ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಬಗ್ಗೆ
ನಿಮಗೆ ತ್ವರಿತವಾಗಿ ಹಣದ ಅಗತ್ಯವಿದ್ದಾಗ ಹಣವನ್ನು ಪಡೆಯುವ ಅನುಕೂಲಕರ ಮಾರ್ಗವಾಗಿ ಗೋಲ್ಡ್ ಲೋನ್‌ಗಳು ಹೊರಹೊಮ್ಮಿವೆ ಮತ್ತು ಲೋನಿಗೆ ಅಪ್ಲೈ ಮಾಡುವ ವಿಷಯಕ್ಕೆ ಬಂದಾಗ, ಗೋಲ್ಡ್ ಲೋನ್ ಗೆ ಅಪ್ಲೈ ಮಾಡುವ ಮೊದಲು ನೀವು ಆನ್ಲೈನ್ ಇಎಂಐ ಕ್ಯಾಲ್ಕುಲೇಟರ್ ಬಳಸಲು ಶಿಫಾರಸು ಮಾಡಲಾಗುತ್ತದೆ. ಇದು ಮುಂಚಿತವಾಗಿಯೇ ಮರುಪಾವತಿ ಹೊಣೆಗಾರಿಕೆಯ ಅಂದಾಜು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಬಜಾಜ್ ಫಿನ್‌ಸರ್ವ್ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂಬುದು ಬಡ್ಡಿ ದರ ಮತ್ತು ಲೋನ್ ಅವಧಿಯ ಆಧಾರದ ಮೇಲೆ ನಿಮ್ಮ ಗೋಲ್ಡ್ ಲೋನ್ ಇಎಂಐಗಳನ್ನು ಲೆಕ್ಕ ಹಾಕಲು ನೀವು ಬಳಸಬಹುದಾದ ಆನ್ಲೈನ್ ಸಾಧನವಾಗಿದೆ.
ಹಕ್ಕುತ್ಯಾಗ
ಕ್ಯಾಲ್ಕುಲೇಟರ್‌ನ ಫಲಿತಾಂಶಗಳು ಸೂಚನಾತ್ಮಕವಾಗಿವೆ ಮತ್ತು ಚಿನ್ನದ ಫಿಸಿಕಲ್ ಮೌಲ್ಯಮಾಪನದ ನಂತರ ಬದಲಾವಣೆಗೆ ಒಳಪಟ್ಟಿರುತ್ತವೆ. ಲೋನ್ ಮೊತ್ತದ ಮೇಲೆ ಅನ್ವಯವಾಗುವ ಬಡ್ಡಿ ದರವು ಲೋನ್ ಮಂಜೂರಾತಿ ಸಮಯದಲ್ಲಿ ಚಾಲ್ತಿಯಲ್ಲಿರುವ ದರಗಳ ಮೇಲೆ ಅವಲಂಬಿತವಾಗಿರುತ್ತದೆ.
ಕ್ಯಾಲ್ಕುಲೇಟರ್ ಬಜಾಜ್ ಫೈನಾನ್ಸ್ ಲಿಮಿಟೆಡ್ ("ಬಿಎಫ್ಎಲ್") ಬಳಕೆದಾರರು/ ಗ್ರಾಹಕರಿಗೆ ಪ್ರಮಾಣೀಕರಿಸಿದ ಫಲಿತಾಂಶಗಳನ್ನು ಅಥವಾ ವಾರಂಟಿ, ಬಾಧ್ಯತೆ, ಬದ್ಧತೆ ಅಥವಾ ಅಂಡರ್‌ಟೇಕಿಂಗ್ ಅನ್ನು ಒದಗಿಸುವ ಮತ್ತು ಬಿಎಫ್ಎಲ್‌ನಿಂದ ಹಣಕಾಸು ಮತ್ತು ವೃತ್ತಿಪರ ಸಲಹೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿಲ್ಲ. ಕ್ಯಾಲ್ಕುಲೇಟರ್ ಎನ್ನುವುದು ಬಳಕೆದಾರರು/ ಗ್ರಾಹಕರು ಡೇಟಾ ಇನ್‌ಪುಟ್‌ನಿಂದ ರಚಿಸಲಾದ ವಿಭಿನ್ನ ವಿವರಣಾತ್ಮಕ ಸನ್ನಿವೇಶಗಳ ಫಲಿತಾಂಶಗಳನ್ನು ಪಡೆಯಲು ಬಳಕೆದಾರರು/ ಗ್ರಾಹಕರಿಗೆ ಸಹಾಯ ಮಾಡುವ ಸಾಧನವಾಗಿದೆ ಮತ್ತು ಅದರ ಬಳಕೆಯು ಸಂಪೂರ್ಣವಾಗಿ ಬಳಕೆದಾರ/ ಗ್ರಾಹಕರ ಜವಾಬ್ದಾರಿಯಾಗಿರುತ್ತದೆ. ಕ್ಯಾಲ್ಕುಲೇಟರ್ ಬಳಕೆಯಿಂದ ಉಂಟಾಗುವ ಯಾವುದೇ ಫಲಿತಾಂಶದಲ್ಲಿನ ಯಾವುದೇ ದೋಷಗಳಿಗೆ ಬಿಎಫ್ಎಲ್ ಯಾವುದೇ ಕಾರಣಕ್ಕೂ ಜವಾಬ್ದಾರರಾಗಿರುವುದಿಲ್ಲ.
ಆಗಾಗ ಕೇಳುವ ಪ್ರಶ್ನೆಗಳು
ಒಟ್ಟು ಬಾಕಿಯಿಂದ ಅಸಲು ಲೋನ್ ಮೊತ್ತವನ್ನು ಕಡಿಮೆ ಮಾಡುವ ಮೂಲಕ ನೀವು ಗೋಲ್ಡ್ ಲೋನ್ ಬಡ್ಡಿಯನ್ನು ನಿರ್ಧರಿಸಬಹುದು. ಅದರ ಬಗ್ಗೆ ತಿಳಿದುಕೊಳ್ಳಲು ನೀವು ಗೋಲ್ಡ್ ಲೋನ್ ಬಡ್ಡಿ ದರದ ಕ್ಯಾಲ್ಕುಲೇಟರ್ ಸಹಾಯವನ್ನು ತೆಗೆದುಕೊಳ್ಳಬಹುದು ಮತ್ತು ಬಡ್ಡಿ ದರವು EMI ಗಳು ಮತ್ತು ಒಟ್ಟು ಬಾಕಿ ಮೊತ್ತಗಳನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಬಳಸಲು ಹಂತವಾರು ಮಾರ್ಗದರ್ಶಿ ಈ ರೀತಿಯಾಗಿವೆ:
- ಹಂತ 1: ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ವೆಬ್‌ಸೈಟ್‌ಗೆ ಭೇಟಿ ನೀಡಿ
- ಹಂತ 2: ಅಗತ್ಯವಿರುವ ಮೌಲ್ಯಗಳನ್ನು ನಮೂದಿಸಿ, ಅಂದರೆ ಗೋಲ್ಡ್ ಲೋನ್ ಬಡ್ಡಿ ದರ, ಲೋನ್ ಅವಧಿ, ಚಿನ್ನದ ಆರ್ಟಿಕಲ್‌ಗಳ ಕ್ಯಾರಟ್ ಮತ್ತು ತೂಕ ಮತ್ತು ಪಾವತಿ ವಿಧಾನ
- ಹಂತ 3: ಇಎಂಐ ಮೊತ್ತ ಮತ್ತು ಇತರ ಲೋನ್ ವಿವರಗಳನ್ನು ತಕ್ಷಣ ಪಡೆಯಿರಿ
ಗೋಲ್ಡ್ ಲೋನ್ ಅರ್ಹತೆ ಮಾನದಂಡಗಳು ಸರಳವಾಗಿವೆ, ಮತ್ತು ಚಿನ್ನದ ಆಭರಣಗಳನ್ನು ಹೊಂದಿರುವ ಯಾವುದೇ ವಯಸ್ಕ ಭಾರತೀಯರು ಈ ಕ್ರೆಡಿಟ್‌ಗೆ ಅಪ್ಲೈ ಮಾಡಬಹುದು. ಹೆಚ್ಚಿನ ಕ್ರೆಡಿಟ್ ಸ್ಕೋರ್ ಅಥವಾ ಪ್ರಭಾವಶಾಲಿ ಕ್ರೆಡಿಟ್ ಹಿಸ್ಟರಿಯನ್ನು ನಿರ್ವಹಿಸಲು ಸಾಲಗಾರರಿಗೆ ಇದು ಕಡ್ಡಾಯವಾಗಿಲ್ಲ. ಆದಾಗ್ಯೂ, ಸಾಲದಾತರು ಲೋನ್ ಅನ್ನು ಅನುಮೋದಿಸುವ ಮೊದಲು ಮರುಪಾವತಿ ಸಾಮರ್ಥ್ಯ ಮತ್ತು ಡಾಕ್ಯುಮೆಂಟೇಶನ್ ಮೇಲೆ ಗಮನಹರಿಸಬಹುದು.
ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಸಾಧನವಾಗಿದ್ದು, ಇದು ನಿರೀಕ್ಷಿತ ಸಾಲಗಾರರು ತಮ್ಮ ಹೊಣೆಗಾರಿಕೆಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಈ ರೀತಿಯ ಆನ್ಲೈನ್ ಕ್ಯಾಲ್ಕುಲೇಟರ್‌ಗಳು ವಿವಿಧ ಕ್ಷೇತ್ರಗಳಲ್ಲಿವೆ, ಇಲ್ಲಿ ವ್ಯಕ್ತಿಗಳು ಪಾವತಿಸಬೇಕಾದ ಮಾಸಿಕ ಕಂತುಗಳನ್ನು ಕಂಡುಹಿಡಿಯಲು ಚಿನ್ನದ ನಿವ್ವಳ ತೂಕ, ಚಿನ್ನದ ಕ್ಯಾರೆಟ್, ಲೋನ್ ಮೊತ್ತ, ಬಡ್ಡಿ ದರ, ಕಾಲಾವಧಿ ಮತ್ತು ಪಾವತಿ ವಿಧಾನದಂತಹ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
ಇಎಂಐಗಳ ಹೊರತಾಗಿ, ಆನ್ಲೈನ್ ಗೋಲ್ಡ್ ಲೋನ್ ಕ್ಯಾಲ್ಕುಲೇಟರ್‌ಗಳು ಅಮೊರ್ಟೈಸೇಶನ್ ಶೆಡ್ಯೂಲ್ ಮೂಲಕ ನಿರ್ದಿಷ್ಟ ಲೋನ್ ಆಫರ್ ಬಗ್ಗೆ ಉತ್ತಮ ಒಳನೋಟವನ್ನು ಒದಗಿಸುತ್ತವೆ. ಈ ಶೆಡ್ಯೂಲ್ ಅವಧಿಯುದ್ದಕ್ಕೂ ಪಾವತಿಸಬೇಕಾದ ಇಎಂಐಗಳ ವಿವರವಾದ ಬ್ರೇಕ್-ಅಪ್ ಅನ್ನು ಒದಗಿಸುತ್ತದೆ.
ಗಮನಿಸಿ: ಗೋಲ್ಡ್ ಲೋನ್ ಕ್ಯಾಲ್ಕುಲೇಟರ್‌ಗಳಿಗೆ ಅವುಗಳನ್ನು ಬಳಸಲು ಯಾವುದೇ ಹೆಚ್ಚುವರಿ ಶುಲ್ಕಗಳ ಅಗತ್ಯವಿಲ್ಲ.
ಗೋಲ್ಡ್ ಲೋನ್ ಕ್ಯಾಲ್ಕುಲೇಟರ್‌ನ ಪ್ರಯೋಜನಗಳು ಇವುಗಳನ್ನು ಒಳಗೊಂಡಿವೆ:
- ತ್ವರಿತ ಲೆಕ್ಕಾಚಾರ: ಇದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ. ಅಗತ್ಯವಿರುವ ಮಾಹಿತಿಗಳನ್ನು ನಮೂದಿಸಿದ ಬಳಿಕ, ಇದು ಇಎಂಐಗಳು ಮತ್ತು ಇತರ ಲೋನ್ ಅಂಶಗಳ ಬಗ್ಗೆ ತಕ್ಷಣವೇ ವಿವರಗಳನ್ನು ಒದಗಿಸುತ್ತದೆ.
- ನಿಖರವಾದ ಫಲಿತಾಂಶಗಳು: ಇಎಂಐಗಳು ಮತ್ತು ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಮಾನ್ಯುಯಲ್ ಆಗಿ ಲೆಕ್ಕ ಹಾಕಬಹುದು. ಆದಾಗ್ಯೂ, ಮಾನ್ಯುಯಲ್ ಲೆಕ್ಕಾಚಾರಗಳು ಸಮಯ ತೆಗೆದುಕೊಳ್ಳುತ್ತವೆ ಮತ್ತು ತಪ್ಪಾಗುವ ಸಾಧ್ಯತೆ ಇರುತ್ತದೆ. ಈ ಆನ್‌ಲೈನ್ ಕ್ಯಾಲ್ಕುಲೇಟರ್‌ನೊಂದಿಗೆ, ಅಂತಹ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು. ನಮೂದಿಸಿದ ಯಾವುದೇ ಮಾಹಿತಿಗೆ ಬಳಕೆದಾರರು ಪ್ರತಿ ಬಾರಿ ನಿಖರ ಫಲಿತಾಂಶಗಳನ್ನು ಪಡೆಯುತ್ತಾರೆ.
- ಬಳಸಲು ಸುಲಭ: ಆನ್ಲೈನ್ ಚಿನ್ನದ ಬಡ್ಡಿ ಕ್ಯಾಲ್ಕುಲೇಟರ್ ಬಳಸಲು ಮತ್ತು ನ್ಯಾವಿಗೇಟ್ ಮಾಡಲು ಸುಲಭವಾಗಿದೆ. ಬಡ್ಡಿ ದರ, ಚಿನ್ನದ ಆಭರಣಗಳ ತೂಕ, ಚಿನ್ನದ ಕ್ಯಾರೆಟ್, ಪಾವತಿ ವಿಧಾನ ಮತ್ತು ಅವಧಿಯಂತಹ ವಿವಿಧ ಲೋನ್ ಘಟಕಗಳನ್ನು ನಮೂದಿಸಲು ಇದು ನಿರ್ದಿಷ್ಟ ಕ್ಷೇತ್ರಗಳನ್ನು ಹೊಂದಿದೆ. ನಂತರ ಇದು ಫಲಿತಾಂಶಗಳನ್ನು ತೋರಿಸುತ್ತದೆ.
- ಹಣಕಾಸಿನ ಯೋಜನೆ: ಈ ಕ್ಯಾಲ್ಕುಲೇಟರ್ ಹಣಕಾಸಿನ ಯೋಜನೆಗೆ ಸಹಾಯ ಮಾಡುತ್ತದೆ. ಇದು ಇಎಂಐಗಳು ಮತ್ತು ಬಡ್ಡಿ ಪಾವತಿಗಳ ಬಗ್ಗೆ ಮೊದಲೇ ವಿವರಗಳನ್ನು ಒದಗಿಸುವುದರಿಂದ, ಬಳಕೆದಾರರು ಮರುಪಾವತಿಗಳನ್ನು ಉತ್ತಮವಾಗಿ ಯೋಜಿಸಬಹುದು.
ಇವುಗಳ ಹೊರತಾಗಿ, ಈ ಕ್ಯಾಲ್ಕುಲೇಟರ್ ಒದಗಿಸುವ ಕಸ್ಟಮೈಸೇಶನ್ ಸೌಲಭ್ಯವು ಯಾವುದೇ ತೊಂದರೆಯಿಲ್ಲದೆ ಪರಿಪೂರ್ಣ ಗೋಲ್ಡ್ ಲೋನ್ ಆಫರನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಗೋಲ್ಡ್ ಲೋನಿಗೆ ಅಪ್ಲೈ ಮಾಡಲು, ನೀವು ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ಯಂತಹ ಸಾಲದಾತರೊಂದಿಗೆ ನಿಮ್ಮ ಚಿನ್ನದ ಆಭರಣವನ್ನು ಅಡವಿಡಬೇಕು. ಪ್ರತಿ ಗ್ರಾಂಗೆ ಗೋಲ್ಡ್ ಲೋನ್ ಎಂದರೆ ಅಡವಿಡಲಾದ ಪ್ರತಿ ಗ್ರಾಂ ಚಿನ್ನಕ್ಕೆ ಲೋನ್ ಆಗಿ ನೀಡಲಾದ ಮೊತ್ತವನ್ನು ಸೂಚಿಸುತ್ತದೆ. ಈ ಮೊತ್ತವು ಸಾಮಾನ್ಯವಾಗಿ ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರುತ್ತದೆ.
ಒಂದು ಗ್ರಾಂ ಚಿನ್ನಕ್ಕೆ ಮಾರುಕಟ್ಟೆ ಮೌಲ್ಯದ ಪ್ರಕಾರ ಪ್ರತಿ ಗ್ರಾಂ ಗೋಲ್ಡ್ ಲೋನ್ ಚಿನ್ನದ ದರ ದೈನಂದಿನ ಬದಲಾಗುತ್ತದೆ. ಇದನ್ನು ಎಲ್‌ಟಿವಿ ಅಥವಾ ಲೋನ್-ಟು ವ್ಯಾಲ್ಯೂ ರೇಶಿಯೋ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಎಲ್‌ಟಿವಿ 70% ಆಗಿದ್ದರೆ ಮತ್ತು ಅಡವಿಡಲಾದ ಚಿನ್ನದ ಮೌಲ್ಯ ರೂ. 1 ಲಕ್ಷ ಆಗಿದ್ದರೆ, ಸಾಲಗಾರರು ರೂ. 70,000 ಲೋನ್ ಪಡೆಯುತ್ತಾರೆ. ಬಜಾಜ್ ಫಿನ್‌ಸರ್ವ್ ಗೋಲ್ಡ್ ಲೋನ್ ಮೇಲೆ 75% ಎಲ್‌ಟಿವಿ ಅನುಪಾತವನ್ನು ಒದಗಿಸುತ್ತದೆ. ಇಂದು ಪ್ರತಿ ಗ್ರಾಂ ಗೋಲ್ಡ್ ಲೋನ್ ದರವು ಮಾರುಕಟ್ಟೆಯ ಏರಿಳಿತಗಳ ಆಧಾರದ ಮೇಲೆ ಬದಲಾಗುವುದರಿಂದ, ಪ್ರತಿ ಗ್ರಾಂ ಚಿನ್ನದ ದರವು ದೈನಂದಿನ ಬದಲಾಗುತ್ತದೆ. ಬಜಾಜ್ ಫಿನ್‌ಸರ್ವ್‌ನಲ್ಲಿ ಇಂದಿನ ಗೋಲ್ಡ್ ಲೋನ್ ಪ್ರತಿ ಗ್ರಾಂ ದರವನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.