ಎನ್‌ಬಿಎಫ್‌ಸಿಯಿಂದ ಪರ್ಸನಲ್ ಲೋನ್ ಪಡೆಯುವ ಅನುಕೂಲಗಳು

2 ನಿಮಿಷದ ಓದು

ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು) ವೈಯಕ್ತಿಕಗೊಳಿಸಿದ ಕೊಡುಗೆಗಳು, ವ್ಯಾಪಕವಾದ ತಲುಪುವಿಕೆ, ಬಲವಾದ ಅಪಾಯ ನಿರ್ವಹಣಾ ಚೌಕಟ್ಟುಗಳು, ವಿವಿಧ ಸಹ-ಸಾಲ ಒಪ್ಪಂದಗಳು ಮತ್ತು ಡೈನಮಿಕ್ ಡಿಜಿಟಲ್ ಅಸ್ತಿತ್ವ ಅಳವಡಿಸಿಕೊಂಡಿವೆ, ಇದು ಭಾರತದಲ್ಲಿ ತಮ್ಮ ಕ್ರೆಡಿಟ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿದೆ. ಸಾಲಗಾರರು ಬ್ಯಾಂಕ್ ಲೋನ್‌ಗಿಂತ ಎನ್‌ಬಿಎಫ್‌ಸಿ ಲೋನ್‌ಗೆ ಯಾಕೆ ಆದ್ಯತೆ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಓದಿ.

ಎನ್‌ಬಿಎಫ್‌ಸಿಯಿಂದ ಪರ್ಸನಲ್ ಲೋನ್ ಏಕೆ ಉತ್ತಮ ಆಯ್ಕೆಯಾಗಿದೆ?

1. ಸುಲಭದ ಅರ್ಹತಾ ಮಾನದಂಡ
ನೀವು ದೀರ್ಘವಾದ ಅಥವಾ ಸಂಕೀರ್ಣವಾದವುಗಳನ್ನು ಪರ್ಸನಲ್ ಲೋನ್‌ಗಳಿಗೆ ಅರ್ಹತಾ ಮಾನದಂಡ ಎನ್‌ಬಿಎಫ್‌ಸಿಗಳೊಂದಿಗೆ ಅನುಸರಿಸಬೇಕಾಗಿಲ್ಲ. ಈ ಸಾಲದಾತರು ಪರಿಗಣಿಸುವ ಪ್ರಾಥಮಿಕ ಮಾನದಂಡವೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್. ನೀವು ಕನಿಷ್ಠ 750ರಷ್ಟು ಸಿಬಿಲ್ ಸ್ಕೋರ್ ಹೊಂದಿದ್ದರೆ, ತ್ವರಿತ ಅನುಮೋದನೆ ಪಡೆಯಬಹುದು. ಗಣನೀಯ ಆದಾಯ ಮತ್ತು ಒಳ್ಳೆಯ ವೃತ್ತಿ ಪೋರ್ಟ್‌ಫೋಲಿಯೋ ತೋರಿಸುವ ಮೂಲಕ ಕಡಿಮೆ ಕ್ರೆಡಿಟ್ ಸ್ಕೋರ್‌ ಹೊಂದಿರುವವರೂ ಕೂಡ ಅಪ್ಲೈ ಮಾಡಬಹುದು.

ಇದಕ್ಕೆ ವಿರುದ್ಧವಾಗಿ, ಬ್ಯಾಂಕ್‌‌ಗಳು ನಿಗದಿಪಡಿಸಿದ ಅರ್ಹತಾ ನಿಯಮಗಳು - ಅದರಲ್ಲೂ ಸ್ವಯಂ ಉದ್ಯೋಗಿ ಅರ್ಜಿದಾರರಿಗೆ - ಬಹಳ ಕಠಿಣವಾಗಿರುತ್ತವೆ.

2. ಕನಿಷ್ಠ ಮತ್ತು ಶೂನ್ಯ ಡಾಕ್ಯುಮೆಂಟೇಶನ್
ಅಸ್ತಿತ್ವದಲ್ಲಿರುವ ಅಥವಾ ಮುಂಚಿತ-ಅನುಮೋದಿತ ಗ್ರಾಹಕರು ಎನ್‌ಬಿಎಫ್‌ಸಿಗಳಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವಾಗ ಯಾವುದೇ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿಲ್ಲ. ಹೊಸ ಗ್ರಾಹಕರಿಗೂ ಸಹ, ಕೆವೈಸಿಗಾಗಿ ಕೆಲವು ಪ್ರಮುಖ ಓವಿಡಿಗಳು, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು ಮತ್ತು ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು ಮಾತ್ರ ಸಾಕು.

ಬ್ಯಾಂಕ್‌ಗಳಲ್ಲಾದರೆ, ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರು - ಇಬ್ಬರೂ ಸಹ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಸಲ್ಲಿಸಬೇಕಾಗಬಹುದು. ಸಾಮಾನ್ಯವಾಗಿ ಈ ಸಾಲದಾತರು ಸ್ವಯಂ-ಉದ್ಯೋಗಿ ಅರ್ಜಿದಾರರಿಂದಲೂ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳುತ್ತಾರೆ.

3. ತ್ವರಿತ ಅನುಮೋದನೆ
ಮುಂಚಿತ-ಅನುಮೋದನೆ ಪಡೆದ ಗ್ರಾಹಕರು ಅತ್ಯುತ್ತಮ ಎನ್‌ಬಿಎಫ್‌ಸಿಯಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿದಾಗ, ಕೆಲವೇ ನಿಮಿಷಗಳಲ್ಲಿ ಲೋನ್ ಅನುಮೋದನೆ ಪಡೆಯಬಹುದು. ಬೇರೆ ಸಂದರ್ಭಗಳಲ್ಲೂ ಸಹ, ನೀವು ಪ್ರತಿಷ್ಠಿತ ಎನ್‌ಬಿಎಫ್‌ಸಿಗಳಿಂದ ಕೇವಲ 5 ನಿಮಿಷಗಳಲ್ಲಿ* ಅನ್‌ಸೆಕ್ಯೂರ್ಡ್‌ ಲೋನ್ ಅನುಮೋದನೆ ಪಡೆಯಬಹುದು.

ಆದರೆ ಬ್ಯಾಂಕ್‌ಗಳಲ್ಲಿ ಇದು ಸಾಧ್ಯವಿಲ್ಲ. ಒಂದು ಅಪ್ಲಿಕೇಶನ್ ಅನುಮೋದಿಸುವ ಮೊದಲು, ಬ್ಯಾಂಕ್‌ಗಳು ಅನೇಕ ಆಂತರಿಕ ಪ್ರಕ್ರಿಯೆಗಳನ್ನು ಅನುಸರಿಸಬೇಕು.

4. ಸ್ವಿಫ್ಟ್ ಪ್ರಕ್ರಿಯೆ
ಎನ್‌ಬಿಎಫ್‌ಸಿಗಳು ಅನುಮೋದನೆ ಸಿಕ್ಕಿದ ಒಂದು ದಿನದೊಳಗೆ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸುತ್ತದೆ. ಹಾಗಾಗಿ, ಆಯ್ದ ನಾನ್-ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳಿಂದ, ನಿಮ್ಮ ಅಕೌಂಟ್‌ನಲ್ಲಿ 24 ಗಂಟೆಗಳ* ಒಳಗೆ ಹಣ ಪಡೆಯಬಹುದು. ಇದರಿಂದಾಗಿ, ಮೆಡಿಕಲ್ ಎಮರ್ಜೆನ್ಸಿಯಂತಹ ತುರ್ತು ಅವಶ್ಯಕತೆಗಳಿಗೆ, ಎನ್‌ಬಿಎಫ್‌ಸಿ ಲೋನ್‌ಗಳು ಮಾದರಿ ಫಂಡಿಂಗ್ ಆಗಿವೆ.

ಬ್ಯಾಂಕ್‌ಗಳಿಂದ ಪರ್ಸನಲ್ ಲೋನ್ ಪಡೆಯಲು ಕೆಲವು ದಿನಗಳು ಅಥವಾ ಕೆಲವು ವಾರಗಳಷ್ಟು ಸಮಯ ಬೇಕಾಗಬಹುದು.

5. ಸಂಪೂರ್ಣವಾಗಿ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ
ನಾವು 100% ಡಿಜಿಟಲ್ ಮತ್ತು ಪೇಪರ್‌ಲೆಸ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ. ಈ ಪ್ರಕ್ರಿಯೆಗೆ ಪ್ರಮುಖ ವಿವರಗಳಾದ ಹೆಸರು, ಫೋನ್ ನಂಬರ್ ಮತ್ತು ನಗರ ಇವುಗಳನ್ನು ಒದಗಿಸಿದರೆ ಸಾಕು.

ಅದಲ್ಲದೇ, ಹಲವಾರು ಬ್ಯಾಂಕ್‌ಗಳಲ್ಲಿ ಇಂದಿಗೂ ಆನ್‌ಲೈನ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆ ದೊರೆಯುವುದಿಲ್ಲ. ಸಾಲಗಾರರು ಶಾಖೆಗೆ ಖುದ್ದಾಗಿ ಹೋಗಿ ಅಪ್ಲೈ ಮಾಡಬೇಕಾದ ಕಾರಣ ಇದು ಇನ್ನಷ್ಟು ಕಷ್ಟವಾಗುತ್ತದೆ.

6. ಅಸಾಧಾರಣ ಗ್ರಾಹಕ ಸೇವೆ
ಕೊನೆಯದು ಆದರೆ ಮುಖ್ಯವಾದುದು, ಎನ್‌ಬಿಎಫ್‌ಸಿಗಳು ಉತ್ತಮ ಗ್ರಾಹಕ ಸೇವೆಯನ್ನು ಹೊಂದಿವೆ, ಅದನ್ನು ಅವಲಂಬಿಸಬಹುದು. ಈ ಸಾಲ ನೀಡುವ ಕಂಪನಿಗಳು ಸಾಮಾನ್ಯವಾಗಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಅಥವಾ ಮಂಜೂರು ಮಾಡುವ ಮೊದಲು ಮತ್ತು ನಂತರ ಸಾಲಗಾರರಿಗೆ ಸಹಾಯ ಮಾಡಲು ಲಭ್ಯವಿರುವ ಗ್ರಾಹಕ ರಿಲೇಶನ್‌ಶಿಪ್ ಮ್ಯಾನೇಜರ್ ಅನ್ನು ನಿಯೋಜಿಸುತ್ತವೆ.

ಜೊತೆಗೆ ಬ್ಯಾಂಕ್‌ಗಳಲ್ಲಿ, ಅದರಲ್ಲೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಇಂತಹ ಸೇವೆಗಳು ಹೆಚ್ಚು ಗ್ರಾಹಕ-ಕೇಂದ್ರಿತವಾಗಿ ಇರುವುದಿಲ್ಲ.

ಈ ಎಲ್ಲಾ ಕಾರಣಗಳಿಗಾಗಿ, ಎನ್‌ಬಿಎಫ್‌ಸಿ ಲೋನ್ ಅನ್ನು ಅತ್ಯುತ್ತಮ ಆಯ್ಕೆಯಾಗಿ ನೋಡಲಾಗುತ್ತದೆ. ಬ್ಯಾಂಕ್‌ಗೆ ಹೋಲಿಸಿದರೆ ನೀವು ಎನ್‌ಬಿಎಫ್‌ಸಿಯಲ್ಲಿ ಹೆಚ್ಚಿನ ಪ್ರಮಾಣದ ತ್ವರಿತ ಲೋನ್ ಕೂಡ (ಅರ್ಹತೆಯ ಆಧಾರದ ಮೇಲೆ) ಪಡೆಯಬಹುದು. ಅತಿಕಡಿಮೆ ಬಡ್ಡಿದರಗಳು ಹಾಗೂ ಆಕರ್ಷಕ ಫೀಚರ್ ಮತ್ತು ಪ್ರಯೋಜನಗಳು ಬೇಕಿದ್ದಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ