ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ನಮ್ಮ ಮಾರ್ಗದರ್ಶಿಯನ್ನು ಓದಿ

2 ನಿಮಿಷದ ಓದು

ಡಿಜಿಟಲೀಕರಣ ನಮ್ಮ ಜೀವನವನ್ನು ಸರಳಗೊಳಿಸಿದೆ. ಪೇಪರ್‌ಲೆಸ್ ಪರ್ಸನಲ್ ಲೋನ್ ಅದಕ್ಕೊಂದು ಉದಾಹರಣೆ. ನೀವು ಸಾಲದಾತರನ್ನು ಆಯ್ಕೆಮಾಡಿದ ನಂತರ, ಯಾವುದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು ಮತ್ತು ನಿಮಗೆ ಅಗತ್ಯವಿರುವ ಹಣಕಾಸನ್ನು ಪಡೆಯಬಹುದು.

ಕಾಗದರಹಿತ ಪರ್ಸನಲ್ ಲೋನ್‌ ಅಪ್ಲಿಕೇಶನ್ ಪ್ರಕ್ರಿಯೆ ಹೇಗಿರುತ್ತದೆ?

  • ಸಾಲದಾತರ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಲೋನ್ ಅಪ್ಲಿಕೇಶನ್ ಫಾರ್ಮ್ ಹುಡುಕಿ.
  • ಉದ್ಯೋಗ, ಹಣಕಾಸು ಮತ್ತು ವೈಯಕ್ತಿಕ ವಿವರಗಳನ್ನು ಒಳಗೊಂಡಂತೆ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  • ಸರಿಯಾದ ಲೋನ್ ಮೊತ್ತ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.
  • ನಿಮ್ಮ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಗೊಳಿಸಲು ಬೇಕಾಗುವ ಎಲ್ಲಾ ಡಾಕ್ಯುಮೆಂಟ್‌ಗಳ ಸಾಫ್ಟ್ ಕಾಪಿಗಳನ್ನು ಒದಗಿಸಿ.
  • ತ್ವರಿತ ಅನುಮೋದನೆ ಮತ್ತು ವಿತರಣೆಗಾಗಿ ಕಾಯಿರಿ.

ತ್ವರಿತವಾದ ಅನುಮೋದನೆ ಮತ್ತು ವಿತರಣೆ ಬೇಕಿದ್ದರೆ, ನೀವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

ಕಾಗದರಹಿತ ಪರ್ಸನಲ್ ಲೋನ್: ಅರ್ಹತಾ ಮಾನದಂಡ

ಸಾಮಾನ್ಯವಾಗಿ, ನೀವು 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರಬೇಕು, ಸೂಕ್ತ ವಯೋಮಿತಿಗೆ ಒಳಪಡಬೇಕು, ಭಾರತದ ನಾಗರಿಕರಾಗಿರಬೇಕು, ಖಾಸಗಿ/ಸಾರ್ವಜನಿಕ ಕಂಪನಿ ಅಥವಾ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿರಬೇಕು, ಮತ್ತು ಸಾಲದಾತರು ನಿಗದಿಪಡಿಸಿದ ಕನಿಷ್ಠ ಸಂಬಳವನ್ನು ಗಳಿಸುತ್ತಿರಬೇಕು.

ಕಾಗದರಹಿತ ಪರ್ಸನಲ್ ಲೋನ್: ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಸಾಮಾನ್ಯವಾಗಿ, ಸಾಲದಾತರಿಗೆ ಈ ಕೆಳಗಿನವುಗಳು ಬೇಕಾಗುತ್ತವೆ:

  • ಗುರುತಿನ ಮತ್ತು ವಿಳಾಸದ ಪುರಾವೆ: ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪಾಸ್‌ಪೋರ್ಟ್
  • ಉದ್ಯೋಗದ ಪುರಾವೆ: ಉದ್ಯೋಗಿ ಐಡಿ ಕಾರ್ಡ್
  • ಹಣಕಾಸಿನ ಸ್ಥಿರತೆಯ ಪುರಾವೆ: ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್ ಮತ್ತು ವೇತನದ ಸ್ಲಿಪ್‌ಗಳು

ಬೇಗ ಲೋನ್ ಪಡೆಯುವ ತರಾತುರಿಯಲ್ಲಿ, ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಇತರ ಶುಲ್ಕಗಳನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಇದು ನಿಮಗೆ ಸುಗಮ ಮತ್ತು ಸುಲಭ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.

ಅಲ್ಲದೆ, ಬಜಾಜ್ ಫಿನ್‌ಸರ್ವ್‌ನ ಕಾಗದರಹಿತ ಪರ್ಸನಲ್ ಲೋನ್ ಅನ್ನೂ ಪರಿಗಣಿಸಿ. ಇದರಲ್ಲಿ ನೀವು ಅತಿಕಡಿಮೆ ಬಡ್ಡಿದರ ಪಾವತಿಸುವಿರಿ, ಆಕರ್ಷಕ ಫ್ಲೆಕ್ಸಿ ಸೌಲಭ್ಯವನ್ನು ಆನಂದಿಸುವಿರಿ ಮತ್ತು ಆನ್‌ಲೈನ್‌ನಲ್ಲೂ ಅಪ್ಲೈ ಮಾಡಬಲ್ಲಿರಿ. ಅಷ್ಟೇ ಅಲ್ಲ, ನೀವು 5 ನಿಮಿಷಗಳಲ್ಲಿ* ಅನುಮೋದನೆ ಪಡೆದು, 24 ಗಂಟೆಗಳಲ್ಲಿ ನಿಮ್ಮ ಅಕೌಂಟ್‌ನಲ್ಲಿ ಹಣ ಪಡೆಯಬಹುದು*.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ