ಪರ್ಸನಲ್ ಲೋನ್‌ಗೆ ಗರಿಷ್ಠ ಮತ್ತು ಕನಿಷ್ಠ ಕಾಲಾವಧಿ ಎಷ್ಟು?

2 ನಿಮಿಷದ ಓದು

ಬಡ್ಡಿ ದರಗಳ ಹಾಗೆಯೇ, ಪರ್ಸನಲ್ ಲೋನ್‌ಗಳು ಸೇರಿದಂತೆ ಯಾವುದೇ ಹಣಕಾಸು ಪ್ರಾಡಕ್ಟ್‌ನ ಅವಧಿಯು ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತದೆ. ಪರ್ಸನಲ್ ಲೋನ್ ಕಾಲಾವಧಿಯು ಲೋನ್ ಪಡೆದ ಅನುಭವ ಮತ್ತು ಅದರ ವಿಭಿನ್ನ ಕಾಲಾವಧಿಗಳನ್ನು ನಿರ್ಧರಿಸುವ ಒಂದು ಪ್ರಮುಖ ಅಂಶವಾಗಿದೆ. ಹೀಗಾಗಿ, ಕ್ರೆಡಿಟ್‌ಗೆ ಅಪ್ಲೈ ಮಾಡುವ ಮೊದಲು ಪರ್ಸನಲ್ ಲೋನ್‌ಗಳ ಕನಿಷ್ಠ ಮತ್ತು ಗರಿಷ್ಠ ಕಾಲಾವಧಿಯನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಪರ್ಸನಲ್ ಲೋನ್ ಗರಿಷ್ಠ ಕಾಲಾವಧಿ

ಭಾರತದ ಬಹಳಷ್ಟು ಹಣಕಾಸು ಸಂಸ್ಥೆಗಳು ಪರ್ಸನಲ್ ಲೋನ್‌ಗಳಿಗೆ 60 ತಿಂಗಳವರೆಗಿನ ಗರಿಷ್ಠ ಅವಧಿಯನ್ನು ನಿಗದಿಪಡಿಸಿವೆ. ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳು ಕೈಗೆಟಕುವ ಮಾಸಿಕ ಕಂತುಗಳಲ್ಲಿ ಲೋನ್‌ಗಳನ್ನು ಕ್ಲಿಯರ್ ಮಾಡಲು ಸಹಾಯ ಮಾಡುತ್ತವೆ.

ಇದಕ್ಕಾಗಿಯೇ ಕಡಿಮೆ ಮಾಸಿಕ ಆದಾಯ ಅಥವಾ ಅರ್ಹತೆಯನ್ನು ಹೊಂದಿರುವ ವ್ಯಕ್ತಿಗಳು ಸುದೀರ್ಘ ಮರುಪಾವತಿ ಅವಧಿಯ ಪರ್ಸನಲ್ ಲೋನ್ ಆಯ್ಕೆ ಮಾಡಬೇಕು. ಇದು ನೀವು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತೀರಿ ಎಂಬುದರ ಬಗ್ಗೆ ಹಣಕಾಸು ಸಂಸ್ಥೆಗಳಿಗೆ ಖಾತ್ರಿ ನೀಡುತ್ತದೆ.

ಪರ್ಸನಲ್ ಲೋನ್ ಅಡಿಯಲ್ಲಿ ನೀಡಲಾಗುವ ಗರಿಷ್ಠ ಕಾಲಾವಧಿಯು ಐದು ವರ್ಷಗಳಾಗಿದ್ದರೂ, ಈ ಅಡಮಾನ-ಮುಕ್ತ ಕ್ರೆಡಿಟ್‌ ಸೌಲಭ್ಯದ ಕನಿಷ್ಠ ಅವಧಿಯನ್ನು ಕೂಡ ತಿಳಿದುಕೊಳ್ಳಬೇಕು.

ಪರ್ಸನಲ್ ಲೋನ್ ಕನಿಷ್ಠ ಕಾಲಾವಧಿ

ಪರ್ಸನಲ್ ಲೋನ್‌ಗೆ ಕನಿಷ್ಠ ಕಾಲಾವಧಿ 12 ತಿಂಗಳು. ಪರ್ಸನಲ್ ಲೋನ್ ಕನಿಷ್ಠ ಕಾಲಾವಧಿಯು ವೇಗವಾದ ಮರುಪಾವತಿಯನ್ನು ಖಚಿತಪಡಿಸಿದರೂ ಸಹ, ಪಾವತಿಸಬೇಕಾದ ಇಎಂಐ ಮೊತ್ತ ಹೆಚ್ಚಾಗಿರುತ್ತವೆ.

ಹೀಗಾಗಿ, ಉತ್ತಮ ಹಣಕಾಸು ಹಿನ್ನೆಲೆ ಅಥವಾ ಒಳ್ಳೆಯ ಮರುಪಾವತಿ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು ಒಟ್ಟಾರೆ ಬಡ್ಡಿ ಪಾವತಿಯನ್ನು ಕಡಿಮೆ ಮಾಡಲು ಕನಿಷ್ಠ ಕಾಲಾವಧಿಯನ್ನು ಆಯ್ಕೆ ಮಾಡಬಹುದು.

ಅದೇ ರೀತಿ, ಪರ್ಸನಲ್ ಲೋನ್‌ಗೆ ಕನಿಷ್ಠ ಕಾಲಾವಧಿಯನ್ನು ಆಯ್ಕೆ ಮಾಡುವುದರಿಂದ, ಉಳಿತಾಯವನ್ನು ಹೆಚ್ಚಿಸುವ ಜೊತೆಗೆ, ಕಡಿಮೆ ಬಡ್ಡಿದರವನ್ನು ಪಡೆಯಬಹುದು. ಕಡಿಮೆ ಅವಧಿಯು ಸಾಲದ ಅಪಾಯವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಸಾಲದಾತರು ಈ ಪ್ರಾಡಕ್ಟ್ ಮೇಲೆ ಉತ್ತಮ ಬಡ್ಡಿದರಗಳನ್ನು ನೀಡಬಹುದು.

ಇದನ್ನು ಒಂದು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ:

ಒಬ್ಬ ವ್ಯಕ್ತಿಯು ನಾಲ್ಕು ವರ್ಷಗಳ ಅವಧಿಗೆ 15% ಬಡ್ಡಿ ದರದಲ್ಲಿ ರೂ. 20 ಲಕ್ಷದ ಪರ್ಸನಲ್ ಲೋನ್ ಆಯ್ಕೆ ಮಾಡಿದ್ದಾರೆ ಎಂದುಕೊಳ್ಳೋಣ. ಅವರು ಪಾವತಿಸಬೇಕಾದ ಇಎಂಐ ಮೊತ್ತವು ರೂ. 69,331 ಆಗಿರುತ್ತದೆ ಮತ್ತು ಕಟ್ಟಬೇಕಾದ ಒಟ್ಟಾರೆ ಬಡ್ಡಿಯು ರೂ. 4,95,905 ಆಗಿರುತ್ತದೆ.

ಒಂದು ವೇಳೆ, ಕಾಲಾವಧಿಯನ್ನು ಒಂದು ವರ್ಷಕ್ಕೆ ಇಳಿಸಿದರೆ, ಪಾವತಿಸಬೇಕಾದ ಇಎಂಐ ಮೊತ್ತವು ರೂ. 96,973 ಆಗಿರುತ್ತದೆ ಮತ್ತು ಒಟ್ಟಾರೆ ಬಡ್ಡಿಯು ರೂ. 3,27,357 ಆಗಿರುತ್ತದೆ.

ಪರ್ಸನಲ್ ಲೋನ್ ಅವಧಿಯನ್ನು ಆಯ್ಕೆ ಮಾಡುವಾಗ ಪರಿಗಣಿಸಬೇಕಾದ ಅಂಶಗಳು

 • ಸದ್ಯದ ಹೊಣೆಗಾರಿಕೆಗಳು
  ಈಗಾಗಲೇ ಗಣನೀಯ ಪ್ರಮಾಣದ ಸಾಲ ಹೊಂದಿರುವ ವ್ಯಕ್ತಿಗಳ ವಿಲೇವಾರಿ ಆದಾಯ ಕಡಿಮೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ, ಗರಿಷ್ಠ ಕಾಲಾವಧಿಯ ಪರ್ಸನಲ್ ಲೋನ್ ಆಯ್ಕೆ ಮಾಡುವುದು ಸೂಕ್ತ. ಇದು ಯಾವುದೇ ಹಣಕಾಸು ಒತ್ತಡವಿಲ್ಲದೆ ಆರಾಮವಾಗಿ ಲೋನ್ ಮರುಪಾವತಿಸಲು ಸಹಾಯ ಮಾಡುತ್ತದೆ.
   
 • ತಿಂಗಳ ಆದಾಯ
  ಪರ್ಸನಲ್ ಲೋನ್‌ನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವಾಗ, ಅರ್ಜಿದಾರರ ಮಾಸಿಕ ಆದಾಯವೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಸರಳವಾಗಿ ಹೇಳುವುದಾದರೆ, ಹೆಚ್ಚಿನ ಮಾಸಿಕ ಆದಾಯವು ಉತ್ತಮ ಮರುಪಾವತಿ ಸಾಮರ್ಥ್ಯವನ್ನು ಸೂಚಿಸುತ್ತದೆ. ಅಂತಹವರು ಕಡಿಮೆ ಅವಧಿಯನ್ನು ಆಯ್ಕೆ ಮಾಡಬಹುದು.
   
 • ಬಡ್ಡಿ ದರಗಳು
  ಸಾಮಾನ್ಯವಾಗಿ, ಕಾಲಾವಧಿ ಹೆಚ್ಚಿದಂತೆಲ್ಲಾ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ. ಆದಾಗ್ಯೂ, ಬಜಾಜ್ ಫಿನ್‌ಸರ್ವ್ ಸ್ಪರ್ಧಾತ್ಮಕ ಬಡ್ಡಿದರಗಳು ಹಾಗೂ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಪರ್ಸನಲ್ ಲೋನ್ 60 ತಿಂಗಳವರೆಗಿನ ಫ್ಲೆಕ್ಸಿಬಲ್ ಕಾಲಾವಧಿ ಹೊಂದಿರುವ ಪರ್ಸನಲ್ ಲೋನ್ ಒದಗಿಸುತ್ತದೆ.

ಭಾಗಶಃ-ಮುಂಗಡ ಪಾವತಿ ಸೌಲಭ್ಯವನ್ನು ಆಯ್ಕೆ ಮಾಡುವ ಮೂಲಕ, ಸಾಲಗಾರರು ತಮ್ಮ ಪರ್ಸನಲ್ ಲೋನ್ ಕಾಲಾವಧಿಯನ್ನು ಕಡಿಮೆ ಮಾಡಬಹುದು. ಈ ಆಯ್ಕೆಯೊಂದಿಗೆ, ಸಾಲಗಾರರು ಅವಧಿ ಮುಗಿಯುವ ಮೊದಲೇ ಒಂದು ನಿರ್ದಿಷ್ಟ ಮೊತ್ತವನ್ನು ಮರುಪಾವತಿಸಬಹುದು ಮತ್ತು ಮಾಸಿಕ ಪಾವತಿಯ ಹೊರೆಯನ್ನು ಕಡಿಮೆ ಮಾಡಬಹುದು.

ಇನ್ನಷ್ಟು ಓದಿರಿ - ಪರ್ಸನಲ್ ಲೋನ್ ಕಾಲಾವಧಿ

ಅದೇ ರೀತಿ, ಹೆಚ್ಚಿನ ಸಿಬಿಲ್ ಸ್ಕೋರ್ ಹಾಗೂ ನಿಷ್ಕಳಂಕ ಮರುಪಾವತಿ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ತಮ್ಮ ಸದ್ಯದ ಹಣಕಾಸು ಸಾಮರ್ಥ್ಯಕ್ಕೆ ತಕ್ಕಂತೆ ಕಾಲಾವಧಿಯನ್ನು ಪರಿಷ್ಕರಿಸಬೇಕೆಂದು ತಮ್ಮ ಸಾಲದಾತರಿಗೆ ಮನವಿ ಮಾಡಬಹುದು.

ಈಗ ನಿಮಗೆ ಪರ್ಸನಲ್ ಲೋನ್ ಗರಿಷ್ಠ ಮತ್ತು ಕನಿಷ್ಠ ಕಾಲಾವಧಿಯ ಬಗ್ಗೆ ತಿಳಿದಿದೆ. ನಿಮಗೆ ಸರಿಹೊಂದುವ ಅತ್ಯುತ್ತಮ ಮರುಪಾವತಿ ಶೆಡ್ಯೂಲ್ ಅನ್ನು ಈಗ ನೀವೇ ಖುದ್ದಾಗಿ ನಿರ್ಧರಿಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ