ಕ್ರೆಡಿಟ್ ಕಾರ್ಡ್ ಎಂದರೇನು?

2 ನಿಮಿಷದ ಓದು

ಕ್ರೆಡಿಟ್ ಕಾರ್ಡ್ ಎಂಬುದು ಮೊದಲೇ ಸೆಟ್ ಮಾಡಿದ ಕ್ರೆಡಿಟ್ ಮಿತಿಯನ್ನು ಹೊಂದಿರುವ ಬ್ಯಾಂಕುಗಳು ನೀಡುವ ಹಣಕಾಸಿನ ಸಾಧನವಾಗಿದ್ದು, ನಗದುರಹಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ. ಕಾರ್ಡ್ ವಿತರಕರು ನಿಮ್ಮ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಇತಿಹಾಸ ಮತ್ತು ನಿಮ್ಮ ಆದಾಯದ ಆಧಾರದ ಮೇಲೆ ಕ್ರೆಡಿಟ್ ಮಿತಿಯನ್ನು ನಿರ್ಧರಿಸುತ್ತಾರೆ.

ಒಮ್ಮೆ ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಡೆದ ನಂತರ, ಯಾವುದೇ ಬಡ್ಡಿಯಿಲ್ಲದೆ ನಿರ್ದಿಷ್ಟ ಮರುಪಾವತಿ ಅವಧಿಯೊಳಗೆ ನೀವು ಖರ್ಚು ಮಾಡಿದ ಮೊತ್ತವನ್ನು ಮರುಪಾವತಿ ಮಾಡಬಹುದು. ಈ ಗ್ರೇಸ್ ಅವಧಿಯ ನಂತರ, ನಿಮ್ಮ ಬ್ಯಾಲೆನ್ಸ್ ಮೇಲೆ ಬಡ್ಡಿಯನ್ನು ಅನ್ವಯಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ ನೀವು ಡೆಬಿಟ್ ಕಾರ್ಡ್ ಸ್ವೈಪ್ ಮಾಡುವಾಗ ನಿಮ್ಮ ಬ್ಯಾಂಕ್ ಅಕೌಂಟಿನಿಂದ ಹಣ ಕಡಿತವಾಗುತ್ತದೆ. ಕ್ರೆಡಿಟ್ ಕಾರ್ಡ್ ಸಂದರ್ಭದಲ್ಲಿ, ನಿಮ್ಮ ಕ್ರೆಡಿಟ್ ಮಿತಿಯಿಂದ ಹಣವನ್ನು ತೆಗೆದುಕೊಳ್ಳಲಾಗುತ್ತದೆ.

ಬಹುತೇಕ ಎಲ್ಲಾ ಪ್ರಾಡಕ್ಟ್‌ಗಳು ಮತ್ತು ಸೇವೆಗಳಿಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಪಾವತಿ ಮಾಡಲು ನೀವು ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಬಹುದು. ನೀವು ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಿದ ನಂತರ ಮತ್ತು ಅದನ್ನು ಬಳಸಲು ಆರಂಭಿಸಿದ ನಂತರ, ದಂಡ ಶುಲ್ಕಗಳನ್ನು ತಪ್ಪಿಸಲು ನೀವು ಪಡೆದ ಅಥವಾ ಬಳಸಿದ ಮೊತ್ತವನ್ನು ನಿಗದಿತ ಸಮಯದ ಚೌಕಟ್ಟಿನೊಳಗೆ ಮರುಪಾವತಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ವಿತರಕರೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ವಂಚನೆಯನ್ನು ತಪ್ಪಿಸಲು, ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಆಕರ್ಷಕ ಆಫರ್‌ಗಳನ್ನು ಪಡೆಯಲು ಮತ್ತು ಕಾರ್ಡಿನೊಂದಿಗೆ ಶಾಪಿಂಗ್ ಮಾಡಲು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅನ್ನು ಆಯ್ಕೆ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ