ಪರ್ಸನಲ್ ಲೋನ್‌ಗಳ ಮೂಲಕ ಲಭ್ಯವಿರುವ ತೆರಿಗೆ ಪ್ರಯೋಜನಗಳು ಯಾವುವು?

2 ನಿಮಿಷದ ಓದು

ಪರ್ಸನಲ್ ಲೋನ್ ಮೂಲಕ ತೆರಿಗೆ ಪ್ರಯೋಜನಗಳನ್ನು ಪಡೆಯುವುದು ಕಷ್ಟ, ಆದರೆ ಅಸಾಧ್ಯವಲ್ಲ. ನೀವು ಗೊತ್ತಿರಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.

ಪರ್ಸನಲ್ ಲೋನ್ ತೆರಿಗೆ ಪ್ರಮುಖವಾದವುಗಳು

ವಿಶ್ವಾಸಾರ್ಹ ಮೂಲದಿಂದ ಪರ್ಸನಲ್ ಲೋನ್ ಪಡೆಯಿರಿ. ಫಂಡ್‌ಗಳ ಮೂಲವು ನ್ಯಾಯಸಮ್ಮತವಾಗಿ ಇರದಿದ್ದರೆ, ತೆರಿಗೆ ಅಧಿಕಾರಿಗಳು ಆ ಲೋನ್ ಅನ್ನು ನಿಮ್ಮ ಆದಾಯವೆಂದು ಪರಿಗಣಿಸಬಹುದು ಮತ್ತು ಅದರ ಮೇಲೆ ತೆರಿಗೆ ವಿಧಿಸಬಹುದು. ಈ ಕಾರಣಕ್ಕಾಗಿ, ಬಜಾಜ್ ಫಿನ್‌ಸರ್ವ್‌ನಿಂದ ಲೋನ್ ಪಡೆಯಿರಿ. ಸರಳ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳ ಪ್ರಯೋಜನ ಪಡೆಯಿರಿ ಮತ್ತು ಸಾಕಷ್ಟು ಹಣ ಪಡೆಯಿರಿ.

ಭಾರತದ ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರ, ಪರ್ಸನಲ್ ಲೋನ್‌ ಫಂಡ್‌ಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಅವು ತೆರಿಗೆ ವಿನಾಯಿತಿ ಅಥವಾ ಕಡಿತಗಳಿಗೆ ಅರ್ಹವಾಗಿರುತ್ತವೆ. ನಿಮ್ಮ ತೆರಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸನ್ನಿವೇಶಗಳು ಹೀಗಿವೆ.

  • ವಸತಿ ಆಸ್ತಿಯ ಖರೀದಿ ಅಥವಾ ನಿರ್ಮಾಣಕ್ಕಾಗಿ: ಐಟಿ ಕಾಯ್ದೆಯ ಸೆಕ್ಷನ್ 24 (ಬಿ) ಪ್ರಕಾರ, ನೀವು ವಸತಿ ಆಸ್ತಿಯನ್ನು ಖರೀದಿಸಲು ಅಥವಾ ನಿರ್ಮಿಸಲು ಪರ್ಸನಲ್ ಲೋನ್ ಬಳಸಿದರೆ, ತೆರಿಗೆ ವಿನಾಯಿತಿ ಪಡೆಯುತ್ತೀರಿ. ಬಾಡಿಗೆ ನೀಡಿರುವ ಮನೆಗೆ ಯಾವುದೇ ಮಿತಿ ಇಲ್ಲದಿದ್ದರೂ, ಸ್ವಂತಕ್ಕೆ ಬಳಸುತ್ತಿರುವ ಆಸ್ತಿಗಾಗಿ, ವಿನಾಯಿತಿಯ ಮಿತಿಯು ರೂ. ಲಕ್ಷ ಆಗಿರುತ್ತದೆ.
  • ಬಿಸಿನೆಸ್ ವಿಸ್ತರಣೆಗಾಗಿ: ನೀವು ನಿಮ್ಮ ಆದಾಯ ಹೆಚ್ಚಿಸಲು ಬಿಸಿನೆಸ್ ವಿಸ್ತರಣೆ ಮಾಡುವಾಗ ಪರ್ಸನಲ್ ಲೋನ್ ಬಳಸಬಹುದು. ಇಲ್ಲಿ, ನೀವು ಲೋನ್‌ಗೆ ಪಾವತಿಸುವ ಬಡ್ಡಿಯನ್ನು ತೆರಿಗೆ-ವಿನಾಯಿತಿಗೆ ಒಳಪಡುವ ವೆಚ್ಚವೆಂದು ಕ್ಲೈಮ್ ಮಾಡಬಹುದು.
  • ಬೇರೆ ಸ್ವತ್ತುಗಳ ಖರೀದಿಗೆ:ಒಡವೆಯಂತಹ ಕೆಲವು ಸ್ವತ್ತುಗಳನ್ನು ಪರ್ಸನಲ್ ಲೋನ್ ಮೂಲಕ ಖರೀದಿಸಿದಾಗ ತೆರಿಗೆ ಪ್ರಯೋಜನ ಪಡೆಯಬಹುದು. ಈ ಲೋನ್ ಮೇಲೆ ನೀವು ಪಾವತಿಸುವ ಬಡ್ಡಿಯನ್ನು ಸ್ವತ್ತು ಸ್ವಾಧೀನದ ವೆಚ್ಚವೆಂದು ಪರಿಗಣಿಸಲಾಗುತ್ತದೆ. ನೀವು ಸ್ವತ್ತನ್ನು ಮಾರಾಟ ಮಾಡುವಾಗ ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು. ಇಲ್ಲಿ, ಸ್ವಾಧೀನದ ವೆಚ್ಚವು ಕ್ಯಾಪಿಟಲ್ ಗೇನ್ಸ್ ಅನ್ನು ಕಡಿಮೆ ಮಾಡುತ್ತದೆ.

ನೀವು ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ, ಅಪ್ಲೈ ಮಾಡುವ ಮೊದಲು ಪರ್ಸನಲ್ ಲೋನ್ ಬಡ್ಡಿದರಗಳನ್ನು ಪರಿಶೀಲಿಸಿ ಮತ್ತು ನಮ್ಮ ಬಜಾಜ್ ಫಿನ್‌ಸರ್ವ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ಇಎಂಐಗಳನ್ನು ಲೆಕ್ಕ ಹಾಕಿ.

ಇನ್ನಷ್ಟು ಓದಿರಿ ಕಡಿಮೆ ಓದಿ