ವೈಯಕ್ತಿಕ ಓವರ್‌ಡ್ರಾಫ್ಟ್ ಸೌಲಭ್ಯ ಎಂದರೇನು?

2 ನಿಮಿಷದ ಓದು

ಓವರ್‌ಡ್ರಾಫ್ಟ್ ಸೌಲಭ್ಯವು ನಿಮಗೆ ಫಿಕ್ಸೆಡ್ ಲೈನ್ ಆಫ್ ಕ್ರೆಡಿಟ್‌ನಿಂದ ಹಣವನ್ನು ವಿತ್‌ಡ್ರಾ ಮಾಡಲು ಅನುವು ಮಾಡಿಕೊಡುತ್ತದೆ. ಮರುಪಾವತಿಯೂ ಸಹ ಸುಲಭ ಮತ್ತು ತೊಂದರೆ ರಹಿತವಾಗಿದೆ, ಏಕೆಂದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಡೆದ ಹಣವನ್ನು ಹಿಂತಿರುಗಿಸಬಹುದು. ಇದು ಓವರ್‌ಡ್ರಾಫ್ಟ್ ಸೌಲಭ್ಯವನ್ನು ಅತ್ಯಂತ ಬೇಡಿಕೆಯಲ್ಲಿರುವ ಕ್ರೆಡಿಟ್ ಆಯ್ಕೆಗಳಲ್ಲಿ ಒಂದಾಗಿಸುತ್ತದೆ. ಬಜಾಜ್ ಫಿನ್‌ಸರ್ವ್ ತನ್ನ ಅನ್‌ಸೆಕ್ಯೂರ್ಡ್ ಫ್ಲೆಕ್ಸಿ ಪರ್ಸನಲ್ ಲೋನ್ ಮೂಲಕ ಈ ಫೀಚರ್‌ಗಳನ್ನು ಒದಗಿಸುತ್ತದೆ.

ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಪರ್ಸನಲ್ ಲೋನ್

ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಪರ್ಸನಲ್ ಲೋನ್ ಓವರ್‌ಡ್ರಾಫ್ಟ್ ಸೌಲಭ್ಯದ ಮೂಲಕ, ನಿಮಗೆ ಹಣದ ಅಗತ್ಯವಿದ್ದಾಗ ನೀವು ನಿಮ್ಮ ಲೋನ್ ಮಿತಿಯಿಂದ ಅನೇಕ ವಿತ್‌ಡ್ರಾವಲ್‌ಗಳನ್ನು ಮಾಡಬಹುದು. ಇದಲ್ಲದೆ, ನಿಮ್ಮ ಹಣಕಾಸಿನ ಫ್ಲೆಕ್ಸಿಬಿಲಿಟಿಯ ಪ್ರಕಾರ ನೀವು ಭಾಗಶಃ-ಮುಂಗಡ ಪಾವತಿ ಮಾಡಬಹುದು. ಉತ್ತಮ ಭಾಗವೆಂದರೆ ನೀವು ಸಂಪೂರ್ಣ ಮಂಜೂರಾತಿಯಿಂದ ಬಳಸುವ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ನೀವು ಆರಂಭಿಕ ಅವಧಿಯ ಇಎಂಐಗಳಿಗೆ ಮಾತ್ರ ಬಡ್ಡಿಯನ್ನು ಪಾವತಿಸಲು ಆಯ್ಕೆ ಮಾಡಿದಾಗ ನಿಮ್ಮ ಮಾಸಿಕ ಹೊರಹೋಗುವಿಕೆಯನ್ನು 45%* ವರೆಗೆ ಕಡಿಮೆ ಮಾಡಬಹುದು. ನೀವು ಮರುಪಾವತಿ ವಿಂಡೋದಲ್ಲಿ ಬಯಸಿದಷ್ಟು ಬಾರಿ ವಿತ್‌ಡ್ರಾ ಮಾಡಬಹುದು ಮತ್ತು ಮುಂಗಡ ಪಾವತಿ ಮಾಡಬಹುದು.

ಹೆಚ್ಚುವರಿ ಓದು: ಓವರ್‌ಡ್ರಾಫ್ಟ್ ವರ್ಸಸ್ ಪರ್ಸನಲ್ ಲೋನ್

ಪರ್ಸನಲ್ ಲೋನ್ ಓವರ್‌ಡ್ರಾಫ್ಟ್ ಸೌಲಭ್ಯದ ಪ್ರಯೋಜನಗಳು (ಫ್ಲೆಕ್ಸಿ ಪರ್ಸನಲ್ ಲೋನ್)

ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿ ಲೋನ್ ಸೌಲಭ್ಯವು ಈ ಎಲ್ಲಾ ಅನುಕೂಲಗಳನ್ನು ಒದಗಿಸುತ್ತದೆ.

  • ಇದಕ್ಕೆ ಅತಿಕಡಿಮೆ ಪರ್ಸನಲ್ ಲೋನ್ ಬಡ್ಡಿದರ ಅನ್ವಯವಾಗುತ್ತದೆ. ಇದಲ್ಲದೆ, ನೀವು ಬಳಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಪಾವತಿಸಬೇಕಾಗುತ್ತದೆ, ಸಂಪೂರ್ಣ ಮಂಜೂರಾತಿಯ ಮೇಲಲ್ಲ. ಇದು ತೊಂದರೆ-ರಹಿತ ಮರುಪಾವತಿಯನ್ನು ಸುಲಭಗೊಳಿಸುತ್ತದೆ
  • ಮೊತ್ತವು ಮುಂಚಿತವಾಗಿಯೇ ಮಂಜೂರಾಗುವ ಕಾರಣ, ನೀವು ಸಂಬಳದಾರನೇ ಆಗಿದ್ದರೂ, ಸ್ವಯಂ-ಉದ್ಯೋಗಿಯೇ ಆಗಿದ್ದರೂ, ತಕ್ಷಣವೇ ಹಣವನ್ನು ಪಡೆಯಬಹುದು
  • ಅಂತಿಮ ಬಳಕೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ, ಆದ್ದರಿಂದ ವೈಯಕ್ತಿಕ, ವೃತ್ತಿಪರ, ಯೋಜಿತ ಅಥವಾ ಯೋಜಿತವಲ್ಲದ ಅಗತ್ಯಗಳಿಗಾಗಿ ನೀವು ಲೋನಿನ ಹಣವನ್ನು ಬಳಸಬಹುದು
  • ಈ ಸೌಲಭ್ಯವು ಸಾಲ ಪಡೆಯುವುದನ್ನು ಮತ್ತು ಮರುಪಾವತಿಯನ್ನು ಸರಳಗೊಳಿಸುವುದರಿಂದ, ಉತ್ತಮ ಕ್ರೆಡಿಟ್ ಇತಿಹಾಸವನ್ನು ನಿರ್ಮಿಸಲು ಮತ್ತು ನಿಮ್ಮ ಕ್ರೆಡಿಟ್ ಸ್ಕೋರನ್ನು ಹೆಚ್ಚಿಸಲು ನೀವು ಇದನ್ನು ಬಳಸಬಹುದು

ಬಜಾಜ್ ಫಿನ್‌ಸರ್ವ್‌ನಿಂದ ತ್ವರಿತ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವ ಮೂಲಕ ಫ್ಲೆಕ್ಸಿ ಲೋನ್ ಓವರ್‌ಡ್ರಾಫ್ಟ್ ಸೌಲಭ್ಯದ ಈ ಅನೇಕ ಪ್ರಯೋಜನಗಳನ್ನು ಬಳಸಿ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ