550-600 ಕ್ರೆಡಿಟ್ ಸ್ಕೋರ್‌ನೊಂದಿಗೆ ನೀವು ಪರ್ಸನಲ್ ಲೋನ್ ಪಡೆಯಬಹುದೇ?
ಫಂಡ್ಸ್ ಅನ್ನು ಮಂಜೂರು ಮಾಡುವಾಗ ಸಾಲದಾತರು ಪರಿಗಣಿಸುವ ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಕ್ರೆಡಿಟ್ ಸ್ಕೋರ್ ಒಂದಾಗಿದೆ. ಈ ಸ್ಕೋರ್ 300 ಮತ್ತು 900 ನಡುವೆ ಇರುತ್ತದೆ. ಸ್ಕೋರ್ ಹೆಚ್ಚಾದಷ್ಟೂ, ಅರ್ಹತೆ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ, ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಲು 550 ರಿಂದ 600 ಸ್ಕೋರ್ ಕಡಿಮೆ ಮತ್ತು ಅದು ಸಾಕಾಗುವುದಿಲ್ಲ ಎಂದು ಪರಿಗಣಿಸಲಾಗುತ್ತದೆ.
ಆದ್ದರಿಂದ, 550 ಸಿಬಿಲ್ ಸ್ಕೋರ್‌ನೊಂದಿಗೆ ಪರ್ಸನಲ್ ಲೋನ್ ಪಡೆಯುವುದು ಕಷ್ಟವಾಗಿದೆ. ಆದಾಗ್ಯೂ, ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ವ್ಯಕ್ತಿಗಳು ಅಂತಹ ಸಂದರ್ಭಗಳಲ್ಲಿ ಲೋನ್ ಪಡೆಯುವ ಸಾಧ್ಯತೆಗಳನ್ನು ಸುಧಾರಿಸಬಹುದು. ಅದಕ್ಕಿಂತ ಮೊದಲು, ಅವರು ಪರ್ಸನಲ್ ಲೋನ್‌ಗಾಗಿ ಅಗತ್ಯವಿರುವ ಸಿಬಿಲ್ ಸ್ಕೋರ್ ತಿಳಿದುಕೊಳ್ಳಬೇಕು.
ಪರ್ಸನಲ್ ಲೋನ್‌ಗಳಿಗೆ ಸಿಬಿಲ್ ಸ್ಕೋರ್
ಹೆಚ್ಚಿನ ಹಣಕಾಸು ಸಂಸ್ಥೆಗಳು ಪರ್ಸನಲ್ ಲೋನನ್ನು ಅನುಮೋದಿಸುವ ಮೊದಲು 685 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಕೇಳುತ್ತವೆ. ಕೆಲವು ಸಂದರ್ಭಗಳಲ್ಲಿ, ಸಾಲಗಾರರು ಇತರ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ/ಮೀರಿದರೆ ಮಾತ್ರ ಸಾಲದಾತರು ಕಡಿಮೆ ಸಿಬಿಲ್ ಸ್ಕೋರ್‌ನೊಂದಿಗೆ ಪರ್ಸನಲ್ ಲೋನನ್ನು ಮಂಜೂರು ಮಾಡುತ್ತಾರೆ.
ಸಿಬಿಲ್ ಸ್ಕೋರ್, ಒಬ್ಬ ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ಸೂಚಿಸುವುದರಿಂದ, ಕಡಿಮೆ ಸಿಬಿಲ್ ಸ್ಕೋರ್ ಇರುವವರಿಗೆ ಸಾಲದಾತರು ಪರ್ಸನಲ್ ಲೋನ್ ಒದಗಿಸುವ ಸಾಧ್ಯತೆ ತೀರಾ ಕಡಿಮೆ. ಪರ್ಸನಲ್ ಲೋನ್ ಆಯ್ಕೆ ಮಾಡುವ ವಿಷಯದಲ್ಲಿ, ಕಡಿಮೆ ಸಿಬಿಲ್ ಸ್ಕೋರ್ ಈ ಕೆಳಗಿನ ಪರಿಣಾಮಗಳನ್ನು ಹೊಂದಿದೆ:
- ಹೆಚ್ಚಿನ ಬಡ್ಡಿ ದರಗಳು
- ಮಂಜೂರಾತಿ ಮೊತ್ತ ಕಡಿಮೆ ಆಗುತ್ತದೆ
- ಲೋನ್ ಅಪ್ಲಿಕೇಶನ್ ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗುತ್ತದೆ
ಹೀಗಾಗಿ, ಕೆಲವು ಸಾಲದಾತರು 650 ಸಿಬಿಲ್ ಸ್ಕೋರ್ ಇರುವವರಿಗೂ ಪರ್ಸನಲ್ ಲೋನ್ ಮಂಜೂರು ಮಾಡಬಹುದಾದರೂ, ಸಾಲಗಾರರು ಮೇಲೆ ತಿಳಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದಾಗ್ಯೂ, ಈ ಸ್ಕೋರನ್ನು ಸುಧಾರಿಸಲು ಮತ್ತು ಅರ್ಹತೆಯನ್ನು ಹೆಚ್ಚಿಸಲು ಮತ್ತು ಈ ಕ್ರೆಡಿಟ್‌ನ ವಿಶಿಷ್ಟ ಫೀಚರ್‌ಗಳನ್ನು ಪಡೆಯಲು, ಈ ಸ್ಕೋರನ್ನು ಕಡಿಮೆ ಮಾಡುವ ಅಂಶಗಳನ್ನು ತಿಳಿದುಕೊಳ್ಳಬೇಕು.
ಕಡಿಮೆ ಕ್ರೆಡಿಟ್ ಸ್ಕೋರ್‌ಗೆ ಕಾರಣವಾಗುವ ಅಂಶಗಳು
ಕಳಪೆ ಸಿಬಿಲ್ ಸ್ಕೋರ್ ಪತ್ತೆಹಚ್ಚಲು ಅತ್ಯಂತ ಸೂಕ್ತ ಮಾರ್ಗವೆಂದರೆ ಕ್ರೆಡಿಟ್ ವರದಿಯನ್ನು ಕೂಲಂಕುಷವಾಗಿ ನೋಡುವುದು. ಇದು ಸಾಲಗಾರರ ಸಿಬಿಲ್ ಸ್ಕೋರ್‌ನಲ್ಲಿರುವ ಕೊರತೆಯನ್ನು ತಿಳಿಸಲು ಸಹಾಯ ಮಾಡುತ್ತದೆ.
ಸಿಬಿಲ್ ಸ್ಕೋರಿಗೆ ಕೊಡುಗೆ ನೀಡುವ ಅಂಶಗಳು ಈ ಕೆಳಗಿನಂತಿವೆ:
- ಕ್ರೆಡಿಟ್ ಸ್ಕೋರ್‌ನ 35% ಭಾಗವು ಮರುಪಾವತಿ ಹಿನ್ನೆಲೆಯನ್ನು ಆಧರಿಸುತ್ತದೆ.
- ಕ್ರೆಡಿಟ್ ಬಳಕೆಯ ಅನುಪಾತವು ಈ ಸ್ಕೋರ್‌ನ 30% ಆಗಿದೆ.
- ಕ್ರೆಡಿಟ್‌ಗಳ ಆರೋಗ್ಯಕರ ಮಿಶ್ರಣವು ಸಿಬಿಲ್ ಸ್ಕೋರ್‌ನ 10% ಅನ್ನು ನಿರ್ಧರಿಸುತ್ತದೆ.
- ಕ್ರೆಡಿಟ್ ಅವಧಿಯು ಕ್ರೆಡಿಟ್ ಸ್ಕೋರ್‌ನ 15% ಆಗಿದೆ.
- ಕ್ರೆಡಿಟ್ ವಿಚಾರಣೆಗಳು ಸಿಬಿಲ್ ರೇಟಿಂಗ್‌ನ ಉಳಿದ 10% ಆಗಿರುತ್ತವೆ.
ಈ ಅಂಶಗಳನ್ನು ತಿಳಿದುಕೊಳ್ಳುವ ಮೂಲಕ, ಸಾಲಗಾರರು ಈ ಸ್ಕೋರನ್ನು ಸಾಕಷ್ಟು ಮಟ್ಟಿಗೆ ಸುಧಾರಿಸುವತ್ತ ಗಮನ ಹರಿಸಬಹುದು.
ನಿಮ್ಮ ಸಿಬಿಲ್ ಸ್ಕೋರ್ ಕೇವಲ 550 ಆಗಿದ್ದರೆ ಅದನ್ನು ಸುಧಾರಿಸುವುದು ಹೇಗೆ?
550 ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಪರ್ಸನಲ್ ಲೋನನ್ನು ಅನುಮೋದಿಸುವುದು ಸಾಲದಾತರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ, ಈ ಸ್ಕೋರನ್ನು ಸುಧಾರಿಸಲು ಕೆಳಕಂಡ ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ:
- ಸಮಯಕ್ಕೆ ಸರಿಯಾಗಿ ಮತ್ತು ಪೂರ್ಣವಾಗಿ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಿ.
- ಅಸ್ತಿತ್ವದಲ್ಲಿರುವ ಲೋನ್‌ಗಳನ್ನು ಮುಂಚಿತವಾಗಿಯೇ ಕ್ಲಿಯರ್ ಮಾಡಿ.
- ಒಂದೇ ಸಮಯದಲ್ಲಿ ಅನೇಕ ಕ್ರೆಡಿಟ್‌ಗಳಿಗೆ ಅಪ್ಲೈ ಮಾಡುವುದನ್ನು ತಪ್ಪಿಸಿ.
- 30% ಕ್ಕಿಂತ ಕಡಿಮೆ ಕ್ರೆಡಿಟ್ ಬಳಕೆಯ ಅನುಪಾತವನ್ನು ನಿರ್ವಹಿಸಿ.
- ಕ್ರೆಡಿಟ್ ಇತಿಹಾಸವನ್ನು ಸುದೀರ್ಘವಾಗಿಸಲು ಹಳೆಯ ಅಕೌಂಟ್ ವಿವರಗಳನ್ನು ಇಟ್ಟುಕೊಳ್ಳಿ.
- ವರ್ಷಕ್ಕೆ ಕನಿಷ್ಠ ಎರಡು ಬಾರಿ ಕ್ರೆಡಿಟ್ ವರದಿ ಪರಿಶೀಲಿಸಿ.
- ನಿಮ್ಮ ಸಿಬಿಲ್ ವರದಿಯ ಬಗ್ಗೆ ಯಾವುದೇ ಮಾಹಿತಿ ತಪ್ಪಿದ್ದರೆ ತಕ್ಷಣ ಆಕ್ಷೇಪಣೆ ಸಲ್ಲಿಸಿ.
ಬಜಾಜ್ ಫಿನ್‌ಸರ್ವ್ ಗ್ರಾಹಕರಿಗೆ ತನ್ನ ವೆಬ್‌ಸೈಟ್ ಮೂಲಕ ತಮ್ಮ ಕ್ರೆಡಿಟ್ ಸ್ಕೋರ್‌ಗಳನ್ನು ಪರಿಶೀಲಿಸಲು ಅನುಮತಿ ನೀಡುತ್ತದೆ. ಇದು ಪರ್ಸನಲ್ ಲೋನ್ ಮತ್ತು ಕೈಗೆಟಕುವ ಬಡ್ಡಿ ದರಕ್ಕೆ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಒದಗಿಸುತ್ತದೆ.
ಆದ್ದರಿಂದ, 550 ಸಿಬಿಲ್ ಸ್ಕೋರ್‌ನೊಂದಿಗೆ ಪರ್ಸನಲ್ ಲೋನ್‌ಗೆ ಅನುಮೋದನೆ ಪಡೆಯುವುದು, ಇತರ ಅರ್ಹತಾ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳದ ಹೊರತಾಗಿಯೂ ಸವಾಲಾಗಿದೆ. ಹೀಗಾಗಿ, ಈ ಸ್ಕೋರ್ ಮತ್ತು ಒಟ್ಟಾರೆ ಅರ್ಹತೆಯನ್ನು ಸುಧಾರಿಸಲು ಸಕಾರಾತ್ಮಕ ಹಣಕಾಸಿನ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ.