ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿನ ಫೀಚರ್‌ಗಳು

  • Airport lounge access

    ಏರ್ಪೋರ್ಟ್ ಲೌಂಜ್ ಅಕ್ಸೆಸ್

    ಒಂದು ವರ್ಷದಲ್ಲಿ ಎಟ್ಟು ಕಾಂಪ್ಲಿಮೆಂಟರಿ ಏರ್ಪೋರ್ಟ್ ಲೌಂಜ್ ಅಕ್ಸೆಸ್ ಪಡೆಯಿರಿ.

  • Free movie tickets

    ಉಚಿತ ಚಲನಚಿತ್ರ ಟಿಕೆಟ್‌ಗಳು

    ಸೂಪರ್‌ಕಾರ್ಡ್‌ನೊಂದಿಗೆ BookMyShow ನಲ್ಲಿ 1+1 ಸಿನಿಮಾ ಟಿಕೆಟ್‌ಗಳನ್ನು ಪಡೆಯಿರಿ.

  • Easy EMI conversion

    ಸುಲಭ EMI ಪರಿವರ್ತನೆ

    ನಿಮ್ಮ ಖರೀದಿಗಳನ್ನು ಕೈಗೆಟಕುವ ಇಎಂಐಗಳಾಗಿ ಪರಿವರ್ತಿಸಿ.

  • Emergency advance*

    ತುರ್ತು ಮುಂಗಡ*

    ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ಪ್ರತಿ ತಿಂಗಳಿಗೆ 1.16% ಬಡ್ಡಿ ದರದೊಂದಿಗೆ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ.

  • Interest-free cash withdrawal

    ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ

    50 ದಿನಗಳವರೆಗೆ ನಗದು ವಿತ್‌ಡ್ರಾವಲ್‌ಗಳ ಮೇಲೆ ಯಾವುದೇ ಬಡ್ಡಿ ಇಲ್ಲ.

  • 5% cashback

    5% ಕ್ಯಾಶ್‌ಬ್ಯಾಕ್

    ಯಾವುದೇ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಯಲ್ಲಿ ಡೌನ್ ಪೇಮೆಂಟ್ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಿರಿ.

  • Pay with points

    ಪಾಯಿಂಟ್‌‌ಗಳೊಂದಿಗೆ ಪಾವತಿಸಿ

    ಇಎಂಐ ನೆಟ್ವರ್ಕ್‌ನಲ್ಲಿ ಡೌನ್ ಪೇಮೆಂಟ್ ಪಾವತಿಸಲು ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿ.

  • Shop more, save more

    ಇನ್ನಷ್ಟು ಶಾಪಿಂಗ್ ಮಾಡಿ, ಹೆಚ್ಚು ಉಳಿತಾಯ ಮಾಡಿ

    ನೀವು ಸೂಪರ್‌ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವಾಗ ರೂ. 55,000+ ವರೆಗೆ ವಾರ್ಷಿಕ ಉಳಿತಾಯ.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ (ಸೂಪರ್‌ಕಾರ್ಡ್) ಕೇವಲ ಕ್ರೆಡಿಟ್ ಕಾರ್ಡಿಗಿಂತ ಹೆಚ್ಚಾಗಿದೆ ಹೆಸರೇ ಸೂಚಿಸುವಂತೆ, ಸೂಪರ್‌ಕಾರ್ಡ್ ನಿಮ್ಮ ನಿಯಮಿತ ಕ್ರೆಡಿಟ್ ಅಗತ್ಯಗಳನ್ನು ನೋಡಿಕೊಳ್ಳುವ ಅದ್ಭುತ ಫೀಚರ್‌ಗಳನ್ನು ಹೊಂದಿದೆ ಮತ್ತು ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಹೊಸತನದಿಂದ ಕೂಡಿದ, ವಿಶಿಷ್ಟ ಫೀಚರ್‌ಗಳು ಸೂಪರ್‌ಕಾರ್ಡ್ ಅನ್ನು ಬೇರೆಲ್ಲಾ ಕ್ರೆಡಿಟ್ ಕಾರ್ಡ್‌‌ಗಳಿಗಿಂತ ಭಿನ್ನವಾಗಿಸುತ್ತವೆ.

90 ದಿನಗಳಿಗೆ 1.16% ನಷ್ಟು ನಾಮಮಾತ್ರದ ಬಡ್ಡಿ ದರದಲ್ಲಿ ನಿಮ್ಮ ಲಭ್ಯವಿರುವ ನಗದು ಮಿತಿಯನ್ನು ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಮೇಲೆ ಲೋನನ್ನು ನೀವು ಪಡೆಯಬಹುದು. ಇದಲ್ಲದೆ, ನೀವು 3 ಸುಲಭ ಇಎಂಐ ಗಳಲ್ಲಿ ಲೋನನ್ನು ಮರುಪಾವತಿ ಮಾಡಬಹುದು. ಇದಲ್ಲದೆ, ನೀವು ಎಟಿಎಂ ಗಳಿಂದ ನಗದನ್ನು ವಿತ್‌ಡ್ರಾ ಮಾಡಬಹುದು ಮತ್ತು ಅದರ ಮೇಲೆ 50 ದಿನಗಳವರೆಗೆ ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಬಹುದು. ಅಂತಹ ಸಂದರ್ಭಗಳಲ್ಲಿ ಕೇವಲ 2.5% ಫ್ಲಾಟ್ ಪ್ರಕ್ರಿಯಾ ಶುಲ್ಕವನ್ನು ವಿಧಿಸಲಾಗುತ್ತದೆ. ಅಂತಿಮವಾಗಿ, ನೀವು ಖರೀದಿಗಳನ್ನು ಮಾಡಬಹುದು ಮತ್ತು ನಿಮ್ಮ ವೆಚ್ಚಗಳನ್ನು ಬಜೆಟ್-ಸ್ನೇಹಿ ಇಎಂಐ ಗಳಾಗಿ ಪರಿವರ್ತಿಸಬಹುದು. 1 ರಲ್ಲಿ 4 ಕಾರ್ಡ್‌ಗಳ ಪ್ರಯೋಜನಗಳನ್ನು ನಿಮಗೆ ಒದಗಿಸುತ್ತಿದ್ದೇವೆ, ಸೂಪರ್‌ಕಾರ್ಡ್ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ಒಂದಾಗಿದೆ.

*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    21 ರಿಂದ 70 ವರ್ಷಗಳು

  • Employment

    ಉದ್ಯೋಗ

    ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

  • Credit score

    ಕ್ರೆಡಿಟ್ ಸ್ಕೋರ್

    720 ಅಥವಾ ಅದಕ್ಕಿಂತ ಹೆಚ್ಚು

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ಅರ್ಹತಾ ಮಾನದಂಡಗಳು ಯಾವುವು?

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:

  • ವಯಸ್ಸು 21 ರಿಂದ 70 ವರ್ಷಗಳ ನಡುವೆ ಇರಬೇಕು
  • ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
  • ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 720 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
  • ವಸತಿ ವಿಳಾಸ ದೇಶದ ಸೂಪರ್‌‌ಕಾರ್ಡ್ ಲೈವ್ ಲೊಕೇಶನ್‌‌ಗಳ ಒಳಗೆ ಇರಬೇಕು
  • ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರಾಗಿರಬೇಕು ಮತ್ತು ಬಜಾಜ್ ಫಿನ್‌ಸರ್ವ್‌ EMI ನೆಟ್‌ವರ್ಕ್ ಕಾರ್ಡ್‌ಹೋಲ್ಡರ್‌ ಆಗಿರಬೇಕು

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು 3 ಬೇಕಾದ ಪ್ರಮುಖ ಡಾಕ್ಯುಮೆಂಟ್‌ಗಳು - ಫೋಟೋ, ಗುರುತಿನ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ನೀವು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ಹೇಗೆ?

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ. ಕ್ರೆಡಿಟ್ ಕಾರ್ಡ್ ಪಡೆಯಲು, ಕೆಲವು ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಿ.

  1. 1 ಕ್ಲಿಕ್ ಮಾಡಿ ಇಲ್ಲಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  2. 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
  3. 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
  4. 4 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್: ಫೀಸ್ ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ 16 ವಿವಿಧ ರೂಪಾಂತರಗಳಲ್ಲಿ ಬರುತ್ತದೆ, ಪ್ರತಿಯೊಂದು ಅನೇಕ ಲಾಭಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಈ ಪ್ರತಿಯೊಂದು ರೂಪಾಂತರಗಳು ವಿಭಿನ್ನ ಜಾಯ್ನಿಂಗ್ ಮತ್ತು ವಾರ್ಷಿಕ ಶುಲ್ಕವನ್ನು ಹೊಂದಿವೆ. ಪ್ರತಿ ಕ್ರೆಡಿಟ್ ಕಾರ್ಡ್ ರೂಪಾಂತರವನ್ನು ವಿವಿಧ ಅವಶ್ಯಕತೆಗಳಿಗೆ ಸರಿಹೊಂದುವಂತೆ ರೂಪಿಸಲಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಆಯ್ಕೆಗಳನ್ನು ಹುಡುಕಬಹುದು ಮತ್ತು ಶುಲ್ಕದ ರಚನೆಯನ್ನು ಅರ್ಥಮಾಡಿಕೊಳ್ಳಬಹುದು.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಬಳಸುವ ಅನುಕೂಲಗಳು ಸಾಕಷ್ಟಿವೆ. ನಿಮ್ಮ ಆಯ್ಕೆಯ ಯಾವುದೇ ಉತ್ಪನ್ನವನ್ನು ಕ್ರೆಡಿಟ್ ಮೇಲೆ ಖರೀದಿಸಲು ನಿಮಗೆ ಅನುಮತಿ ನೀಡುವುದರ ಜೊತೆಗೆ, ಇದು ಸುಲಭ ಮಾಸಿಕ ಕಂತುಗಳಾಗಿ (ಇಎಂಐ ಗಳು) ಪರಿವರ್ತಿಸುವ ಅಕ್ಸೆಸ್ ನೀಡುತ್ತದೆ. ನಿಮ್ಮ ಲಭ್ಯವಿರುವ ಕ್ರೆಡಿಟ್ ಮಿತಿಯನ್ನು ಅತ್ಯಲ್ಪ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಆಗಿ ಪರಿವರ್ತಿಸುವ ಆಯ್ಕೆಯನ್ನು ಪಡೆಯುತ್ತೀರಿ ಮತ್ತು ಯಾವುದೇ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಲ್ಲಿ ಮಾಡಿದ ಡೌನ್ ಪೇಮೆಂಟ್ ಮೇಲೆ 5% ಕ್ಯಾಶ್‌ಬ್ಯಾಕನ್ನು ಕೂಡ ನೀವು ಪಡೆಯುತ್ತೀರಿ. ಯಾವುದೇ ಎಟಿಎಂಗಳಿಂದ 50 ದಿನಗಳವರೆಗಿನ ಬಡ್ಡಿ ರಹಿತ ನಗದು ವಿತ್‌ಡ್ರಾವಲ್ ಇದರ ಇನ್ನೊಂದು ಪ್ರಯೋಜನವಾಗಿದೆ.

ಆದಾಗ್ಯೂ, ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ನೀವು ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳು ಮತ್ತು ದಂಡ ಶುಲ್ಕಗಳನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಪಾವತಿ ಗಡುವು ದಿನಾಂಕವನ್ನು ತಪ್ಪಿಸಿದರೆ, ಹೆಚ್ಚುವರಿ ಬಡ್ಡಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

ಟಾಪ್ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿ

ಟಾಪ್ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಈ ರೀತಿಯಾಗಿವೆ:

ಇಲ್ಲಿ ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

RBL ಬ್ಯಾಂಕಿನಿಂದ ಅತ್ಯುತ್ತಮ ಕ್ರೆಡಿಟ್ ಕಾರ್ಡ್ ಯಾವುದು?

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅತ್ಯುತ್ತಮ RBL ಕ್ರೆಡಿಟ್ ಕಾರ್ಡ್ ಆಗಿದೆ. ಈ ಸೂಪರ್‌ಕಾರ್ಡ್ ನಾಲ್ಕು ವಿವಿಧ ಕಾರ್ಡ್‌ಗಳ ಶಕ್ತಿಯೊಂದಿಗೆ ಬರುತ್ತದೆ. ನೀವು ನಿಯಮಿತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ಇಎಂಐ ಕಾರ್ಡ್ ಅಥವಾ ಲೋನ್ ಕಾರ್ಡ್ ಆಗಿ ಬಳಸಬಹುದು.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆಯುವ ಪ್ರಕ್ರಿಯೆ ಏನು?

ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಬಹುದು:

  • ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರನ್ನು ಒದಗಿಸಿ
  • ಒಟಿಪಿ ನಮೂದಿಸಿ ಮತ್ತು ಯಾವುದೇ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್‌ಗಳನ್ನು ಪರಿಶೀಲಿಸಿ
  • ನೀವು ಆಫರನ್ನು ಪಡೆದಿದ್ದರೆ, ಅದನ್ನು ಬಳಸಿ
  • ನಿಮ್ಮ ಬಳಿ ಯಾವುದೇ ಆಫರ್ ಇಲ್ಲದಿದ್ದರೆ, ನಿಮ್ಮ ವಿವರಗಳನ್ನು ಸಲ್ಲಿಸಿ
  • ನಮ್ಮ ಪ್ರತಿನಿಧಿಯಿಂದ ನೀವು ಕರೆಯನ್ನು ಸ್ವೀಕರಿಸುತ್ತೀರಿ
  • ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ
ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದುವ ಪ್ರಯೋಜನಗಳು ಯಾವುವು?

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ. ಅವುಗಳು ಇದನ್ನು ಒಳಗೊಂಡಿದೆ:

  • ಬಹುತೇಕ ಪ್ರತಿ ಯಶಸ್ವಿ ಟ್ರಾನ್ಸಾಕ್ಷನ್ ನಂತರ ಇದು ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳನ್ನು ವಿಸ್ತರಿಸುತ್ತದೆ
  • ನೀವು ಭಾರತದಾದ್ಯಂತ ಯಾವುದೇ ಎಟಿಎಂ ನಿಂದ 50 ದಿನಗಳವರೆಗೆ ಬಡ್ಡಿ ರಹಿತ ನಗದು ವಿತ್‌ಡ್ರಾ ಮಾಡಬಹುದು. ವಿತ್‌ಡ್ರಾವಲ್ ಮೇಲೆ 2.5% ಪ್ರಕ್ರಿಯಾ ಶುಲ್ಕ ಅನ್ವಯವಾಗುತ್ತದೆ
  • ಲಭ್ಯವಿರುವ ನಗದು ಮಿತಿಯ ಮೇಲೆ ನೀವು ಪರ್ಸನಲ್ ಲೋನ್‌ಗಳನ್ನು ಪಡೆಯಬಹುದು. ಲೋನ್ ಮೇಲೆ ವಿಧಿಸುವ ಬಡ್ಡಿಯು ಯಾವುದೇ ಪ್ರಕ್ರಿಯಾ ಶುಲ್ಕವಿಲ್ಲದೆ ಪ್ರತಿ ತಿಂಗಳಿಗೆ 1.16% ರಷ್ಟು ಕಡಿಮೆ ಇರುತ್ತದೆ
  • ನೀವು ವಾರ್ಷಿಕವಾಗಿ ರೂ. 55,000 ವರೆಗೆ ಉಳಿತಾಯ ಮಾಡಬಹುದು
  • ಇದರಿಂದ ರೂ. 2,500 ಕ್ಕಿಂತ ಹೆಚ್ಚಿನ ಬಿಲ್‌ಗಳನ್ನು ಸುಲಭ, ಕೈಗೆಟಕುವ ಇಎಂಐಗಳಾಗಿ ಪರಿವರ್ತಿಸಬಹುದು
ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ?

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅನ್ನು ಆ್ಯಕ್ಟಿವೇಟ್ ಮಾಡಲು, ನೀವು ಪಿನ್ ಜನರೇಟ್ ಮಾಡಬೇಕು. ನೀವು ನಿಮ್ಮ ಪಿನ್ ಅನ್ನು ಮೂರು ವಿಭಿನ್ನ ರೀತಿಯಲ್ಲಿ ಪಡೆಯಬಹುದು.

  • ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ
  • ನಿಮ್ಮ ಕ್ರೆಡಿಟ್ ಕಾರ್ಡಿನ ಹಿಂಭಾಗದಲ್ಲಿರುವ ಗ್ರಾಹಕ ಸಹಾಯವಾಣಿಯನ್ನು ಡಯಲ್ ಮಾಡುವ ಮೂಲಕ
  • Android ಸ್ಮಾರ್ಟ್‌ಫೋನ್‌ನಲ್ಲಿ Google Play Store ನಿಂದ ಅಥವಾ iOS ಡಿವೈಸಿನಲ್ಲಿ Apple's App Store ಮೂಲಕ RBL ಮೈಕಾರ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ
ನನ್ನ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ನಾನು ಎಲ್ಲಿ ಬಳಸಬಹುದು?

ಆನ್ಲೈನ್ ಅಥವಾ ಆಫ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ನೀವು ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡನ್ನು ಬಳಸಬಹುದು. ಇದಲ್ಲದೆ, ಐವತ್ತು ದಿನಗಳವರೆಗೆ ಬಡ್ಡಿಯನ್ನು ಪಾವತಿಸದೆ ಯಾವುದೇ ಎಟಿಎಂ ನಿಂದ ಹಣವನ್ನು ವಿತ್‌ಡ್ರಾ ಮಾಡಲು ನೀವು ಇದನ್ನು ಬಳಸಬಹುದು. ಅಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ನಿಮಗೆ ತುರ್ತು ಹಣದ ಅಗತ್ಯವಿದ್ದರೆ, ನೀವು ಪ್ರತಿ ತಿಂಗಳಿಗೆ 1.16% ರಷ್ಟು ಕಡಿಮೆ ಬಡ್ಡಿ ದರದೊಂದಿಗೆ ನಿಮ್ಮ ನಗದು ಮಿತಿಯಲ್ಲಿ ಪರ್ಸನಲ್ ಲೋನನ್ನು ಪಡೆಯಬಹುದು.

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಬಗೆಗಳು ಯಾವುವು?

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಜೀವನಶೈಲಿ ಮತ್ತು ಪ್ರಯಾಣ, ರಿವಾರ್ಡ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಬಿಸಿನೆಸ್ ಸೇರಿದಂತೆ ವಿವಿಧ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸುತ್ತವೆ. ಅದರ ಕೆಲವು ಜನಪ್ರಿಯ ಕಾರ್ಡ್‌ಗಳು, ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಬ್ಯಾಂಕ್ ಬಿಂಜ್ ಸೂಪರ್‌ಕಾರ್ಡ್, ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಬ್ಯಾಂಕ್ ಪ್ಲಾಟಿನಂ ಚಾಯ್ಸ್ ಸೂಪರ್‌ಕಾರ್ಡ್, ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಬ್ಯಾಂಕ್ ಪ್ಲಾಟಿನಂ ಪ್ಲಸ್ ಸೂಪರ್‌ಕಾರ್ಡ್, ಪ್ಲಾಟಿನಂ ಶಾಪ್‌ಡೈಲಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿವೆ. ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ನಲ್ಲಿ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್‌ಗಳ ಸಂಪೂರ್ಣ ಶ್ರೇಣಿಯನ್ನು ನೋಡಿ.

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಬ್ಯಾಂಕ್ ಸೂಪರ್‌ಕಾರ್ಡಿನ ಶ್ರೇಣಿ ಉತ್ತಮವಾಗಿದೆಯೇ?

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್‌ ಸೂಪರ್‌ಕಾರ್ಡ್ ಶ್ರೇಣಿಯು 12x ವರೆಗಿನ ರಿವಾರ್ಡ್ ಪಾಯಿಂಟ್‌ಗಳು, ಹೆಚ್ಚಿನ ವೆಲ್ಕಮ್ ಬೋನಸ್ ಮತ್ತು ಪೂರಕ ಪ್ರಯೋಜನಗಳನ್ನು ಬಯಸುವ ವ್ಯಕ್ತಿಗಳಿಗೆ ಉತ್ತಮ ಆಯ್ಕೆಯಾಗಿದೆ. ಈ ಶ್ರೇಣಿಯ ಅಡಿಯಲ್ಲಿನ ಹೆಚ್ಚಿನ ಕಾರ್ಡ್‌ಗಳು, ಖರೀದಿಗಳ ಮೇಲೆ ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿಗಳು, ಏರ್ಪೋರ್ಟ್ ಲೌಂಜ್ ಅಕ್ಸೆಸ್, ಕ್ಯಾಶ್‌ಬ್ಯಾಕ್‌ಗಳು, ಇಂಧನ ಮೇಲ್ತೆರಿಗೆ ಮನ್ನಾ ಮತ್ತು ಇನ್ನೂ ಹೆಚ್ಚಿನ ಫೀಚರ್‌ಗಳನ್ನು ಒದಗಿಸುತ್ತವೆ. ನೀವು ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವ ಮೊದಲು, ಅದು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತದೆಯೇ ಎಂಬುದನ್ನು ನಿರ್ಧರಿಸಲು ಯಾವಾಗಲೂ ಕಾರ್ಡಿನ ನಿಯಮಗಳು ಮತ್ತು ಶುಲ್ಕಗಳನ್ನು ಪರಿಶೀಲಿಸುವುದು ಮುಖ್ಯವಾಗಿದೆ.

ಇನ್ನಷ್ಟು ಓದಿರಿ ಕಡಿಮೆ ಓದಿ