ಸಾಲಗಾರ ಸಾವಿಗೀಡಾದರೆ ಪರ್ಸನಲ್ ಲೋನ್‌ಗೆ ಏನಾಗುತ್ತದೆ?

2 ನಿಮಿಷದ ಓದು

ಭಾರತದ ಸಾಲದಾತರ ವಲಯವು ಸಾಲಗಳನ್ನು ರಿಕವರ್‌ ಮಾಡುವ ವಿಷಯದಲ್ಲಿ ನಿರ್ದಿಷ್ಟ ನಿಯಮ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತದೆ. ಸುರಕ್ಷಿತ ಮತ್ತು ಸುರಕ್ಷಿತವಲ್ಲದ ಕ್ರೆಡಿಟ್‌ಗಳಿಗೆ ಈ ನಿಯಮಗಳು ಬದಲಾಗುತ್ತವೆ. ಇನ್ನೊಂದೆಡೆ, ಸಾಲಗಾರರ ಮರಣ ಸಂಭವಿಸಿದಲ್ಲಿ, ನಂತರ ವೈಯಕ್ತಿಕ ಲೋನ್‌ ಏನಾಗುತ್ತದೆ ಎಂಬುದರ ಬಗ್ಗೆ ಅನೇಕ ಕುಟುಂಬಗಳಿಗೆ ತಿಳಿದಿಲ್ಲ.

ಪರ್ಸನಲ್ ಲೋನ್ನಂತಹ ಭದ್ರತೆ ರಹಿತ ಕ್ರೆಡಿಟ್ ರಿಕವರಿ ಪ್ರಕ್ರಿಯೆಯನ್ನು ತಿಳಿಸುವ ಯಾವುದೇ ನಿಯಮಾವಳಿಗಳಿಲ್ಲ. ಆದಾಗ್ಯೂ, ವಿವಿಧ ಸಾಲದಾತರು ಪರ್ಸನಲ್ ಲೋನ್ ಡಾಕ್ಯುಮೆಂಟ್‌ಗಳಲ್ಲಿ ನಮೂದಿಸಿದ ತಮ್ಮ ಷರತ್ತುಗಳನ್ನು ಹೊಂದಿದ್ದಾರೆ, ಒಂದು ವೇಳೆ ವ್ಯಕ್ತಿಯು ಅವಧಿಯ ಮಧ್ಯದಲ್ಲಿ ಸಾವಿಗೀಡಾದರೆ ಪರ್ಸನಲ್ ಲೋನಿಗೆ ಏನು ಮಾಡಬೇಕು.

ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಕೆಳಗಿನ ವಿಭಾಗಗಳನ್ನು ನೋಡಿ!

ಸಾಲದಾತರು ಸಾಲಗಾರರ ಮರಣದ ನಂತರ ವೈಯಕ್ತಿಕ ಲೋನ್‌ ಅನ್ನು ಹೇಗೆ ರಿಕವರ್‌ ಮಾಡುತ್ತಾರೆ?

ಸುರಕ್ಷಿತ ಲೋನ್‌ಗಳಲ್ಲದೇ, ಸಾಲದಾತರು ಬಾಕಿ ಇರುವ ವೈಯಕ್ತಿಕ ಲೋನ್ ಮೊತ್ತವನ್ನು ಮರುಪಾವತಿಸಲು ಮರಣ ಹೊಂದಿದ ಸಾಲಗಾರರ ಕಾನೂನಾತ್ಮಕ ಉತ್ತರಾಧಿಕಾರಿ ಅಥವಾ ಇತರ ಉಳಿದಿರುವ ಸದಸ್ಯರನ್ನು ಕೇಳಲು ಸಾಧ್ಯವಿಲ್ಲ. ಈ ಕ್ರೆಡಿಟ್ ಅಡಮಾನವನ್ನು ಒಳಗೊಂಡಿಲ್ಲವಾದ್ದರಿಂದ, ಸಾಲದಾತರು ಹಣವನ್ನು ಮರುಪಡೆಯಲು ಭೌತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಲೀ ಮತ್ತು ಅದನ್ನು ಮಾರಾಟ ಮಾಡುವುದಾಗಲೀ ಸಾಧ್ಯವಿಲ್ಲ.

ಅಂತಹ ಸಂದರ್ಭಗಳಲ್ಲಿ, ಸಾಲದಾತರು ಸಾಮಾನ್ಯವಾಗಿ ಬಾಕಿ ಉಳಿಕೆಯನ್ನು ರದ್ದುಪಡಿಸಿ, ಅದನ್ನು ಎನ್‌ಪಿಏ ಅಕೌಂಟ್‌ಗೆ ಸೇರಿಸುತ್ತಾರೆ. ಅದೇ ರೀತಿ, ವೈಯಕ್ತಿಕ ಲೋನ್ ಹೊಂದಿರುವವರ ಸಾವು ಸಂಭವಿಸುವ ದುರದೃಷ್ಟಕರ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದನ್ನು ಕುಟುಂಬದ ಸದಸ್ಯರೂ ಕೂಡ ತಿಳಿದುಕೊಂಡಿರಬೇಕು.

ಬೇರೆ ಸನ್ನಿವೇಶದಲ್ಲಿ, ಸಹ-ಅರ್ಜಿದಾರ ಅಥವಾ ಸಹ-ಸಹಿದಾರ ವೈಯಕ್ತಿಕ ಲೋನ್‌ನಲ್ಲಿ ಸೇರಿದ್ದರೆ, ವೈಯಕ್ತಿಕ ಲೋನ್ ಪಡೆದ ಪ್ರಾಥಮಿಕ ಸಾಲಗಾರರ ಮರಣದ ನಂತರ, ಆ ವ್ಯಕ್ತಿಯು ಬಾಕಿ ಮೊತ್ತವನ್ನು ಪಾವತಿಸುವ ಹೊಣೆಯನ್ನು ಹೊರಬೇಕಾಗುತ್ತದೆ.

ಆದಾಗ್ಯೂ, ಮರಣ ಹೊಂದಿದ ಸಾಲಗಾರರ ಕಾನೂನಾತ್ಮಕ ಉತ್ತರಾಧಿಕಾರಿಯನ್ನು ಬಾಕಿ ಮೊತ್ತವನ್ನು ಮರುಪಾವತಿಸಲು ಕಡ್ಡಾಯಗೊಳಿಸುವಂತಹ. ಅಥವಾ ಆತನ/ಆಕೆಯ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವಂತಹ ಯಾವುದೇ ನಿಯಮಗಳಿಲ್ಲ.

ಸಾಲಗಾರ ಮರಣದ ನಂತರ ಬಾಕಿ ಉಳಿದ ವೈಯಕ್ತಿಕ ಲೋನ್‌ ಮರುಪಾವತಿಸುವ ಪ್ರಕ್ರಿಯೆ

ಲೋನ್‌ ತೀರಿಸುವ ಅವಧಿಯ ಮಧ್ಯದಲ್ಲೇ ಸಾಲಗಾರನ ಸಾವು ಸಂಭವಿಸಿದರೆ, ಸಾಲದಾತರು ವೈಯಕ್ತಿಕ ಲೋನ್‌ಗೆ ಏನು ಮಾಡುತ್ತಾರೆ ಎಂಬುದು ಸ್ಪಷ್ಟವಾದ ಮೇಲೆ, ಸಾಲಗಾರರ ಕುಟುಂಬವು ತಾವು ಅನುಸರಿಸಬೇಕಾದ ಪ್ರಕ್ರಿಯೆಯನ್ನು ಕೂಡ ತಿಳಿದುಕೊಳ್ಳಬೇಕು. ಇದು ಒಳಗೊಂಡಿದೆ-

  • ಸಾಲಗಾರರ ಮರಣದ ಬಗ್ಗೆ ಸಾಲದಾತರಿಗೆ ತಿಳಿಸುವುದು
  • ಬಾಕಿ ಉಳಿದ ಲೋನ್ ಮೊತ್ತವನ್ನು ಸೆಟಲ್ ಮಾಡಲು ಸಾಲದಾತರಿಗೆ ಮನವಿ ಮಾಡುವುದು

ಆ ನಂತರ, ಸಾಲದಾತರು ಈ ಕೆಳಗಿನವುಗಳನ್ನು ಪರಿಶೀಲಿಸುತ್ತಾರೆ:

  • ಸಾಲಗಾರರು ವೈಯಕ್ತಿಕ ಲೋನ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೇ ಮತ್ತು ಯಾವುದೇ ಸಹ-ಅರ್ಜಿದಾರರು ಸೇರಿದ್ದರೇ
  • ವೈಯಕ್ತಿಕ ಲೋನ್ ಸಾಲಗಾರರ ಹೆಸರಿನಲ್ಲಿ ಮಾತ್ರ ಇದೆಯೇ, ಸಾಲದಾತರು ಅನಂತರ ಎನ್‌ಪಿಏ ಪ್ರಕ್ರಿಯೆ ಆರಂಭಿಸುತ್ತಾರೆ

ಹಾಗಾಗಿ, ವೈಯಕ್ತಿಕ ಲೋನ್‌ಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಓದಿದ ನಂತರ ಮುಂದುವರೆಯುವುದು ಮುಖ್ಯವಾಗುತ್ತದೆ. ಬಜಾಜ್ ಫಿನ್‌ಸರ್ವ್ 100% ಪಾರದರ್ಶಕತೆಯೊಂದಿಗೆ ವೈಯಕ್ತಿಕ ಲೋನ್‌ ನೀಡುತ್ತದೆ. ಅಪ್ಲೈ ಮಾಡುವ ಮೊದಲು ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ.

ಇನ್ನಷ್ಟು ಓದಿರಿ ಕಡಿಮೆ ಓದಿ