ಪರ್ಸನಲ್ ಲೋನ್ ಪರಿಶೀಲನಾ ಪ್ರಕ್ರಿಯೆ ಎಂದರೇನು?

2 ನಿಮಿಷದ ಓದು

ಯಾವುದೇ ತೊಂದರೆಯಿಲ್ಲದೆ ಪರ್ಸನಲ್ ಲೋನ್‌ಗಳನ್ನು ಪಡೆಯಬಹುದಾದ ಕಾರಣ, ಅದು ಜನಪ್ರಿಯ ಕ್ರೆಡಿಟ್ ಸೌಲಭ್ಯವಾಗಿದೆ. ನಿಮ್ಮ ಲೋನ್ ಅಪ್ಲಿಕೇಶನ್‌ಗೆ ನಾವು ತಕ್ಷಣದ ಅನುಮೋದನೆಯನ್ನು ಮತ್ತು ಅನುಮೋದನೆಯ 24 ಗಂಟೆಗಳ* ಒಳಗೆ ವಿತರಣೆಯನ್ನು ಒದಗಿಸುತ್ತೇವೆ. ಡಾಕ್ಯುಮೆಂಟ್‌ಗಳ ಸಂಗ್ರಹಣೆ- ಡಾಕ್ಯುಮೆಂಟ್‌ಗಳನ್ನು ಪಡೆಯಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ, ಅದರಲ್ಲಿ ಈ ಕೆಳಗಿನವುಗಳು ಸೇರಿರಬಹುದು: ಲೋನ್ ವಿತರಣೆ. ನೀವು ಲೋನ್ ಒಪ್ಪಂದ ಮತ್ತು ಸಹಿ ಮಾಡಿದ ಮಂಜೂರಾತಿ ಪತ್ರವನ್ನು ಪಡೆಯುವ ಮೂಲಕ ನಿಮ್ಮನ್ನು ದೃಢೀಕರಿಸಲಾಗುತ್ತದೆ, ನಂತರ ಲೋನ್ ವಿತರಿಸಲಾಗುತ್ತದೆ.

ಲೋನ್ ವಿತರಣೆ ನೀವು ಲೋನ್ ಒಪ್ಪಂದ ಮತ್ತು ಸಹಿ ಮಾಡಿದ ಮಂಜೂರಾತಿ ಪತ್ರ ಪಡೆದುಕೊಂಡದ್ದು ಖಚಿತವಾದ ನಂತರ ನಿಮಗೆ ಲೋನ್ ವಿತರಿಸಲಾಗುತ್ತದೆ.

4-ಹಂತದ ಪರ್ಸನಲ್ ಲೋನ್ ಪರಿಶೀಲನಾ ಪ್ರಕ್ರಿಯೆ ಇಲ್ಲಿದೆ.

1. ಅಪ್ಲಿಕೇಶನ್
ಪರಿಶೀಲನೆಯ ಮೊದಲ ಹಂತ ಮತ್ತು ನಿಮ್ಮ ಲೋನ್‌ನ ಅನುಮೋದನೆ ಪ್ರಕ್ರಿಯೆಯು ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್‌ನೊಂದಿಗೆ ಆರಂಭವಾಗುತ್ತದೆ. ಅಪ್ಲಿಕೇಶನ್ ಸ್ವೀಕರಿಸಿದ ನಂತರ, ನಿಮ್ಮ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

2. ಡಾಕ್ಯುಮೆಂಟ್‌ಗಳ ಸಂಗ್ರಹ
ಮುಂದಿನ ಹಂತ, ಪೇಪರ್‌ವರ್ಕ್ ಸಂಗ್ರಹಣೆ. ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ, ಇದರಲ್ಲಿ ಈ ಕೆಳಗಿನವು ಒಳಗೊಂಡಿರಬಹುದು.

  • ವಿಳಾಸ ಮತ್ತು ಗುರುತಿನ ಪುರಾವೆ: ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಾರ್ಡ್
  • ಉದ್ಯೋಗ ಮತ್ತು ಆದಾಯದ ಪುರಾವೆ: ಎಂಪ್ಲಾಯೀ ಐಡಿ ಕಾರ್ಡ್, ಕಳೆದ ಎರಡು ತಿಂಗಳ ಸ್ಯಾಲರಿ ಸ್ಲಿಪ್‌ಗಳು ಮತ್ತು ಕಳೆದ ಮೂರು ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು

3. ಡಾಕ್ಯುಮೆಂಟ್‌ಗಳ ಪರಿಶೀಲನೆ
ಪರ್ಸನಲ್ ಲೋನ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಅರ್ಹತಾ ಮಾನದಂಡಗಳನ್ನು ಪೂರೈಸುವುದು, ಒದಗಿಸಲಾದ ಡಾಕ್ಯುಮೆಂಟ್‌ಗಳು, ಮರುಪಾವತಿ ಸಾಮರ್ಥ್ಯವನ್ನು ಒಳಗೊಂಡಂತೆ ಅರ್ಜಿದಾರರ ಬಗ್ಗೆ ಎಲ್ಲಾ ವಿವರಗಳನ್ನು ಮೌಲ್ಯೀಕರಿಸುವುದನ್ನು ಒಳಗೊಂಡಿದೆ, ಸಿಬಿಲ್ ಸ್ಕೋರ್ ನಿಮ್ಮ ವಿವರಗಳನ್ನು ಪರಿಶೀಲಿಸಲು ನಮ್ಮ ಪ್ರತಿನಿಧಿಯು ನಿಮ್ಮ ನಿವಾಸ ಮತ್ತು ನಿಮ್ಮ ಕೆಲಸದ ಸ್ಥಳಕ್ಕೆ ಭೇಟಿ ನೀಡಬಹುದು.

4. ಲೋನ್ ವಿತರಣೆ
ಈ ಪರಿಶೀಲನಾ ಪ್ರಕ್ರಿಯೆ ಮುಗಿದ ನಂತರ, ಲೋನ್‌ಗೆ ಅನುಮೋದನೆ ಪಡೆಯುತ್ತೀರಿ. ನೀವು ಲೋನ್ ಒಪ್ಪಂದವನ್ನು ಪಡೆದ ಮೇಲೆ ಮತ್ತು ನಿಮ್ಮ ಲೋನ್ ಮಂಜೂರಾತಿ ಪತ್ರವು ಸಹಿಯಾದ ನಂತರ, ಇದು ಖಚಿತವಾದುದುರ ಬಗ್ಗೆ ನಿಮಗೆ ತಿಳಿಸಲಾಗುವುದು. ನಂತರ ಲೋನ್ ವಿತರಿಸಲಾಗುತ್ತದೆ.

ನಿಮ್ಮ ಅಪ್ಲಿಕೇಶನ್ ಪರಿಶೀಲಿಸಿ, ಲೋನ್ ಮಂಜೂರು ಮಾಡಿದ ನಂತರ, ನೀವು ನಿಮ್ಮ ಅವಶ್ಯಕತೆಗಳನ್ನು ಪೂರೈಸಲು ಈ ಮೊತ್ತವನ್ನು ಬಳಸಬಹುದು. ನಮ್ಮ ಆಕರ್ಷಕ ಪರ್ಸನಲ್ ಲೋನ್ ಬಡ್ಡಿದರಗಳಲ್ಲಿ ನಿಮಗೆ ಅನುಕೂಲಕರವಾದ ಇಎಂಐಗಳಲ್ಲಿ ಲೋನ್ ಮರುಪಾವತಿಸಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ