ಡಾಕ್ಟರ್ಸ್ ಸೂಪರ್‌ಕಾರ್ಡಿನ ಫೀಚರ್‌ಗಳು

  • Professional indemnity cover

    ವೃತ್ತಿಪರ ನಷ್ಟ ಪರಿಹಾರ ಕವರ್

    ರೂ. 20 ಲಕ್ಷದವರೆಗಿನ ಪ್ರೊಫೆಶನಲ್ ಇಂಡೆಮ್ನಿಟಿ ಇನ್ಶೂರೆನ್ಸ್ ಕವರ್ (ಕಾರ್ಡ್ ನೀಡಿದ 20 ದಿನಗಳ ಒಳಗೆ ನೀಡಲಾಗುತ್ತದೆ)

  • Welcome rewards

    ವೆಲ್ಕಮ್ ರಿವಾರ್ಡ್‌ಗಳು

    ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿದರೆ ರೂ. 1,000 ಗಿಫ್ಟ್ ವೌಚರ್ ಪಡೆಯಿರಿ

  • Milestone bonuses

    ಮೈಲ್‌ಸ್ಟೋನ್ ಬೋನಸ್‌ಗಳು

    ಒಂದು ವರ್ಷದಲ್ಲಿ ರೂ. 1 ಲಕ್ಷ ದಾಟಿದ ಖರ್ಚುಗಳ ಮೇಲೆ ರೂ. 2,000 ಗಿಫ್ಟ್ ವೌಚರ್ ಪಡೆಯಿರಿ, ರೂ. 1.5 ಲಕ್ಷ ಮತ್ತು 2 ಲಕ್ಷದ ಖರ್ಚುಗಳ ಮೇಲೆ ಹೆಚ್ಚುವರಿ ರೂ. 1000 ಗಿಫ್ಟ್ ವೌಚರ್ ಪಡೆಯಿರಿ

  • Offer on movie tickets

    ಸಿನಿಮಾ ಟಿಕೆಟ್‌ಗಳ ಮೇಲೆ ಆಫರ್

    BookMyShow ನಲ್ಲಿ 1+1 ಚಲನಚಿತ್ರದ ಟಿಕೆಟ್‌ಗಳನ್ನು ಪಡೆಯಿರಿ (ತಿಂಗಳ ಯಾವುದೇ ದಿನ, ರೂ. 200 ವರೆಗೆ)

  • Fuel surcharge waiver

    ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ

    ತಿಂಗಳಿಗೆ ರೂ. 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ

  • Airport lounge access

    ಏರ್ಪೋರ್ಟ್ ಲೌಂಜ್ ಅಕ್ಸೆಸ್

    ಒಂದು ವರ್ಷದಲ್ಲಿ 4 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲೌಂಜ್ ಅಕ್ಸೆಸ್

  • Annual fee waiver

    ವಾರ್ಷಿಕ ಶುಲ್ಕ ಮನ್ನಾ

    ಒಂದು ವರ್ಷದಲ್ಲಿ ರೂ. 1 ಲಕ್ಷ ಖರ್ಚು ಮಾಡಿ ಮತ್ತು ಮುಂದಿನ ವರ್ಷದ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ

  • Rewards on regular spends

    ನಿಯಮಿತ ಖರ್ಚುಗಳ ಮೇಲೆ ರಿವಾರ್ಡ್‌ಗಳು

    ಶಾಪಿಂಗ್‌ನಲ್ಲಿ ಖರ್ಚು ಮಾಡಿದ ಪ್ರತಿ ರೂ. 100 ಮೇಲೆ 1 ರಿವಾರ್ಡ್ ಪಾಯಿಂಟ್ ಪಡೆಯಿರಿ

  • Rewards on online spends

    ಆನ್ಲೈನ್ ಖರ್ಚುಗಳ ಮೇಲೆ ರಿವಾರ್ಡ್‌ಗಳು

    ಶಿಕ್ಷಣ, ಇನ್ಶೂರೆನ್ಸ್, ಯುಟಿಲಿಟಿಗಳು (Bills2Pay ಸೇರಿದಂತೆ), ಬಾಡಿಗೆ ಪಾವತಿಗಳು ಮತ್ತು ವಾಲೆಟ್ ಲೋಡ್‌ಗಳ ಮೇಲೆ ಮಾಡಿದ ಖರೀದಿಗಳನ್ನು ಹೊರತುಪಡಿಸಿ ಆನ್ಲೈನ್ ಖರ್ಚುಗಳ ಮೇಲೆ 2x ರಿವಾರ್ಡ್ ಪಾಯಿಂಟ್‌ಗಳು

  • Annual savings

    ವಾರ್ಷಿಕ ಉಳಿತಾಯಗಳು

    ವಾರ್ಷಿಕವಾಗಿ ರೂ. 21,000 ವರೆಗಿನ ಉಳಿತಾಯ

ಬಜಾಜ್ ಫಿನ್‌ಸರ್ವ್ ಮತ್ತು RBL ಬ್ಯಾಂಕ್, ಡಾಕ್ಟರ್‌ಗಳ ಸೂಪರ್ ಕಾರ್ಡ್ ಪ್ರಸ್ತುತಪಡಿಸುತ್ತಿವೆ. ಇದು ವಿಶೇಷವಾಗಿ ವೈದ್ಯಕೀಯ ವೃತ್ತಿಯವರಿಗೆ ವಿನ್ಯಾಸಗೊಳಿಸಲಾದ ಕ್ರೆಡಿಟ್ ಕಾರ್ಡ್ ಆಗಿದೆ ಮತ್ತು ಹಲವಾರು ಪ್ರಯೋಜನಗಳನ್ನು ಹೊಂದಿದೆ.

ವೃತ್ತಿಪರ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಟ್ರಾನ್ಸಾಕ್ಷನ್ ನಡೆಸಲು ಇದು ಗಿಫ್ಟ್ ವೌಚರ್‌ಗಳು ಮತ್ತು ರಿವಾರ್ಡ್ ಪ್ರೋಗ್ರಾಮ್ ಪ್ರಯೋಜನ ಮತ್ತು ಇನ್ನೂ ಹೆಚ್ಚು ಆಕರ್ಷಕವಾದ ಪ್ರ್ಯೋಜನಗಳನ್ನು ಒದಗಿಸುತ್ತದೆ. ವಾರ್ಷಿಕವಾಗಿ ರೂ. 1 ಲಕ್ಷ ಖರ್ಚು ಮಾಡಿದಾಗ, ನೀವು ರೂ. 1,000 ಮೌಲ್ಯದ ವೌಚರ್ ಮತ್ತು ರೂ. 1.5 ಲಕ್ಷದಿಂದ ರೂ. 2 ಲಕ್ಷದವರೆಗಿನ ಹೆಚ್ಚುವರಿ ಖರ್ಚುಗಳ ಮೇಲೆ ರೂ. 1,000 ಮೌಲ್ಯದ ಹೆಚ್ಚುವರಿ ವೌಚರ್‌ಗಳನ್ನು ಪಡೆಯುತ್ತೀರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    25 ರಿಂದ 65 ವರ್ಷಗಳು

  • Income source

    ಆದಾಯದ ಮೂಲ

    ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

  • Credit score

    ಕ್ರೆಡಿಟ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆಯ ಮಾನದಂಡಗಳೇನು?

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:

  • ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
  • ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
  • ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
  • ವಸತಿ ವಿಳಾಸ ದೇಶದ ಸೂಪರ್‌‌ಕಾರ್ಡ್ ಲೈವ್ ಲೊಕೇಶನ್‌‌ಗಳ ಒಳಗೆ ಇರಬೇಕು
  • ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಮತ್ತು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಹೋಲ್ಡರ್ ಆಗಿರಬೇಕು

ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಕ್ರೆಡಿಟ್ ಕಾರ್ಡ್ ಪಡೆಯಲು 3 ಪ್ರಾಥಮಿಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:

  1. 1 ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  2. 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
  3. 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
  4. 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
  5. 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
  6. 6 ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಫೀಗಳು ಮತ್ತು ಶುಲ್ಕಗಳು

ಈ ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಸೇರ್ಪಡೆ ಶುಲ್ಕಗಳು

ರೂ. 999 + GST

ವಾರ್ಷಿಕ ಶುಲ್ಕ

ರೂ. 999 + GST

ಆ್ಯಡ್-ಆನ್ ಕಾರ್ಡ್ ಫೀಸ್

ಎನ್/ಎ

ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್**

3.5% + GST

ಬ್ರಾಂಚ್‌ಗಳಲ್ಲಿ ನಗದು ಪಾವತಿ

RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ರೂ. 250 + ಜಿಎಸ್‌ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ.

ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ

IRCTC ಸೇವಾ ಶುಲ್ಕಗಳು* + ಪೇಮೆಂಟ್ ಗೇಟ್‌ವೇ ಟ್ರಾನ್ಸಾಕ್ಷನ್ ಶುಲ್ಕ 1.8% ವರೆಗೆ + ಟಿಕೆಟ್ ಮೊತ್ತದ ಜಿಎಸ್‌ಟಿ + IRCTC ಸೇವಾ ಶುಲ್ಕ].

ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಿದ ಟ್ರಾನ್ಸಾಕ್ಷನ್ನಿಗಾಗಿ^

ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್‌ಟಿ ಸರ್ಚಾರ್ಜ್ ಅಥವಾ ರೂ. 10 + ಜಿಎಸ್‌ಟಿ, ಯಾವುದು ಅಧಿಕವೋ ಅದು

ರಿವಾರ್ಡ್ ರಿಡೆಂಪ್ಶನ್ ಫೀಸ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್‌ಗಳಲ್ಲಿ ಮಾಡಿದ ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ರೂ. 99 + ಜಿಎಸ್‌ಟಿ ರಿವಾರ್ಡ್ ರಿಡೆಂಪ್ಶನ್ ಶುಲ್ಕವನ್ನು ವಿಧಿಸಲಾಗುತ್ತದೆ. ಜೂನ್ 01, 2019. ನಿಯಮ ಮತ್ತು ಷರತ್ತು ಅನ್ವಯ

ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ

ನಗದು ಮೊತ್ತದ 2.5% (ಕನಿಷ್ಠ ರೂ. 500 + ಜಿಎಸ್‌ಟಿ) *ಜುಲೈ'20 ರಿಂದ ಅನ್ವಯವಾಗುತ್ತದೆ

ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ

ಪ್ರತಿ ತಿಂಗಳಿಗೆ 3.99% ವರೆಗೆ + ಜಿಎಸ್‌ಟಿ ಅಥವಾ ವಾರ್ಷಿಕ 47.88% + ಜಿಎಸ್‌ಟಿ

ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಗಡುವು ಮೀರಿದ ಬಡ್ಡಿ

3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40%

ಗಡುವು ಮೀರಿದ ದಂಡ/ತಡ ಪಾವತಿ

ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ. ರೂ. 1,500)

ಮಿತಿ ದಾಟಿದ್ದಕ್ಕೆ ದಂಡ

ರೂ. 600 + GST

ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು)

ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88% ವರೆಗೆ + ಜಿಎಸ್‌ಟಿ)

ಕಾಲ್-ಎ-ಡ್ರಾಫ್ಟ್ ಶುಲ್ಕ

ಡ್ರಾಫ್ಟ್ ಮೊತ್ತದ 2.5% + ಜಿಎಸ್‌ಟಿ (ಕನಿಷ್ಠ ರೂ. 300 + ಜಿಎಸ್‌ಟಿ)

ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ)

ಇಲ್ಲ

ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಇಲ್ಲ

ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ

ರೂ. 100 + GST

ಔಟ್ ಸ್ಟೇಷನ್ ಚೆಕ್ ಶುಲ್ಕ

ರೂ. 100 + GST

ಚೆಕ್ ರಿಟರ್ನ್/ ಡಿಸ್‌ಹಾನರ್ ಶುಲ್ಕ ಆಟೋ-ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಲ್ಲ

ರೂ. 500 + GST

ಪರ್ಸನಲ್ ಇಂಡೆಮ್ನಿಟಿ ಇನ್ಶೂರೆನ್ಸ್* + ವಾರ್ಷಿಕ ಶುಲ್ಕ

ರೂ. 4,999 + GST

 

ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಫ್ಯೂಯಲ್ ಟ್ರಾನ್ಸಾಕ್ಷನ್‌ಗಳ ಮೇಲೆ ಮೇಲ್ತೆರಿಗೆ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡಿಗೆ ಗರಿಷ್ಠ ಸರ್‌ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡಿಗೆ ರೂ. 150.
* ಮೊದಲ ವರ್ಷಕ್ಕೆ ಎಲ್ಲಾ ಗ್ರಾಹಕರಿಗೆ ಪರ್ಸನಲ್ ಇಂಡೆಮ್ನಿಟಿ ಇನ್ಶೂರೆನ್ಸ್ ಕವರ್ ಉಚಿತವಾಗಿ ಒದಗಿಸಲಾಗುತ್ತದೆ. ಮೊದಲ ವರ್ಷದಲ್ಲಿ ರೂ. 3.5 ಲಕ್ಷ ಖರ್ಚಿನ ಮಾನದಂಡಗಳನ್ನು ಪೂರೈಸದಿದ್ದರೆ ಎರಡನೇ ವರ್ಷದಲ್ಲಿ ಗ್ರಾಹಕರ ಒಪ್ಪಿಗೆಯ ನಂತರ ಮಾತ್ರ ಶುಲ್ಕಗಳನ್ನು ವಿಧಿಸಲಾಗುತ್ತದೆ.
** ವಿವರಗಳಿಗಾಗಿ IRCTC ವೆಬ್ಸೈಟ್ ನೋಡಿ.
*** ವ್ಯಾಪಾರಿಯು ಭಾರತದಲ್ಲಿದ್ದರೂ ಸಹ ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿನ ವಹಿವಾಟುಗಳು ಕ್ರಾಸ್ ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಈ ಸೂಪರ್‌ಕಾರ್ಡ್‌ಗೆ ಸೇರ್ಪಡೆ ಶುಲ್ಕ ಎಷ್ಟು?

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಡಾಕ್ಟರ್ಸ್ ಸೂಪರ್ ಕಾರ್ಡಿಗೆ ಸೇರ್ಪಡೆ ಶುಲ್ಕ ರೂ. 999. ಆದಾಗ್ಯೂ, 2ನೇ ವರ್ಷಕ್ಕೆ ರೂ. 999 ವಾರ್ಷಿಕ ಶುಲ್ಕವನ್ನು ರೂ. 1,00,000 ವಾರ್ಷಿಕ ಖರ್ಚುಗಳ ಮೇಲೆ ಮನ್ನಾ ಮಾಡಲಾಗುತ್ತದೆ.

ನಾನು ವೆಲ್ಕಮ್ ಗಿಫ್ಟ್ ಅನ್ನು ಹೇಗೆ ಗಳಿಸಬಹುದು?

ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2000 ಅಥವಾ ಅದಕ್ಕಿಂತ ಹೆಚ್ಚಿನ ಖರ್ಚುಗಳ ಮೇಲೆ ರೂ. 1,000 ಮೌಲ್ಯದ ವೆಲ್ಕಮ್ ಗಿಫ್ಟ್ ವೌಚರ್‌ಗಳನ್ನು ಪಡೆಯಿರಿ.

ನಾನ್-ಮೆಡಿಕಲ್ ಗ್ರಾಹಕರು ಡಾಕ್ಟರ್ಸ್ ಸೂಪರ್ ಕಾರ್ಡಿಗೆ ಅಪ್ಲೈ ಮಾಡಬಹುದೇ?

ನಾನ್-ಮೆಡಿಕಲ್ ವೃತ್ತಿಪರರು ಡಾಕ್ಟರ್ಸ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಲು ಸಾಧ್ಯವಿಲ್ಲ. ಡಾಕ್ಟರ್ಸ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಲು ಅರ್ಜಿದಾರರು ಭಾರತೀಯ ವೈದ್ಯಕೀಯ ಮಂಡಳಿಯಿಂದ ಮಾನ್ಯ ಪ್ರಮಾಣೀಕರಣ ಮತ್ತು ನೋಂದಣಿ ಸಂಖ್ಯೆಯನ್ನು ಹೊಂದಿರಬೇಕು.

ಈ ಕಾರ್ಡ್ ಮೇಲಿನ ವಿಶೇಷ ಪ್ರಯೋಜನಗಳು ಯಾವುವು?

ಕಾರ್ಡ್‌ಹೋಲ್ಡರ್‌ಗಳು ರೂ. 20,00,000 ವರೆಗಿನ ಪ್ರೊಫೆಶನಲ್ ಇಂಡೆಮ್ನಿಟಿ ಇನ್ಶೂರೆನ್ಸ್ ಪಡೆಯುತ್ತಾರೆ, ಇದು ಕಾನೂನು ಮತ್ತು ರಕ್ಷಣಾ ವೆಚ್ಚದ ಮರುಪಾವತಿ, ಸರಿಪಡಿಸುವ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳಿಗೆ ಕವರ್, ಡಾಕ್ಯುಮೆಂಟ್‌ಗಳ ನಷ್ಟ ಮತ್ತು ಇನ್ನೂ ಹೆಚ್ಚಿನವುಗಳನ್ನು ಕವರ್ ಮಾಡುತ್ತದೆ.

ಸೂಪರ್‌ಕಾರ್ಡ್ ಎಂದರೇನು?

ಸೂಪರ್‌ಕಾರ್ಡ್ ಎಂಬುದು RBL ಬ್ಯಾಂಕ್ ಸಹಯೋಗದೊಂದಿಗೆ ಸಹ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡ್ ಆಗಿದೆ. ಕಾರ್ಡ್‌ನ ಸೂಪರ್ ಫೀಚರ್‌ಗಳಿಂದಾಗಿ ಇದನ್ನು ಸೂಪರ್ ಕಾರ್ಡ್ ಎಂದು ಕರೆಯಲಾಗುತ್ತದೆ. ಈ ಹೊಸತನದ ಕಾರ್ಡ್ ನಿಮ್ಮ ದೈನಂದಿನ/ಮಾಸಿಕ ಕ್ರೆಡಿಟ್ ಅಗತ್ಯಗಳನ್ನು ನೋಡಿಕೊಳ್ಳುತ್ತದೆ ಮತ್ತು ತುರ್ತು ನಗದು ಅವಶ್ಯಕತೆಗಳು, ರಿಯಾಯಿತಿಗಳು/ಕ್ಯಾಶ್‌ಬ್ಯಾಕ್‌ಗಳು, ಪ್ರತಿ ಟ್ರಾನ್ಸಾಕ್ಷನ್ ಮೇಲಿನ ರಿವಾರ್ಡ್ ಪಾಯಿಂಟ್‌ಗಳು ಮತ್ತು ಇತರ ಅನೇಕ ಕೊಡುಗೆಗಳಂತಹ ವಿಶೇಷ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಯ ಪ್ರಯೋಜನಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ.    

ಇಂಡಸ್ಟ್ರಿಯಲ್ಲಿ ಸೂಪರ್ ಕಾರ್ಡ್ ಇತರ ಯಾವುದೇ ಕ್ರೆಡಿಟ್ ಕಾರ್ಡ್‌ಗಿಂತ ಹೇಗೆ ಭಿನ್ನವಾಗಿದೆ?

ಸೂಪರ್‌ಕಾರ್ಡ್ ಕ್ರೆಡಿಟ್ ಕಾರ್ಡ್‌ಗಳು ನಿಯಮಿತ ಫೀಚರ್‌ಗಳೊಂದಿಗೆ ಮಾತ್ರ ಬರುವುದಲ್ಲದೆ ಈ ರೀತಿಯ ಫೀಚರ್‌ಗಳನ್ನು ಒದಗಿಸುತ್ತದೆ:

  • ಪ್ರತಿ ತಿಂಗಳು1 .16% ರ ನಗದು ಮಿತಿಯ ಮೇಲೆ ಯಾವುದೇ ಪ್ರಕ್ರಿಯಾ ಶುಲ್ಕವಿಲ್ಲದೆ ಕಡಿಮೆ ವೆಚ್ಚದ ಮುಂಗಡ
  • 50 ದಿನಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ನಗದು ವಿತ್‌ಡ್ರಾವಲ್
  • ಉತ್ತಮ ರಿವಾರ್ಡ್ಸ್ ಪ್ರೋಗ್ರಾಮ್
  • 'ಇನ್‌ಹ್ಯಾಂಡ್' ಸೆಕ್ಯೂರಿಟಿ ಮೂಲಕ ಉತ್ತಮ ಭದ್ರತಾ ಫೀಚರ್‌ಗಳು
ಸೂಪರ್‌ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ನಾನು ಹೇಗೆ ಗಳಿಸಬಹುದು?

ನಿಮ್ಮ ಸೂಪರ್‌ಕಾರ್ಡ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು 3 ವಿಧಾನಗಳಲ್ಲಿ ಗಳಿಸಬಹುದು - ವೆಲ್ಕಮ್ ರಿವಾರ್ಡ್‌ಗಳು (ಪಾವತಿಸಿದ ಕಾರ್ಡ್ ವೇರಿಯಂಟ್‌ಗಳ ಮೇಲೆ ಮಾತ್ರ), ಖರ್ಚು ಆಧಾರಿತ ರಿವಾರ್ಡ್‌ಗಳು ಮತ್ತು ಮೈಲ್‌ಸ್ಟೋನ್ ರಿವಾರ್ಡ್‌ಗಳು. ನೀವು ಈ ರಿವಾರ್ಡ್ ಪಾಯಿಂಟ್‌ಗಳನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ರಿಡೀಮ್ ಮಾಡಿಕೊಳ್ಳಬಹುದು ಮತ್ತು ವಿಶಾಲ ಶ್ರೇಣಿಯ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳಲ್ಲಿ ನೋ ಕಾಸ್ಟ್ ಇಎಂಐ ಗಳನ್ನು ಡೌನ್ ಪೇಮೆಂಟ್ ಮಾಡಲು ಭಾರತದಾದ್ಯಂತ ಯಾವುದೇ ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಯಲ್ಲಿ ಇವುಗಳನ್ನು ಬಳಸಬಹುದು.

ತುರ್ತು ಮುಂಗಡ ಫೀಚರ್ ಅನ್ನು ನಾನು ಹೇಗೆ ಬಳಸಬಹುದು?

ನಿಮ್ಮ ಕ್ರೆಡಿಟ್ ಮಿತಿಯೊಳಗೆ ಒದಗಿಸಲಾದ ನಗದು ಮಿತಿಯ ಮೇಲೆ ತುರ್ತು ಮುಂಗಡ ಫೀಚರನ್ನು ಬಳಸಬಹುದು. ನೀವು ಈ ಸಣ್ಣ ಲೋನ್ ಅನ್ನು 3 ಸುಲಭ ಇಎಂಐ ಗಳಲ್ಲಿ ಯಾವುದೇ ಪ್ರಕ್ರಿಯಾ ಶುಲ್ಕವಿಲ್ಲದೆ ಮತ್ತು ತಿಂಗಳಿಗೆ 1.16% ನಾಮಮಾತ್ರದ ಬಡ್ಡಿಯೊಂದಿಗೆ ಪಡೆಯಬಹುದು. ನೀವು ಇದಕ್ಕಾಗಿ RBL MyCard ಆ್ಯಪ್‌ ಮೂಲಕ ಅಪ್ಲೈ ಮಾಡಬಹುದು ಅಥವಾ 5607011 ಗೆ "CASH" ಎಂದು ಎಸ್‌ಎಂಎಸ್ ಮಾಡಬಹುದು ಅಥವಾ 022 71190900 ಗೆ ಕರೆ ಮಾಡಬಹುದು.

ಸೂಪರ್‌ಕಾರ್ಡಿನಿಂದ ನಗದು ವಿತ್‌ಡ್ರಾವಲ್ ಮೇಲೆ ಯಾವುದೇ ಬಡ್ಡಿ ದರವಿದೆಯೇ?

ತುರ್ತುಸ್ಥಿತಿಯ ಸಮಯದಲ್ಲಿ, ಇತರ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಬಹಳಷ್ಟು ಶುಲ್ಕ ಮತ್ತು ಬಡ್ಡಿಯೊಂದಿಗೆ ನಗದು ವಿತ್‌ಡ್ರಾವಲ್‌ಗಳನ್ನು ಒದಗಿಸುತ್ತವೆ. ಕಾರ್ಡ್ ಮಿತಿಯ ನಗದು ಮಿತಿಯೊಳಗೆ ಸೂಪರ್‌ಕಾರ್ಡ್‌ನಿಂದ ನಗದು ವಿತ್‌ಡ್ರಾವಲ್ ಅನ್ನು ಮಾಡಬಹುದು ಮತ್ತು ಇದು 2.5% ನಾಮಮಾತ್ರದ ಪ್ರಕ್ರಿಯಾ ಶುಲ್ಕದೊಂದಿಗೆ 50 ದಿನಗಳವರೆಗೆ ಬಡ್ಡಿ ರಹಿತವಾಗಿದೆ. ಆದಾಗ್ಯೂ, ಬಡ್ಡಿ ಶುಲ್ಕಗಳನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಮರುಪಾವತಿಸಲು ಯಾವಾಗಲೂ ಆದ್ಯತೆ ನೀಡಲಾಗುತ್ತದೆ.

ನನ್ನ ಕಾರ್ಡ್ ಅನ್ನು ನಾನು ಹೇಗೆ ಆ್ಯಕ್ಟಿವೇಟ್ ಮಾಡಬಹುದು?

ನೀವು ಈಗ ನಿಮ್ಮ ಕಾರ್ಡನ್ನು ಆ್ಯಕ್ಟಿವೇಟ್ ಮಾಡಬಹುದು ಮತ್ತು ಶಾಪಿಂಗ್ ಆರಂಭಿಸಲು ಫಿಸಿಕಲ್ ಕಾರ್ಡ್‌ಗಾಗಿ ಕಾಯಬೇಕಾಗಿಲ್ಲ. ಹೋಮ್‌ಪೇಜಿನಲ್ಲಿ ಸೂಪರ್‌ಕಾರ್ಡ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಕಾರ್ಡ್ ಅಪ್ಲಿಕೇಶನ್ ಸಮಯದಲ್ಲಿ ಹಂಚಿಕೊಳ್ಳಲಾದ ಅಗತ್ಯ ವಿವರಗಳನ್ನು ನಮೂದಿಸಿ ಕೇವಲ ಬಜಾಜ್ ಫಿನ್‌ಸರ್ವ್‌ ವಾಲೆಟ್ ಆ್ಯಪ್‌ (ಲಿಂಕ್) ಅನ್ನು ಡೌನ್ಲೋಡ್ ಮಾಡಿ. 6-ಡಿಜಿಟ್‌ನ mPin ಸೆಟ್ ಮಾಡಿ ಮತ್ತು ನಿಮ್ಮ ಡಿಜಿಟಲ್ ಸೂಪರ್‌ಕಾರ್ಡ್ ನೋಡಿ. ಸೆಟ್ಟಿಂಗ್ ಆಯ್ಕೆಗೆ ಹೋಗಿ, ಆನ್ಲೈನ್ ಟ್ರಾನ್ಸಾಕ್ಷನ್‌ಗಳನ್ನು ಸಕ್ರಿಯಗೊಳಿಸಿ ಮತ್ತು ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗಾಗಿ ಅದನ್ನು ಬಳಸಲು ಆರಂಭಿಸಿ.

ಶಾಪಿಂಗ್ ಖರ್ಚುಗಳನ್ನು ಸುಲಭ ಇಎಂಐಗಳಾಗಿ ನಾನು ಹೇಗೆ ಪರಿವರ್ತಿಸಬಹುದು?

ನೀವು RBL MyCard ಆ್ಯಪ್‌ ಮೂಲಕ ರೂ. 2,500 ಮೀರಿದ ಶಾಪಿಂಗ್ ಖರ್ಚುಗಳನ್ನು ಸುಲಭ ಇಎಂಐ ಆಗಿ ಪರಿವರ್ತಿಸಬಹುದು ಅಥವಾ ಕೇವಲ supercardservice@rblbank.com ಗೆ ಬರೆಯಬಹುದು. ನಾಮಮಾತ್ರದ ಪ್ರಕ್ರಿಯಾ ಶುಲ್ಕದೊಂದಿಗೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಇಎಂಐ ಗಳ ಕಾಲಾವಧಿಯು ಹೊಂದಿಕೊಳ್ಳುತ್ತದೆ.

ಮಳಿಗೆಗಳಲ್ಲಿ ಸಂಪರ್ಕರಹಿತ ಪಾವತಿಗಾಗಿ ನಾನು ಸೂಪರ್‌ಕಾರ್ಡನ್ನು ಹೇಗೆ ಬಳಸಬಹುದು?

ರಿಟೇಲ್ ಮಳಿಗೆಗಳಲ್ಲಿ ತ್ವರಿತ ಮತ್ತು ಅನುಕೂಲಕರ ಪಾವತಿಗಳನ್ನು ಮಾಡಲು ಈ ಕಾರ್ಡ್ ಅನ್ನು ಟ್ಯಾಪ್ ಮಾಡಿ. ಕಾಂಟಾಕ್ಟ್‌ಲೆಸ್ ಪಾವತಿಗಳನ್ನು ಸಕ್ರಿಯಗೊಳಿಸಲಾಗಿದೆ, ನಿಮ್ಮ ಕಾರ್ಡ್ ಎಂದಿಗೂ ನಿಮ್ಮ ಕೈಬಿಟ್ಟು ಹೋಗುವುದಿಲ್ಲ. ಟ್ಯಾಪ್ ಮತ್ತು ಪಾವತಿ ಫೀಚರ್ ಬಳಸಿ ಒಂದು ಬಾರಿಗೆ ರೂ. 5,000* ವರೆಗೆ ಪಾವತಿಗಳನ್ನು ಮಾಡಿ.

ಆನ್ಲೈನ್ ವಂಚನೆಯಿಂದ ನನ್ನ ಸೂಪರ್‌ಕಾರ್ಡ್ ಎಷ್ಟು ಸುರಕ್ಷಿತವಾಗಿದೆ?

ಸೂಪರ್‌ಕಾರ್ಡ್ 'ಇನ್‌ಕಂಟ್ರೋಲ್' ಎಂಬ ಫೀಚರ್‌ನೊಂದಿಗೆ ಬರುತ್ತದೆ, ಇಲ್ಲಿ ನಿಮ್ಮ ಸೂಪರ್‌ಕಾರ್ಡಿನ ಭದ್ರತೆಯು ನಿಮ್ಮ ನಿಯಂತ್ರಣದಲ್ಲಿರುತ್ತದೆ. RBL ಮೈಕಾರ್ಡ್ ಆ್ಯಪ್‌ ಮೂಲಕವೂ ನೀವು ನಿಮ್ಮ ಕಾರ್ಡ್ ಬಳಕೆಯನ್ನು ನಿಯಂತ್ರಿಸಬಹುದು. ನಿಮ್ಮ ಬಜಾಜ್ ಫಿನ್‌ಸರ್ವ್‌ ಕೋಬ್ರಾಂಡ್ ಕ್ರೆಡಿಟ್ ಕಾರ್ಡ್ ಎಂದಿಗಿಂತಲೂ ಸುರಕ್ಷಿತವಾಗಿದ್ದು, ಇದು ನಿಮಗೆ ನಿಮ್ಮ ಕಾರ್ಡ್ ಅನ್ನು ಸೆಕೆಂಡುಗಳಲ್ಲಿ ಆನ್/ಆಫ್ ಮಾಡುವ ಅಧಿಕಾರವನ್ನು ನೀಡುತ್ತದೆ. ದೇಶೀಯ, ಅಂತಾರಾಷ್ಟ್ರೀಯ, ಆನ್ಲೈನ್ ಅಥವಾ ಆಫ್ಲೈನ್ ಟ್ರಾನ್ಸಾಕ್ಷನ್‌ಗಳನ್ನು ನಿಷ್ಕ್ರಿಯಗೊಳಿಸಿ ಅಥವಾ ಸಾಧ್ಯವಾಗದಂತೆ ಮಾಡಿ.

ನನ್ನ ಸೂಪರ್‌ಕಾರ್ಡ್‌ಗೆ ಸಂಬಂಧಿಸಿದಂತೆ ನನಗೆ ಯಾವುದೇ ಸಹಾಯದ ಅಗತ್ಯವಿದ್ದರೆ ನಾನು ಯಾರನ್ನು ಸಂಪರ್ಕಿಸಬೇಕು?

ನಿಮ್ಮ ಸೂಪರ್‌ಕಾರ್ಡ್‌ಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ನಮಗೆ 022 7119 0900 ನಲ್ಲಿ ಕರೆ ಮಾಡಿ ಅಥವಾ supercardservice@rblbank.com ಗೆ ಇಮೇಲ್ ಮಾಡಿ ಮತ್ತು ನಾವು ಸಂತೋಷದಿಂದ ನಿಮಗೆ ಸಹಾಯ ಮಾಡುತ್ತೇವೆ.

ಇನ್ನಷ್ಟು ಓದಿರಿ ಕಡಿಮೆ ಓದಿ