ಪರ್ಸನಲ್ ಲೋನ್‍ ಸಂಸ್ಕರಣಾ ಶುಲ್ಕ ಎಂದರೇನು?

2 ನಿಮಿಷದ ಓದು

ಹೆಚ್ಚಿನ ಕ್ರೆಡಿಟ್ ಪ್ರಾಡಕ್ಟ್‌ಗಳಂತೆ, ಸಾಲದಾತರು ವೈಯಕ್ತಿಕ ಲೋನ್ ಹಣವನ್ನು ನೀಡುವಾಗ, ಅದರ ಮೇಲೆ ಪ್ರಕ್ರಿಯಾ ಶುಲ್ಕವನ್ನು ವಿಧಿಸುತ್ತಾರೆ. ಆದಾಗ್ಯೂ, ವ್ಯಕ್ತಿಗಳು ಸಾಮಾನ್ಯವಾಗಿ ಈ ಶುಲ್ಕಗಳನ್ನು ನಿರ್ಲಕ್ಷಿಸುತ್ತಾರೆ. ಆದ್ದರಿಂದ, ಇದು ಅಂತಿಮವಾಗಿ ಸಾಲ ಪಡೆಯುವ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ.

ಹೀಗಾಗಿ, ತಕ್ಷಣವೇ ಹಣವನ್ನು ಪಡೆಯಲು ವೈಯಕ್ತಿಕ ಲೋನ್ ಪ್ರಕ್ರಿಯಾ ಶುಲ್ಕವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ವೈಯಕ್ತಿಕ ಲೋನ್ ಬಡ್ಡಿ ದರಗಳು ಮತ್ತು ಇತರ ಶುಲ್ಕಗಳನ್ನು ಒಳಗೊಂಡಂತೆ, ವಾರ್ಷಿಕ ಶೇಕಡಾವಾರು ದರವನ್ನು (ಏಪಿಆರ್‌) ಅಂದಾಜು ಮಾಡಲು ಇದು ಸಹಾಯ ಮಾಡುತ್ತದೆ.

ಕೆಳಗಿನ ವಿಭಾಗಗಳಿಂದ ವೈಯಕ್ತಿಕ ಲೋನ್‌ಗಳಿಗೆ ತಗುಲುವ ಪ್ರಕ್ರಿಯಾ ಶುಲ್ಕಗಳ ಬಗ್ಗೆ ಇನ್ನಷ್ಟು ತಿಳಿಯಿರಿ!

ವೈಯಕ್ತಿಕ ಲೋನ್ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳು

ವೈಯಕ್ತಿಕ ಲೋನ್ ಸೇರಿದಂತೆ ಹಣಕಾಸು ಪ್ರಾಡಕ್ಟ್‌ಗಳ ಮೇಲೆ ಸಾಲದಾತರು ಸ್ಟ್ಯಾಂಡರ್ಡ್ ಪ್ರಕ್ರಿಯಾ ಶುಲ್ಕಗಳನ್ನು ವಿಧಿಸುತ್ತಾರೆ. ಸಾಮಾನ್ಯವಾಗಿ, ಸಾಲದಾತರು ಮತ್ತು ಅರ್ಜಿದಾರರ ಕ್ರೆಡಿಟ್ ಪ್ರೊಫೈಲ್ ಆಧಾರದ ಮೇಲೆ, ವೈಯಕ್ತಿಕ ಲೋನ್ ಪ್ರಕ್ರಿಯಾ ಶುಲ್ಕವು ಮಂಜೂರಾದ ಮೊತ್ತದ 4% ವರೆಗೆ ಇರಬಹುದು.

ಸಾಲದಾತರು ಲೋನ್‌ ಪ್ರಕ್ರಿಯೆಗೊಳಿಸುವಾಗ ಉಂಟಾದ ವೆಚ್ಚವನ್ನು ಕವರ್ ಮಾಡಲು ಈ ಶುಲ್ಕವನ್ನು ವಿಧಿಸುತ್ತಾರೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಸಾಲದಾತರು ಈ ಶುಲ್ಕಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮನ್ನಾ ಮಾಡಬಹುದಾಗಿದೆ. ಅದು ಈ ಕೆಳಗಿನ ಸಂದರ್ಭಗಳನ್ನು ಒಳಗೊಂಡಿದೆ:

  • ಹಬ್ಬದ ಆಫರ್‌ಗಳ ಸಮಯದಲ್ಲಿ
  • ಹೆಚ್ಚಿನ ಸಿಬಿಲ್‌ ಸ್ಕೋರ್‌ಗಳು ಅಥವಾ ಉತ್ತಮ ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ

ವೈಯಕ್ತಿಕ ಲೋನ್‌ನ ಪ್ರಕ್ರಿಯಾ ಶುಲ್ಕದ ಹೊರತಾಗಿ, ಅನ್ವಯವಾಗುವಲ್ಲಿ ಇತರ ಶುಲ್ಕಗಳನ್ನು ಸಹ ಭರಿಸಬೇಕಾಗುತ್ತದೆ.

ವೈಯಕ್ತಿಕ ಲೋನ್‌ನ ಶುಲ್ಕಗಳು ಮತ್ತು ಪ್ರಕ್ರಿಯಾ ಶುಲ್ಕಗಳ ವಿಧ

ವೈಯಕ್ತಿಕ ಲೋನ್ ಮೇಲೆ ಅನ್ವಯವಾಗುವ ವಿವಿಧ ರೀತಿಯ ಶುಲ್ಕಗಳು ಈ ರೀತಿಯಾಗಿವೆ:

1. ಬೌನ್ಸ್ ಶುಲ್ಕಗಳು

ಲೋನ್‌ ಮರುಪಾವತಿಸುವಾಗ, ಇಎಂಐ ಬೌನ್ಸ್ ಆದರೆ, ಸಾಲಗಾರರು ತಡವಾದ ಪಾವತಿ ದಂಡಗಳ ಜೊತೆ ಬೌನ್ಸ್ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಚೆಕ್, ಎನ್‌ಏಸಿಹೆಚ್‌ ಅಥವಾ ಇಸಿಎಸ್‌ ಮ್ಯಾಂಡೇಟ್ ಕ್ಲಿಯರ್ ಆಗಲು ವಿಫಲವಾದಾಗ ಹೀಗೆ ಮಾಡಬೇಕಾಗುತ್ತದೆ. ತೆರಿಗೆ ಮೊತ್ತವೂ ಸೇರಿದಂತೆ, ಪ್ರತಿ ಬೌನ್ಸ್‌ಗೆ ರೂ. 600 ರಿಂದ ರೂ. 1200 ವರೆಗೆ ವೆಚ್ಚ ಇರುತ್ತದೆ.

2. ದಂಡದ ಮೇಲೆ ಬಡ್ಡಿ ಶುಲ್ಕಗಳು

ಸಾಲಗಾರ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸಲು ವಿಫಲವಾದಾಗ ಸಾಲದಾತರು ಈ ಶುಲ್ಕ ವಿಧಿಸುತ್ತಾರೆ. ಬಾಕಿ ಇರುವ ಇಎಂಐ ಮೇಲೆ ದಂಡದ ಮೇಲಿನ ಬಡ್ಡಿ ಮಾಸಿಕ 2% ರಿಂದ 4% ವರೆಗೆ ಇರುತ್ತದೆ.

3. ಡಾಕ್ಯುಮೆಂಟ್ ಶುಲ್ಕಗಳು

ವೆಬ್‌ಸೈಟ್‌ನಿಂದ ಪತ್ರಗಳು, ಪ್ರಮಾಣಪತ್ರಗಳು ಮತ್ತು ಇ-ಸ್ಟೇಟ್ಮೆಂಟ್‌ಗಳಂತಹ ಲೋನ್ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡುವುದಕ್ಕೆ ಯಾವುದೇ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ. ಆದಾಗ್ಯೂ, ಭೌತಿಕ ಪ್ರತಿಯನ್ನು ಪಡೆಯಲು, ನಿಗದಿಪಡಿಸಿರುವ ಇಂತಿಷ್ಟು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

4 ಪೂರ್ವಪಾವತಿ ಶುಲ್ಕಗಳು

ಅಸ್ತಿತ್ವದಲ್ಲಿರುವ ಸಾಲಗಾರರು ಮರುಪಾವತಿಸಿದ ಮೊತ್ತದ ಮೇಲೆ ನಿಗದಿಪಡಿಸಿದ ಇಂತಿಷ್ಟು ಶುಲ್ಕಗಳನ್ನು ಪಾವತಿಸುವ ಮೂಲಕ ಭಾಗಶಃ-ಮುಂಗಡ ಪಾವತಿಯನ್ನು ಮಾಡಬಹುದು. ಭಾಗಶಃ-ಮುಂಗಡ ಪಾವತಿ ಮೊತ್ತವು ಒಂದು ಕಂತಿನ ಇಎಂಐಗಿಂತ ಹೆಚ್ಚಿರಬೇಕು ಎಂಬುದನ್ನು ಗಮನಿಸಿ. ಹೆಚ್ಚುವರಿಯಾಗಿ, ಫ್ಲೋಟಿಂಗ್ ಬಡ್ಡಿ ದರದಲ್ಲಿ ಪಡೆದ ಲೋನ್‌ಗಳಿಗೆ ಭಾಗಶಃ-ಮುಂಗಡ ಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ.

5 ಫೋರ್‌ಕ್ಲೋಸರ್‌ ಶುಲ್ಕಗಳು

ಭಾಗಶಃ-ಮುಂಗಡ ಪಾವತಿಯ ಹೊರತಾಗಿ, ಸಾಲಗಾರರು ಬಾಕಿ ಅಸಲಿನ ಮೇಲೆ ಫೋರ್‌ಕ್ಲೋಸರ್ ಅಂದರೆ ಅವಧಿಪೂರ್ವ ಸಮಾಪ್ತಿ ಶುಲ್ಕಗಳನ್ನೂ ಕೂಡ ಪಾವತಿಸಬೇಕಾಗುತ್ತದೆ. ಈ ಸೌಲಭ್ಯದೊಂದಿಗೆ, ಕಾಲಾವಧಿ ಮುಗಿಯುವ ಮೊದಲೇ, ವ್ಯಕ್ತಿಗಳು ಲೋನ್ ಬಾಕಿಗಳನ್ನು ಒಂದೇ ಬಾರಿಗೆ ಮರುಪಾವತಿ ಮಾಡಬಹುದು. ಸಾಲಗಳನ್ನು ವೇಗವಾಗಿ ತೀರಿಸಿದಕ್ಕಾಗಿ, ಇದು ಕ್ರೆಡಿಟ್ ಸ್ಕೋರ್‌ ಹೆಚ್ಚಳವನ್ನು ಕೊಡುಗೆಯಾಗಿ ನೀಡುತ್ತದೆ.

6. ನಿರ್ವಹಣಾ ಶುಲ್ಕಗಳು

ವೈಯಕ್ತಿಕ ಲೋನ್ ಪ್ರಕ್ರಿಯಾ ಶುಲ್ಕದಂತೆ, ಸಾಲಗಾರರು ಫ್ಲೆಕ್ಸಿ ಲೋನ್‌ನಲ್ಲಿ ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಹೆಚ್ಚುವರಿ ನಿರ್ವಹಣಾ ಶುಲ್ಕಗಳನ್ನು ಕೂಡ ಪಾವತಿಸಬೇಕಾಗಬಹುದು.

ಬಜಾಜ್ ಫಿನ್‌ಸರ್ವ್ ವೈಯಕ್ತಿಕ ಲೋನ್‌ಗೆ ಅತ್ಯಂತ ಕಡಿಮೆ ಪ್ರಕ್ರಿಯಾ ಶುಲ್ಕವನ್ನು ವಿಧಿಸುವುದರಿಂದ, ಲೋನ್ ವೆಚ್ಚಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಪ್ರಕ್ರಿಯಾ ಶುಲ್ಕಗಳನ್ನು ಕಡಿಮೆ ಮಾಡುವ ಜೊತೆಗೆ, ಇದು ವೈಯಕ್ತಿಕ ಲೋನ್ ಮೇಲೆ ನಿಗದಿತ ಇಂತಿಷ್ಟೇ ಹೆಚ್ಚುವರಿ ಶುಲ್ಕಗಳು ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಕೂಡ ವಿಧಿಸುತ್ತದೆ.

ವ್ಯಕ್ತಿಗಳು ಅವಧಿಯ ಕೊನೆಯಲ್ಲಿ ಪಾವತಿಸಬೇಕಾದ ಮಾಸಿಕ ಹೊಣೆಗಾರಿಕೆ ಮತ್ತು ಒಟ್ಟು ಬಡ್ಡಿಯನ್ನು ಲೆಕ್ಕ ಹಾಕಲು ವೈಯಕ್ತಿಕ ಲೋನ್ ಇಎಂಐ ಕ್ಯಾಲ್ಕುಲೇಟರ್ ಗೆ ತೆರಳಬಹುದು.

ಆದ್ದರಿಂದ, ವೈಯಕ್ತಿಕ ಲೋನ್‌ನೊಂದಿಗೆ ಇರುವ ಶುಲ್ಕಗಳ ವಿಧಗಳನ್ನು ತಿಳಿದುಕೊಳ್ಳುವುದರಿಂದ, ಅರ್ಜಿದಾರರು ಸಾಲ ಪಡೆಯುವಾಗ ಪಾವತಿಸಬೇಕಾದ ಮೊತ್ತವನ್ನು ಅಂದಾಜಿಸಲು ಸುಲಭವಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ