ಇನ್ಸ್ಟಾ ಪರ್ಸನಲ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಪಡೆಯಲು ಅಗತ್ಯವಿರುವ ಮಾನದಂಡಗಳನ್ನು ತಿಳಿದುಕೊಳ್ಳಲು ಓದಿ.

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಯಾರು ಬೇಕಾದರೂ ನಮ್ಮ ಇನ್ಸ್ಟಾ ಪರ್ಸನಲ್ ಲೋನನ್ನು ಆಯ್ಕೆ ಮಾಡಬಹುದು. ನಿಮ್ಮ ಅರ್ಹತೆ ಮತ್ತು ಡಾಕ್ಯುಮೆಂಟೇಶನ್ ಅವಶ್ಯಕತೆಯು ನೀವು ಹೊಸ ಗ್ರಾಹಕರು ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಅವಲಂಬಿಸಿರುತ್ತದೆ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ

ನೀವು ಮುಂಚಿತ-ಅನುಮೋದಿತ ಆಫರ್ ಹೊಂದಿರುವ ಅಸ್ತಿತ್ವದಲ್ಲಿರುವ ಗ್ರಾಹಕರಾಗಿರುವುದರಿಂದ, ನಿಮಗೆ ಯಾವುದೇ ಹೆಚ್ಚುವರಿ ಅರ್ಹತಾ ಮಾನದಂಡಗಳು ಅನ್ವಯವಾಗುವುದಿಲ್ಲ. ನಮ್ಮ ಕೆಲವು ಅಸ್ತಿತ್ವದಲ್ಲಿರುವ ಗ್ರಾಹಕರನ್ನು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್‌ನಂತಹ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ಕೇಳಬಹುದು.

ನೀವು ಹೊಸ ಗ್ರಾಹಕರಾಗಿದ್ದರೆ

ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಹೊಂದಿರುವ ಗ್ರಾಹಕರು ಸಿಬಿಲ್ ಪರಿಶೀಲನೆಯ ಮೂಲಕ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಬಹುದು.

ಇನ್ಸ್ಟಾ ಪರ್ಸನಲ್ ಲೋನ್ ಪಡೆಯುವುದು ಹೇಗೆ

ತ್ವರಿತ ಪರ್ಸನಲ್ ಲೋನ್ ಪಡೆಯಲು ಹಂತವಾರು ಮಾರ್ಗದರ್ಶಿ

  1. ನಮ್ಮ ಆನ್ಲೈನ್ ಫಾರ್ಮ್ ತೆರೆಯಲು ಈ ಪುಟದ ಮೇಲ್ಭಾಗದಲ್ಲಿರುವ 'ಆಫರ್ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ 10-ಅಂಕಿಯ ಮೊಬೈಲ್ ನಂಬರನ್ನು ನಮೂದಿಸಿ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿ ಯೊಂದಿಗೆ ನಿಮ್ಮ ಪ್ರೊಫೈಲನ್ನು ವೆರಿಫೈ ಮಾಡಿ.
  3. ನಿಮಗಾಗಿ ಪೂರ್ವ-ನಿಯೋಜಿತ ಲೋನ್ ಮಿತಿಯೊಂದಿಗೆ ನೀವು ಆಫರನ್ನು ನೋಡುತ್ತೀರಿ. ನೀವು ಅದನ್ನು ಬಳಸಬಹುದು ಅಥವಾ ಕಡಿಮೆ ಮೊತ್ತವನ್ನು ಆಯ್ಕೆ ಮಾಡಬಹುದು.
  4. ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.
  5. ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.

ನೀವು ಹೊಸ ಗ್ರಾಹಕರಾಗಿದ್ದರೆ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಹೊಂದಿದ್ದರೆ ಅದನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.

ಗಮನಿಸಿ: ಕೆಲವು ಗ್ರಾಹಕರು ತಮ್ಮ ಇನ್ಸ್ಟಾ ಪರ್ಸನಲ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಬಹುದು.

ಆಗಾಗ ಕೇಳುವ ಪ್ರಶ್ನೆಗಳು

ಸಂಬಳ ಪಡೆಯುವ ಅರ್ಜಿದಾರರಿಗೆ ಇನ್ಸ್ಟಾ ಪರ್ಸನಲ್ ಲೋನ್ ಪಡೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಹೆಚ್ಚಿನ ಸಂದರ್ಭಗಳಲ್ಲಿ, ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್ ಪಡೆಯಲು ನೀವು ಯಾವುದೇ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿಲ್ಲ. ಆದಾಗ್ಯೂ, ನಿಮ್ಮ ಪ್ರೊಫೈಲ್ ಆಧಾರದ ಮೇಲೆ, ಈ ರೀತಿಯ ಹೆಚ್ಚುವರಿ ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ನಿಮ್ಮನ್ನು ಕೇಳಬಹುದು:

  • ಪ್ಯಾನ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್‌ನಂತಹ ಕೆವೈಸಿ ಡಾಕ್ಯುಮೆಂಟ್‌ಗಳು
  • ಕ್ಯಾನ್ಸಲ್ ಮಾಡಿದ ಚೆಕ್
  • ಬ್ಯಾಂಕ್ ಖಾತೆ ವಿವರಗಳು
ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನಿಗೆ ಅರ್ಹತೆ ಪಡೆಯಲು ಬೇಕಾದ ಸಿಬಿಲ್ ಸ್ಕೋರ್ ಎಷ್ಟು?

ನಮ್ಮ ಇನ್ಸ್ಟಾ ಪರ್ಸನಲ್ ಲೋನ್ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳುವುದು ಅಗತ್ಯವಿಲ್ಲ ಏಕೆಂದರೆ ನಿಮಗೆ ತ್ವರಿತ ಪರ್ಸನಲ್ ಲೋನ್ ಆಫರ್ ವಿಸ್ತರಿಸುವ ಮೊದಲು ನಾವು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತೇವೆ.

ನನ್ನ ಇನ್ಸ್ಟಾ ಪರ್ಸನಲ್ ಲೋನ್ ಅರ್ಹತೆಯನ್ನು ನಾನು ಹೇಗೆ ಪರಿಶೀಲಿಸಬಹುದು?

ನೀವು ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಅರ್ಹತೆಯನ್ನು ಪರಿಶೀಲಿಸಬೇಕಾದ ಅಗತ್ಯವಿಲ್ಲ. ಅಸ್ತಿತ್ವದಲ್ಲಿರುವ ಗ್ರಾಹಕರು ಈಗಾಗಲೇ ಮುಂಚಿತ-ಅನುಮೋದಿತ ಆಫರ್ ಹೊಂದಿರುತ್ತಾರೆ, ಹೊಸ ಗ್ರಾಹಕರಿಗೆ, ನಿಮ್ಮ ಕ್ರೆಡಿಟ್ ಸ್ಕೋರ್, ಮರುಪಾವತಿ ಇತಿಹಾಸ ಮುಂತಾದ ಅನೇಕ ಮಾನದಂಡಗಳನ್ನು ಪರಿಶೀಲಿಸುವ ಮೂಲಕ ನಾವು ಪೂರ್ವ-ನಿಯೋಜಿತ ಮಿತಿಯನ್ನು ರಚಿಸುತ್ತೇವೆ.

ಡಾಕ್ಯುಮೆಂಟ್‌ಗಳಿಲ್ಲದೆ ನಾನು ತ್ವರಿತ ಲೋನನ್ನು ಹೇಗೆ ಪಡೆಯಬಹುದು?

ಬಜಾಜ್ ಫೈನಾನ್ಸ್ ಅಸ್ತಿತ್ವದಲ್ಲಿರುವ ಗ್ರಾಹಕರ ಆಯ್ದ ಸೆಟ್‌ಗೆ ಮುಂಚಿತ-ಅನುಮೋದಿತ ಲೋನನ್ನು ಒದಗಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಡಾಕ್ಯುಮೆಂಟ್‌ಗಳಿಲ್ಲದೆ ನೀವು ತ್ವರಿತ ಪರ್ಸನಲ್ ಲೋನನ್ನು ಪಡೆಯಬಹುದು. ಕೆಲವು ಸಂದರ್ಭಗಳಲ್ಲಿ, ಗ್ರಾಹಕರಿಗೆ ಕೆವೈಸಿ ಅಥವಾ ಬ್ಯಾಂಕ್ ವಿವರಗಳಂತಹ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ಕೇಳಬಹುದು.

ಇನ್ಸ್ಟಾ ಪರ್ಸನಲ್ ಲೋನ್ ಪಡೆಯಲು ವಯಸ್ಸಿನ ಮಿತಿ ಎಷ್ಟು?

ನೀವು 21 ರಿಂದ 80 ವರ್ಷಗಳ ನಡುವಿನ ವಯಸ್ಸಿನವರೆಗೆ ಬಜಾಜ್ ಫಿನ್‌ಸರ್ವ್ ಇನ್ಸ್ಟಾ ಪರ್ಸನಲ್ ಲೋನನ್ನು ಪಡೆಯಬಹುದು*. ಯುವ ಅರ್ಜಿದಾರರು ಸಾಮಾನ್ಯವಾಗಿ ಹೆಚ್ಚಿನ ಲೋನ್ ಮೊತ್ತವನ್ನು ಪಡೆಯುತ್ತಾರೆ ಏಕೆಂದರೆ ಅವರು ಹೆಚ್ಚು ಗಳಿಸುವ ವರ್ಷಗಳನ್ನು ಹೊಂದಿರುತ್ತಾರೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ಸ್ಟಾ ಪರ್ಸನಲ್ ಲೋನಿಗೆ ಅಗತ್ಯವಿರುವ ಕನಿಷ್ಠ ಸಂಬಳ ಎಷ್ಟು?

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ ಕನಿಷ್ಠ ಮಾಸಿಕ ಸಂಬಳದ ಅವಶ್ಯಕತೆ ರೂ. 25,001. ಆದಾಗ್ಯೂ, ನೀವು ವಾಸಿಸುವ ನಗರದ ಪ್ರಕಾರ ಇದು ಬದಲಾಗಬಹುದು. ಇದು ಅಹಮದಾಬಾದ್ ಮತ್ತು ಕೋಲ್ಕತ್ತಾದಂತಹ ನಗರಗಳಿಗೆ ತಿಂಗಳಿಗೆ ರೂ. 30,000 ಮತ್ತು ಬೆಂಗಳೂರು, ದೆಹಲಿ, ಮುಂಬೈ ಅಥವಾ ಪುಣೆಯಂತಹ ನಗರಗಳಿಗೆ ತಿಂಗಳಿಗೆ ರೂ. 35,000 ಆಗಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ