ಆಗಾಗ ಕೇಳುವ ಪ್ರಶ್ನೆಗಳು
ಈ ಕೆಳಗಿನ ಹಂತಗಳನ್ನು ಬಳಸಿಕೊಂಡು ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ನೀವು ಪರಿಶೀಲಿಸಬಹುದು:
- 'ಆಫರ್ ಪರಿಶೀಲಿಸಿ' ಮೇಲೆ ಕ್ಲಿಕ್ ಮಾಡಿ’.
- ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ.
- ಪೂರ್ವ-ನಿಯೋಜಿತ ಮಿತಿಯನ್ನು ಬಳಸಿ ಅಥವಾ ಬೇರೊಂದು ಲೋನ್ ಮೊತ್ತವನ್ನು ಆಯ್ಕೆಮಾಡಿ.
- ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ.
- ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
ನೀವು ಹೊಸ ಗ್ರಾಹಕರಾಗಿದ್ದರೆ ಅಥವಾ ನಮ್ಮೊಂದಿಗೆ ಅಸ್ತಿತ್ವದಲ್ಲಿರುವ ಸಂಬಂಧವನ್ನು ಹೊಂದಿದ್ದರೆ ಅದನ್ನು ಅವಲಂಬಿಸಿ ಆನ್ಲೈನ್ ಪ್ರಕ್ರಿಯೆಯು ಭಿನ್ನವಾಗಿರಬಹುದು.
ಹೆಚ್ಚಿನ ಸಂದರ್ಭಗಳಲ್ಲಿ, ಬಜಾಜ್ ಫಿನ್ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಪಡೆಯಲು ನೀವು ಯಾವುದೇ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕಾಗಿಲ್ಲ. ಆದಾಗ್ಯೂ, ನಿಮ್ಮ ಪ್ರೊಫೈಲ್ ಆಧಾರದ ಮೇಲೆ, ಈ ರೀತಿಯ ಹೆಚ್ಚುವರಿ ಬೇಸಿಕ್ ಡಾಕ್ಯುಮೆಂಟ್ಗಳನ್ನು ಸಲ್ಲಿಸಲು ನಿಮ್ಮನ್ನು ಕೇಳಬಹುದು:
- ಪ್ಯಾನ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಪಾಸ್ಪೋರ್ಟ್ನಂತಹ ಕೆವೈಸಿ ಡಾಕ್ಯುಮೆಂಟ್ಗಳು
- ಕ್ಯಾನ್ಸಲ್ ಮಾಡಿದ ಚೆಕ್
- ಬ್ಯಾಂಕ್ ಖಾತೆ ವಿವರಗಳು
ನಮ್ಮ ಇನ್ಸ್ಟಾ ಪರ್ಸನಲ್ ಲೋನ್ಗಳಲ್ಲಿ, ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸಲು ನಾವು ಈಗಾಗಲೇ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಮೌಲ್ಯಮಾಪನ ಮಾಡಿದ್ದೇವೆ. ನಿಮ್ಮ ಲೋನ್ ಅರ್ಹತೆಯ ಆಧಾರದ ಮೇಲೆ ನೀವು ರೂ. 10 ಲಕ್ಷದವರೆಗೆ ಲೋನ್ ಪಡೆಯಬಹುದು.
ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸುವ ಮೂಲಕ ನೀವು ನಿಮ್ಮ ಮುಂಚಿತ-ನಿಯೋಜಿತ ಮಿತಿಯನ್ನು ಪರಿಶೀಲಿಸಬಹುದು. ನೀವು ರೂ. 20,000 ದಿಂದ ನಿಯೋಜಿಸಲಾದ ಮಿತಿಯವರೆಗೆ ಯಾವುದೇ ಮೊತ್ತವನ್ನು ಸಾಲ ಪಡೆಯಬಹುದು.
ವಿತರಣೆಯ ಮೇಲೆ, ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ನೀವು ಇನ್ಸ್ಟಾ ಪರ್ಸನಲ್ ಲೋನ್ ಮೊತ್ತವನ್ನು ಪಡೆಯುತ್ತೀರಿ. ಆದರೆ, ವಿತರಣೆಯಾದ ನಂತರ ನೀವು ಲೋನ್ ರದ್ದುಗೊಳಿಸಲು ಬಯಸಿದರೆ, ನಿಮ್ಮ ಬಜಾಜ್ ಫಿನ್ಸರ್ವ್ ರಿಲೇಶನ್ಶಿಪ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ನೀವು ಅಸ್ತಿತ್ವದಲ್ಲಿರುವ ಪರ್ಸನಲ್ ಲೋನ್ ಹೊಂದಿದ್ದರೂ ಸಹ ನಿಮ್ಮ ಇನ್ಸ್ಟಾ ಪರ್ಸನಲ್ ಲೋನ್ ಆಫರನ್ನು ಪರಿಶೀಲಿಸಬಹುದು. ಆದಾಗ್ಯೂ, ಆಫರನ್ನು ಜನರೇಟ್ ಮಾಡುವ ಮೊದಲು ನಿಮ್ಮ ಪರ್ಸನಲ್ ಲೋನ್ ಮರುಪಾವತಿ ಸಾಮರ್ಥ್ಯವನ್ನು ವಿಶ್ಲೇಷಿಸಲಾಗುತ್ತದೆ. ನೆನಪಿಡಿ, ಅನೇಕ ಲೋನ್ಗಳಿಗೆ ಅಪ್ಲೈ ಮಾಡುವುದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು ಮತ್ತು ಇನ್ನೊಂದು ಲೋನ್ ಪಡೆಯುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು.