ನಿಮ್ಮ ಗೋಲ್ಡ್ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ಬದಲಾಯಿಸಿ
ನೀವು ಈಗಾಗಲೇ ಇನ್ನೊಂದು ಸಾಲದಾತರೊಂದಿಗೆ ಗೋಲ್ಡ್ ಲೋನನ್ನು ಹೊಂದಿದ್ದರೆ, ನೀವು ಗೋಲ್ಡ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ನಿಮ್ಮ ಲೋನನ್ನು ನಮಗೆ ಬದಲಾಯಿಸಬಹುದು.
ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ಆಕರ್ಷಕ ಬಡ್ಡಿ ದರದಲ್ಲಿ ರೂ. 2 ಕೋಟಿಯವರೆಗಿನ ಗೋಲ್ಡ್ ಲೋನನ್ನು ಪಡೆಯಬಹುದು. ಮತ್ತು ದೇಶಾದ್ಯಂತ 800 ಕ್ಕಿಂತ ಹೆಚ್ಚು ಶಾಖೆಗಳೊಂದಿಗೆ, ಚಿನ್ನದ ಭಾಗಶಃ-ಬಿಡುಗಡೆ ಸೌಲಭ್ಯ, ಫ್ಲೆಕ್ಸಿಬಲ್ ಕಾಲಾವಧಿಗಳು ಮತ್ತು ಉಚಿತ ಇನ್ಶೂರೆನ್ಸ್‌ನಂತಹ ತ್ವರಿತ ಸೇವೆ ಮತ್ತು ಅಸಾಧಾರಣ ಫೀಚರ್‌ಗಳ ಬಗ್ಗೆ ನಾವು ನಿಮಗೆ ಭರವಸೆ ನೀಡುತ್ತೇವೆ.
ಆನ್ಲೈನಿನಲ್ಲಿ ಅಪ್ಲೈ ಮಾಡಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರ ಲೋನ್ ಸ್ಟೇಟ್ಮೆಂಟ್‌ನೊಂದಿಗೆ ನಿಮ್ಮ ಹತ್ತಿರದ ಬ್ರಾಂಚ್‌ಗೆ ಭೇಟಿ ನೀಡಿ. ನಮ್ಮ ತಜ್ಞರ ತಂಡವು ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ನಿಮ್ಮ ಲೋನಿನ ಸುಗಮ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುತ್ತದೆ.
ಗೋಲ್ಡ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಫೀಚರ್ ಮತ್ತು ಪ್ರಯೋಜನಗಳು
ನಮ್ಮ ಗೋಲ್ಡ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ
ನಮ್ಮ ಗೋಲ್ಡ್ ಲೋನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋ ನೋಡಿ: ಫೀಚರ್‌ಗಳು ಮತ್ತು ಪ್ರಯೋಜನಗಳು, ಫೀಗಳು ಮತ್ತು ಶುಲ್ಕಗಳು, ಅರ್ಹತಾ ಮಾನದಂಡಗಳು, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಅಪ್ಲೈ ಮಾಡುವ ಹಂತಗಳು.
-
ಭಾಗಶಃ-ಬಿಡುಗಡೆ ಸೌಲಭ್ಯ
ನೀವು ನಿಮ್ಮ ಲೋನಿನ ಒಂದು ಭಾಗವನ್ನು ಮುಂಚಿತವಾಗಿ ಮರುಪಾವತಿ ಮಾಡಬಹುದು ಮತ್ತು ನಮ್ಮ ಭಾಗಶಃ ಬಿಡುಗಡೆ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಕೆಲವು ಚಿನ್ನದ ಆಭರಣಗಳನ್ನು ಮರಳಿ ಪಡೆಯಬಹುದು.
-
ಯಾವುದೇ ಭಾಗಶಃ-ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕವಿಲ್ಲ
ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭಾಗಶಃ ಅಥವಾ ಪೂರ್ಣವಾಗಿ ನಿಮ್ಮ ಲೋನನ್ನು ಮರುಪಾವತಿಸಿ.
-
ಪಾರದರ್ಶಕ ಮೌಲ್ಯಮಾಪನ
ನಿಮ್ಮ ಚಿನ್ನಕ್ಕೆ ನೀವು ಸಾಧ್ಯವಾದಷ್ಟು ಹೆಚ್ಚಿನ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ನಮ್ಮ ಪ್ರತಿಯೊಂದು ಶಾಖೆಗಳಲ್ಲಿ ನಾವು ಅತ್ಯುತ್ತಮ ಕ್ಲಾಸ್ ಕ್ಯಾರೆಟ್ ಮೀಟರ್‌ಗಳನ್ನು ಬಳಸುತ್ತೇವೆ.
-
ಚಿನ್ನದ ಉಚಿತ ಇನ್ಶೂರೆನ್ಸ್
ನಿಮ್ಮ ಚಿನ್ನದ ಆಭರಣಗಳ ಮೇಲಿನ ನಮ್ಮ ಉಚಿತ ಇನ್ಶೂರೆನ್ಸ್ ಅದನ್ನು ನಮ್ಮ ಕಸ್ಟಡಿಯಲ್ಲಿರುವಾಗ ಕಳ್ಳತನ ಅಥವಾ ನಷ್ಟದ ವಿರುದ್ಧ ಕವರ್ ಮಾಡುತ್ತದೆ.
-
ಅನುಕೂಲಕರ ಮರುಪಾವತಿ ಆಯ್ಕೆಗಳು
ನೀವು ಅನೇಕ ಮರುಪಾವತಿ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ಇತರ ಯಾವುದೇ ಲೋನ್‌ನಂತಹ ನಿಯಮಿತ ಇಎಂಐಗಳನ್ನು ಪಾವತಿಸುವುದು ಒಂದು ಆಯ್ಕೆಯಾಗಿದೆ. ಪರ್ಯಾಯವಾಗಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ, ದ್ವಿ-ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಲು ನೀವು ಆಯ್ಕೆ ಮಾಡಬಹುದು. ಅಸಲನ್ನು ಕಾಲಾವಧಿಯ ಕೊನೆಯಲ್ಲಿ ಮರುಪಾವತಿ ಮಾಡಬೇಕು.
-
ಸುಲಭ ಅಪ್ಲಿಕೇಶನ್ ಪ್ರಕ್ರಿಯೆ
ನೀವು ನಿಮಿಷಗಳಲ್ಲಿ ಗೋಲ್ಡ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಮ್ಮ ಬ್ರಾಂಚ್ ಆಫೀಸಿಗೆ ಭೇಟಿ ನೀಡಿದಾಗ, ನಾವು ನಿಮಗಾಗಿ ಎಲ್ಲವನ್ನೂ ಸಿದ್ಧವಾಗಿರಿಸುತ್ತೇವೆ.
-
ರೂ. 2 ಕೋಟಿಯವರೆಗಿನ ಗೋಲ್ಡ್ ಲೋನ್
ನಾವು ರೂ. 5,000 ರಿಂದ ರೂ. 2 ಕೋಟಿಯವರೆಗಿನ ಗೋಲ್ಡ್ ಲೋನ್‌ಗಳನ್ನು ಒದಗಿಸುತ್ತೇವೆ. ಲೋನ್ ಆಫರಿನಿಂದ ನಿಮಗೆ ಅಗತ್ಯವಿರುವ ಮೊತ್ತವನ್ನು ಆಯ್ಕೆಮಾಡಿ.
-
800 ಕ್ಕೂ ಹೆಚ್ಚು ಶಾಖೆಗಳು
ನಾವು ಈಗಷ್ಟೇ ಭಾರತದಲ್ಲಿ 60 ಹೊಸ ಶಾಖೆಗಳನ್ನು ತೆರೆದಿದ್ದೇವೆ ಮತ್ತು ಮುಂದೆಯೂ ತೆರೆಯುತ್ತಿರುತ್ತೇವೆ. ನಾವು ಈಗಾಗಲೇ ವ್ಯವಹಾರ ಮಾಡಿದ ನಗರಗಳಲ್ಲಿ ಹೊಸ ಶಾಖೆಗಳನ್ನು ಕೂಡ ತೆರೆಯುತ್ತಿದ್ದೇವೆ.
-
ಗೋಲ್ಡ್ ಲೋನ್ ಒಂದು ಸುರಕ್ಷಿತ ಲೋನ್ ಆಗಿದ್ದು, ಇದು ಹಣವನ್ನು ಸಾಲ ಪಡೆಯಲು ನಿಮ್ಮ ಚಿನ್ನದ ಆಭರಣವನ್ನು ಅಡಮಾನವಾಗಿ ಬಳಸಲು ನಿಮಗೆ ಅನುಮತಿ ನೀಡುತ್ತದೆ. ನೀವು ಅದನ್ನು 12 ತಿಂಗಳವರೆಗಿನ ಅವಧಿಯಲ್ಲಿ ಸುಲಭವಾಗಿ ಮರಳಿ ಪಾವತಿಸಬಹುದು.
ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಗೋಲ್ಡ್ ಲೋನಿಗೆ ಅಪ್ಲೈ ಮಾಡಿದಾಗ, ನಿಮ್ಮ ಚಿನ್ನದ ಆಭರಣದ ಮೌಲ್ಯದ ಆಧಾರದ ಮೇಲೆ ನೀವು ಆಫರನ್ನು ಪಡೆಯುತ್ತೀರಿ. ನಿಮಗೆ ಅಗತ್ಯವಿರುವ ಮೊತ್ತ ಅಥವಾ ಸಂಪೂರ್ಣ ಆಫರ್ ಮೌಲ್ಯವನ್ನು ನೀವು ಆಯ್ಕೆ ಮಾಡಬಹುದು.
ನಿಮ್ಮ ಆಭರಣಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಲಭ್ಯವಿರುವ ಅತ್ಯುತ್ತಮ ಕ್ಯಾರೆಟ್‌ಮೀಟರ್ ಅನ್ನು ಬಳಸುತ್ತೇವೆ. ಹೀಗಾಗಿ, ನೀವು ಅದಕ್ಕಾಗಿ ಸಾಧ್ಯವಾದಷ್ಟು ಹೆಚ್ಚಿನ ಆಫರನ್ನು ಪಡೆಯುತ್ತೀರಿ. ನಮ್ಮ ಸಮಗ್ರ ಭದ್ರತಾ ವ್ಯವಸ್ಥೆಗಳು ನಮ್ಮ ಕೈಯಲ್ಲಿರುವಾಗ ನಿಮ್ಮ ವಸ್ತುಗಳ ಸುರಕ್ಷತೆಯನ್ನು ಖಾತರಿಪಡಿಸುತ್ತವೆ.ದೊಡ್ಡ ಮತ್ತು ಸಣ್ಣ, ಯೋಜಿತ ಮತ್ತು ಯೋಜಿತವಲ್ಲದ ವೆಚ್ಚಗಳಿಗೆ ಪಾವತಿಸಲು ನೀವು ನಿಮ್ಮ ಗೋಲ್ಡ್ ಲೋನನ್ನು ಬಳಸಬಹುದು.
ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್
ನಿಮ್ಮ ಕಂತುಗಳನ್ನು ಉತ್ತಮವಾಗಿ ಯೋಜಿಸಿ.
ಗೋಲ್ಡ್ ಲೋನ್ ಟ್ರಾನ್ಸ್‌ಫರ್‌ಗೆ ಅಗತ್ಯವಿರುವ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್‌ಗಳು
ನಿಮ್ಮ ಪ್ರಸ್ತುತ ಸಾಲದಾತರಿಂದ ಬಜಾಜ್ ಫೈನಾನ್ಸ್‌ಗೆ ಗೋಲ್ಡ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡಲು ನೀವು ಕೆಲವು ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಲವು ಬೇಸಿಕ್ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ನಿಮ್ಮನ್ನು ಕೇಳಲಾಗುತ್ತದೆ.
ಅರ್ಹತಾ ಮಾನದಂಡ
- ರಾಷ್ಟ್ರೀಯತೆ: ಭಾರತೀಯ
- ವಯಸ್ಸು: 21 ರಿಂದ 70
- ಚಿನ್ನದ ಶುದ್ಧತೆ: 22 ಕ್ಯಾರಟ್ ಅಥವಾ ಅದಕ್ಕಿಂತ ಹೆಚ್ಚು
ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಇವುಗಳಲ್ಲಿ ಯಾವುದಾದರೂ ಒಂದು:
- ಆಧಾರ್ ಕಾರ್ಡ್
- ವೋಟರ್ ಐಡಿ ಕಾರ್ಡ್
- ಪಾಸ್‌ಪೋರ್ಟ್
- ಡ್ರೈವಿಂಗ್ ಲೈಸನ್ಸ್
ಪ್ಯಾನ್ ಕಾರ್ಡ್ ಅಗತ್ಯವಿಲ್ಲ. ಆದಾಗ್ಯೂ, ನೀವು ರೂ. 5 ಲಕ್ಷಕ್ಕಿಂತ ಹೆಚ್ಚಿನ ಗೋಲ್ಡ್ ಲೋನಿಗೆ ಅಪ್ಲೈ ಮಾಡಿದರೆ ನಿಮ್ಮ ಪ್ಯಾನ್ ಕಾರ್ಡನ್ನು ಸಲ್ಲಿಸಲು ಕೇಳಲಾಗುತ್ತದೆ.
ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು
ಶುಲ್ಕದ ವಿಧಗಳು |
ಅನ್ವಯವಾಗುವ ಶುಲ್ಕಗಳು |
ಬಡ್ಡಿ ದರ |
ವರ್ಷಕ್ಕೆ 9.50% ರಿಂದ ವರ್ಷಕ್ಕೆ 28%. |
ಪ್ರಕ್ರಿಯಾ ಶುಲ್ಕಗಳು |
ಲೋನ್ ಮೊತ್ತದ 0.12% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು), ಕನಿಷ್ಠ ರೂ. 99 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಮತ್ತು ಗರಿಷ್ಠ ರೂ. 600 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಸ್ಟ್ಯಾಂಪ್ ಡ್ಯೂಟಿ (ಆಯಾ ರಾಜ್ಯದ ಪ್ರಕಾರ) |
ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ |
ನಗದು ನಿರ್ವಹಣಾ ಶುಲ್ಕಗಳು |
ಇಲ್ಲ |
ದಂಡದ ಬಡ್ಡಿ |
ಬಾಕಿ ಉಳಿಕೆಯ ಮೇಲೆ ವರ್ಷಕ್ಕೆ 3% |
ಭಾಗಶಃ ಮುಂಪಾವತಿ ಶುಲ್ಕಗಳು |
ಇಲ್ಲ |
ಫೋರ್‌ಕ್ಲೋಸರ್ ಶುಲ್ಕಗಳು* |
ಇಲ್ಲ |
ಹರಾಜು ಶುಲ್ಕಗಳು |
ಫಿಸಿಕಲ್ ನೋಟೀಸ್‌ಗೆ ಶುಲ್ಕ - ಪ್ರತಿ ನೋಟೀಸ್‌ಗೆ ರೂ. 40 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
*ಫೋರ್‌ಕ್ಲೋಸರ್ ಶುಲ್ಕಗಳು ಶೂನ್ಯ. ಆದಾಗ್ಯೂ, ಬುಕಿಂಗ್ ಮಾಡಿದ 7 ದಿನಗಳ ಒಳಗೆ ನೀವು ಲೋನನ್ನು ಮುಚ್ಚಿದರೆ, ನೀವು ಕನಿಷ್ಠ 7 ದಿನಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಆಗಾಗ ಕೇಳುವ ಪ್ರಶ್ನೆಗಳು
ಗೋಲ್ಡ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಿಮ್ಮ ಪ್ರಸ್ತುತ ಸಾಲದಾತರಿಂದ ಇನ್ನೊಂದು ಸಾಲದಾತರಿಗೆ ನಿಮ್ಮ ಗೋಲ್ಡ್ ಲೋನ್ ಬ್ಯಾಲೆನ್ಸ್ ಅನ್ನು ನೀವು ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಕಡಿಮೆ ಬಡ್ಡಿ ದರ, ಉತ್ತಮ ಮರುಪಾವತಿ ನಿಯಮಗಳನ್ನು ಪಡೆಯುವ ಗುರಿಯೊಂದಿಗೆ ಅಥವಾ ಅವರ ಪ್ರಸ್ತುತ ಸಾಲದಾತರ ಸೇವೆಯೊಂದಿಗೆ ಅವರು ಸಂತೋಷಪಡದಿದ್ದರೆ ಜನರು ಸಾಮಾನ್ಯವಾಗಿ ಗೋಲ್ಡ್ ಲೋನ್‌ಗಳನ್ನು ಟ್ರಾನ್ಸ್‌ಫರ್ ಮಾಡುತ್ತಾರೆ.
ಗೋಲ್ಡ್ ಲೋನನ್ನು ಟ್ರಾನ್ಸ್‌ಫರ್ ಮಾಡುವುದರಿಂದ ಕಡಿಮೆ ಬಡ್ಡಿ ದರಗಳು, ಚಿನ್ನದ ಉಚಿತ ಇನ್ಶೂರೆನ್ಸ್, ಅನೇಕ ಮರುಪಾವತಿ ಆಯ್ಕೆಗಳು, ಪ್ರತಿ ಗ್ರಾಂ ಚಿನ್ನಕ್ಕೆ ಹೆಚ್ಚಿನ ಲೋನ್ ಮೊತ್ತ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡಬಹುದು. ಗೋಲ್ಡ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಫೀಚರ್‌ಗಳು ಸುಧಾರಿತ ಭದ್ರತೆ, ಭಾಗಶಃ-ಬಿಡುಗಡೆ ಸೌಲಭ್ಯ ಮತ್ತು ಯಾವುದೇ ಭಾಗಶಃ-ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕವನ್ನು ಕೂಡ ಒಳಗೊಂಡಿರಬಹುದು. ಒಟ್ಟಾರೆಯಾಗಿ, ಗೋಲ್ಡ್ ಲೋನ್ ಟ್ರಾನ್ಸ್‌ಫರ್ ಸಾಲಗಾರರಿಗೆ ಹಣವನ್ನು ಉಳಿಸಲು ಮತ್ತು ಉತ್ತಮ ಲೋನ್ ನಿಯಮಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಒಂದು ಸಾಲದಾತರಿಂದ ಇನ್ನೊಂದಕ್ಕೆ ಗೋಲ್ಡ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಲು ನೀವು ಕೆಲವು ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ನೀವು 21 ಮತ್ತು 70 ವರ್ಷಗಳ ನಡುವಿನ ಭಾರತೀಯ ನಾಗರಿಕರಾಗಿರಬೇಕು ಮತ್ತು ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡುವ ಮೊದಲು ನಿಮ್ಮ ಪ್ರಮುಖ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಅಲ್ಲದೆ, ನೀವು ಅಡವಿಡುವ ಚಿನ್ನದ ಆಭರಣವು 22 ಕ್ಯಾರಟ್ ಆಗಿರಬೇಕು.
ಗೋಲ್ಡ್ ಲೋನ್ ಟೇಕ್‌ಓವರ್ ನಿಮ್ಮ ಪ್ರಸ್ತುತ ಸಾಲದಾತರಿಂದ ಇನ್ನೊಂದು ಸಾಲದಾತರಿಗೆ ನಿಮ್ಮ ಗೋಲ್ಡ್ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡಲು ನಿಮಗೆ ಅನುಮತಿ ನೀಡುತ್ತದೆ. ನಿಮ್ಮ ಬಾಕಿ ಉಳಿದ ಗೋಲ್ಡ್ ಲೋನನ್ನು ಟ್ರಾನ್ಸ್‌ಫರ್ ಮಾಡುವುದರಿಂದ ಕಡಿಮೆ ದರಗಳಲ್ಲಿ ಮುಂಗಡವನ್ನು ಮರುಪಾವತಿಸಲು ನಿಮಗೆ ಅನುಮತಿ ನೀಡುತ್ತದೆ, ಅನಗತ್ಯ ಬಡ್ಡಿ ಪಾವತಿಗಳ ಮೇಲೆ ಉಳಿತಾಯವನ್ನು ಅನುಮತಿಸುತ್ತದೆ. ಚಿನ್ನದ ಉಚಿತ ಇನ್ಶೂರೆನ್ಸ್, ಭಾಗಶಃ-ಬಿಡುಗಡೆ ಸೌಲಭ್ಯ, ಅನೇಕ ಮರುಪಾವತಿ ಆಯ್ಕೆಗಳು ಮತ್ತು ಪ್ರತಿ ಗ್ರಾಂ ಚಿನ್ನಕ್ಕೆ ಹೆಚ್ಚಿನ ಲೋನ್ ಮೊತ್ತದಂತಹ ಪ್ರಯೋಜನಗಳನ್ನು ಕೂಡ ನೀವು ಪಡೆಯಬಹುದು.
ಬಜಾಜ್ ಫೈನಾನ್ಸ್‌ನೊಂದಿಗೆ ನಿಮ್ಮ ಗೋಲ್ಡ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪೂರ್ಣಗೊಳಿಸಲು ನೀಡಲಾದ ಹಂತಗಳನ್ನು ಅನುಸರಿಸಿ:
- ಬ್ಯಾಲೆನ್ಸ್ ವರ್ಗಾವಣೆಗಾಗಿ ನೀವು ಎಲ್ಲಾ ಅರ್ಹತಾ ಅವಶ್ಯಕತೆಗಳನ್ನು ಪೂರೈಸುತ್ತೀರಾ ಎಂದು ಪರಿಶೀಲಿಸಿ.
- ಮುಂದೆ, ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರೊಂದಿಗೆ ಗೋಲ್ಡ್ ಲೋನ್ ಫೋರ್‌ಕ್ಲೋಸರ್‌ಗೆ ಅಪ್ಲೈ ಮಾಡಿ.
- ಬಜಾಜ್ ಫೈನಾನ್ಸ್‌ಗೆ ಗೋಲ್ಡ್ ಲೋನ್ ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡಲು ಸರಳ ಫಾರ್ಮ್ ಭರ್ತಿ ಮಾಡಿ.
- ಪೇಪರ್‌ವರ್ಕ್ ಪೂರ್ಣಗೊಳಿಸಲು ಅಗತ್ಯವಿರುವ ಕನಿಷ್ಠ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
- ಹಿಂದಿನ ಸಾಲದಾತರಿಂದ ಅಡವಿಡಲಾದ ಚಿನ್ನವನ್ನು ಪಡೆದುಕೊಳ್ಳಿ ಮತ್ತು ಉದ್ಯಮದ-ಅತ್ಯುತ್ತಮ ವಾಲ್ಟ್ ಭದ್ರತೆಯ ಅಡಿಯಲ್ಲಿ ಬಜಾಜ್ ಫೈನಾನ್ಸ್‌ನಲ್ಲಿ ಅದನ್ನು ಡೆಪಾಸಿಟ್ ಮಾಡಿ.
- ಕಡಿಮೆ ಗೋಲ್ಡ್ ಲೋನ್ ಬಡ್ಡಿ ದರ ಮತ್ತು ಇತರ ಅನುಕೂಲಕರ ನಿಯಮಗಳೊಂದಿಗೆ ಹೊಸ ಲೋನ್ ಒಪ್ಪಂದವನ್ನು ಪಡೆಯಿರಿ.
- ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಗೋಲ್ಡ್ ಲೋನ್ ಮೊತ್ತವನ್ನು ಪಡೆಯಿರಿ.
- ಒಮ್ಮೆ ಪಡೆದ ನಂತರ, ಒಪ್ಪಿಕೊಂಡ ಶೆಡ್ಯೂಲ್ ಪ್ರಕಾರ ನೀವು ಮುಂಗಡವನ್ನು ಮರುಪಾವತಿ ಮಾಡಲು ಆರಂಭಿಸಬಹುದು.