ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

Personal Loan

ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ಪರ್ಸನಲ್ ಲೋನ್

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಸಂಬಳ ಪಡೆಯುವ ವ್ಯಕ್ತಿಗಳಿಗೆ ತ್ವರಿತ ಪರ್ಸನಲ್ ಲೋನ್

ಸಂಬಳ ಪಡೆಯುವ ವ್ಯಕ್ತಿಗಳು ಸಾಮಾನ್ಯವಾಗಿ ನಿಗದಿತ ಮಾಸಿಕ ಆದಾಯ ಹೊಂದಿರುತ್ತಾರೆ. ಆ ಆದಾಯವು ನಿಗದಿತ ಹೊಣೆಗಾರಿಕೆಗಳು ಮತ್ತು ಉಳಿತಾಯಕ್ಕೆ ಮೀಸಲಾಗಿರುತ್ತದೆ. ಆದಾಗ್ಯೂ, ಈ ಆದಾಯದಿಂದ ಯಾವಾಗಲೂ ಎಲ್ಲಾ ಹಣಕಾಸಿನ ಅವಶ್ಯಕತೆಗಳು ಮತ್ತು ಜವಾಬ್ದಾರಿಗಳನ್ನು ಪೂರ್ತಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಹಠಾತ್ ವೈದ್ಯಕೀಯ ತುರ್ತುಸ್ಥಿತಿ ಅಥವಾ ಕನ್ಸಾಲಿಡೇಟೆಡ್ ಲೋನ್‌ನಂತಹ ಪರಿಸ್ಥಿತಿಗಳಲ್ಲಿ ಹೆಚ್ಚುವರಿ ಹಣಕಾಸಿನ ಅಗತ್ಯ ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಬಜಾಜ್ ಫಿನ್‌ಸರ್ವ್‌ನ, ಉದ್ಯೋಗಿಗಳ ಪರ್ಸನಲ್ ಲೋನ್ ನೆರವಾಗಬಲ್ಲದು.
 

ಉದ್ಯೋಗಿಗಳ ಅಗತ್ಯಕ್ಕೆ ತಕ್ಕಂತೆ ಪರ್ಸನಲ್ ಲೋನ್

ನೀವು MNC, ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಈ ರೀತಿಯ ಸಂಬಳದ ಪರ್ಸನಲ್ ಲೋನನ್ನು ನಿಮಗಾಗಿ ತಯಾರಿಸಲಾಗುತ್ತದೆ. ತಾತ್ಕಾಲಿಕ ಹಣಕಾಸಿನ ತೊಂದರೆ ಅಥವಾ ತಕ್ಷಣದ ಲಿಕ್ವಿಡಿಟಿ ಅವಶ್ಯಕತೆ ಇದ್ದಾಗ ಮುಂಗಡ ಲೋನ್‌ ಅಗತ್ಯ ಬೀಳುತ್ತದೆ. ಪಡೆದ ಮೊತ್ತವನ್ನು ಯಾವುದೇ ನಿರ್ಬಂಧಗಳಿಲ್ಲದೆ ಬಳಸಿ.

ಇದು ಸುರಕ್ಷಿತವಲ್ಲದ ಲೋನ್ ಆಗಿರುವುದರಿಂದ, ಕ್ರೆಡಿಟ್ ಅನುಮೋದನೆಗೆ ಯಾವುದೇ ಆಸ್ತಿಯನ್ನು ಖಾತರಿ ರೂಪದಲ್ಲಿ ಅಡವಿಡುವ ಅಗತ್ಯವಿಲ್ಲ. ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಸಂಬಳ ಪಡೆಯುವ ಉದ್ಯೋಗಿಗಳು ನೇರವಾಗಿ ತ್ವರಿತ ಲೋನ್ ಪಡೆಯಬಹುದು.

ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ -

 • 23 ರಿಂದ 55 ವರ್ಷ ವಯಸ್ಸು.
 • ಸ್ಥಿರವಾದ ಉದ್ಯೋಗ ಮತ್ತು ಆದಾಯ ಹೊಂದಿರುವ ಉದ್ಯೋಗಿ.
 • ಭಾರತೀಯ ನಾಗರಿಕರಾಗಿದ್ದು, ದೇಶದೊಳಗೆ ವಾಸಿಸುತ್ತಿದ್ದಾರೆ.
 • 750 ಅಥವಾ ಅದಕ್ಕಿಂತ ಹೆಚ್ಚಿನ CIBIL ಸ್ಕೋರ್.
 • 30% ರಿಂದ 50% ನಡುವಿನ FOIR.
 • ಉದ್ಯೋಗಿಗಳ ಲೋನಿನ ವಿಶೇಷತೆಗಳು

  ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ವಿಶೇಷತೆಗಳು ಲೋನ್‌ ಪಡೆಯುವ ಅನುಭವವನ್ನು ಹಿತವಾಗಿಸುತ್ತವೆ.

 • High-value loan

  ಹೆಚ್ಚು - ಮೌಲ್ಯದ ಲೋನ್

  ಸಂಬಳದ ಅರ್ಜಿದಾರರು ರೂ. 25 ಲಕ್ಷದವರೆಗಿನ ಆನ್‌ಲೈನ್‌ ಲೋನ್‌ ಪಡೆಯಿರಿ. ಈ ಅಧಿಕ ಮೌಲ್ಯದ ಲೋನ್‌ ನಿಮಗೆ ಎಲ್ಲಾ ದೊಡ್ಡ ಖರ್ಚುಗಳು ಅಥವಾ ಹೂಡಿಕೆ ಯೋಜನೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

 • Minimal documentation

  ಕಡಿಮೆ ಡಾಕ್ಯುಮೆಂಟೇಶನ್

  ಲೋನ್‌ ಪರಿಶೀಲನೆ ಪ್ರಕ್ರಿಯೆಗೆ ಕೆಲವು ಅಗತ್ಯ ಡಾಕ್ಯುಮೆಂಟ್‌‌ಗಳು ಇದ್ದರೆ ಸಾಕು. ಪ್ರಕ್ರಿಯೆ ಪೂರ್ಣಗೊಳಿಸಲು ನಿಮ್ಮ ಉದ್ಯೋಗದ ID, ವಿಳಾಸದ ಪುರಾವೆ, ಗುರುತಿನ ಪುರಾವೆ, ಆದಾಯದ ಪುರಾವೆ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಸಲ್ಲಿಸಿ.

 • Only 3 documents required

  ಡಾಕ್ಯುಮೆಂಟ್‌‌ಗಳ ಸುಲಭ ಸಂಗ್ರಹಣೆ

  ಗ್ರಾಹಕರ ಅನುಕೂಲಕ್ಕೆ ಆದ್ಯತೆ ನೀಡುವ ಉದ್ದೇಶದಿಂದ, ಬಜಾಜ್ ಫಿನ್‌ಸರ್ವ್ ಮನೆಬಾಗಿಲಲ್ಲೇ ಡಾಕ್ಯುಮೆಂಟ್‌‌ಗಳ ಸಂಗ್ರಹ ಸೌಲಭ್ಯ ಒದಗಿಸುತ್ತದೆ. ಎಲ್ಲಾ ಡಾಕ್ಯುಮೆಂಟ್‌‌ಗಳನ್ನು ಪಡೆದುಕೊಂಡು ಯಾವುದೇ ತೊಂದರೆಯಿಲ್ಲದೆ ಪರಿಶೀಲನೆ ಪೂರ್ಣಗೊಳಿಸಲು ನಮ್ಮ ಪ್ರತಿನಿಧಿಗಳು ನಿಮ್ಮ ಮನೆಬಾಗಿಲಿಗೆ ಬರುತ್ತಾರೆ.

 • Zero hidden costs

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ಅನಿರೀಕ್ಷಿತ ಶುಲ್ಕಗಳು ಲೋನಿನ ಒಟ್ಟು ವೆಚ್ಚವನ್ನು ಹೆಚ್ಚಿಸಬಹುದು, ಇದರಿಂದ ಲೋನ್‌ ಡೀಫಾಲ್ಟ್ ಆಗುವ ಅಪಾಯ ಬರಬಹುದು. ಇದು ಸಂಬಳದ ಉದ್ಯೋಗಿಗಳಿಗೆ ಅತ್ಯುತ್ತಮ ಪರ್ಸನಲ್ ಲೋನ್ ಆಗಿದ್ದು, ಇಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ ಹಾಗೂ ಇಡೀ ವಹಿವಾಟು ಪಾರದರ್ಶಕವಾಗಿರುತ್ತದೆ. ನಿಮ್ಮ ಅಪ್ಲಿಕೇಶನ್ ಸಲ್ಲಿಸುವ ಮೊದಲು ನೀವು ಎಲ್ಲಾ ಸಂಬಂಧಪಟ್ಟ ಫೀಸ್‌ ಮತ್ತು ಶುಲ್ಕಗಳನ್ನು ಸುಲಭವಾಗಿ ಪರಿಶೀಲಿಸಬಹುದು.

 • Instant approval

  ತ್ವರಿತ ಅನುಮೋದನೆ ಮತ್ತು ವಿತರಣೆ

  ಅಲ್ಪಾವಧಿಯ ಲೋನ್ ಮೇಲೆ ತ್ವರಿತ ಅನುಮೋದನೆ ಪಡೆಯಿರಿ ಮತ್ತು ಕೆಲವು ಗಂಟೆಗಳಲ್ಲಿ ಲೋನ್‌ ಪಡೆಯಿರಿ. ಲೋನ್‌ ಅಪ್ಲಿಕೇಶನ್‌ನಲ್ಲಿ ಅಧಿಕೃತ ಮಾಹಿತಿಯನ್ನು ಮಾತ್ರ ಭರ್ತಿ ಮಾಡಿ. ಪರಿಶೀಲನೆಯ ಸಮಯದಲ್ಲಿ ಯಾವುದೇ ತಪ್ಪಾದ ವಿವರಗಳು ಕಂಡುಬಂದರೆ ನಿಮ್ಮ ಅಪ್ಲಿಕೇಶನ್‌ ರದ್ದಾಗಬಹುದು. ಅನುಮೋದನೆ ಪಡೆದ ನಂತರ, ಸಂಬಳದ ಅಕೌಂಟಿನಲ್ಲಿ ಅಥವಾ ನೀವು ಸೂಚಿಸಿದ ಯಾವುದೇ ಖಾತೆಯಲ್ಲಿ ಪರ್ಸನಲ್ ಲೋನ್ ಮೊತ್ತವನ್ನು ಪಡೆಯಿರಿ.

ನಿಖರ ಮೌಲ್ಯಮಾಪನಕ್ಕಾಗಿ ಆನ್‌ಲೈನ್‌ ಟೂಲ್‌ಗಳು

 • ಅರ್ಹತೆಗಾಗಿ

  ಎಲ್ಲಾ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಆನ್ಲೈನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ ಮೌಲ್ಯಮಾಪನವನ್ನು ಆಯ್ಕೆ ಮಾಡಿ. ಇದು ನಿಮ್ಮ ಹುಟ್ಟಿದ ದಿನಾಂಕ, ವಿಳಾಸ, ಮಾಸಿಕ ಆದಾಯ ಮತ್ತು ವೆಚ್ಚದ ಆಧಾರದ ಮೇಲೆ ನೀವು ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತವನ್ನು ತೋರಿಸುತ್ತದೆ. ಅಂತಹ ಕ್ಯಾಲ್ಕುಲೇಟರ್ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸುತ್ತದೆ, ಮತ್ತು ನೀವು ಸುಲಭವಾಗಿ ತ್ವರಿತ ಲೋನ್ ಪಡೆಯುತ್ತೀರಿ.

 • ಮಾಸಿಕ ಕಂತುಗಳಿಗಾಗಿ

  ಅಪ್ಲೈ ಮಾಡುವ ಮೊದಲು ಮಾಸಿಕ ಕಂತುಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಲೋನ್ ಮರುಪಾವತಿಗೆ ಸರಿಯಾದ ಹಣಕಾಸಿನ ಯೋಜನೆ ಹಾಕಿಕೊಳ್ಳಿ. ಪರ್ಸನಲ್ ಲೋನ್ ಮೇಲೆ EMI ಅನ್ನು ಲೆಕ್ಕ ಹಾಕಲು ಉತ್ತಮ ಮಾರ್ಗವೆಂದರೆ EMI ಕ್ಯಾಲ್ಕುಲೇಟರ್‌. ಈ ಆನ್ಲೈನ್ ಟೂಲ್‌ನಲ್ಲಿ ಲೋನ್ ಮೊತ್ತ, ಆದ್ಯತೆಯ ಕಾಲಾವಧಿ ಮತ್ತು ಬಡ್ಡಿದರವನ್ನು ನಮೂದಿಸುವ ಮೂಲಕ EMI ಗಳು, ಒಟ್ಟು ಪಾವತಿ ಮೊತ್ತ ಮತ್ತು ಒಟ್ಟು ಬಡ್ಡಿಯನ್ನು ಲೆಕ್ಕ ಹಾಕಬಹುದು. ಇದು ಮರುಪಾವತಿಯ ಮಾಸಿಕ ವಿವರಗಳನ್ನೂ ನೀಡುತ್ತದೆ.

ಸಂಬಳ ಪಡೆಯುವ ಉದ್ಯೋಗಿಗಳ ಪರ್ಸನಲ್ ಲೋನ್ ಕುರಿತು FAQ ಗಳು

ಪರ್ಸನಲ್ ಲೋನ್ ಅನ್ನು ಎಲ್ಲಿ ಬಳಸಬಹುದು?

ಸಂಬಳ ಪಡೆಯುವ ವ್ಯಕ್ತಿಗಳ ಲೋನ್‌ ಒಂದು ವಿವಿಧೋದ್ದೇಶ ಲೋನ್‌ ಆಗಿರುತ್ತದೆ. ಮನೆ ನವೀಕರಣ, ಮದುವೆ, ವಿದೇಶ ಪ್ರವಾಸ, ಉನ್ನತ ಶಿಕ್ಷಣ, ಕನ್ಸಾಲಿಡೇಟೆಡ್ ಲೋನ್‌, ಆರೋಗ್ಯ ಸೇವೆ ಮತ್ತಿತರ ಅಗತ್ಯತೆಗಳನ್ನು ಪೂರೈಸಲು ಹಣಕಾಸು ಲೋನ್‌ ಪಡೆಯಿರಿ.

ಲೋನ್‌ ಅಪ್ಲಿಕೇಶನ್‌ ಅನ್ನು ಅಂಗೀಕರಿಸಲಾಗಿದೆಯೇ ಅಥವಾ ಅನುಮೋದಿಸಲಾಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?

ಬಜಾಜ್ ಫಿನ್‌ಸರ್ವ್ ತನ್ನ ವಿಶೇಷ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಮೂಲಕ ಆನ್ಲೈನ್ ಅಕೌಂಟ್ ಮ್ಯಾನೇಜ್ಮೆಂಟ್ ಸೌಲಭ್ಯವನ್ನು ಒದಗಿಸುತ್ತದೆ. ಸಾಲಗಾರರು ಈ ಪೋರ್ಟಲ್ ಮೂಲಕ ತಮ್ಮ ಲೋನ್‌ ಅಪ್ಲಿಕೇಶನ್‌ ಸ್ಥಿತಿಗತಿ, EMI ಗಡುವು, ಸದ್ಯದ ಬಾಕಿ ಅಸಲು, ಪಾವತಿ ಸ್ಥಿತಿಗತಿ ಮತ್ತಿತರ ಲೋನ್‌ -ಸಂಬಂಧಿತ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಇದು 24x7 ಉಚಿತ ಮತ್ತು ಮುಕ್ತ.

ಬಡ್ಡಿ ದರದ ಜೊತೆಗಿರುವ ಇತರೆ ಹೆಚ್ಚುವರಿ ಶುಲ್ಕಗಳು ಯಾವುವು?

ಸಂಬಳ ಪಡೆಯುವ ಉದ್ಯೋಗಿಗಳ ಪರ್ಸನಲ್ ಲೋನ್ ಕೆಲವು ಸಂಬಂಧಿತ ಶುಲ್ಕಗಳನ್ನು ಹೊಂದಿರುತ್ತದೆ. ಅವೆಂದರೆ -

 • ಪ್ರಕ್ರಿಯೆ ಶುಲ್ಕಗಳು: ಅಸಲಿನ ಮೇಲೆ ಗರಿಷ್ಠ 4.13% + ತೆರಿಗೆಗಳು
 • ಬಡ್ಡಿ ದರ: 13% ನಿಂದ
 • ಪ್ರತಿ ಬೌನ್ಸ್‌ಗೆ ಬೌನ್ಸ್ ದರಗಳು: ರೂ. 600 ರಿಂದ ರೂ. 1,200 ಒಳಗೆ + ಸಂಬಂಧಿತ ತೆರಿಗೆಗಳು

ಯಾವುದೇ ಆಶ್ಚರ್ಯಕರ ಶುಲ್ಕಗಳನ್ನು ತಪ್ಪಿಸಲು ನಿಯಮ ಮತ್ತು ಷರತ್ತುಗಳನ್ನು ಮುಂಚಿತವಾಗಿಯೇ ಓದುವುದನ್ನು ಮರೆಯಬೇಡಿ.

ನೀವು ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿ ದರಗಳನ್ನು ಆಯ್ಕೆ ಮಾಡಬೇಕೇ?

ಫ್ಲೋಟಿಂಗ್ ಅಥವಾ ಫಿಕ್ಸೆಡ್ ಬಡ್ಡಿ ದರ ಆಯ್ಕೆಯು ನಿಮ್ಮ ಹಣಕಾಸಿನ ಸಾಮರ್ಥ್ಯ ಮತ್ತು ನೀವು ತೆಗೆದುಕೊಳ್ಳಲು ಬಯಸುವ ಅಪಾಯಗಳನ್ನು ಅವಲಂಬಿಸಿರುತ್ತದೆ. ಫಿಕ್ಸೆಡ್ ಬಡ್ಡಿ ದರಗಳು ಕಾಲಾವಧಿಯುದ್ದಕ್ಕೂ ಸ್ಥಿರವಾಗಿರುತ್ತವೆ; ಆದ್ದರಿಂದ, ಅಪಾಯದ ಅಂಶ ಕಡಿಮೆ. ಆದರೆ ಫ್ಲೋಟಿಂಗ್ ದರಗಳು ಮಾರುಕಟ್ಟೆ ಪರಿಸ್ಥಿತಿಗಳಿಗೆ ತಕ್ಕಂತೆ ಹೆಚ್ಚು ಅಥವಾ ಕಡಿಮೆಯಾಗುತ್ತವೆ. ಇವು ಸಾಮಾನ್ಯವಾಗಿ ಕಡಿಮೆಯಿದ್ದರೂ, ಯಾವಾಗ ಬೇಕಾದರೂ ಹೆಚ್ಚಾಗುವ ಅಪಾಯವಿದೆ. ಈ ಹೆಚ್ಚಳ ನಿರ್ವಹಿಸಲು ಸಾಕಷ್ಟು ಹಣಕಾಸು ಸಾಮರ್ಥ್ಯ ಹೊಂದಿರುವ ಸಂಬಳದ ಉದ್ಯೋಗಿಗಳು ಪರ್ಸನಲ್ ಲೋನ್ ಮೇಲೆ ಫ್ಲೋಟಿಂಗ್ ದರಗಳನ್ನು ಆಯ್ಕೆ ಮಾಡಬಹುದು.