ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ನಾನು ಯಾವ ಅವಶ್ಯಕತೆಗಳನ್ನು ಪೂರೈಸಬೇಕು?

2 ನಿಮಿಷದ ಓದು
20 ಏಪ್ರಿಲ್ 2023

ನಿಮ್ಮ ಚಿನ್ನದ ಆಭರಣಗಳ ಮೇಲೆ ಲೋನ್ ತೆಗೆದುಕೊಳ್ಳುವುದು ನಿಮ್ಮ ಆಸ್ತಿಯ ಮಾಲೀಕತ್ವವನ್ನು ರಾಜಿಮಾಡಿಕೊಳ್ಳದೆ ತ್ವರಿತ ಲೋನ್ ಪಡೆಯಲು ಉತ್ತಮ ಮಾರ್ಗವಾಗಿದೆ. ಇದು ವೈದ್ಯಕೀಯ ತುರ್ತುಸ್ಥಿತಿ, ನಿಮ್ಮ ಬಿಸಿನೆಸ್ ವಿಸ್ತರಣೆ, ಉನ್ನತ ಶಿಕ್ಷಣ ಅಥವಾ ಇತರ ಯಾವುದೇ ವೆಚ್ಚಕ್ಕಾಗಿರಲಿ, ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಗೋಲ್ಡ್ ಲೋನ್ ಸುಲಭ ಮಾರ್ಗವಾಗಿದೆ.

ಲೋನ್ ಮೊತ್ತವು ಚಿನ್ನದ ಮೌಲ್ಯದ ಆಧಾರದ ಮೇಲೆ ಇರುವುದರಿಂದ ಸೀಮಿತ ಕ್ರೆಡಿಟ್ ಇತಿಹಾಸ ಅಥವಾ ಕಡಿಮೆ ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವ ಜನರಲ್ಲಿ ಗೋಲ್ಡ್ ಲೋನ್‌ಗಳು ಜನಪ್ರಿಯ ಆಯ್ಕೆಯಾಗಿವೆ. ಗೋಲ್ಡ್ ಲೋನ್ ನಿಮ್ಮ ಚಿನ್ನದ ಆಭರಣಗಳ ಮೇಲೆ ಅಡಮಾನವಾಗಿ ಸುರಕ್ಷಿತವಾಗಿರುವುದರಿಂದ, ಅಸುರಕ್ಷಿತ ಲೋನ್‌ಗಳಿಗಿಂತ ಗೋಲ್ಡ್ ಲೋನ್ ಬಡ್ಡಿ ದರಗಳು ತುಲನಾತ್ಮಕವಾಗಿ ಕಡಿಮೆಯಾಗಿರುತ್ತವೆ.

ಬಜಾಜ್ ಫೈನಾನ್ಸ್‌ನೊಂದಿಗೆ, ನೀವು ರೂ. 5,000 ರಿಂದ ರೂ. 2 ಕೋಟಿಯವರೆಗಿನ ಲೋನನ್ನು ಪಡೆಯಬಹುದು. ಕಡಿಮೆ ಪೇಪರ್‌ವರ್ಕ್‌ನೊಂದಿಗೆ ನಾವು ತ್ವರಿತ ಮತ್ತು ತೊಂದರೆ ರಹಿತ ಅನುಮೋದನೆಯನ್ನು ಒದಗಿಸುತ್ತೇವೆ. ಪ್ರಮುಖ ಅರ್ಹತಾ ಮಾನದಂಡಗಳನ್ನು ಪೂರೈಸುವವರೆಗೆ, ಯಾರು ಬೇಕಾದರೂ ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಬಹುದು.

ನೀವು 21 ರಿಂದ 70 ನಡುವಿನ ವಯಸ್ಸಿನ ಭಾರತೀಯ ನಾಗರಿಕರಾಗಿದ್ದರೆ, ನೀವು ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡಬಹುದು. ನಿಮಗೆ ಬೇಕಾಗಿರುವುದು ಕೇವಲ 22-ಕ್ಯಾರೆಟ್‌ನಲ್ಲಿ ಮೌಲ್ಯಯುತವಾದ ನಿಮ್ಮ ಶುದ್ಧ ಚಿನ್ನದ ಆಭರಣವಾಗಿದೆ. ಅದಲ್ಲದೆ, ನಿಮಗೆ ಕೇವಲ ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು ಮತ್ತು ನಿಮ್ಮ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಈ ಕೆಳಗಿನ ಯಾವುದೇ ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು:

  • ಆಧಾರ್ ಕಾರ್ಡ್
  • ವೋಟರ್ ಐಡಿ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸನ್ಸ್

ಆದಾಗ್ಯೂ, ನೀವು 5 ಲಕ್ಷಕ್ಕಿಂತ ಹೆಚ್ಚಿನ ಲೋನಿಗೆ ಅಪ್ಲೈ ಮಾಡಿದರೆ, ನೀವು ನಿಮ್ಮ ಪ್ಯಾನ್ ಕಾರ್ಡನ್ನು ಸಲ್ಲಿಸಬೇಕಾಗುತ್ತದೆ.

ನಮ್ಮ ತೊಂದರೆ ರಹಿತ ಅಪ್ಲಿಕೇಶನ್ ಮತ್ತು ತ್ವರಿತ ಅನುಮೋದನೆ ಪ್ರಕ್ರಿಯೆ, ನೀವು ಕೆಲವು ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಗೋಲ್ಡ್ ಲೋನಿಗೆ ಅಪ್ಲೈ ಮಾಡಬಹುದು. ನಾವು ಅಪಾಯಿಂಟ್ಮೆಂಟ್ ಸೆಟಪ್ ಮಾಡುತ್ತೇವೆ ಮತ್ತು ನಿಮ್ಮ ಹತ್ತಿರದ ಗೋಲ್ಡ್ ಲೋನ್ ಶಾಖೆಗೆ ಭೇಟಿ ನೀಡುವ ಸಮಯದಲ್ಲಿ ಎಲ್ಲವನ್ನೂ ಸಿದ್ಧವಾಗಿರಿಸುತ್ತೇವೆ.

ನಿಮ್ಮ ಅರ್ಹತೆಯ ಬಗ್ಗೆ ನೀವು ಯೋಚನೆಯನ್ನು ಹೊಂದಿದ ನಂತರ, ನೀವು ನಮ್ಮ ವೆಬ್‌ಸೈಟ್‌ನಲ್ಲಿಯೇ ಗೋಲ್ಡ್ ಲೋನಿಗೆ ಅಪ್ಲೈ ಮಾಡಬಹುದು. ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ:

ಹಂತ 1: ವೆಬ್‌ಸೈಟ್‌ನ ಗೋಲ್ಡ್ ಲೋನ್ ವಿಭಾಗಕ್ಕೆ ಭೇಟಿ ನೀಡಿ.

ಹಂತ 2: ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ನಮೂದಿಸಿ .

ಹಂತ 4: ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ನಿಮಗೆ ಹತ್ತಿರದ ಶಾಖೆಯನ್ನು ಆಯ್ಕೆಮಾಡಿ.

ಹಂತ 5: ನಿಮ್ಮ ಫೋನ್‌ಗೆ ಕಳುಹಿಸಲಾದ ಒಟಿಪಿಯನ್ನು ಸಲ್ಲಿಸಿ ಮತ್ತು ಆನ್ಲೈನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹೆಚ್ಚುವರಿಯಾಗಿ, ಗೋಲ್ಡ್ ಲೋನ್‌ಗಳ ಮೇಲೆ ನಾವು ಪ್ರಸ್ತುತ ಚಿನ್ನದ ನಾಣ್ಯಗಳು, ಬಾರ್‌ಗಳು, ಮಿಶ್ರಿತ ಲೋಹಗಳು, ಪಾತ್ರಗಳು ಇತ್ಯಾದಿಗಳನ್ನು ಅಡಮಾನವಾಗಿ ಸ್ವೀಕರಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ