ಗೋಲ್ಡ್ ಲೋನಿನೊಂದಿಗೆ ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಿ

ಬಜಾಜ್ ಫೈನಾನ್ಸ್‌ನಿಂದ ಚಿನ್ನದ ಆಭರಣಗಳ ಮೇಲಿನ ಲೋನಿನೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಿ. ವೈದ್ಯಕೀಯ ತುರ್ತುಸ್ಥಿತಿ, ನಿಮ್ಮ ಬಿಸಿನೆಸ್‌ನ ವಿಸ್ತರಣೆ, ಉನ್ನತ ಶಿಕ್ಷಣ ಅಥವಾ ಇತರ ಯಾವುದೇ ವೆಚ್ಚಕ್ಕಾಗಿರಲಿ, ನಿಮ್ಮ ಅಗತ್ಯಗಳನ್ನು ಪೂರೈಸಲು ನಮ್ಮ ಗೋಲ್ಡ್ ಲೋನ್ ಸುಲಭವಾದ ಮಾರ್ಗವಾಗಿದೆ.

ನಮ್ಮ ತೊಂದರೆ ರಹಿತ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ, ನೀವು ಕೆಲವು ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು. ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್ ಶಾಖೆಗೆ ಭೇಟಿ ನೀಡುವ ಸಮಯದಲ್ಲಿ ನಾವು ಅಪಾಯಿಂಟ್ಮೆಂಟ್ ನಿಗದಿಪಡಿಸಿ, ಎಲ್ಲವನ್ನೂ ಸಿದ್ಧವಾಗಿರಿಸುತ್ತೇವೆ. ನಾವು ಭಾರತದಾದ್ಯಂತ 800 ಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿದ್ದೇವೆ.

ನಿಮ್ಮ ಮರುಪಾವತಿಯನ್ನು ಉತ್ತಮವಾಗಿ ಯೋಜಿಸಲು ನೀವು ಲೋನಿಗೆ ಅಪ್ಲೈ ಮಾಡುವ ಮೊದಲು ನೀವು ಆನ್ಲೈನ್ ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.

ಹೊಸ ಗೋಲ್ಡ್ ಲೋನ್‌ಗಳನ್ನು ಹೊರತುಪಡಿಸಿ, ಬಜಾಜ್ ಫೈನಾನ್ಸ್ ಸುಲಭ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಒದಗಿಸುತ್ತದೆ. ನಿಮ್ಮ ಅಸ್ತಿತ್ವದಲ್ಲಿರುವ ಸಾಲದಾತರಿಂದ ನಿಮ್ಮ ಚಾಲ್ತಿಯಲ್ಲಿರುವ ಗೋಲ್ಡ್ ಲೋನನ್ನು ನಮಗೆ ಬದಲಾಯಿಸಬಹುದು.

ಗೋಲ್ಡ್ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳು

ನಮ್ಮ ಗೋಲ್ಡ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ನಮ್ಮ ಗೋಲ್ಡ್ ಲೋನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋ ನೋಡಿ: ಫೀಚರ್‌ಗಳು ಮತ್ತು ಪ್ರಯೋಜನಗಳು, ಫೀಗಳು ಮತ್ತು ಶುಲ್ಕಗಳು, ಅರ್ಹತಾ ಮಾನದಂಡಗಳು, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಅಪ್ಲೈ ಮಾಡುವ ಹಂತಗಳು.

  • Part-release facility

    ಭಾಗಶಃ-ಬಿಡುಗಡೆ ಸೌಲಭ್ಯ

    ನಮ್ಮ ಭಾಗಶಃ ಬಿಡುಗಡೆ ಸೌಲಭ್ಯದೊಂದಿಗೆ, ನೀವು ನಿಮ್ಮ ಲೋನ್‌ನ ಒಂದು ಭಾಗವನ್ನು ಮರುಪಾವತಿ ಮಾಡಬಹುದು ಮತ್ತು ನಿಮ್ಮ ಲೋನ್ ಅವಧಿ ಮುಗಿಯುವ ಮೊದಲು ನಿಮ್ಮ ಚಿನ್ನದ ಆಭರಣಗಳ ಭಾಗವನ್ನು ಮರಳಿ ತೆಗೆದುಕೊಳ್ಳಬಹುದು.

  • No part-prepayment or foreclosure fee

    ಯಾವುದೇ ಭಾಗಶಃ-ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕವಿಲ್ಲ

    ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಲೋನ್‌ನ ಒಂದು ಭಾಗವನ್ನು ಮುಂಚಿತವಾಗಿ ಮರುಪಾವತಿಸಿ ಅಥವಾ ಸಂಪೂರ್ಣ ಮೊತ್ತವನ್ನು ಪಾವತಿಸಿ.

  • Transparent evaluation

    ಪಾರದರ್ಶಕ ಮೌಲ್ಯಮಾಪನ

    ನಿಮ್ಮ ಚಿನ್ನಕ್ಕೆ ಹೆಚ್ಚಿನ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸಲು ನಮ್ಮ ಎಲ್ಲಾ ಶಾಖೆಗಳಲ್ಲಿ ನಾವು ಅತ್ಯುತ್ತಮ ದರ್ಜೆಯ ಕ್ಯಾರೆಟ್ ಮೀಟರ್‌ಗಳನ್ನು ಬಳಸುತ್ತೇವೆ.

  • Free insurance of gold

    ಚಿನ್ನದ ಉಚಿತ ಇನ್ಶೂರೆನ್ಸ್

    ನಿಮ್ಮ ಚಿನ್ನದ ಆಭರಣಗಳು ನಮ್ಮ ಬಳಿ ಇರುವಾಗ ಕಳ್ಳತನ ಅಥವಾ ಕಳೆದುಹೋಗುವ ಅಪಾಯವನ್ನು ನಮ್ಮ ಉಚಿತ ಇನ್ಶೂರೆನ್ಸ್ ಕವರ್ ಮಾಡುತ್ತದೆ.

  • Convenient repayment options

    ಅನುಕೂಲಕರ ಮರುಪಾವತಿ ಆಯ್ಕೆಗಳು

    ನೀವು ಅನೇಕ ಮರುಪಾವತಿ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ನಿಯಮಿತ ಇಎಂಐಗಳನ್ನು ಪಾವತಿಸಿ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ, ದ್ವಿ-ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿಯನ್ನು ಪಾವತಿಸಿ.

  • Easy application process

    ಸುಲಭ ಅಪ್ಲಿಕೇಶನ್ ಪ್ರಕ್ರಿಯೆ

    ಗೋಲ್ಡ್ ಲೋನ್‌ಗೆ ಆನ್ಲೈನ್‌ನಲ್ಲಿ ಅಪ್ಲೈ ಮಾಡಿ. ನಿಮ್ಮ ನಗರದಲ್ಲಿನ ಹತ್ತಿರದ ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್ ಶಾಖೆಗೆ ನೀವು ಭೇಟಿ ನೀಡುವ ವೇಳೆಗೆ ನಾವು ಎಲ್ಲವನ್ನೂ ಸಿದ್ಧವಾಗಿರಿಸುತ್ತೇವೆ.

  • Gold loan of up to

    ರೂ. 2 ಕೋಟಿಯವರೆಗಿನ ಗೋಲ್ಡ್ ಲೋನ್

    ನಾವು ರೂ. 5,000 ರಿಂದ ರೂ. 2 ಕೋಟಿಯವರೆಗಿನ ತ್ವರಿತ ಗೋಲ್ಡ್ ಲೋನ್‌ಗಳನ್ನು ಒದಗಿಸುತ್ತೇವೆ. ನಿಮಗೆ ನೀಡುವ ಆಫರ್‌ನಿಂದ ನಿಮಗೆ ಸೂಕ್ತವಾದ ಮೊತ್ತವನ್ನು ನೀವು ಆಯ್ಕೆ ಮಾಡಬಹುದು.

  • branches and growing

    800 ಕ್ಕೂ ಹೆಚ್ಚು ಶಾಖೆಗಳು

    ನಾವು ಇತ್ತೀಚೆಗೆ 60 ಹೊಸ ಬ್ರಾಂಚ್‌ಗಳನ್ನು ತೆರೆದಿದ್ದೇವೆ ಮತ್ತು ಭಾರತದಾದ್ಯಂತ ಇನ್ನಷ್ಟು ಬ್ರಾಂಚ್‌ಗಳನ್ನು ಸೇರಿಸುತ್ತಿದ್ದೇವೆ. ನಾವು ಕಾರ್ಯನಿರ್ವಹಿಸುವ ನಗರಗಳಲ್ಲಿ ಹೊಸ ಬ್ರಾಂಚ್‌ಗಳನ್ನು ಕೂಡ ತೆರೆಯುತ್ತಿದ್ದೇವೆ.

  • ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ
Gold Loan EMI Calculator

ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್

ನಿಮ್ಮ ಕಂತುಗಳನ್ನು ಉತ್ತಮವಾಗಿ ಯೋಜಿಸಿ.

ಗೋಲ್ಡ್ ಲೋನ್‌‍ಗೆ ಅಗತ್ಯವಿರುವ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌ಗಳು

ಇಲ್ಲಿ ನಮೂದಿಸಿದ ಪ್ರಮುಖ ಮಾನದಂಡಗಳನ್ನು ಪೂರೈಸುವ ಯಾರು ಬೇಕಾದರೂ ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡಬಹುದು. ಅವರ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವರಿಗೆ ಕೆಲವು ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ಕೇಳಲಾಗುತ್ತದೆ.

ಅರ್ಹತಾ ಮಾನದಂಡ

ರಾಷ್ಟ್ರೀಯತೆ: ಭಾರತೀಯ
ವಯಸ್ಸು: 21 ರಿಂದ 70
ಚಿನ್ನದ ಶುದ್ಧತೆ: 22 ಕ್ಯಾರಟ್

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಇವುಗಳಲ್ಲಿ ಯಾವುದಾದರೂ ಒಂದು:

  • ಆಧಾರ್ ಕಾರ್ಡ್
  • ವೋಟರ್ ಐಡಿ ಕಾರ್ಡ್
  • ಪಾಸ್‌ಪೋರ್ಟ್
  • ಡ್ರೈವಿಂಗ್ ಲೈಸನ್ಸ್

ಪ್ಯಾನ್ ಕಾರ್ಡ್ ಅಗತ್ಯವಿಲ್ಲ. ಆದಾಗ್ಯೂ, ನೀವು ರೂ. 5 ಲಕ್ಷಕ್ಕಿಂತ ಹೆಚ್ಚಿನ ಗೋಲ್ಡ್ ಲೋನಿಗೆ ಅಪ್ಲೈ ಮಾಡಿದರೆ ನಿಮ್ಮ ಪ್ಯಾನ್ ಕಾರ್ಡನ್ನು ಸಲ್ಲಿಸಲು ಕೇಳಲಾಗುತ್ತದೆ.

ಗೋಲ್ಡ್ ಲೋನಿಗಾಗಿ ಹೇಗೆ ಅಪ್ಲೈ ಮಾಡಬೇಕು

ಗೋಲ್ಡ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1.  ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು ಈ ಪುಟದಲ್ಲಿನ 'ಅಪ್ಲೈ' ಮೇಲೆ ಕ್ಲಿಕ್ ಮಾಡಿ
  2. ನಿಮ್ಮ ಪ್ಯಾನ್ ನಲ್ಲಿ ಕಾಣಿಸಿಕೊಳ್ಳುವಂತೆ ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
  3. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ನಗರವನ್ನು ಆಯ್ಕೆಮಾಡಿ
  4. 'ಒಟಿಪಿ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ’
  5. ನಿಮ್ಮ ವಿವರಗಳನ್ನು ಪರಿಶೀಲಿಸಲು ಒಟಿಪಿ ನಮೂದಿಸಿ
  6. ನಿಮ್ಮ ನಗರದಲ್ಲಿನ ಹತ್ತಿರದ ಬ್ರಾಂಚ್ ವಿಳಾಸವನ್ನು ನಿಮಗೆ ತೋರಿಸಲಾಗುತ್ತದೆ. ನಿಮ್ಮ ಗೋಲ್ಡ್ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಲು ನಿಮಗೆ ಮಾರ್ಗದರ್ಶನ ನೀಡುವ ನಮ್ಮ ಪ್ರತಿನಿಧಿಯಿಂದ ನೀವು ಕರೆಯನ್ನು ಕೂಡ ಪಡೆಯುತ್ತೀರಿ.

ಬಡ್ಡಿ ದರ ಮತ್ತು ಅನ್ವಯವಾಗುವ ಶುಲ್ಕಗಳು

ಶುಲ್ಕದ ವಿಧಗಳು

ಅನ್ವಯವಾಗುವ ಶುಲ್ಕಗಳು

ಬಡ್ಡಿ ದರ

ವರ್ಷಕ್ಕೆ 9.50% ರಿಂದ ವರ್ಷಕ್ಕೆ 28%.

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 0.12% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು), ಕನಿಷ್ಠ ರೂ. 99 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಮತ್ತು ಗರಿಷ್ಠ ರೂ. 600 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಸ್ಟ್ಯಾಂಪ್ ಡ್ಯೂಟಿ (ಆಯಾ ರಾಜ್ಯದ ಪ್ರಕಾರ)

ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ

ನಗದು ನಿರ್ವಹಣಾ ಶುಲ್ಕಗಳು

ಇಲ್ಲ

ದಂಡದ ಬಡ್ಡಿ

ಬಾಕಿ ಉಳಿಕೆಯ ಮೇಲೆ ವರ್ಷಕ್ಕೆ 3%

ದಂಡದ ಬಡ್ಡಿ ಮಾರ್ಜಿನ್/ ದರವು ಬಡ್ಡಿ ದರದ ಸ್ಲ್ಯಾಬ್‌ಗಿಂತ ಹೆಚ್ಚಾಗಿರುತ್ತದೆ. ಬಾಕಿ ಉಳಿಕೆಗಳ ಮರುಪಾವತಿಯಲ್ಲಿ ಡೀಫಾಲ್ಟ್ ಸಂದರ್ಭದಲ್ಲಿ ಇದು ಅನ್ವಯವಾಗುತ್ತದೆ/ ಶುಲ್ಕ ವಿಧಿಸಲಾಗುತ್ತದೆ.

ಭಾಗಶಃ ಮುಂಪಾವತಿ ಶುಲ್ಕಗಳು

ಇಲ್ಲ

ಫೋರ್‌ಕ್ಲೋಸರ್ ಶುಲ್ಕಗಳು

ಇಲ್ಲ

ಹರಾಜು ಶುಲ್ಕಗಳು

ಫಿಸಿಕಲ್ ನೋಟೀಸ್‌‌ಗೆ ಶುಲ್ಕ - ಪ್ರತಿ ನೋಟೀಸ್‌‌ಗೆ ರೂ. 40 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಮರುಪಡೆಯುವಿಕೆ ಶುಲ್ಕಗಳು – ರೂ. 500 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಜಾಹೀರಾತು ಶುಲ್ಕ – ರೂ. 200 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)


*ಫೋರ್‌ಕ್ಲೋಸರ್ ಶುಲ್ಕಗಳು ಶೂನ್ಯ. ಆದಾಗ್ಯೂ, ಬುಕಿಂಗ್ ಮಾಡಿದ 7 ದಿನಗಳ ಒಳಗೆ ನೀವು ಲೋನನ್ನು ಮುಚ್ಚಿದರೆ, ನೀವು ಕನಿಷ್ಠ 7 ದಿನಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ರಾಜ್ಯ-ನಿರ್ದಿಷ್ಟ ಕಾನೂನುಗಳಿಗೆ ಅನುಗುಣವಾಗಿ ಎಲ್ಲಾ ಶುಲ್ಕಗಳ ಮೇಲೆ ಹೆಚ್ಚುವರಿ ಸೆಸ್ ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ.

ಗೋಲ್ಡ್ ಲೋನ್‌ಗಳ ಮೇಲೆ ಅನ್ವಯವಾಗುವ ಬಡ್ಡಿ ದರಗಳು ಕ್ರಿಯಾತ್ಮಕವಾಗಿವೆ ಮತ್ತು ಬಾಹ್ಯ ಅಂಶಗಳಿಂದಾಗಿ ಆಗಾಗ್ಗೆ ಬದಲಾಗುತ್ತವೆ.

ನೀವು ಹುಡುಕುತ್ತಿರುವುದು ಇನ್ನೂ ಸಿಕ್ಕಿಲ್ಲವೇ?? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ಆಗಾಗ ಕೇಳುವ ಪ್ರಶ್ನೆಗಳು

ಗೋಲ್ಡ್ ಲೋನ್ ಪಡೆಯುವುದು ಹೇಗೆ?

ನಿಮ್ಮ ಚಿನ್ನದ ಆಭರಣಗಳ ಮೇಲೆ ಲೋನ್ ಪಡೆಯುವುದು ಯಾವುದೇ ಯೋಜಿತವಲ್ಲದ ವೆಚ್ಚವನ್ನು ಪೂರೈಸಲು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಬಜಾಜ್ ಫಿನ್‌ಸರ್ವ್‌ನಿಂದ ಚಿನ್ನದ ಮೇಲೆ ಲೋನ್ ಪಡೆಯಲು, ನೀವು ಆನ್ಲೈನ್‌ನಲ್ಲಿ ಅಪ್ಲೈ ಮಾಡಬಹುದು, ಮತ್ತು ನಾವು ನಿಮಗೆ ಕರೆ ಮಾಡುತ್ತೇವೆ ಮತ್ತು ಮುಂದಿನ ಹಂತಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತೇವೆ ಅಥವಾ ನಿಮ್ಮ ನಗರದಲ್ಲಿನ ಹತ್ತಿರದ ಗೋಲ್ಡ್ ಲೋನ್ ಶಾಖೆಗೆ ಭೇಟಿ ನೀಡಬಹುದು. ಆನ್ಲೈನ್ ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಲು, ನೀವು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಬೇಕು:

  1. ನ್ಯಾವಿಗೇಶನ್ ಬಾರ್‌ನಲ್ಲಿ ಇರುವ ‘ಅಪ್ಲೈ’ ಈ ಪೇಜ್‌ನ ಮೇಲ್ಭಾಗದಲ್ಲಿರುವ ಆಯ್ಕೆ.
  2. ನಿಮ್ಮ ಬೇಸಿಕ್ ಮಾಹಿತಿಯನ್ನು ಸಲ್ಲಿಸುವ ಮೂಲಕ ಆನ್ಲೈನ್ ಫಾರ್ಮ್ ಭರ್ತಿ ಮಾಡಿ. ಹೆಸರು, ಮೊಬೈಲ್ ನಂಬರ್‌ನಂತಹ ವಿವರಗಳನ್ನು ಭರ್ತಿ ಮಾಡಿ ಮತ್ತು ಡ್ರಾಪ್-ಡೌನ್‌ನಿಂದ ನಿಮ್ಮ ನಗರವನ್ನು ಆಯ್ಕೆಮಾಡಿ.
  3. ನಿಮ್ಮ ವಿವರಗಳ ಪರಿಶೀಲನೆಯ ನಂತರ, ನೀವು ಫಾರ್ಮ್ ಸಲ್ಲಿಸಬಹುದು.
  4. ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಮುಂದಿನ ಹಂತಗಳಲ್ಲಿ.
ಗೋಲ್ಡ್ ಲೋನ್ ಪಡೆಯಲು ಯಾರು ಅರ್ಹರಾಗಿರುತ್ತಾರೆ?

ಸಂಬಳ ಪಡೆಯುವವರು, ಸ್ವಯಂ ಉದ್ಯೋಗಿ ವ್ಯಕ್ತಿಗಳು, ವ್ಯಾಪಾರಿಗಳು, ರೈತರು ಮತ್ತು ವ್ಯಾಪಾರಿಗಳು ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಲು ಎಲ್ಲರೂ ಅರ್ಹರಾಗಿರುತ್ತಾರೆ. ಬಜಾಜ್ ಫಿನ್‌ಸರ್ವ್‌ನಿಂದ ಗೋಲ್ಡ್ ಲೋನ್ ಪಡೆಯಲು, ನೀವು 21 ಮತ್ತು 70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು ಮತ್ತು 22 ಕ್ಯಾರೆಟ್‌ಗಳು ಮತ್ತು ಅದಕ್ಕಿಂತ ಹೆಚ್ಚಿನ ಚಿನ್ನದ ಆಭರಣಗಳನ್ನು ಹೊಂದಿರಬೇಕು.

ಗೋಲ್ಡ್ ಲೋನ್ ಅರ್ಹತೆ ಬಗ್ಗೆ ಇನ್ನಷ್ಟು ತಿಳಿಯಿರಿ.

ನೀವು ಗೋಲ್ಡ್ ಲೋನಿಗೆ ಯಾವಾಗ ಅಪ್ಲೈ ಮಾಡಬೇಕು?

ಕೆಲವು ಅನಿರೀಕ್ಷಿತ ವೆಚ್ಚಗಳಿಗೆ ನಿಮಗೆ ಹಣದ ಅಗತ್ಯವಿದ್ದಾಗ ನೀವು ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಬೇಕು. ಅಲ್ಲದೆ, ನೀವು ಈಗಾಗಲೇ ಚಾಲ್ತಿಯಲ್ಲಿರುವ ಲೋನ್‌ನ ಹೊರೆಯನ್ನು ಹೊಂದಿದ್ದರೆ ಗೋಲ್ಡ್ ಲೋನ್ ಉತ್ತಮ ಆಯ್ಕೆಯಾಗಿದೆ. ನಿಮ್ಮ ಮನೆಯಲ್ಲಿ ಇರುವ ಚಿನ್ನದ ಆಭರಣಗಳನ್ನು ಅಡವಿಡುವ ಮೂಲಕ ನೀವು ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಬಹುದು. ಗೋಲ್ಡ್ ಲೋನ್ ಪಡೆಯಲು, ನಿಮ್ಮ ನಗರದಲ್ಲಿನ ಹತ್ತಿರದ ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್ ಶಾಖೆಗೆ ಹೋಗಬಹುದು. ನೀವು ಹೆಚ್ಚು ಅನುಕೂಲಕರ ಆಯ್ಕೆಗಾಗಿ ಹುಡುಕುತ್ತಿದ್ದರೆ, ನೀವು ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ನಲ್ಲಿ ಗೋಲ್ಡ್ ಲೋನ್ ಅಪ್ಲಿಕೇಶನ್ ಫಾರ್ಮ್ ಕೂಡ ಭರ್ತಿ ಮಾಡಬಹುದು.

ಆಭರಣದ ಮೇಲೆ ನೀವು ಗೋಲ್ಡ್ ಲೋನ್ ಪಡೆಯಬಹುದೇ?

ಹೌದು, ನೀವು ಆಕರ್ಷಕ ಬಡ್ಡಿ ದರದಲ್ಲಿ ಚಿನ್ನದ ಆಭರಣಗಳ ಮೇಲೆ ಲೋನ್ ಪಡೆಯಬಹುದು. ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್ ಬಡ್ಡಿ ದರಗಳು 9.50% ರಿಂದ ಆರಂಭವಾಗುತ್ತವೆ. ಚಿನ್ನದ ಮೇಲೆ ಲೋನ್ ಪಡೆಯಲು, ಈ ಪುಟದ ಮೇಲಿನ 'ಆನ್ಲೈನ್‌ನಲ್ಲಿ ಅಪ್ಲೈ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ನಗರದಲ್ಲಿನ ಹತ್ತಿರದ ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನ್ ಶಾಖೆಗೆ ಕೂಡ ನೀವು ಹೋಗಬಹುದು.

ಆನ್ಲೈನ್‌ನಲ್ಲಿ ಗೋಲ್ಡ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ಗೋಲ್ಡ್ ಲೋನ್ ಎಂದರೇನು?

ಗೋಲ್ಡ್ ಲೋನ್ ಎಂಬುದು ಬ್ಯಾಂಕ್‌ಗಳು ಅಥವಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಂತಹ ಸಾಲದಾತರಿಂದ (ಎನ್‌ಬಿಎಫ್‌ಸಿ) ನೀವು ಪಡೆಯಬಹುದಾದ ಒಂದು ರೀತಿಯ ಸುರಕ್ಷಿತ ಲೋನ್ ಆಗಿದೆ. ಚಿನ್ನದ ಮೇಲಿನ ಲೋನ್ ಪಡೆಯಲು ನೀವು ನಿಮ್ಮ ಚಿನ್ನದ ಆಭರಣವನ್ನು ಅಡಮಾನವಾಗಿ ಅಡವಿಡಬೇಕು.

ನಿಮ್ಮ ಚಿನ್ನದ ಆಭರಣಗಳ ತೂಕ ಮತ್ತು ಶುದ್ಧತೆಯನ್ನು ಪರಿಶೀಲಿಸಿದ ನಂತರ ಸಾಲದಾತರು ಲೋನ್ ಮೊತ್ತವನ್ನು ನಿರ್ಧರಿಸುತ್ತಾರೆ. ಅವರು ಎಲ್‌ಟಿವಿ ಲೆಕ್ಕಾಚಾರ ಮಾಡುತ್ತಾರೆ, ಇದು 'ಲೋನ್ ಟು ವ್ಯಾಲ್ಯೂ' ಅನುಪಾತವಾಗಿದೆ. ಸಾಲದಾತರು ಒದಗಿಸುವ ಲೋನ್ ಮೊತ್ತವು ನಿಮ್ಮ ಚಿನ್ನದ ಆಭರಣದ ಮೌಲ್ಯದ 75% ವರೆಗೆ ಇರುತ್ತದೆ. ಮೌಲ್ಯವು ಚಿನ್ನದ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಇರುತ್ತದೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ