ಗೋಲ್ಡ್ ಲೋನ್ ಬಡ್ಡಿ ದರವನ್ನು ಲೆಕ್ಕ ಹಾಕುವುದು ಹೇಗೆ

2 ನಿಮಿಷದ ಓದು

ಗೋಲ್ಡ್ ಲೋನ್‌ಗಳು ಚಿನ್ನದ ಒಡವೆ ಅಥವಾ ಆಭರಣಗಳ ಮೇಲೆ ಒದಗಿಸಲಾಗುವ ಸುರಕ್ಷಿತ ಮುಂಗಡಗಳಾಗಿವೆ. ಅತ್ಯಂತ ಕೈಗೆಟಕುವ ಬಡ್ಡಿ ದರವನ್ನು ಆಯ್ಕೆ ಮಾಡುವ ಮುನ್ನ ವಿವಿಧ ಸಾಲದಾತರು ಒದಗಿಸುವ ಗೋಲ್ಡ್ ಲೋನ್ ಬಡ್ಡಿ ದರಗಳನ್ನು ಹೋಲಿಕೆ ಮಾಡುವುದು ಅಗತ್ಯವಾಗಿದೆ. ಬಜಾಜ್ ಫಿನ್‌ಸರ್ವ್ ಸಾಲಗಾರ-ಸ್ನೇಹಿ ನಿಯಮ ಮತ್ತು ಷರತ್ತುಗಳೊಂದಿಗೆ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟಕುವ ಗೋಲ್ಡ್ ಲೋನ್ ದರಗಳನ್ನು ಒದಗಿಸುವ ಸಂಸ್ಥೆಯಾಗಿದೆ. ನಿಮ್ಮ ಆದ್ಯತೆಯ ಸಾಲದಾತರಲ್ಲಿ ಗೋಲ್ಡ್ ಲೋನ್ ಗೆ ಅಪ್ಲೈ ಮಾಡುವಾಗ ಗೋಲ್ಡ್ ಲೋನ್ ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಕುವುದು ಎಂಬುದನ್ನು ತಿಳಿದುಕೊಳ್ಳಿ.

ಸಾಲದಾತರು ಆದ್ಯತೆಯ ಮೇರೆಗೆ ಹಣದುಬ್ಬರ ಮತ್ತು ಚಿನ್ನದ ಮಾರುಕಟ್ಟೆ ದರದಂತಹ ಅಂಶಗಳ ಆಧಾರದಲ್ಲಿ ಬಡ್ಡಿ ದರವನ್ನು ಲೆಕ್ಕ ಹಾಕುತ್ತಾರೆ. ಗೋಲ್ಡ್ ಲೋನ್‌ಗಳ ಮೇಲೆ ಅನ್ವಯವಾಗುವ ಬಡ್ಡಿ ದರಗಳನ್ನು ನೀವು ಹೇಗೆ ಪರಿಶೀಲಿಸಬಹುದು ಮತ್ತು ಅದಕ್ಕೆ ಅನುಗುಣವಾಗಿ ಗೋಲ್ಡ್ ಲೋನ್ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಬಹುದು ಎಂಬುದನ್ನು ತಿಳಿದುಕೊಳ್ಳಿ.

ಗೋಲ್ಡ್ ಲೋನ್ ದರವನ್ನು ಪರಿಶೀಲಿಸುವುದು ಹೇಗೆ

ಅನ್ವಯವಾಗುವ ಗೋಲ್ಡ್ ಲೋನ್ ಬಡ್ಡಿ ದರವನ್ನು ಪರಿಶೀಲಿಸುವುದು ಸರಳ ಮತ್ತು ತ್ವರಿತವಾಗಿದ್ದು, ನೀವು ಕೆಲವು ಹಂತಗಳನ್ನು ಮಾತ್ರ ಅನುಸರಿಸಬೇಕಾಗುತ್ತದೆ.

  1. ಬಜಾಜ್ ಫಿನ್‌ಸರ್ವ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. ಗೋಲ್ಡ್ ಲೋನ್ ಪುಟಕ್ಕೆ ತೆರಳಿ
  3. ಮೇಲ್ಭಾಗದಲ್ಲಿ ಲಭ್ಯವಿರುವ ವಿವಿಧ ಟ್ಯಾಬ್‌ಗಳಿಂದ 'ಫೀಸ್ ಮತ್ತು ಶುಲ್ಕಗಳು' ಆಯ್ಕೆಮಾಡಿ
  4. ಬಡ್ಡಿ ದರ ಮತ್ತು ಇತರ ಅನ್ವಯವಾಗುವ ಫೀ ಮತ್ತು ಶುಲ್ಕಗಳನ್ನು ಪರಿಶೀಲಿಸಲು ಪುಟವನ್ನು ವಿವರವಾಗಿ ನೋಡಿ

ಅದರ ಜೊತೆಗೆ, ಅನ್ವಯವಾಗುವ ಗೋಲ್ಡ್ ಲೋನ್ ದರವನ್ನು ಪರಿಶೀಲಿಸಿ ಖಚಿತಪಡಿಸಲು ಹತ್ತಿರದ ಬಜಾಜ್ ಫಿನ್‌ಸರ್ವ್‌ ಶಾಖೆಗೆ ಭೇಟಿ ನೀಡಿ.

ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಂತಹ ಮೀಸಲಾದ ಹಣಕಾಸು ಸಾಧನದ ಸಹಾಯದಿಂದ ಗೋಲ್ಡ್ ಲೋನ್ ಬಡ್ಡಿಯನ್ನು ಲೆಕ್ಕ ಹಾಕುವ ವಿವರವಾದ ಮಾರ್ಗದರ್ಶಿ ಈ ಕೆಳಗಿನಂತಿದೆ. ಪಾವತಿಸಬೇಕಾದ ಒಟ್ಟು ಲೋನ್ ಹೊಣೆಗಾರಿಕೆಯಿಂದ ನೀವು ಪಡೆದ ಲೋನ್ ಅಸಲನ್ನು ಕಡಿತಗೊಳಿಸಿದರೆ ಪಾವತಿಸಬೇಕಾದ ಒಟ್ಟು ಬಡ್ಡಿ ಲಭಿಸುತ್ತದೆ ಎಂಬುದನ್ನು ಗಮನಿಸಿ. ಪಾವತಿಸಬೇಕಾದ ಬಡ್ಡಿಯ ತ್ವರಿತ ಲೆಕ್ಕಾಚಾರಕ್ಕಾಗಿ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ.

ಹಂತ 1: ಬಜಾಜ್ ಫಿನ್‌ಸರ್ವ್‌ನ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಪುಟಕ್ಕೆ ಹೋಗಿ.

ಹಂತ 2 ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಪುಟದಲ್ಲಿ, 'ಅಡಮಾನ ಇಡುವ ಚಿನ್ನ (ಗ್ರಾಂಗಳಲ್ಲಿ)' ಅಥವಾ 'ಅಗತ್ಯವಿರುವ ಲೋನ್ ಮೊತ್ತ.’ ಮೇಲಿನ ಎರಡರಲ್ಲಿ ಯಾವುದಾದರೂ ಒಂದನ್ನು ನಮೂದಿಸಿ. ಒಂದು ಮೌಲ್ಯವನ್ನು ನಮೂದಿಸುವುದು, ಆ ದಿನದ ಪ್ರತಿ ಗ್ರಾಂ ಆಧಾರದಲ್ಲಿ ಮತ್ತೊಂದನ್ನು ತನ್ನಿಂತಾನೆ ಹೊಂದಿಸಿಕೊಳ್ಳುತ್ತದೆ.

ನೀವು 60 ಗ್ರಾಂ ಚಿನ್ನವನ್ನು ಅಡವಿಡುತ್ತಿದ್ದು, ಆ ದಿನದಂದು ಪ್ರತಿ ಗ್ರಾಂ ಮೌಲ್ಯ ₹ 3,311 ಆಗಿದ್ದರೇ, ಲಭ್ಯವಾಗುವ ಒಟ್ಟು ಲೋನ್ ಮೊತ್ತ ₹ 1,98,660 ವರೆಗೆ ಇರಬಹುದು.

ಹಂತ 3: ಮುಂದೆ, ಲಭ್ಯವಿರುವ ಆಯ್ಕೆಗಳಿಂದ ಅಂದರೆ 'ಮಾಸಿಕ,' 'ದ್ವಿ-ಮಾಸಿಕ,' 'ತ್ರೈಮಾಸಿಕ,' 'ಅರ್ಧ-ವಾರ್ಷಿಕ' ಮತ್ತು 'ವಾರ್ಷಿಕ'- ಮೇಲಿನ ಆಯ್ಕೆಗಳಿಂದ ನಿಮಗೆ ಸೂಕ್ತವಾದ ಯಾವುದಾದರೂ ಒಂದು ಬಡ್ಡಿ ಮರುಪಾವತಿಯ ಆವರ್ತನವನ್ನು ಆಯ್ಕೆ ಮಾಡಿ.

ಹಂತ 4: ಪಾವತಿಸಬೇಕಾದ ಒಟ್ಟು ಬಡ್ಡಿ ಮೊತ್ತವನ್ನು ಪಡೆದುಕೊಳ್ಳಲು ನೀವು ಆಯ್ಕೆ ಮಾಡಿರುವ ಸಾಲದಾತರು ವಿಧಿಸುವ ಬಡ್ಡಿ ದರವನ್ನು ನಮೂದಿಸಿ.

ಅರ್ಹತಾ ಕ್ಯಾಲ್ಕುಲೇಟರ್ ಸಹಾಯದಿಂದ ಅಡವಿಡಬೇಕಾದ ಚಿನ್ನದ ಆಧಾರದ ಮೇಲೆ ನೀವು ಪ್ರತಿ ಗ್ರಾಮ್‌ಗೆ ನಿಮ್ಮ ಗೋಲ್ಡ್ ಲೋನ್ ಅರ್ಹತೆ ಪರಿಶೀಲಿಸಬಹುದು.

ಗೋಲ್ಡ್ ಲೋನ್ ಮೇಲೆ ಕನಿಷ್ಠ ಬಡ್ಡಿ ದರ

ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ವಾರ್ಷಿಕ 9.5% ರಿಂದ ಆರಂಭವಾಗುವ ಬಡ್ಡಿ ದರದೊಂದಿಗೆ ಗೋಲ್ಡ್ ಲೋನನ್ನು ಪಡೆಯಬಹುದು. ಬಡ್ಡಿ ಸರಾಸರಿ ದರದಲ್ಲಿ ಒಗ್ಗೂಡುತ್ತದೆ ಮತ್ತು ಯಾವುದೇ ಗೌಪ್ಯ ಶುಲ್ಕಗಳು ಅನ್ವಯಿಸುವುದಿಲ್ಲ.

ಗೋಲ್ಡ್ ಲೋನ್ ಮೇಲೆ ಗರಿಷ್ಠ ಬಡ್ಡಿ ದರ

ಗೋಲ್ಡ್ ಲೋನ್‌ಗಳ ಮೇಲಿನ ಗರಿಷ್ಠ ಬಡ್ಡಿ ದರ ಒಂದು ಅವಧಿಯಿಂದ ಇನ್ನೊಂದಕ್ಕೆ ಬದಲಾಗುತ್ತದೆ ಮತ್ತು ಸಾಮಾನ್ಯವಾಗಿ ಇರುವ ಹಣದುಬ್ಬರ ಮತ್ತು ಚಿನ್ನದ ಮಾರುಕಟ್ಟೆ ಬೆಲೆಯ ನಿಯಂತ್ರಣದಲ್ಲಿ ಇರುತ್ತದೆ. ಸಾಲಗಾರನಿಗೆ ಸಂಬಂಧಪಟ್ಟ ಮುಂಗಡ ಪಡೆಯುವ ಅರ್ಹತೆ, ಅಂತಿಮವಾಗಿ ಕನಿಷ್ಠ ಮತ್ತು ಗರಿಷ್ಠ ದರಗಳ ನಡುವೆ ಅನ್ವಯವಾಗುವ ಬಡ್ಡಿ ದರವನ್ನು ನಿರ್ಧರಿಸುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ