ಕ್ರೆಡಿಟ್‌ ಕಾರ್ಡ್ Pin ಬದಲಾಯಿಸುವುದು ಹೇಗೆ?

2 ನಿಮಿಷದ ಓದು

ನಿಮ್ಮ ಎಲ್ಲಾ ಟ್ರಾನ್ಸಾಕ್ಷನ್‌ಗಳಿಗೆ ಕ್ರೆಡಿಟ್ ಕಾರ್ಡ್ ಪಿನ್ ಮುಖ್ಯವಾಗಿದೆ. ನಿಮ್ಮ ಟ್ರಾನ್ಸಾಕ್ಷನ್‌ಗಳು ಸುರಕ್ಷಿತವಾಗಿರಲು ಯಾರೊಂದಿಗೂ ಪಿನ್ ಹಂಚಿಕೊಳ್ಳದಿರುವುದು ಕಡ್ಡಾಯ. ನಿಮ್ಮ ಕ್ರೆಡಿಟ್ ಕಾರ್ಡ್ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಆಗಾಗ್ಗೆ ಬದಲಾಯಿಸಲು ಸಲಹೆ ನೀಡಲಾಗುತ್ತದೆ.

ನಿಮ್ಮ ಕ್ರೆಡಿಟ್ ಕಾರ್ಡ್ ಪಿನ್ ಬದಲಾಯಿಸುವ ಹಂತಗಳು

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಬದಲಾಯಿಸಲು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:

  • RBL ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಹೋಮ್ ಸ್ಕ್ರೀನಿನಲ್ಲಿ ಕ್ರೆಡಿಟ್ ಕಾರ್ಡ್ ವಿಭಾಗವನ್ನು ಆಯ್ಕೆಮಾಡಿ
  • 'ನಿಮ್ಮ ಪಿನ್ ಸೆಟ್ ಮಾಡಿ' ಆಯ್ಕೆಯನ್ನು ಆರಿಸಿ
  • ನಿಮ್ಮ ಸೂಪರ್‌ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು 'ವ್ಯಾಲಿಡೇಟ್' ಮೇಲೆ ಕ್ಲಿಕ್ ಮಾಡಿ'
  • ನಿಮ್ಮ ಒಟಿಪಿ ಜನರೇಟ್ ಮಾಡಿ ಮತ್ತು ನಿಮ್ಮ ಆಯ್ಕೆಯ ಪಿನ್ ಸೆಟ್ ಮಾಡಿ

ಕ್ರೆಡಿಟ್ ಕಾರ್ಡ್ ಪಿನ್ ಸುರಕ್ಷತಾ ಮುನ್ನೆಚ್ಚರಿಕೆಗಳು

ಕಳ್ಳತನ ಮತ್ತು ಡೇಟಾ ಉಲ್ಲಂಘನೆಗಳಿಂದ ನಿಮ್ಮ ಕ್ರೆಡಿಟ್ ಕಾರ್ಡನ್ನು ಸುರಕ್ಷಿತವಾಗಿರಿಸಲು, ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ:

  • ಇಮೇಲ್‌ಗಳು, ಎಸ್ಎಂಎಸ್ ಇತ್ಯಾದಿಗಳ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
  • ಸುರಕ್ಷಿತ ವೆಬ್‌ಸೈಟ್‌ಗಳ ಮೂಲಕ ಮಾತ್ರ ನೀವು ಪಾವತಿಗಳನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಪಾವತಿಗಳನ್ನು ಮಾಡುವುದಕ್ಕಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸುವ ಮೊದಲು ವೆಬ್‌ಸೈಟ್‌ನ ದೃಢೀಕರಣವನ್ನು ಪರಿಶೀಲಿಸಿ.
  • ನಿಮ್ಮ ಮಾಸಿಕ ಕ್ರೆಡಿಟ್ ಕಾರ್ಡ್ ಬಿಲ್‌ಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಿದರೆ ಆನ್ಲೈನಿನಲ್ಲಿ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಬದಲಾಯಿಸಿ.
  • ಮರ್ಚೆಂಟ್ ಸೈಟ್‌ಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸೇವ್ ಮಾಡಬೇಡಿ.
  • ನಿಮ್ಮ ಪಿನ್ ಎಲ್ಲಾ ಸಂದರ್ಭಗಳಲ್ಲೂ ಗೌಪ್ಯವಾಗಿರಬೇಕು. ಕಾಗದದ ತುಣುಕು ಅಥವಾ ಕ್ರೆಡಿಟ್ ಕಾರ್ಡಿನ ಬಾಡಿಯಲ್ಲೂ ಕೂಡ ಅದನ್ನು ಬರೆಯುವುದನ್ನು ತಪ್ಪಿಸಿ.
ಇನ್ನಷ್ಟು ಓದಿರಿ ಕಡಿಮೆ ಓದಿ