಷಿತ ವಸತಿಯನ್ನು ಸುರಕ್ಷಿತಗೊಳಿಸಲು ಅನುವು ಮಾಡಿಕೊಡುತ್ತದೆ
ಪೂರ್ಣಗೊಂಡ ಮನೆಗಳ ರಾಜ್ಯವಾರು ಹೊಸ ಪಿಎಂಎವೈ ಪಟ್ಟಿ:
ರಾಜ್ಯವಾರು ಪೂರ್ಣಗೊಂಡ ಪಿಎಂಎವೈ ಮನೆಗಳ ಪಟ್ಟಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಕೆಳಗಿನ ಪಟ್ಟಿಯನ್ನು ನೋಡಿ.
ರಾಜ್ಯ |
PMAY ಅಡಿಯಲ್ಲಿ ಮಂಜೂರಾದ ಮನೆಗಳು |
ಪಿಎಂಎವೈ ಅಡಿಯಲ್ಲಿ ಪೂರ್ಣಗೊಂಡ/ಮಂಜೂರಾದ ಮನೆಗಳು |
ಆಂಧ್ರ ಪ್ರದೇಶ |
20,05,932 |
16% |
ಉತ್ತರ ಪ್ರದೇಶ |
15,73,029 |
27% |
ಮಹಾರಾಷ್ಟ್ರ |
11,72,935 |
23% |
ಮಧ್ಯ ಪ್ರದೇಶ |
7,84,215 |
40% |
ತಮಿಳುನಾಡು |
7,67,664 |
38% |
ಕರ್ನಾಟಕ |
6,51,203 |
25% |
ಗುಜರಾತ್ |
6,43,192 |
58% |
ಪಶ್ಚಿಮ ಬಂಗಾಳ |
4,09,679 |
46% |
ಬಿಹಾರ್ |
3,12,544 |
21% |
ಹರ್ಯಾಣ |
2,67,333 |
8% |
ಛತ್ತೀಸಘಡ |
2,54,769 |
31% |
ತೆಲಂಗಾಣ |
2,16,346 |
45% |
ರಾಜಸ್ಥಾನ |
2,00,000 |
38% |
ಜಾರ್ಖಂಡ್ |
1,98,226 |
38% |
ಒಡಿಶಾ |
1,53,771 |
44% |
ಕೇರಳ |
1,29,297 |
55% |
ಅಸ್ಸಾಂ |
1,17,410 |
15% |
ಪಂಜಾಬ್ |
90,505 |
25% |
ತ್ರಿಪುರಾ |
82,034 |
50% |
ಜಮ್ಮು |
54,600 |
12% |
ಮಣಿಪುರ |
42,825 |
9% |
ಉತ್ತರಾಖಂಡ್ |
39,652 |
33% |
ನಾಗಾಲ್ಯಾಂಡ್ |
32,001 |
13% |
ಮಿಜೋರಾಂ |
30,340 |
10% |
ದೆಹಲಿ |
16,716 |
- |
ಪುದುಚೇರಿ |
13,403 |
21% |
ಹಿಮಾಚಲ ಪ್ರದೇಶ |
9,958 |
36% |
ಅರುಣಾಚಲ ಪ್ರದೇಶ |
7,230 |
25% |
ಮೇಘಾಲಯ |
4,672 |
21% |
ದಾದ್ರಾ ಮತ್ತು ನಗರ್ ಹವೇಲಿ |
4,320 |
51% |
ಲಡಖ್ |
1,777 |
21% |
ದಮನ್ & ದೀಯು |
1,233 |
61% |
ಗೋವಾ |
793 |
93% |
ಅಂಡಮಾನ್ ಮತ್ತು ನಿಕೋಬಾರ್ |
612 |
3% |
ಸಿಕ್ಕಿಂ |
537 |
45% |
ಚಂಡೀಗಢ |
327 |
- |
ಲಕ್ಷದ್ವೀಪ |
0 |
0% |
ಒಮ್ಮೆ ನೀವು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಅಪ್ಲೈ ಮಾಡಿದ ನಂತರ, ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಹೊಸ ಪಟ್ಟಿ 2021 - 22 ರಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗಿದೆಯೇ ಎಂದು ಪರಿಶೀಲಿಸಲು ನೀವು ಅಪ್ಲಿಕೇಶನ್ ರೆಫರೆನ್ಸ್ ನಂಬರ್ ಒಂದನ್ನು ಪಡೆಯುತ್ತೀರಿ. ಈ ಪಟ್ಟಿಯು ಅಪ್ಲಿಕೇಶನ್ ಅಂಗೀಕರಿಸಲ್ಪಟ್ಟ ವ್ಯಕ್ತಿಗಳ ಹೆಸರುಗಳನ್ನು ಒಳಗೊಂಡಿದೆ.
ಸಿಎಲ್‌ಎಸ್‌ಎಸ್ ಘಟಕಕ್ಕೆ ಅರ್ಹತಾ ಮಾನದಂಡ
ಹೋಮ್ ಲೋನ್‌ಗಳ ಮೇಲೆ ಬಡ್ಡಿ ಸಬ್ಸಿಡಿಗಳನ್ನು ನೀಡುವ ಪಿಎಂಎವೈ ಸಿಎಲ್‌ಎಸ್‌ಎಸ್ ಯೋಜನೆಗೆ ಅಪ್ಲೈ ಮಾಡುವವರು, ಅರ್ಹತೆ ಪಡೆಯಲು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು.
ಎಲ್‌ಐಜಿ/ಇಡಬ್ಲ್ಯೂಎಸ್ ಕೆಟಗರಿಗಾಗಿ:
- ಫಲಾನುಭವಿ ಕುಟುಂಬವು ಗಂಡ, ಹೆಂಡತಿ, ಅವಿವಾಹಿತ ಮಗ ಅಥವಾ ಅವಿವಾಹಿತ ಮಗಳನ್ನು ಒಳಗೊಂಡಿರಬೇಕು.
- ಮನೆಯ ವಾರ್ಷಿಕ ಆದಾಯವು ರೂ. 3 ಲಕ್ಷ ಮತ್ತು ರೂ. 6 ಲಕ್ಷಗಳ ಒಳಗೆ ಇರಬೇಕು.
- ಆಸ್ತಿಯು ಕುಟುಂಬದ ಮಹಿಳಾ ಸದಸ್ಯರ ಸಹ-ಮಾಲೀಕತ್ವದಲ್ಲಿರಬೇಕು.
ಈ ಫಲಾನುಭವಿಗಳು 6.50% ಬಡ್ಡಿ ಸಬ್ಸಿಡಿಯನ್ನು ಪಡೆಯಲು ಅರ್ಹರಾಗಿರುತ್ತಾರೆ*.
MIG I & MIG II ಕೆಟಗರಿಗಳಿಗಾಗಿ:
- ಎಂಐಜಿ I ಗಾಗಿ ಮನೆಯ ವಾರ್ಷಿಕ ಆದಾಯವು ರೂ. 6 ಲಕ್ಷ ಮತ್ತು ರೂ. 12 ಲಕ್ಷಗಳ ನಡುವೆ ಇರಬೇಕು, ಮತ್ತು ಎಂಐಜಿ II ಗಾಗಿ ರೂ. 12 ಮತ್ತು ರೂ. 18 ಲಕ್ಷಗಳ ನಡುವೆ ಇರಬೇಕು.
- ಆಸ್ತಿಗೆ ಮಹಿಳೆಯ ಸಹ-ಮಾಲೀಕತ್ವವನ್ನು ಆಶಿಸಲಾಗುತ್ತದೆ.
- ಮನೆಯಲ್ಲಿ ವಯಸ್ಕ ಉದ್ಯೋಗಸ್ಥರಿದ್ದು, ಅವರಿಗೆ ಮದುವೆಯಾಗಿರಲಿ ಅಥವಾ ಆಗದೇ ಇರಲಿ, ಅವರನ್ನು ಪ್ರತ್ಯೇಕ ಮನೆಯೆಂದು ಪರಿಗಣಿಸಬೇಕು.
ಎಂಐಜಿ I ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು 4.0% ಸಬ್ಸಿಡಿ ಪಡೆಯಬಹುದು, ಹಾಗೂ ಎಂಐಜಿ II ಅಡಿಯಲ್ಲಿ ಬರುವವರು 3.0% ಸಬ್ಸಿಡಿ ಪಡೆಯಬಹುದು.
PMAY ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ
ಈ ಹಂತಗಳನ್ನು ಅನುಸರಿಸುವ ಮೂಲಕ PMAY ನಗರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ:
- 1 ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- 2 'ಫಲಾನುಭವಿಯನ್ನು ಆಯ್ಕೆಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- 3 ಡ್ರಾಪ್-ಡೌನ್ ಮೆನುವಿನಿಂದ, 'ಹೆಸರಿನ ಮೂಲಕ ಹುಡುಕಿ' ಆಯ್ಕೆಯನ್ನು ಆರಿಸಿ
- 4 ನಿಮ್ಮ ಹೆಸರಿನ ಮೊದಲ 3 ಅಕ್ಷರಗಳನ್ನು ನಮೂದಿಸಿ ಮತ್ತು 'ತೋರಿಸಿ' ಮೇಲೆ ಕ್ಲಿಕ್ ಮಾಡಿ’
ಹಕ್ಕುತ್ಯಾಗ:
ಎಂಐಜಿ I ಮತ್ತು II ಕೆಟಗರಿಗಾಗಿ ಪಿಎಂಎವೈ ಸಬ್ಸಿಡಿ ಯೋಜನೆಯನ್ನು ನಿಯಂತ್ರಕದಿಂದ ವಿಸ್ತರಿಸಲಾಗಿಲ್ಲ. ಕೆಟಗರಿ ಪ್ರಕಾರದ ಸ್ಕೀಮ್ ಮಾನ್ಯತೆಯನ್ನು ಈ ಕೆಳಗೆ ನಮೂದಿಸಲಾಗಿದೆ:
- ಇಡಬ್ಲ್ಯೂಎಸ್ ಮತ್ತು ಎಲ್‌ಐಜಿ ಕೆಟಗರಿಯು 31 ಮಾರ್ಚ್ 2022 ವರೆಗೆ ಮಾನ್ಯವಾಗಿರುತ್ತದೆ
- ಎಂಐಜಿ I ಮತ್ತು ಎಂಐಜಿ II ಕೆಟಗರಿಯು 31 ಮಾರ್ಚ್ 2021 ವರೆಗೆ ಮಾನ್ಯವಾಗಿತ್ತು
ಪಿಎಂಎವೈ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ
ಪಿಎಂಎವೈ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಈ ಕೆಳಗಿನಂತಿದೆ:
- ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
- ಆಂಧ್ರ ಪ್ರದೇಶ
- ಅರುಣಾಚಲ ಪ್ರದೇಶ
- ಅಸ್ಸಾಂ
- ಬಿಹಾರ್
- ಚಂಡೀಗಢ
- ಛತ್ತೀಸಘಡ
- ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದಿಯು
- ದೆಹಲಿ
- ಗೋವಾ
- ಗುಜರಾತ್
- ಹರ್ಯಾಣ
- ಹಿಮಾಚಲ ಪ್ರದೇಶ
- ಜಮ್ಮು & ಕಾಶ್ಮೀರ
- ಜಾರ್ಖಂಡ್
- ಕರ್ನಾಟಕ
- ಕೇರಳ
- ಲಡಖ್
- ಮಧ್ಯ ಪ್ರದೇಶ
- ಮಹಾರಾಷ್ಟ್ರ
- ಮಣಿಪುರ
- ಮೇಘಾಲಯ
- ಮಿಜೋರಾಂ
- ನಾಗಾಲ್ಯಾಂಡ್
- ದೆಹಲಿಯ NCT
- ಒಡಿಶಾ
- ಪುದುಚೇರಿ
- ಪಂಜಾಬ್
- ರಾಜಸ್ಥಾನ
- ಸಿಕ್ಕಿಂ
- ತಮಿಳುನಾಡು
- ತೆಲಂಗಾಣ
- ತ್ರಿಪುರಾ
- ಉತ್ತರ ಪ್ರದೇಶ
- ಉತ್ತರಾಖಂಡ್
- ಪಶ್ಚಿಮ ಬಂಗಾಳ
ಪಿಎಂಎವೈ ಪಟ್ಟಿಯ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು
ಪಿಎಂಏವೈ ಪಟ್ಟಿಯನ್ನು ಎರಡೂ ವರ್ಗ, ಅಂದರೆ ನಗರ ಮತ್ತು ಗ್ರಾಮೀಣ ವರ್ಗಗಳು ಆಕ್ಸೆಸ್ ಮಾಡಬಹುದು. ಪಿಎಂಏವೈ ಗ್ರಾಮೀಣ (ಗ್ರಾಮೀಣ) ವರ್ಗದ ಅಡಿಯಲ್ಲಿ ಬರುವವರು ಯಶಸ್ವಿಯಾಗಿ ಅಪ್ಲೈ ಮಾಡಿದ ಮೇಲೆ ನೋಂದಣಿ ಸಂಖ್ಯೆ ಪಡೆಯುತ್ತಾರೆ. ಪಿಎಂಏವೈ ಗ್ರಾ ಪಟ್ಟಿಯನ್ನು ಪರಿಶೀಲಿಸುವಾಗ ಈ ಸಂಖ್ಯೆ ಅವಶ್ಯಕವಾಗುತ್ತದೆ.
ನೀವು ಗ್ರಾಮೀಣ ಕೆಟಗರಿಯಲ್ಲಿ ಬಂದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ 1: ಪಿಎಂಎವೈ-ಗ್ರಾಮೀಣ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ನಿಮ್ಮ ನೋಂದಣಿ ನಂಬರನ್ನು ನಿಖರವಾಗಿ ಒದಗಿಸಿ ಮತ್ತು 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ’.
ನೋಂದಣಿ ಸಂಖ್ಯೆ ಇಲ್ಲದೆಯೂ ನೀವು ಫಲಾನುಭವಿ ಪಟ್ಟಿಯನ್ನು ನೋಡಬಹುದು. ಅದಕ್ಕೆ ಈ ಹಂತಗಳನ್ನು ಅನುಸರಿಸಬೇಕು:
ಹಂತ 1: ಪಿಎಂಎವೈ-ಗ್ರಾಮೀಣ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ನೋಂದಣಿ ಸಂಖ್ಯೆ ಟ್ಯಾಬ್ ಅನ್ನು ನಿರ್ಲಕ್ಷಿಸಿ ಮತ್ತು 'ಅಡ್ವಾನ್ಸ್ಡ್ ಸರ್ಚ್' ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಸರಿಯಾದ ವಿವರಗಳೊಂದಿಗೆ ಕಾಣಿಸಿಕೊಳ್ಳುವ ಫಾರ್ಮ್ ಭರ್ತಿ ಮಾಡಿ.
ಹಂತ 4: 'ಹುಡುಕಿ' ಆಯ್ಕೆಯೊಂದಿಗೆ ಮುಂದುವರೆಯಿರಿ.
ನಿಮ್ಮ ಹೆಸರು ಪಿಎಂಏವೈ ಗ್ರಾಮೀಣ ಪಟ್ಟಿಯಲ್ಲಿ ಇದ್ದರೆ, ಎಲ್ಲಾ ಸಂಬಂಧಿತ ವಿವರಗಳು ಕಾಣಿಸಿಕೊಳ್ಳುತ್ತವೆ.
ನೀವು ನಗರ ವರ್ಗದಲ್ಲಿ ಬರುತ್ತಿದ್ದರೆ, ಈ ಹಂತಗಳನ್ನು ಅನುಸರಿಸಿ:
ಹಂತ 1: ಪಿಎಂಎವೈ ಅಧಿಕೃತ ಸೈಟ್ಗೆ ಭೇಟಿ ನೀಡಿ.
ಹಂತ 2: 'ಫಲಾನುಭವಿಯನ್ನು ಹುಡುಕಿ' ಮೆನು ಕಾಣಿಸಿಕೊಳ್ಳುತ್ತದೆ. ಅದರಲ್ಲಿ 'ಹೆಸರಿನ ಪ್ರಕಾರ ಹುಡುಕಿ' ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಹೆಸರಿನ ಮೊದಲ ಮೂರು ಅಕ್ಷರಗಳನ್ನು ಒದಗಿಸಿ.
ಹಂತ 4: 'ತೋರಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ, ಮತ್ತು ಪಿಎಂ ಆವಾಸ್ ಯೋಜನೆ ಪಟ್ಟಿ ಕಾಣಿಸಿಕೊಳ್ಳುತ್ತದೆ.
PMAY-ನಗರದ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ಇತರ ಸಂಬಂಧಪಟ್ಟ ವಿವರಗಳಿಗಾಗಿ ಹುಡುಕಿ. ಈ ಫಲಾನುಭವಿ ಚಾರ್ಟ್ಗಳು ಕಾಲ ಕಾಲಕ್ಕೆ ಅಪ್ಡೇಟ್ ಆಗುತ್ತವೆ. ಹೀಗಾಗಿ ಇತ್ತೀಚಿನ PMAY 2021-22 ಪಟ್ಟಿಯನ್ನು ಪರಿಶೀಲಿಸಿ.
ಪಿಎಂ ಆವಾಸ್ ಯೋಜನೆ ಪಟ್ಟಿಯಲ್ಲಿ ಫಲಾನುಭವಿಗಳನ್ನು ಗುರುತಿಸಲು ಮತ್ತು ಆಯ್ಕೆ ಮಾಡಲು ಸರ್ಕಾರವು ಎಸ್‌ಇಸಿಸಿ 2011 ಅನ್ನು ಪರಿಗಣಿಸುತ್ತದೆ. ಎಸ್ಇಸಿಸಿ 2011, ಅಥವಾ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ 2011, ಭಾರತದಲ್ಲಿ 640 ಜಿಲ್ಲೆಗಳಲ್ಲಿ ನಡೆಸಲಾದ ಮೊದಲ ಕಾಗದರಹಿತ ಗಣತಿ (ಜಾತಿ-ಆಧಾರಿತ) ಆಗಿದೆ. ಇದಲ್ಲದೇ, ಅಂತಿಮ ಪಟ್ಟಿಯ ಕುರಿತು ತೀರ್ಮಾನ ತೆಗೆದುಕೊಳ್ಳಲು ಸರ್ಕಾರವು ತಹಶೀಲುಗಳು ಮತ್ತು ಪಂಚಾಯತಿಗಳ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತದೆ.
ಪಾರದರ್ಶಕತೆಯನ್ನು ಕಾಪಾಡುವುದು ಮತ್ತು ಅರ್ಹ ಅರ್ಜಿದಾರರಿಗೆ ಈ ವಸತಿ ಲಾಭಗಳನ್ನು ಒದಗಿಸುವ ಗುರಿ ಹೊಂದಿದೆ.
ಈ ಕೆಳಗಿನ ಪಿಎಂಎವೈ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಈ ಹೌಸಿಂಗ್ ಯೋಜನೆಗೆ ಅಪ್ಲೈ ಮಾಡಲು ಅರ್ಹರಾಗಿದ್ದಾರೆ.
- ಅರ್ಜಿದಾರ ಅಥವಾ ಅವರ ಕುಟುಂಬ ಸದಸ್ಯರು ಭಾರತದಲ್ಲಿ ಎಲ್ಲಿಯೂ ಪಕ್ಕಾ ನಿರ್ಮಾಣದ ಮನೆ ಹೊಂದಿರಬಾರದು
- ಯಾವುದೇ ಕುಟುಂಬ ಸದಸ್ಯರು ಈ ಹಿಂದೆ ಸರ್ಕಾರ ಪ್ರಾರಂಭಿಸಿದ ಯಾವುದೇ ವಸತಿ ಯೋಜನೆಯನ್ನು ಪಡೆದುಕೊಂಡಿರಬಾರದು
- ವಿವಾಹಿತ ದಂಪತಿಗಳಿಗೆ ಜಂಟಿ ಮತ್ತು ಒಂಟಿ ಮಾಲೀಕತ್ವ ಎರಡನ್ನೂ ಅನುಮತಿಸಲಾಗುತ್ತದೆ.. ಈ ಸಂದರ್ಭದಲ್ಲಿ, ಎರಡೂ ಆಯ್ಕೆಗಳು 1 ಸಬ್ಸಿಡಿಯನ್ನು ಸ್ವೀಕರಿಸುತ್ತವೆ
- ಮನೆಯ ಒಟ್ಟಾರೆ ವಾರ್ಷಿಕ ಆದಾಯವು ರೂ. 6 ಲಕ್ಷದಿಂದ ರೂ. 18 ಲಕ್ಷಗಳ ನಡುವೆ ಇರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಸಂಗಾತಿಯ ಆದಾಯದ ಡೇಟಾವನ್ನು ಒದಗಿಸಬಹುದು
- ಈಗಾಗಲೇ ತಮ್ಮ ಹೆಸರಿನಲ್ಲಿ ಮನೆಯನ್ನು ಹೊಂದಿರುವವರು PMAY ಪ್ರಯೋಜನಗಳಿಗೆ ಅರ್ಹತೆ ಪಡೆಯುವುದಿಲ್ಲ
- ಕಡಿಮೆ ಆದಾಯ ಗುಂಪು (LIG), ಮಧ್ಯಮ ಆದಾಯ ಗುಂಪು (MIG) ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿದ ವ್ಯಕ್ತಿಗಳು PMAY ಅಡಿಯಲ್ಲಿ CLSS ಗೆ ಅರ್ಹರಾಗಿದ್ದಾರೆ
ಈ ಯೋಜನೆಯಡಿ ಹೊಸ ವಸತಿಯನ್ನು ಆಸ್ತಿಯನ್ನು ಖರೀದಿಸಲು ಅಥವಾ ನಿರ್ಮಿಸಲು ಮಾತ್ರ ಫಲಾನುಭವಿಗಳಿಗೆ ಅನುಮತಿ ಇದೆ.
ಮುಖ್ಯವಾಗಿ, ಈ ವಸತಿ ಯೋಜನೆಯ ಎಲ್ಲಾ ಪ್ರಯೋಜನಗಳನ್ನು ಈ ಕೆಳಗಿನ ಕೆಟಗರಿಗಳು ಆನಂದಿಸಬಹುದು.
- ಆರ್ಥಿಕವಾಗಿ ದುರ್ಬಲ ವರ್ಗ
- ಮಹಿಳೆ (ಯಾವುದೇ ಜಾತಿ ಮತ್ತು ಧರ್ಮ ಇರಲಿ)
- ಮದ್ಯಮ ಆದಾಯದ ಗುಂಪು 1
- ಮದ್ಯಮ ಆದಾಯದ ಗುಂಪು 2
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ
- ಕಡಿಮೆ ಆದಾಯದ ಜನಸಮೂಹ
ಪಿಎಂ ಆವಾಸ್ ಯೋಜನೆಯ ಸಂಪೂರ್ಣ ಪ್ರಕ್ರಿಯೆಯು ಈಗ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಹಾಗಾಗಿ ಇದು ಹೆಚ್ಚು ಪಾರದರ್ಶಕ ಮತ್ತು ಅನುಕೂಲಕರವಾಗಿದೆ.. ಫಲಾನುಭವಿಗಳು ಯೋಜನೆಯ ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಅಪ್ಲಿಕೇಶನ್ ಸ್ಥಿತಿಗತಿ ಮತ್ತು ಪಿಎಂಎವೈ ಪಟ್ಟಿಯನ್ನು ಸುಲಭವಾಗಿ ಪರಿಶೀಲಿಸಬಹುದು.
ಅಂದಾಜುಗಳ ಪ್ರಕಾರ, ಒಂದೆಡೆ ಹಲವಾರು ಮಹಾನಗರಗಳಲ್ಲಿ ತಲಾ ಸುಮಾರು ರೂ. 50 ಲಕ್ಷ ಬೆಲೆಬಾಳುವ ಲಕ್ಷಾಂತರ ಜನವಸತಿ ಸ್ವತ್ತುಗಳು ಇನ್ನೂ ಮಾರಾಟವಾಗಿಲ್ಲ. ಮತ್ತೊಂದೆಡೆ, ನಗರ ಪ್ರದೇಶದ ಬಡವರು ಮತ್ತು ಗ್ರಾಮೀಣ ಜನರಿಗೆ ಸುಮಾರು 2 ಕೋಟಿ ವಸತಿ ಘಟಕಗಳ ಕೊರತೆಯಿದೆ. PM ಆವಾಸ್ ಯೋಜನೆ ಈ ಅಂತರವನ್ನು ನಿವಾರಿಸುವ ಗುರಿ ಹೊಂದಿದೆ. ಈ PMAY ಯೋಜನೆಯ 4 ಅವಿಭಾಜ್ಯ ಅಂಶಗಳಿವೆ:
- ಕೊಳಗೇರಿ ಜನರಿಗೆ ಮನೆ ಕಟ್ಟಿಕೊಡುವ ಮೂಲಕ ಕೊಳಗೇರಿಗಳನ್ನು ಬದಲಾಯಿಸುವುದು
- ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಕೈಗೆಟಕುವ ವಸತಿ ಯೋಜನೆಗಳನ್ನು ಕೈಗೊಳ್ಳುವುದು
- ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ-ಆದಾಯದ ಜನಸಮೂಹಕ್ಕೆ ಸಿಎಲ್‌ಎಸ್‌ಎಸ್ ಯೋಜನೆ ಮೂಲಕ ಹೋಮ್ ಲೋನ್ ಬಡ್ಡಿಯ ಮೇಲೆ ಸಬ್ಸಿಡಿ ನೀಡುವುದು
- ಆರ್ಥಿಕವಾಗಿ ಹಿಂದುಳಿದವರಿಗೆ ರೂ. 1.5 ಲಕ್ಷದವರೆಗಿನ ಹಣಕಾಸು ನೆರವು ನೀಡುವುದು
ಭಾರತ ಸರ್ಕಾರವು ಈ ಪ್ರಯೋಜನಗಳನ್ನು ವಿಧವೆಯರು, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಮತ್ತು ಇತರರಿಗೆ ವಿಸ್ತರಿಸಿ, ಅವರನ್ನು ಮನೆ-ಮಾಲೀಕರಾಗಲು ಪ್ರೋತ್ಸಾಹಿಸುತ್ತಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, 20 ಜನವರಿ 2021 ರಂದು ನಡೆದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ (ಸಿಎಸ್‌ಎಂಸಿ) 52ನೇ ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ 1.68 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ ಜೊತೆ ಜೋಡಿಸುವುದು ಪಿಎಂಏವೈ ಯೋಜನೆಯ ಪ್ರಯೋಜನಗಳನ್ನು ಆನಂದಿಸುವ ಉತ್ತಮ ಮಾರ್ಗವಾಗಿದೆ. ಫಲಾನುಭವಿಯಾಗಿ, ನೀವು ₹ 2.67 ಲಕ್ಷದವರೆಗು ಸಿಎಲ್‌ಎಸ್‌ಎಸ್ ಸಬ್ಸಿಡಿ ಪಡೆಯಬಹುದು ಮತ್ತು ಇತರ ಲೋನ್ ವೈಶಿಷ್ಟ್ಯಗಳನ್ನು ಅಕ್ಸೆಸ್ ಪಡೆಯಬಹುದು. ಇದು ತ್ವರಿತ ಲೋನ್ ಪ್ರಕ್ರಿಯೆ, ದೊಡ್ಡ ಮೊತ್ತದ ಮಂಜೂರಾತಿ, 30 ವರ್ಷಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರವನ್ನು ಒಳಗೊಂಡಿದೆ.
ನಾವು ಒದಗಿಸುವ ಇನ್ನೊಂದು ಗಮನಾರ್ಹ ಪ್ರಯೋಜನವೆಂದರೆ ಫ್ಲೆಕ್ಸಿ ಲೋನ್ ಸೌಲಭ್ಯ. ಇದು ನಿಮಗೆ ಅಗತ್ಯವಿರುವಷ್ಟು ಬಾರಿ ಲೋನ್ ಅಕೌಂಟ್‌ನಿಂದ ಲೋನ್ ಪಡೆಯಲು ಅನುವು ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ, ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ.
ಇಂತಹ ಹಲವಾರು ಪ್ರಯೋಜನಗಳನ್ನು ಪಡೆಯಲು, ಬಜಾಜ್ ಫಿನ್‌ಸರ್ವ್ ಒದಗಿಸುವ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅರ್ಹತಾ ಕ್ಯಾಲ್ಕುಲೇಟರ್ ಬಳಸುವ ಮೂಲಕ ನಿಮ್ಮ ಅರ್ಹ ಕೆಟಗರಿಯ ಪ್ರಕಾರ ಎಷ್ಟು ಸಬ್ಸಿಡಿ ಸಿಗುತ್ತದೆ ಎಂದು ಪರಿಶೀಲಿಸಿ.