ಕ್ರೆಡಿಟ್‌ ಸ್ಕೋರ್‌ ಪರೀಕ್ಷಿಸುವುದು ಹೇಗೆ?

2 ನಿಮಿಷದ ಓದು

ಭಾರತದಲ್ಲಿ ಹಲವಾರು ಏಜೆನ್ಸಿಗಳು ಕ್ರೆಡಿಟ್ ಸ್ಕೋರ್ ನೀಡುತ್ತವೆ ಮತ್ತು ಕ್ರೆಡಿಟ್ ಸ್ಕೋರ್‌ಗಳು ಮತ್ತು ರೇಟಿಂಗ್‌ಗಳನ್ನು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತವಾದ ಅಂತಹ ಒಂದು ಸಂಸ್ಥೆಯು ಕ್ರೆಡಿಟ್ ಮಾಹಿತಿ ಬ್ಯೂರೋ (ಇಂಡಿಯಾ) ಲಿಮಿಟೆಡ್ ಆಗಿದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರದೆ ನೀವು ನಮ್ಮ ವೆಬ್‌ಸೈಟ್‌ನಲ್ಲಿ ಕೇವಲ ಮೂರು ಸರಳ ಹಂತಗಳಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸಬಹುದು:

  • ನಿಮ್ಮ ಬಗ್ಗೆ ಕೆಲವು ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಿ
  • ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಗೆ ಕಳುಹಿಸಲಾದ ಒಟಿಪಿಯನ್ನು ಖಚಿತಪಡಿಸುವ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಿ
  • ನಿಮ್ಮ ಸಿಬಿಲ್ ಸ್ಕೋರ್ ಮತ್ತು ರಿಪೋರ್ಟ್ ಪರಿಶೀಲಿಸಿ

www.cibil.com ಗೆ ಲಾಗಿನ್ ಆಗುವ ಮೂಲಕ ನೀವು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆನ್ಲೈನಿನಲ್ಲಿ ಪರಿಶೀಲಿಸಬಹುದು ಮತ್ತು ನಿಮ್ಮ ಕ್ರೆಡಿಟ್ ವರದಿಯನ್ನು ಪಡೆಯಿರಿ. ಕೋರಿಕೆಯನ್ನು ಸಲ್ಲಿಸಿದ ನಂತರ, ಅಗತ್ಯವಿರುವ ಗುರುತಿನ ಮತ್ತು ವಿಳಾಸದ ಪುರಾವೆಯ ಡಾಕ್ಯುಮೆಂಟ್‌ಗಳನ್ನು ನೀವು ಒದಗಿಸಬೇಕಾಗುತ್ತದೆ. ಬ್ಯೂರೋಗೆ ಭೇಟಿ ನೀಡುವ ಮೂಲಕ ಅಥವಾ ಪೋಸ್ಟ್ ಮೂಲಕ ಕ್ರೆಡಿಟ್ ರಿಪೋರ್ಟಿಗೆ ಅಪ್ಲೈ ಮಾಡುವ ಮೂಲಕ ನಿಮ್ಮ ಸ್ಕೋರ್ ಅನ್ನು ಕೂಡ ನೀವು ಆಫ್‌ಲೈನ್‌ನಲ್ಲಿ ತಿಳಿದುಕೊಳ್ಳಬಹುದು. ಪೋಸ್ಟ್ ಮೂಲಕ ಅಪ್ಲೈ ಮಾಡುವಾಗ, ನೀವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಬಹುದು. ಒಮ್ಮೆ ಇವುಗಳನ್ನು ಪರಿಶೀಲಿಸಿ ದೃಢೀಕರಿಸಲಾದ ನಂತರ, ನಿಮ್ಮ ಕ್ರೆಡಿಟ್ ರಿಪೋರ್ಟನ್ನು ಮೇಲ್ ಮೂಲಕ ನಿಮಗೆ ಕಳುಹಿಸಲಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ