ಕ್ರೆಡಿಟ್ ಕಾರ್ಡ್‌ಗಳ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು?

2 ನಿಮಿಷದ ಓದು

ಕ್ರೆಡಿಟ್ ಕಾರ್ಡ್‌ಗಳು ಅಮೂಲ್ಯವಾದ ಹಣಕಾಸಿನ ಸಾಧನಗಳಾಗಿದ್ದು, ಇದು ನಗದು ತೊಂದರೆಯ ಸಮಯದಲ್ಲಿ ತ್ವರಿತ ಕ್ರೆಡಿಟ್‌ಗೆ ಅಕ್ಸೆಸ್ ನೀಡುತ್ತದೆ. ರಿವಾರ್ಡ್‌ಗಳು ಮತ್ತು ಆಫರ್‌ಗಳಂತಹ ಕ್ರೆಡಿಟ್ ಕಾರ್ಡಿನ ವಿವಿಧ ಫೀಚರ್‌ಗಳೊಂದಿಗೆ ನೀವು ನಿಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಬಹುದು. ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಒಂದರಲ್ಲಿ 4 ಕಾರ್ಡ್‌ಗಳ ಶಕ್ತಿಯನ್ನು ಒಳಗೊಂಡಿರುತ್ತದೆ ಮತ್ತು ನಿಮ್ಮ ಖರೀದಿಗಳನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ.

ನೀವು ಒಂದಕ್ಕೆ ಅಪ್ಲೈ ಮಾಡಲು ಬಯಸಿದರೆ, ಗಮನದಲ್ಲಿಟ್ಟುಕೊಳ್ಳಲು ಕೆಲವು ಕ್ರೆಡಿಟ್ ಕಾರ್ಡ್ ಅನುಕೂಲಗಳು ಮತ್ತು ಅನಾನುಕೂಲಗಳು ಇಲ್ಲಿವೆ.

ಕ್ರೆಡಿಟ್ ಕಾರ್ಡಿನ ಅನುಕೂಲಗಳು

 1. ಸುಲಭವಾಗಿ ದೊಡ್ಡ-ಟಿಕೆಟ್ ಖರೀದಿಗಳು
  ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ಹೈ-ಎಂಡ್ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಖರೀದಿಸಬಹುದು ಮತ್ತು ನಂತರ ಸುಲಭವಾಗಿ ಮರುಪಾವತಿ ಮಾಡಬಹುದು. ಕೆಲವು ಕ್ರೆಡಿಟ್ ಕಾರ್ಡ್‌ಗಳು ದೊಡ್ಡ-ಟಿಕೆಟ್ ಖರೀದಿಗಳನ್ನು ಸುಲಭ, ನಿರ್ವಹಿಸಬಹುದಾದ ಇಎಂಐಗಳಾಗಿ ಪರಿವರ್ತಿಸಲು ನಿಮಗೆ ಅನುಮತಿ ನೀಡುತ್ತವೆ.
   
 2. ರಿವಾರ್ಡ್ ಪಾಯಿಂಟ್‌ಗಳ ಬಳಕೆ
  ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಬ್ಯಾಂಕ್ ಸೂಪರ್‌ಕಾರ್ಡ್ ಬಹುತೇಕ ಪ್ರತಿ ಟ್ರಾನ್ಸಾಕ್ಷನ್‌ನೊಂದಿಗೆ ಆಕರ್ಷಕ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ. ವಿಶೇಷ ರಿಯಾಯಿತಿಗಳು, ಗಿಫ್ಟ್ ವೋಚರ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ಈ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.
   
 3. ಕ್ರೆಡಿಟ್ ಸ್ಕೋರ್ ಹೆಚ್ಚಿಸುತ್ತದೆ
  ಗಡುವು ದಿನಾಂಕದೊಳಗೆ ಕ್ರೆಡಿಟ್ ಕಾರ್ಡ್ ಬಿಲ್‌ಗಳ ಪಾವತಿಯು ಪ್ರತಿ ತಿಂಗಳು ನಿಮ್ಮ ಸಿಬಿಲ್ ಸ್ಕೋರನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್, ಭವಿಷ್ಯದಲ್ಲಿ ಸುಲಭವಾಗಿ ಹೆಚ್ಚಿನ ಕ್ರೆಡಿಟ್ ಮಿತಿಯ ಲೋನ್ ಅಥವಾ ಹೊಸ ಕ್ರೆಡಿಟ್ ಕಾರ್ಡಿಗೆ ಅರ್ಹತೆ ಪಡೆಯಲು ನಿಮಗೆ ನೆರವಾಗುತ್ತದೆ.
   
 4. ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ
  ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಎಟಿಎಂಗಳಿಂದ 50 ದಿನಗಳವರೆಗೆ ಬಡ್ಡಿ ರಹಿತ ನಗದು ವಿತ್‌ಡ್ರಾವಲ್‌ಗಳನ್ನು ಮಾಡಲು ನಿಮಗೆ ಅನುಮತಿ ನೀಡುತ್ತದೆ. ಇದು ನಿಮ್ಮ ತುರ್ತು ಅಗತ್ಯಗಳನ್ನು ತಕ್ಷಣವೇ ಪೂರೈಸಲು ಮತ್ತು ನಂತರ ಸುಲಭವಾಗಿ ಮರುಪಾವತಿಸಲು ನಿಮಗೆ ಸಹಾಯ ಮಾಡುತ್ತದೆ.

ಕ್ರೆಡಿಟ್ ಕಾರ್ಡಿನ ಅನಾನುಕೂಲಗಳು

 1. ಹೆಚ್ಚಿನ ಬಡ್ಡಿ ದರಗಳು
  ಗಡುವು ದಿನಾಂಕದೊಳಗೆ ನಿಮ್ಮ ಕ್ರೆಡಿಟ್ ಕಾರ್ಡ್‌ಗಳ ಬಾಕಿಗಳನ್ನು ಪಾವತಿಸಲು ಆಗದಿದ್ದರೆ, ಹೆಚ್ಚಿನ ಬಡ್ಡಿ ದರಕ್ಕೆ ಗುರಿಯಾಗುತ್ತದೆ. ಆದಾಗ್ಯೂ, ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಮೂಲಕ ನೀವು ಹೆಚ್ಚುವರಿ ಬಡ್ಡಿ ಪಾವತಿಸುವುದನ್ನು ತಪ್ಪಿಸಬಹುದು.
   
 2. ಹೆಚ್ಚುವರಿ ಖರ್ಚು ಮಾಡಲು ಕಾರಣವಾಗಬಹುದು
  ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಸುಲಭವು ಹೆಚ್ಚು ಖರ್ಚು ಮಾಡಲು ಕಾರಣವಾಗಬಹುದು. ಇದು ಸಾಲದ ಹೊರೆಯನ್ನು ಸೃಷ್ಟಿಸಬಹುದು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೂಡ ಋಣಾತ್ಮಕವಾಗಿ ಪರಿಣಾಮ ಬೀರಬಹುದು. ಲಭ್ಯವಿರುವ ಒಟ್ಟು ಮಿತಿಯ 50% ಕ್ಕಿಂತ ಕಡಿಮೆ ಇರುವ ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ಮತ್ತು ಇದನ್ನು ತಪ್ಪಿಸಲು ಮರುಪಾವತಿಯ ಬಗ್ಗೆ ಶಿಸ್ತುಬದ್ಧರಾಗಿರಿ.

ಕ್ರೆಡಿಟ್ ಕಾರ್ಡ್ ಬಳಕೆಯೊಂದಿಗೆ ಜವಾಬ್ದಾರರಾಗಿರುವುದರಿಂದ ನೀವು ಕ್ರೆಡಿಟ್ ಕಾರ್ಡಿನ ಪ್ರಯೋಜನಗಳನ್ನು ಆನಂದಿಸಬಹುದು ಮತ್ತು ನಿಮ್ಮ ವೆಚ್ಚಗಳ ಮೇಲೆ ಹೆಚ್ಚು ಉಳಿತಾಯ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳಲಾಗುವ ಪ್ರಶ್ನೆಗಳು

ಕ್ರೆಡಿಟ್ ಕಾರ್ಡ್ ಹೊಂದುವ ಪ್ರಯೋಜನ ಏನು?

ನಿಮಗೆ ಅಗತ್ಯವಿದ್ದಾಗ ಕ್ರೆಡಿಟ್ ಕಾರ್ಡ್‌ಗಳು ಖರ್ಚು ಮಾಡುವ ಅನುಕೂಲವನ್ನು ಒದಗಿಸುತ್ತವೆ. ಇದಲ್ಲದೆ, ನೀವು ವೆಲ್ಕಮ್ ಬೋನಸ್, ರಿವಾರ್ಡ್ ಪಾಯಿಂಟ್‌ಗಳು ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಆನಂದಿಸಬಹುದು. ಕ್ರೆಡಿಟ್ ಬಳಕೆಯು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಆದರೆ ಸಾಲ ಬೆಳೆಯುವುದನ್ನು ತಪ್ಪಿಸಲು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ತೊಂದರೆ ನೀಡುವುದನ್ನು ತಪ್ಪಿಸಲು ಅವುಗಳನ್ನು ಜವಾಬ್ದಾರಿಯಿಂದ ಬಳಸುವುದು ಮುಖ್ಯವಾಗಿದೆ.