ಸಿಬಿಲ್ ಸ್ಕೋರ್ ಎಂದರೇನು?
ನಿಮ್ಮ ಸಿಬಿಲ್ ಸ್ಕೋರ್ 300 ಮತ್ತು 900 ನಡುವೆ ಇರುವ ಮೂರು ಅಂಕಿಯ ಸಂಖ್ಯೆಯಾಗಿದ್ದು, ಇದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿಮಗೆ ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ತ್ವರಿತ ಅನುಮೋದನೆಯನ್ನು ಪಡೆಯಲು ಸಹಾಯ ಮಾಡಬಹುದು. ಹೆಚ್ಚಿನ ಬ್ಯಾಂಕ್ ಮತ್ತು ನಾನ್-ಬ್ಯಾಂಕ್‌ಗಳಿಗೆ, ಲೋನ್ ಅನುಮೋದನೆಗೆ ಕನಿಷ್ಠ 685 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅಗತ್ಯವಿದೆ.
ಆದಾಗ್ಯೂ, ನೀವು ನಿಮ್ಮ ಸಿಬಿಲ್ ಸ್ಕೋರ್ ಬಗ್ಗೆ ತಿಳಿಯುವ ಮುಂಚೆ, ಸಿಬಿಲ್‌ನ ಅರ್ಥ ಮತ್ತು ಅದು ನಿಮ್ಮ ಕ್ರೆಡಿಟ್ ಹೆಲ್ತ್‌ಗೆ ಏಕೆ ಮುಖ್ಯವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ.
CIBIL ಮೇಲ್ನೋಟ
CIBIL ಎಂದರೆ ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ ಇಂಡಿಯಾ ಲಿಮಿಟೆಡ್ ಇದರ ಸಂಕ್ಷಿಪ್ತ ರೂಪ. ಇದು ವ್ಯಕ್ತಿಗಳು ಮತ್ತು ಸಂಸ್ಥೆಗಳ ಎಲ್ಲಾ ಕ್ರೆಡಿಟ್ ಸಂಬಂಧಿತ ಚಟುವಟಿಕೆಗಳ ದಾಖಲೆಗಳನ್ನು ನಿರ್ವಹಿಸುವಲ್ಲಿ ತೊಡಗಿಸಿಕೊಂಡಿರುವ ಕ್ರೆಡಿಟ್ ಮಾಹಿತಿ ಕಂಪನಿಯಾಗಿದೆ.
ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಬ್ಯೂರೋಗೆ ಸಲ್ಲಿಸುತ್ತವೆ. ಈ ಮಾಹಿತಿಯ ಆಧಾರದ ಮೇಲೆ ಸಿಬಿಲ್, ಕ್ರೆಡಿಟ್ ಮಾಹಿತಿ ವರದಿ (ಸಿಐಆರ್) ನೀಡುತ್ತದೆ ಮತ್ತು ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್ ನೀಡುತ್ತದೆ.
ಇನ್ನಷ್ಟು ಓದಿರಿ: 550-600 ಸಿಬಿಲ್ ಸ್ಕೋರ್‌ಗಾಗಿ ಪರ್ಸನಲ್ ಲೋನ್
ಸಾಮಾನ್ಯವಾಗಿ ಸಿಬಿಲ್ ಸ್ಕೋರ್ ಎಂದು ಉಲ್ಲೇಖಿಸಲಾಗುವ ಈ ಡಾಕ್ಯುಮೆಂಟ್ ಮತ್ತು ಸಂಬಂಧಿತ ಕ್ರೆಡಿಟ್ ಸ್ಕೋರ್, ನಿಮ್ಮ ಸಾಲ ಪಡೆಯುವ ಅರ್ಹತೆಯನ್ನು ನಿರ್ಧರಿಸುತ್ತದೆ ಮತ್ತು ನೀವು ಲೋನ್ ಅನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವ ಸಾಧ್ಯತೆಯ ಬಗ್ಗೆ ಸಾಲದಾತರಿಗೆ ತಿಳಿಸುತ್ತದೆ. ಹೆಚ್ಚಿನ ಸ್ಕೋರ್, ನೀವು ಲೋನ್ ಡೀಫಾಲ್ಟ್ ಮಾಡುವ ಸಾಧ್ಯತೆ ಕಡಿಮೆ ಎಂಬುದನ್ನು ಸೂಚಿಸುತ್ತದೆ ಹಾಗೂ ಕಡಿಮೆ ಸ್ಕೋರ್, ಕ್ರೆಡಿಟ್-ಅಪಾಯದ ನಡವಳಿಕೆಯನ್ನು ಸೂಚಿಸುತ್ತದೆ.
ಸಿಬಿಲ್ ಎಂಬುದು ಕ್ರೆಡಿಟ್ ಮಾಹಿತಿಯ ಕಣಜವಾಗಿದ್ದು, ಇದು ಯಾವುದೇ ಸಾಲ ನೀಡುವ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಿ. ಆದಾಗ್ಯೂ, ಇದು ಅರ್ಜಿದಾರರ ಕ್ರೆಡಿಟ್ ಪ್ರೊಫೈಲ್ ತಿಳಿದುಕೊಳ್ಳಲು ಮತ್ತು ಹೆಚ್ಚು ವಿಶ್ವಾಸಾರ್ಹ ಕ್ರೆಡಿಟ್ ಇತಿಹಾಸ ಹೊಂದಿರುವ ಗ್ರಾಹಕರನ್ನು ಗುರುತಿಸಲು ಬ್ಯಾಂಕುಗಳು ಮತ್ತು ಸಾಲದಾತರಿಗೆ ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತದೆ.
CIBIL ನಿಂದ ಇತರ ಸೇವೆಗಳು
ನಿಮ್ಮ ಕ್ರೆಡಿಟ್ ಸ್ಕೋರ್ ಜೊತೆಗೆ, ವೈಯಕ್ತಿಕ ಕ್ರೆಡಿಟ್ ರಿಪೋರ್ಟ್ ಮತ್ತು ಕಂಪನಿಗಳ ಕ್ರೆಡಿಟ್ ರಿಪೋರ್ಟ್ ಅನ್ನು ಕೂಡಾ ಸಿಬಿಲ್ ಒದಗಿಸುತ್ತದೆ.
ಕ್ರೆಡಿಟ್ ವರದಿಯು ನಿಮ್ಮ ಕ್ರೆಡಿಟ್ ಸ್ಕೋರ್, ಸಾಲದ ಇತಿಹಾಸ, ಮರುಪಾವತಿ ದಿನಾಂಕಗಳು ಮತ್ತು ಯಾವುದಾದರೂ ಮರುಪಾವತಿ ಡೀಫಾಲ್ಟ್ ಹಾಗೂ ವಿಳಂಬಗಳಿದ್ದರೆ ಅವುಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ. ವರದಿಯು ನಿಮ್ಮ ಉದ್ಯೋಗ ಮತ್ತು ಸಂಪರ್ಕ ವಿವರಗಳ ಮಾಹಿತಿಯನ್ನೂ ಹೊಂದಿರುತ್ತದೆ.
ವ್ಯಕ್ತಿಯ ರಿಪೋರ್ಟ್‌ನಂತೆಯೇ, ಕಂಪನಿಗಳ CIBIL ರಿಪೋರ್ಟ್ ಕಂಪನಿಯ ಕ್ರೆಡಿಟ್ ಇತಿಹಾಸದ ಬಗ್ಗೆ ವಿವರಗಳನ್ನು ಒಳಗೊಂಡಿರುತ್ತದೆ. ಇದು ಅಸ್ತಿತ್ವದಲ್ಲಿರುವ ಕ್ರೆಡಿಟ್, ಯಾವುದೇ ಬಾಕಿ ಇರುವ ಮೊಕದ್ದಮೆಗಳು ಮತ್ತು ಯಾವುದೇ ಬಾಕಿ ಮೊತ್ತಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಬ್ಯೂರೋ ಹಣಕಾಸು ಸಂಸ್ಥೆಗಳಿಂದ ಈ ಡೇಟಾವನ್ನು ಪಡೆದುಕೊಳ್ಳುತ್ತದೆ ಮತ್ತು ಕಾಲಕಾಲಕ್ಕೆ ಸರಿಯಾಗಿ ಅದನ್ನು ನಿರ್ವಹಿಸುತ್ತದೆ.
ನಿಮ್ಮ ಮರುಪಾವತಿ ಇತಿಹಾಸ, ಕ್ರೆಡಿಟ್ ಬಳಕೆಯ ಅನುಪಾತ ಮತ್ತು ಚಾಲ್ತಿಯಲ್ಲಿರುವ ಲೋನ್‌ಗಳ ಸಂಖ್ಯೆಯಂತಹ ಅಂಶಗಳು ನಿಮ್ಮ CIBIL ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಮನ ಹರಿಸುವುದನ್ನು ಉತ್ತಮ ಅಭ್ಯಾಸ ಎಂದು ಪರಿಗಣಿಸಲಾಗುತ್ತದೆ. ಬಜಾಜ್ ಫಿನ್‌ಸರ್ವ್‌ನೊಂದಿಗೆ ಉಚಿತವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ. ಕೆಲವು ಅಗತ್ಯದ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಸ್ಕೋರ್ ಮತ್ತು ನಿಮ್ಮ ವೈಯಕ್ತಿಕಗೊಳಿಸಿದ ಕ್ರೆಡಿಟ್ ಹೆಲ್ತ್ ರಿಪೋರ್ಟ್ ಅನ್ನು ಪಡೆಯಿರಿ.
ಆಗಾಗ ಕೇಳುವ ಪ್ರಶ್ನೆಗಳು
ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಹೆಲ್ತ್‌ನ ಅಳತೆಯಾಗಿದೆ. ಈ ಸ್ಕೋರ್ 300 ಮತ್ತು 900 ನಡುವಿನ ಶ್ರೇಣಿಯಲ್ಲಿರಬೇಕು, 900 ಗರಿಷ್ಠ ಕ್ರೆಡಿಟ್ ಅರ್ಹತೆಯನ್ನು ಸೂಚಿಸುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್ 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿದ್ದರೆ ಅದು ಉತ್ತಮವಾಗಿದೆ ಎಂದು ಭಾವಿಸಲಾಗುತ್ತದೆ. 750 ಸ್ಕೋರ್ ಅತ್ಯುತ್ತಮ ಸ್ಕೋರ್ ಶ್ರೇಣಿಯಲ್ಲಿ ಬರುತ್ತದೆ ಮತ್ತು ನೀವು ಅವಲಂಬಿತ ಸಾಲಗಾರರಾಗಿದ್ದೀರಿ ಎಂದು ಸಾಲದಾತರಿಗೆ ತೋರಿಸುತ್ತದೆ. ಹೀಗಾಗಿ, 750+ ಸಿಬಿಲ್ ಸ್ಕೋರ್ ಹೊಂದಿರುವುದರಿಂದ ಪರ್ಸನಲ್ ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ನಿಮಗೆ ಅರ್ಹತೆ ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರದೆ ನೀವು ನಿಮ್ಮ ಇತ್ತೀಚಿನ ಸಿಬಿಲ್ ಸ್ಕೋರ್ ಉಚಿತವಾಗಿ ಪರಿಶೀಲಿಸಬಹುದು.
ಸಿಬಿಲ್ ಸ್ಕೋರ್ ಎಂಬುದು 300 ರಿಂದ 900 ವರೆಗಿನ ಮೂರು ಅಂಕಿಯ ಸಂಖ್ಯೆಯಾಗಿದ್ದು, ಇದನ್ನು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ನಿಮ್ಮ ಕ್ರೆಡಿಟ್ ನಡವಳಿಕೆ ಮತ್ತು ನಿಮ್ಮ ಟ್ರಾನ್ಸ್‌ಯೂನಿಯನ್ ಸಿಬಿಲ್ ವರದಿಯಲ್ಲಿನ ಮಾಹಿತಿ ಮೇಲೆ, ಇದು ನಿಮ್ಮ ಕ್ರೆಡಿಟ್ ಇತಿಹಾಸದ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕುವಾಗ ಅದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.