ಇನ್ಸ್ಟಾ ಪರ್ಸನಲ್ ಲೋನ್ ಫೀಸ್ ಮತ್ತು ಶುಲ್ಕಗಳು

ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಪಡೆಯುವ ಮೊದಲು ನಮ್ಮ ಫೀಸ್ ಮತ್ತು ಶುಲ್ಕಗಳನ್ನು ವಿವರವಾಗಿ ಓದಿ.

ಇನ್ಸ್ಟಾ ಪರ್ಸನಲ್ ಲೋನ್ ಮೇಲಿನ ಫೀಸು ಮತ್ತು ಶುಲ್ಕಗಳು

ಶುಲ್ಕದ ವಿಧ ಅನ್ವಯವಾಗುವ ಶುಲ್ಕಗಳು

ಬಡ್ಡಿದರ

ವಾರ್ಷಿಕ 13% ರಿಂದ 35%.

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 3.85% ವರೆಗೆ ಪ್ರಕ್ರಿಯಾ ಶುಲ್ಕ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಡಾಕ್ಯುಮೆಂಟೇಶನ್ ಶುಲ್ಕಗಳು ಅನ್ವಯಿಸುವುದಿಲ್ಲ

ಬೌನ್ಸ್ ಶುಲ್ಕಗಳು

ಪ್ರತಿ ಬೌನ್ಸ್‌ಗೆ ರೂ. 700/

ದಂಡದ ಬಡ್ಡಿ

ಮಾಸಿಕ ಕಂತು/ಇಎಂಐ ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ಇಎಂಐ ಸ್ವೀಕರಿಸುವವರೆಗೆ ಬಾಕಿ ಇರುವ ಮಾಸಿಕ ಕಂತು/ಇಎಂಐ ಮೇಲೆ ತಿಂಗಳಿಗೆ 3.50% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ.

ಪೂರ್ವಪಾವತಿ ಶುಲ್ಕಗಳು*

ಪೂರ್ತಿ ಮುಂಗಡ- ಪಾವತಿ:
ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಭಾಗಶಃ ಮುಂಪಾವತಿ:
ಅಂತಹ ಭಾಗಶಃ ಮುಂಗಡ ಪಾವತಿಯ ದಿನಾಂಕದಂದು ಪೂರ್ವಪಾವತಿ ಮಾಡಿದ ಲೋನ್‌ನ ಅಸಲು ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಸ್ಟಾಂಪ್ ಡ್ಯೂಟಿ

ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ.

ಮ್ಯಾಂಡೇಟ್ ನೋಂದಣಿ ಶುಲ್ಕಗಳು ಯುಪಿಐ ಮ್ಯಾಂಡೇಟ್ ನೋಂದಣಿಯ ಸಂದರ್ಭದಲ್ಲಿ ರೂ. 1/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಅನ್ವಯವಾಗುತ್ತದೆ.

ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು

ಹೊಸ ಮ್ಯಾಂಡೇಟ್ ನೋಂದಣಿಯಾಗುವವರೆಗೆ ಗ್ರಾಹಕರ ಬ್ಯಾಂಕ್ ಮ್ಯಾಂಡೇಟ್ ತಿರಸ್ಕರಿಸಿದ ಗಡುವು ದಿನಾಂಕದ ಮೊದಲ ತಿಂಗಳಿನಿಂದ ತಿಂಗಳಿಗೆ ರೂ. 450/.

ಬ್ರೋಕನ್ ಪೀರಿಯಡ್ ಬಡ್ಡಿ/ ಇಎಂಐ-ಪೂರ್ವ ಬಡ್ಡಿ

ಇದನ್ನು ಲೋನ್ ಮೇಲಿನ ಬಡ್ಡಿಯ ಮೊತ್ತವೆಂದು ವ್ಯಾಖ್ಯಾನಿಸಲಾಗುತ್ತದೆ:

ಸನ್ನಿವೇಶ 1 - ಲೋನ್ ವಿತರಣೆಯ ದಿನಾಂಕದಿಂದ 30 ದಿನಗಳಿಗಿಂತ ಹೆಚ್ಚು:

ವಿತರಣೆಯ ದಿನಾಂಕದಿಂದ ಬ್ರೋಕನ್ ಪೀರಿಯಡ್ ಬಡ್ಡಿಯನ್ನು ಕಡಿತಗೊಳಿಸಲಾಗಿದೆ.

ಸನ್ನಿವೇಶ 2 - ಲೋನ್ ವಿತರಣೆಯ ದಿನಾಂಕದಿಂದ 30 ದಿನಗಳಿಗಿಂತ ಕಡಿಮೆ:

ನಿಜವಾದ ದಿನಗಳ ಸಂಖ್ಯೆಯ ಪ್ರಕಾರ ಮೊದಲ ಕಂತಿನ ಮೇಲಿನ ಬಡ್ಡಿಯನ್ನು ವಿಧಿಸಲಾಗುತ್ತದೆ.

ವಾರ್ಷಿಕ ನಿರ್ವಹಣಾ ಶುಲ್ಕಗಳು ಅನ್ವಯಿಸುವುದಿಲ್ಲ

*ಭಾಗಶಃ-ಮುಂಪಾವತಿಯು ಒಂದಕ್ಕಿಂತ ಹೆಚ್ಚು ಇಎಂಐ ಆಗಿರಬೇಕು.

ಇನ್ಸ್ಟಾ ಪರ್ಸನಲ್ ಲೋನ್ ಪಡೆಯುವುದು ಹೇಗೆ

ತ್ವರಿತ ಪರ್ಸನಲ್ ಲೋನ್ ಪಡೆಯಲು ಹಂತವಾರು ಮಾರ್ಗದರ್ಶಿ

  1. ನಮ್ಮ ಆನ್ಲೈನ್ ಫಾರ್ಮ್ ತೆರೆಯಲು ಈ ಪುಟದ ಮೇಲ್ಭಾಗದಲ್ಲಿರುವ 'ಆಫರ್ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ 10-ಅಂಕಿಯ ಮೊಬೈಲ್ ನಂಬರನ್ನು ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯೊಂದಿಗೆ ನಿಮ್ಮ ಪ್ರೊಫೈಲನ್ನು ವೆರಿಫೈ ಮಾಡಿ.
  3. ನಿಮಗಾಗಿ ಪೂರ್ವ-ನಿಯೋಜಿತ ಲೋನ್ ಮಿತಿಯೊಂದಿಗೆ ನೀವು ಆಫರನ್ನು ನೋಡುತ್ತೀರಿ. ನೀವು ಅದನ್ನು ಬಳಸಬಹುದು ಅಥವಾ ಕಡಿಮೆ ಮೊತ್ತವನ್ನು ಆಯ್ಕೆ ಮಾಡಬಹುದು.
  4. ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.
  5. ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.

ನೀವು ಹೊಸ ಗ್ರಾಹಕರಾಗಿದ್ದರೆ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಹೊಂದಿದ್ದರೆ ಅದನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.

ಗಮನಿಸಿ: ಕೆಲವು ಗ್ರಾಹಕರು ತಮ್ಮ ಇನ್ಸ್ಟಾ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಬಹುದು.

ಆಗಾಗ ಕೇಳುವ ಪ್ರಶ್ನೆಗಳು

ಇನ್ಸ್ಟಾ ಪರ್ಸನಲ್ ಲೋನಿಗೆ ಪ್ರಕ್ರಿಯಾ ಶುಲ್ಕ ಎಷ್ಟು?

ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನಿನ ಪ್ರಕ್ರಿಯಾ ಶುಲ್ಕವು ಲೋನ್ ಮೊತ್ತದ 3.85% ವರೆಗೆ ಹೋಗಬಹುದು (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

ಭಾಗಶಃ-ಮುಂಗಡ ಪಾವತಿಗಳ ಮೇಲೆ ಶುಲ್ಕ ಅನ್ವಯವಾಗುತ್ತದೆಯೇ?

ಭಾಗಶಃ-ಮುಂಗಡ ಪಾವತಿ ಮಾಡುವಾಗ, ನೀವು ಮಾಡಿದ ಭಾಗಶಃ-ಮುಂಗಡ ಪಾವತಿ ಮೊತ್ತದ ಮೇಲೆ 4.72% ಮತ್ತು ತೆರಿಗೆಗಳನ್ನು ಪಾವತಿಸಬೇಕು.

ಬೌನ್ಸ್ ಶುಲ್ಕ ಎಂದರೇನು?

ಬೌನ್ಸ್ ಶುಲ್ಕ ಎಂದರೆ ನೀವು ಇಎಂಐ ಪಾವತಿಯನ್ನು ತಪ್ಪಿಸಿಕೊಂಡಾಗ ವಿಧಿಸುವ ದಂಡವಾಗಿದೆ. ತಪ್ಪಿದ ಪ್ರತಿ ಇಎಂಐಗೆ ಬಜಾಜ್ ಫಿನ್‌ಸರ್ವ್ ಪ್ರತಿ ಬೌನ್ಸ್‌ಗೆ ರೂ. 700/- ಶುಲ್ಕ ವಿಧಿಸುತ್ತದೆ. ಅಲ್ಲದೆ, ತಡವಾದ ಪಾವತಿ ಅಥವಾ ಇಎಂಐ ಡೀಫಾಲ್ಟ್ ಸಂದರ್ಭದಲ್ಲಿ, ದಂಡದ ಬಡ್ಡಿ ಯನ್ನು 3.50% - 3.50% ದರದಲ್ಲಿ ವಿಧಿಸಲಾಗುತ್ತದೆ.

ಇನ್ಸ್ಟಾ ಪರ್ಸನಲ್ ಲೋನಿನ ಬಡ್ಡಿ ದರ ಎಷ್ಟು?

ನೀವು 13% ರಿಂದ 35% ರಿಂದ ಆರಂಭವಾಗುವ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನನ್ನು ಪಡೆಯಬಹುದು

ಇನ್ಸ್ಟಾ ಪರ್ಸನಲ್ ಲೋನ್‌ಗಳಿಗೆ ಫೋರ್‌ಕ್ಲೋಸರ್ ಶುಲ್ಕ ಎಷ್ಟು?

ನಿಮ್ಮ ಲೋನನ್ನು ಫೋರ್‌ಕ್ಲೋಸ್ ಮಾಡುವಾಗ, ನೀವು ಟರ್ಮ್ ಲೋನ್ ತೆಗೆದುಕೊಂಡರೆ ಬಾಕಿ ಅಸಲಿನ ಮೇಲೆ 4.72% ಮತ್ತು ತೆರಿಗೆಗಳೊಂದಿಗೆ ಶುಲ್ಕವನ್ನು ನೀಡಬೇಕು.

ಇನ್ಸ್ಟಾ ಪರ್ಸನಲ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಸಿಬಿಲ್ ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಪರ್ಸನಲ್ ಲೋನಿಗೆ ಅಗತ್ಯವಿರುವ ಕನಿಷ್ಠ ಸಿಬಿಲ್ ಸ್ಕೋರ್ ಆಗಿದೆ. ಹೆಚ್ಚಿನ ಸಿಬಿಲ್ ಸ್ಕೋರ್‌ಗಳು ಸ್ವಚ್ಛ ಹಣಕಾಸಿನ ಟ್ರ್ಯಾಕ್ ರೆಕಾರ್ಡ್ ಸೂಚಿಸುತ್ತವೆ ಮತ್ತು ಕಡಿಮೆ ಬಡ್ಡಿ ದರವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತವೆ. ಉಚಿತವಾಗಿ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಉದ್ಯೋಗ: ಸಂಬಳದ ಮತ್ತು ಸ್ವಯಂ ಉದ್ಯೋಗಿಗಳಿಗೆ ಅವರ ಆದಾಯದಿಂದಾಗಿ ವಿವಿಧ ಬಡ್ಡಿ ದರಗಳನ್ನು ನೀಡಬಹುದು. ಸಾಮಾನ್ಯವಾಗಿ, ಸಂಬಳದ ವ್ಯಕ್ತಿಗಳನ್ನು ಕಡಿಮೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಆದಾಯ: ಹೆಚ್ಚಿನ ಆದಾಯವು ಕಡಿಮೆ ಬಡ್ಡಿ ದರವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ ಏಕೆಂದರೆ ಸಾಲದಾತರು ಮರುಪಾವತಿಯ ಭರವಸೆಯನ್ನು ನೀಡಬಹುದು.

ಡೆಟ್-ಟು-ಇನ್ಕಮ್ ರೇಶಿಯೋ: ಈ ಅನುಪಾತವನ್ನು ಕಡಿಮೆ ಮಾಡುವುದರಿಂದ ಡೀಫಾಲ್ಟ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಏಕೆಂದರೆ ನಿಮ್ಮ ಇಎಂಐ ಗಳನ್ನು ಪಾವತಿಸಲು ನೀವು ಹೆಚ್ಚು ಹಣವನ್ನು ಹೊಂದಿರುತ್ತೀರಿ. ಬಡ್ಡಿ ದರವು ಅದಕ್ಕೆ ಅನುಗುಣವಾಗಿ ಕಡಿಮೆ ಇರಬಹುದು.

ವಯಸ್ಸು: ಯುವ ಅರ್ಜಿದಾರರು ಹೆಚ್ಚು ಕಾಲ ಗಳಿಸಬಹುದಾದ ಕಾರಣ, ಅವರು ನಿವೃತ್ತಿಯ ಹತ್ತಿರದಲ್ಲಿ ಇರುವವರಿಗಿಂತ ಹೆಚ್ಚು ಕೈಗೆಟಕುವ ದರಗಳನ್ನು ಪಡೆಯಬಹುದು.

ಉದ್ಯೋಗ: ಹೆಸರಾಂತ ಸಂಸ್ಥೆಯ ಉದ್ಯೋಗಿಗಳಿಗೆ ಉದ್ಯೋಗ ಮತ್ತು ಆದಾಯ ಸ್ಥಿರತೆ ಹೆಚ್ಚಾಗಿರುವ ಕಾರಣ, ಅವರು ಇನ್ನಷ್ಟು ಉತ್ತಮ ದರವನ್ನು ಪಡೆಯಬಹುದು.

ಸಾಲದಾತರೊಂದಿಗೆ ಸಂಬಂಧ: ಅಸ್ತಿತ್ವದಲ್ಲಿರುವ ಗ್ರಾಹಕರು ಹೆಚ್ಚು ಅನುಕೂಲಕರ ಬಡ್ಡಿ ದರಗಳನ್ನು ಪಡೆಯಬಹುದು.

ಗರಿಷ್ಠ ಮತ್ತು ಕನಿಷ್ಠ ಮರುಪಾವತಿ ಅವಧಿ ಎಷ್ಟು?

ನೀವು 96 ತಿಂಗಳವರೆಗಿನ ಅವಧಿಯಲ್ಲಿ ನಿಮ್ಮ ಲೋನನ್ನು ಮರುಪಾವತಿ ಮಾಡಬಹುದು. ಅಂದರೆ, ನೀವು ಗರಿಷ್ಠ 8 ವರ್ಷಗಳಿಗೆ ನಿಮ್ಮ ಇಎಂಐಗಳನ್ನು ಹೊಂದಿಸಿಕೊಳ್ಳಬಹುದು.

ರೆಪೋ ದರ ಎಂದರೇನು, ಮತ್ತು ಇದು ಇನ್ಸ್ಟಾ ಪರ್ಸನಲ್ ಲೋನ್‌ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಕಮರ್ಷಿಯಲ್ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನೀಡುವ ಸಾಲದ ದರವನ್ನು ರೆಪೋ ದರ ಎನ್ನಲಾಗುತ್ತದೆ. ರೆಪೋ ದರ ಕಡಿತವಾದಾಗ, ಸಾಮಾನ್ಯವಾಗಿ, ವೈಯಕ್ತಿಕ ಮತ್ತು ಬ್ಯಾಂಕುಗಳ, ಬಡ್ಡಿ ದರ ಮತ್ತು ಇಎಂಐಗಳಂತಹ ಸಾಲದ ವೆಚ್ಚಗಳು ಕಡಿಮೆಯಾಗುತ್ತವೆ.

ನೀವು ಫ್ಲೋಟಿಂಗ್ ಬಡ್ಡಿ ದರವನ್ನು ಆಯ್ಕೆ ಮಾಡಿದರೆ ಮಾತ್ರ ರೆಪೋ ದರವು ಲೋನ್‌ಗಳ ಮೇಲಿನ ಬಡ್ಡಿ ದರದ ಮೇಲೆ ಪರಿಣಾಮ ಬೀರುತ್ತದೆ. ಫಿಕ್ಸೆಡ್ ಬಡ್ಡಿ ದರಗಳಲ್ಲಿ ನೀಡಲಾಗುವ ಲೋನ್‌ಗಳು ರೆಪೋ ದರದ ಕಡಿತದಿಂದ ಪರಿಣಾಮ ಎದುರಿಸುವುದಿಲ್ಲ.

ಇನ್ನಷ್ಟು ಓದಿರಿ ಕಡಿಮೆ ಓದಿ