ಬದಲೀ ಕೆವೈಸಿ ಡಾಕ್ಯುಮೆಂಟ್‌ಗಳೊಂದಿಗೆ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ

2 ನಿಮಿಷದ ಓದು

ನಿಮ್ಮ ಪ್ಯಾನ್ ಕಾರ್ಡ್ ಹಲವಾರು ಟ್ರಾನ್ಸಾಕ್ಷನ್‌ಗಳಿಗೆ ಅಗತ್ಯ ಡಾಕ್ಯುಮೆಂಟ್ ಆಗಿರುತ್ತದೆ. ರೂ. 50,000 ಕ್ಕಿಂತ ಹೆಚ್ಚಿನ ಯಾವುದೇ ಹೂಡಿಕೆ, ಡೆಪಾಸಿಟ್ ಅಥವಾ ಟ್ರಾನ್ಸಾಕ್ಷನ್‌ಗೆ ಅಥವಾ ರೂ. 5 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನ ಅಥವಾ ಆಭರಣ ಖರೀದಿಸುವಾಗ ನೀವು ಅದನ್ನು ಸಲ್ಲಿಸಬೇಕು. ಅದೇ ರೀತಿ, ಬ್ಯಾಂಕ್ ಅಕೌಂಟ್‌ ತೆರೆಯಲು, ಪರ್ಸನಲ್ ಲೋನ್ ಅಥವಾ ತೆರಿಗೆ ರಿಟರ್ನ್‌ ಫೈಲ್ ಮಾಡಲು, ನೀವು ನಿಮ್ಮ ಪ್ಯಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ.

ಸಾಮಾನ್ಯವಾಗಿ, ನೀವು ನಿಮ್ಮ ಪ್ಯಾನ್ ಸಲ್ಲಿಸದೇ ಲೋನ್ ಪಡೆಯಲು ಸಾಧ್ಯವಿಲ್ಲ, ಏಕೆಂದರೆ ಅಧಿಕಾರಿಗಳು ನಿಮ್ಮ ಹಣಕಾಸು ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಮತ್ತು ವಂಚನೆಯನ್ನು ತಡೆಯಲು ಅದನ್ನು ಬಳಸುತ್ತಾರೆ. ಆದಾಗ್ಯೂ, ಕೆಲವು ಸಾಲದಾತರು ಪ್ಯಾನ್ ಇಲ್ಲದೆ ಸಾಲ ನೀಡುತ್ತಾರೆ. ನಿಮಗೆ ಅದರ ಅಗತ್ಯವಿದ್ದರೆ, ಈ ಸಲಹೆಗಳನ್ನು ಅನುಸರಿಸಿ.

  • ಇತರ ಅಗತ್ಯ ಡಾಕ್ಯುಮೆಂಟ್‌ಗಳನ್ನು, ವಿಶೇಷವಾಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ಶಾಶ್ವತ ವಿಳಾಸದ ಪುರಾವೆಯನ್ನು ಸಲ್ಲಿಸಿ.
  • ಸಂಬಳದ ಸ್ಲಿಪ್‌ ಮತ್ತು ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್‌ಗಳು ಸಾಲದಾತರಿಗೆ ನಿಮ್ಮ ಹಿಂದಿನ ಮತ್ತು ಸದ್ಯದ ಹಣಕಾಸು ಸ್ಥಿತಿ ಹಾಗೂ ಮರುಪಾವತಿ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣ ಒದಗಿಸುತ್ತವೆ. ನೀವು ಸಾಕಷ್ಟು ಮಾಸಿಕ ಆದಾಯ ಹೊಂದಿದ್ದರೆ, ನಿಮಗೆ ಪ್ಯಾನ್ ಕಾರ್ಡ್ ಇಲ್ಲದೆಯೇ ಪರ್ಸನಲ್ ಲೋನ್ ಸಿಗುತ್ತದೆ.
  • ಆದಾಯದ ಅನುಪಾತಕ್ಕೆ ನಿಗದಿತ ಜವಾಬ್ದಾರಿ (ಎಫ್‌ಓಐಆರ್) ಕಡಿಮೆಯಿದ್ದರೆ ಒಳ್ಳೆಯದು. ಇದು ನಿಮ್ಮ ಎಲ್ಲಾ ಸ್ಥಿರ ಮಾಸಿಕ ಜವಾಬ್ದಾರಿಗಳನ್ನು ಪೂರೈಸಿದ ಮೇಲೂ ಲೋನ್ ಮರುಪಾವತಿಸಲು ನಿಮ್ಮ ಬಳಿ ಸಾಕಷ್ಟು ಹಣವಿದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಎಫ್‌ಓಐಆರ್ ಗಿಂತ ಹೆಚ್ಚಾಗಿದ್ದರೆ, ನೀವು ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಮುಂಚೆ ಅದನ್ನು ಕಡಿಮೆ ಮಾಡಿಕೊಳ್ಳಿ.
  • ಲೋನ್ ಅನುಮೋದನೆಗೆ 685 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಮುಖ್ಯವಾಗಿದೆ, ಏಕೆಂದರೆ ಇದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಬಲಪಡಿಸುತ್ತದೆ. ಇದಲ್ಲದೆ, ಇದು ನಿಮಗೆ ಉತ್ತಮ ಪರ್ಸನಲ್ ಲೋನ್‌ಗಳ ಮೇಲೆ ಬಡ್ಡಿ ದರಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.

ಈ ಕ್ರಮಗಳ ಮೂಲಕ ನೀವು ಪ್ಯಾನ್ ಇಲ್ಲದೆ ಲೋನ್ ಪಡೆಯಬಹುದು. ಪ್ಯಾನ್‌ ಕಾರ್ಡ್‌ ಕೊರತೆಯನ್ನು ಸರಿದೂಗಿಸಲು, ಬೇರೆ ಎಲ್ಲಾ ಅರ್ಹತೆ ಮತ್ತು ಡಾಕ್ಯುಮೆಂಟೇಶನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ನಂತರ, ಬ್ಯಾಂಕ್‌ಗಳ ಬದಲು ಎನ್‌ಬಿಎಫ್‌ಸಿಯನ್ನು ಸಂಪರ್ಕಿಸಿ. ಯಾಕೆಂದರೆ ಎನ್‌ಬಿಎಫ್‌ಸಿಗಳು ಸರಳ ಅರ್ಹತಾ ಮಾನದಂಡ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಅವಶ್ಯಕತೆಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಬಜಾಜ್ ಫಿನ್‌ಸರ್ವ್, ಆನ್‌ಲೈನ್‌ನಲ್ಲಿ ರೂ. 40 ಲಕ್ಷದವರೆಗಿನ ಪರ್ಸನಲ್ ಲೋನ್‌ ನೀಡುತ್ತದೆ. ಅಗತ್ಯ ವಿವರವನ್ನು ಮಾತ್ರ ಸಲ್ಲಿಸುವ ಮೂಲಕ ನೀವು ಈ ಲೋನ್‌ಗೆ ಅಪ್ಲೈ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ