ಪರ್ಸನಲ್ ಲೋನಿನ ವಿವಿಧ ಪ್ರಯೋಜನಗಳು ಯಾವುವು?

2 ನಿಮಿಷದ ಓದು

ಪರ್ಸನಲ್ ಲೋನ್‌ಗಳು ನಿಮ್ಮ ಯಾವುದೇ ಉದ್ದೇಶಗಳಿಗಾಗಿ, ದೊಡ್ಡ ಮಟ್ಟದ ಖರೀದಿಗಳಿಗೆ ಅಥವಾ ತುರ್ತು ಸಂದರ್ಭಗಳಲ್ಲಿ ನಗದಿನ ಕೊರತೆ ನೀಗಿಸಲು ನೀವು ತಕ್ಷಣವೇ ಅವಲಂಬಿಸಬಹುದಾದ ಆಯ್ಕೆಗಳಾಗಿವೆ. ಅನೇಕ ಪ್ರಯೋಜನಗಳ ಮೂಲಕ ಪರ್ಸನಲ್ ಲೋನ್‌‌ ಸಾಲಗಾರರಿಗೆ ಒಂದು ಅತ್ಯಂತ ಸೂಕ್ತ ಆಯ್ಕೆಯಾಗುತ್ತದೆ.

ಪರ್ಸನಲ್ ಲೋನ್‌ಗಳ ಪ್ರಯೋಜನಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

1. ರೂ. 40 ಲಕ್ಷದವರೆಗೆ ಹಣಕಾಸು ಸಹಾಯ
ಪರ್ಸನಲ್ ಲೋನ್‌ಗಳು ರೂ. 40 ಲಕ್ಷದವರೆಗಿನ ಹಣಕಾಸನ್ನು ಒದಗಿಸಬಹುದು. ಈ ಫಂಡ್‌ಗಳನ್ನು ಆಸ್ತಿ ನವೀಕರಣ, ಉನ್ನತ ಶಿಕ್ಷಣದ ಖರ್ಚು, ವಾಹನ ಖರೀದಿ ಅಥವಾ ವೈದ್ಯಕೀಯ ವೆಚ್ಚದಂತಹ ಹತ್ತು ಹಲವಾರು ಉದ್ದೇಶಗಳಿಗಾಗಿ ಬಳಸಬಹುದು.

2. ಹೊಂದಿಕೊಳ್ಳುವ ಅವಧಿಗಳು
ಪರ್ಸನಲ್ ಲೋನ್ ಪ್ರಯೋಜನಗಳಲ್ಲಿ ಒಂದು ಮರುಪಾವತಿ ಅವಧಿಯು 84 ತಿಂಗಳವರೆಗೆ ಇರುತ್ತದೆ. ನಿಮ್ಮ ಹಣಕಾಸು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಕಾಲಾವಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀವು ಹೊಂದಿದ್ದೀರಿ.

3. ತ್ವರಿತ ವಿತರಣೆ
ಅನುಮೋದನೆಯ 24 ಗಂಟೆಗಳ ಒಳಗೆ* ನಾವು ಪರ್ಸನಲ್ ಲೋನ್‌ ವಿತರಿಸುತ್ತೇವೆ. ಇಷ್ಟು ತ್ವರಿತವಾಗಿ ಹಣ ಸಿಗುವುದರಿಂದ ಈ ಲೋನ್‌ಗಳು ವೈದ್ಯಕೀಯ ತುರ್ತು ಮತ್ತು ಇತರ ತುರ್ತುಸ್ಥಿತಿಗಳಿಗೆ ಸೂಕ್ತವಾಗಿವೆ.

4. ಸ್ವತ್ತಿನ ಆಧಾರದ ಅವಶ್ಯಕತೆಯಿಲ್ಲ
ಪರ್ಸನಲ್ ಲೋನ್‌ಗಳು ಅಸುರಕ್ಷಿತ ಲೋನ್‌ಗಳು, ಆದ್ದರಿಂದ ಅಪ್ಲೈ ಮಾಡಲು ನೀವು ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ.

5. ಆಕರ್ಷಕ ಬಡ್ಡಿ ದರಗಳು
ಇಎಂಐಗಳನ್ನು ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಪರ್ಸನಲ್ ಲೋನ್‌ಗಳನ್ನು ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ನೀಡಲಾಗುತ್ತದೆ.

6. ಕನಿಷ್ಠ ಕಾಗದ ಪತ್ರಗಳ ಕೆಲಸ
ಪರ್ಸನಲ್ ಲೋನ್‌ಗೆ ಪ್ರಮುಖ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ, ಅವುಗಳೆಂದರೆ:

  • ಕೆವೈಸಿ ಡಾಕ್ಯುಮೆಂಟ್‌ಗಳು
  • ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು

ಉದ್ಯೋಗಿ ಅರ್ಜಿದಾರರು ತಮ್ಮ ಉದ್ಯೋಗಿ ಐಡಿ ಕಾರ್ಡ್ ಮತ್ತು ಇತ್ತೀಚಿನ ಸಂಬಳದ ಸ್ಲಿಪ್‌ಗಳನ್ನು ಒದಗಿಸಬೇಕು. ಸ್ವಯಂ-ಉದ್ಯೋಗಿ ಅರ್ಜಿದಾರರು ತಮ್ಮ ಬಿಸಿನೆಸ್ ಪ್ರೂಫ್ ಡಾಕ್ಯುಮೆಂಟ್‌ಗಳು, ಹಿಂದಿನ ವರ್ಷದ ವಹಿವಾಟು ವಿವರಗಳು ಮತ್ತು ಆದಾಯ ತೆರಿಗೆ ರಿಟರ್ನ್‌ಗಳನ್ನು ಒದಗಿಸಬೇಕು.

7. ಸುಲಭ ಅರ್ಹತೆ
ನಮ್ಮ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳು ಸರಳವಾಗಿವೆ, ಇದು ನಿಮಗೆ ಅಪ್ಲೈ ಮಾಡುವುದನ್ನು ಸುಲಭಗೊಳಿಸುತ್ತದೆ ಮತ್ತು ಅಗತ್ಯವಿರುವ ಹಣಕಾಸನ್ನು ಒದಗಿಸುತ್ತದೆ.

8. ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲ
ಮಿತಿಯಿಲ್ಲದೆ ಯಾವುದೇ ಉದ್ದೇಶಕ್ಕಾಗಿ ನಿಮ್ಮ ಪರ್ಸನಲ್ ಲೋನಿನ ಹಣವನ್ನು ನೀವು ಬಳಸಬಹುದು.

9. ತೆರಿಗೆಯ ಪ್ರಯೋಜನಗಳು
ನೀವು ಫಂಡ್‌ಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ, ನೀವು ನಿಮ್ಮ ಪರ್ಸನಲ್ ಲೋನ್ ಮೇಲೆ ತೆರಿಗೆ-ಸಂಬಂಧಿತ ವಿನಾಯಿತಿಗಳಿಗೆ ಅರ್ಹರಾಗಬಹುದು.

10. ಫ್ಲೆಕ್ಸಿ ಪ್ರಯೋಜನಗಳು
ನಮ್ಮ ಪರ್ಸನಲ್ ಲೋನ್‌ಗಳು ಫ್ಲೆಕ್ಸಿ ಸೌಲಭ್ಯವನ್ನು ಒದಗಿಸುತ್ತವೆ, ಇದು ನಿಮ್ಮ ಲೋನ್ ಮಿತಿಯಿಂದ ಉಚಿತವಾಗಿ ಲೋನ್ ಪಡೆಯಲು ಮತ್ತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಭಾಗಶಃ ಮುಂಗಡ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ. ನೀವು, ಬಳಸುವ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸುತ್ತೀರಿ. ಅವಧಿಯ ಮೊದಲ ಭಾಗದಲ್ಲಿ ಬಡ್ಡಿಯನ್ನು-ಮಾತ್ರ ಇಎಂಐ ಆಗಿ ಪಾವತಿಸಲು ಆಯ್ಕೆ ಮಾಡುವ ಮೂಲಕ ನಿಮ್ಮ ಮಾಸಿಕ ಕಂತುಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಬಹುದು.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ