ಪ್ರಸ್ತುತ ಪರ್ಸನಲ್ ಲೋನ್ ಬಡ್ಡಿ ದರ, ಫೀಸು ಮತ್ತು ಶುಲ್ಕಗಳು
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ನೊಂದಿಗೆ, ನೀವು ಆಕರ್ಷಕ ಬಡ್ಡಿ ದರದಲ್ಲಿ ರೂ. 25 ಲಕ್ಷದವರೆಗೆ ಲೋನ್ ಪಡೆಯಬಹುದು. ಲೋನ್ ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಮತ್ತು 100% ಪಾರದರ್ಶಕತೆಯೊಂದಿಗೆ ಬರುತ್ತದೆ, ಇದು ನಿಮ್ಮ ಒಟ್ಟಾರೆ ಸಾಲದ ಅನುಭವವನ್ನು ತಡೆರಹಿತವಾಗಿಸುತ್ತದೆ.
ಶುಲ್ಕಗಳ ಪ್ರಕಾರಗಳು |
ಶುಲ್ಕಗಳು ಅನ್ವಯ |
ಬಡ್ಡಿ ದರ |
13% ರಿಂದ |
ಪ್ರಕ್ರಿಯಾ ಶುಲ್ಕಗಳು |
ಲೋನ್ ಮೊತ್ತದ 4% ವರೆಗೆ (ಜಿಎಸ್ಟಿ ಒಳಗೊಂಡು) |
ದಂಡದ ಬಡ್ಡಿ |
ಮಾಸಿಕ ಕಂತು/ ಇಎಂಐ ಪಾವತಿಯಲ್ಲಿ ಯಾವುದೇ ವಿಳಂಬವಾದರೆ, ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ ಇಎಂಐ ಸ್ವೀಕರಿಸುವವರೆಗೆ ಬಾಕಿಯಿರುವ ಮಾಸಿಕ ಕಂತು/ ಇಎಂಐ ಮೇಲೆ ಪ್ರತಿ ತಿಂಗಳಿಗೆ 2% ರಿಂದ 4% ದರದಲ್ಲಿ ದಂಡದ ಬಡ್ಡಿ ವಿಧಿಸಲಾಗುತ್ತದೆ. |
ಭಾಗಶಃ ಮುಂಪಾವತಿ ಶುಲ್ಕಗಳು** |
2% + ಭಾಗಶಃ ಪಾವತಿ ಮೊತ್ತ ಪಾವತಿಸಿದ ಮೇಲೆ ತೆರಿಗೆಗೆಳು ಅನ್ವಯ |
ಬೌನ್ಸ್ ಶುಲ್ಕಗಳು |
ಪ್ರತಿ ಬೌನ್ಸ್ಗೆ ರೂ. 600 – ರೂ. 1,200 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ಸ್ಟಾಂಪ್ ಡ್ಯೂಟಿ | ವಾಸ್ತವದಲ್ಲಿ. (ರಾಜ್ಯದ ಪ್ರಕಾರ) |
ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು | ಹೊಸ ಮ್ಯಾಂಡೇಟ್ ನೋಂದಣಿ ಆಗುವವರೆಗೆ ಗ್ರಾಹಕರ ಬ್ಯಾಂಕ್ ತಿರಸ್ಕರಿಸಿದ ಮೊದಲ ತಿಂಗಳ ಗಡುವು ದಿನಾಂಕದಿಂದ ತಿಂಗಳಿಗೆ ರೂ. 450/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) |
**ಈ ಶುಲ್ಕಗಳು ಫ್ಲೆಕ್ಸಿ ಲೋನ್ ಸೌಲಭ್ಯಕ್ಕೆ ಅನ್ವಯವಾಗುವುದಿಲ್ಲ. ಇದಲ್ಲದೆ, ಭಾಗಶಃ-ಮುಂಗಡ ಪಾವತಿಯು 1 ಇಎಂಐಗಿಂತ ಹೆಚ್ಚಾಗಿರಬೇಕು.
ಪರ್ಸನಲ್ ಲೋನ್ ಬಡ್ಡಿ ದರಗಳ ವಿಧಗಳು
ಪರ್ಸನಲ್ ಲೋನ್ಗಳು ಎರಡು ರೀತಿಯ ಬಡ್ಡಿ ದರಗಳೊಂದಿಗೆ ಬರುತ್ತವೆ: ಫಿಕ್ಸೆಡ್ ಬಡ್ಡಿ ದರ ಮತ್ತು ಫ್ಲೋಟಿಂಗ್ ಬಡ್ಡಿ ದರ.
1. ನಿಗದಿತ ಬಡ್ಡಿ ದರ
ಹೆಸರೇ ಸೂಚಿಸುವಂತೆ, ಬಡ್ಡಿದರವು ಲೋನ್ ಕಾಲಾವಧಿಯುದ್ದಕ್ಕೂ ಒಂದೇ ಆಗಿರುತ್ತದೆ. ಹೀಗಾಗಿ, ಲೋನ್ EMI ಗಳು ಸಹ ಸ್ಥಿರವಾಗಿರುತ್ತವೆ.
2. ಫ್ಲೋಟಿಂಗ್ ಬಡ್ಡಿ ದರ
ಫ್ಲೋಟಿಂಗ್, ಹೊಂದಾಣಿಕೆ ಅಥವಾ ವೇರಿಯಬಲ್ ಬಡ್ಡಿ ದರವನ್ನು ಹಣಕಾಸು ಸಂಸ್ಥೆಯ ಆಂತರಿಕ ಮಾನದಂಡಕ್ಕೆ ಲಿಂಕ್ ಮಾಡಲಾಗಿದೆ. ಈ ಬೆಂಚ್ಮಾರ್ಕ್ನಲ್ಲಿನ ಬದಲಾವಣೆಗಳು ದರಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಫ್ಲೋಟಿಂಗ್ ದರಗಳು ಲೋನ್ ಅವಧಿಯುದ್ದಕ್ಕೂ ಬದಲಾಗುತ್ತವೆ.
ಈ ಎರಡೂ ದರಗಳು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಫಿಕ್ಸೆಡ್ ದರಗಳು EMI ಗಳನ್ನು ಸ್ಥಿರವಾಗಿರಿಸುತ್ತವೆ, ಇದು ಬಜೆಟ್ ಮಾಡಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಆಂತರಿಕ ಬೆಂಚ್ಮಾರ್ಕ್ ದರದೊಂದಿಗೆ ಫ್ಲೋಟಿಂಗ್ ದರಗಳು ಹೆಚ್ಚಾಗುತ್ತವೆ ಅಥವಾ ಕೆಳಗೆ ಬರುತ್ತವೆ.
ಪರ್ಸನಲ್ ಲೋನ್ ಮೇಲಿನ ಬಡ್ಡಿ ಲೆಕ್ಕಾಚಾರದ ವಿಧಾನಗಳು
ಪರ್ಸನಲ್ ಲೋನ್ ಬಡ್ಡಿ ದರಗಳನ್ನು ಎರಡು ವಿಧಾನಗಳಲ್ಲಿ ಲೆಕ್ಕ ಹಾಕಲಾಗುತ್ತದೆ - ಫ್ಲಾಟ್ ದರ ಮತ್ತು ಬ್ಯಾಲೆನ್ಸ್ ಕಡಿಮೆ ಮಾಡುವ ಬಡ್ಡಿ ದರ:
1. ಫ್ಲಾಟ್ ದರದ ವಿಧಾನ
ಈ ವಿಧಾನದಲ್ಲಿ, ಅನ್ವಯವಾಗುವ ಬಡ್ಡಿದರವನ್ನು ಕಾಲಾವಧಿಯುದ್ದಕ್ಕೂ ಸಂಪೂರ್ಣ ಅಸಲಿನ ಮೇಲೆ ವಿಧಿಸಲಾಗುತ್ತದೆ.
2. ಬ್ಯಾಲೆನ್ಸ್ ಕಡಿಮೆ ಮಾಡುವ ವಿಧಾನ
ಬ್ಯಾಲೆನ್ಸ್ ಕಡಿಮೆ ಮಾಡುವ ವಿಧಾನದಲ್ಲಿ ಅಥವಾ ಬ್ಯಾಲೆನ್ಸ್ ರೆಡ್ಯೂಸ್ ಮಾಡುವ ವಿಧಾನದಲ್ಲಿ, ಪ್ರತಿ EMI ಪಾವತಿಸಿದ ನಂತರ ಅನ್ವಯವಾಗುವ ಬಡ್ಡಿ ದರವನ್ನು ಬಾಕಿ ಅಸಲಿನ ಮೇಲೆ ವಿಧಿಸಲಾಗುತ್ತದೆ. ಹೀಗಾಗಿ, ಲೋನ್ ಬ್ಯಾಲೆನ್ಸ್ ಮೇಲೆ ಪ್ರತಿ ತಿಂಗಳು ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ಫ್ಲಾಟ್ ದರದ ವಿಧಾನಕ್ಕೆ ಹೋಲಿಸಿದರೆ ಸಾಲಗಾರರು ಲೋನಿನ ಮೇಲೆ ಕಡಿಮೆ ಬಡ್ಡಿಯನ್ನು ಪಾವತಿಸುತ್ತಾರೆ.
ಬಡ್ಡಿ ದರ ಲೆಕ್ಕಾಚಾರ ಫಾರ್ಮುಲಾ
ಫ್ಲಾಟ್ ದರ ಮತ್ತು ಬ್ಯಾಲೆನ್ಸ್ ಕಡಿಮೆ ಮಾಡುವ ವಿಧಾನದ ಮೂಲಕ ಪರ್ಸನಲ್ ಲೋನ್ಗೆ ಬಡ್ಡಿ ದರವನ್ನು ಈ ಕೆಳಗಿನ ಸೂತ್ರ ಬಳಸಿ ಲೆಕ್ಕ ಹಾಕಲಾಗುತ್ತದೆ:
1. ಫ್ಲಾಟ್ ದರದ ವಿಧಾನ
ಸಂಪೂರ್ಣ ಲೋನ್ ಅಸಲಿನ ಮೇಲೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
ಈ ವಿಧಾನಕ್ಕಾಗಿ ಫಾರ್ಮುಲಾ –
EMI = (ಅಸಲು + ಪಾವತಿಸಬೇಕಾದ ಒಟ್ಟು ಬಡ್ಡಿ) / ತಿಂಗಳುಗಳಲ್ಲಿ ಲೋನ್ ಕಾಲಾವಧಿ
ಇದರಲ್ಲಿ, ಪಾವತಿಸಬೇಕಾದ ಒಟ್ಟು ಬಡ್ಡಿ = P x r x n/100
2. ಬ್ಯಾಲೆನ್ಸ್ ಕಡಿಮೆ ಮಾಡುವ ವಿಧಾನ
ಪ್ರತಿ EMI ಪಾವತಿಸಿದ ನಂತರ ಬಾಕಿ ಅಸಲಿನ ಮೇಲೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
ಇದನ್ನು ಲೆಕ್ಕ ಹಾಕಲು ಫಾರ್ಮುಲಾ –
EMI = [P x r x (1 + r) ^n] / [(1 + r) ^(n-1)]
ಇಲ್ಲಿ, 'P' ಎಂದರೆ ಲೋನ್ ಮೊತ್ತ ಅಥವಾ ಅಸಲು, 'r' ಬಡ್ಡಿ ದರ, ಮತ್ತು 'n' ಎಂದರೆ ತಿಂಗಳುಗಳಲ್ಲಿ ಲೋನ್ ಅವಧಿ.
ವಾರ್ಷಿಕ ನಿರ್ವಹಣಾ ಶುಲ್ಕಗಳು
ಲೋನ್ ವೈವಿಧ್ಯ |
ಶುಲ್ಕಗಳು |
ಫ್ಲೆಕ್ಸಿ ಟರ್ಮ್ ಮತ್ತು ಹೈಬ್ರಿಡ್ ಲೋನ್ |
ಅಂತಹ ಶುಲ್ಕ ವಿಧಿಸುವ ದಿನಾಂಕದವರೆಗೆ ಬಳಸಿದ ಮೊತ್ತ ಎಷ್ಟೇ ಆಗಿದ್ದರೂ ಸಹ ಒಟ್ಟು ವಿತ್ಡ್ರಾ ಮಾಡಬಹುದಾದ ಮೊತ್ತದ ಮೇಲೆ 0.25% ಹಾಗೂ ಅನ್ವಯವಾಗುವ ತೆರಿಗೆಗಳು |
ಪರ್ಸನಲ್ ಲೋನ್ ಫೋರ್ಕ್ಲೋಶರ್ ಶುಲ್ಕಗಳು
ಲೋನ್ ವೈವಿಧ್ಯ |
ಶುಲ್ಕಗಳು |
ಟರ್ಮ್ ಲೋನ್ |
ಅಂತಹ ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿಯಿರುವ ಅಸಲಿನ ಮೇಲೆ 4% ಹಾಗೂ ಅನ್ವಯವಾಗುವ ತೆರಿಗೆಗಳು |
ಫ್ಲೆಕ್ಸಿ ಟರ್ಮ್ ಮತ್ತು ಹೈಬ್ರಿಡ್ ಲೋನ್ |
ಒಟ್ಟು ವಿತ್ಡ್ರಾ ಮಾಡಬಹುದಾದ ಮೊತ್ತದ ಮೇಲೆ* 4% ಹಾಗೂ ಅನ್ವಯವಾಗುವ ತೆರಿಗೆಗಳು (*ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಮರುಪಾವತಿ ಶೆಡ್ಯೂಲ್ ಪ್ರಕಾರ ಕಾಲಕಾಲಕ್ಕೆ ಫ್ಲೆಕ್ಸಿ ಲೋನ್ ಅಡಿಯಲ್ಲಿ ನೀವು ವಿತ್ಡ್ರಾ ಮಾಡಬಹುದಾದ ಒಟ್ಟು ಲೋನ್ ಮೊತ್ತದ ಮೇಲೆ). |
ಮ್ಯಾಂಡೇಟ್ ತಿರಸ್ಕಾರದ ಸೇವಾ ಶುಲ್ಕ: ರೂ. 450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಗ್ರಾಹಕರ ಬ್ಯಾಂಕ್ ಹಿಂದಿನ ಮ್ಯಾಂಡೇಟ್ ಫಾರ್ಮ್ ಅನ್ನು ಯಾವುದೇ ಕಾರಣಕ್ಕಾಗಿ ತಿರಸ್ಕರಿಸಿದ ದಿನಾಂಕದಿಂದ 30 ದಿನಗಳಲ್ಲಿ ಹೊಸ ಮ್ಯಾಂಡೇಟ್ ಫಾರ್ಮ್ ಅನ್ನು ನೋಂದಾಯಿಸದಿದ್ದರೆ ಶುಲ್ಕಗಳನ್ನು ವಿಧಿಸಲಾಗುತ್ತದೆ.
ರಾಜ್ಯವಾರು ನಿರ್ದಿಷ್ಟ ಕಾನೂನುಗಳಿಗೆ ಅನುಗುಣವಾಗಿ ಎಲ್ಲಾ ಉತ್ಪನ್ನಗಳಿಗೆ ಹೆಚ್ಚುವರಿ ಸೆಸ್ ಅನ್ವಯವಾಗುತ್ತದೆ.
ಬಜಾಜ್ ಫಿನ್ಸರ್ವ್ 13% ರಿಂದ ಆರಂಭವಾಗುವ ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ರೂ. 25 ಲಕ್ಷದವರೆಗಿನ ಪರ್ಸನಲ್ ಲೋನ್ಗಳನ್ನು ಆಫರ್ ಮಾಡುತ್ತದೆ. ಯಾವುದೇ ಗುಪ್ತ ಶುಲ್ಕಗಳಿಲ್ಲ, ಮತ್ತು ನಿಮಗೆ 100% ಪಾರದರ್ಶಕತೆಯನ್ನು ಖಚಿತಪಡಿಸಲಾಗಿದೆ.
ಕೈಗೆಟುಕುವ ಬಡ್ಡಿ ದರವನ್ನು ಪಡೆಯುವ ಮೂಲಕ, ನಿಮ್ಮ ಹಣಕಾಸಿನ ಗುರಿಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ನೀವು ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನನ್ನು ಬಳಸಬಹುದು. ಪರ್ಸನಲ್ ಲೋನಿಗೆ ಅಪ್ಲೈ ಮಾಡುವಾಗ, ಲೋನ್ ಮೊತ್ತದ 4% ವರೆಗೆ ಪ್ರಕ್ರಿಯಾ ಶುಲ್ಕ ಮತ್ತು ತೆರಿಗೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ. ಇದು ಒಂದು-ಬಾರಿಯ ಶುಲ್ಕವಾಗಿದೆ. ನೀವು 60 ತಿಂಗಳವರೆಗಿನ ಹೊಂದಿಕೊಳ್ಳುವ ಮರುಪಾವತಿ ಅವಧಿಯನ್ನು ಪಡೆಯುವುದರಿಂದ ನೀವು ಮರುಪಾವತಿಯನ್ನು ಗರಿಷ್ಠ 60 ಇಎಂಐಗಳಾಗಿ ವಿಭಜಿಸಬಹುದು. ಸುಲಭವಾಗಿ ಯೋಜಿಸಲು, ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
ಡಿಫಾಲ್ಟ್ ಮಾಡುವುದರಿಂದ ದಂಡ ಮತ್ತು ದಂಡದ ಬಡ್ಡಿಯನ್ನು ಆಕರ್ಷಿಸುವುದರಿಂದ ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ ಪೂರ್ವ ಯೋಜನೆಯು ಕಡ್ಡಾಯವಾಗಿದೆ. ಇಎಂಐ ಬೌನ್ಸ್ ಶುಲ್ಕಗಳು ರೂ. 600 ರಿಂದ ರೂ. 1,200 ವರೆಗೆ ಇರುತ್ತವೆ, ಮತ್ತು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/ಇಎಂಐ ಸ್ವೀಕರಿಸುವವರೆಗೆ ಬಾಕಿ ಇರುವ ಮಾಸಿಕ ಕಂತು/ಇಎಂಐ ಮೇಲೆ ತಿಂಗಳಿಗೆ 2% ರಿಂದ 4% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ.
ಭಾಗಶಃ-ಮುಂಗಡ ಪಾವತಿಗಳು ಲೋನ್ ಮರುಪಾವತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಏಕೆಂದರೆ ಅವು ಬಾಕಿ ಇರುವ ಅಸಲನ್ನು ಕಡಿಮೆ ಮಾಡುತ್ತವೆ. ಆದರೆ, ಪಾವತಿಸಿದ ಮೊತ್ತದ ಮೇಲೆ 2% ಶುಲ್ಕ ಮತ್ತು ತೆರಿಗೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡು, ಭಾಗಶಃ-ಮುಂಗಡ ಪಾವತಿಯ ಲಾಭವನ್ನು ನಿರ್ಧರಿಸಲು ಮರೆಯದಿರಿ. ಭಾಗಶಃ-ಮುಂಗಡ ಪಾವತಿ ಶುಲ್ಕವು ಫ್ಲೆಕ್ಸಿ ಲೋನ್ ಸೌಲಭ್ಯಕ್ಕೆ ಅನ್ವಯವಾಗುವುದಿಲ್ಲ.
ನೀವು ಮುಂಚಿತವಾಗಿಯೇ ನಿಮ್ಮ ಲೋನ್ ತೀರಿಸಲು ಬಯಸಿದರೆ, ಬಾಕಿ ಅಸಲಿನ 4% ಮತ್ತು ತೆರಿಗೆಗಳಷ್ಟು ಅತಿಕಡಿಮೆ ಶುಲ್ಕ ಕಟ್ಟಬೇಕಾಗುತ್ತದೆ. ಫ್ಲೆಕ್ಸಿ ಲೋನ್ಗೆ, 4% ಫೋರ್ಕ್ಲೋಸರ್ ಶುಲ್ಕ ಮತ್ತು ತೆರಿಗೆಗಳು ಹಾಗೂ ವಿತ್ಡ್ರಾ ಮಾಡಬಹುದಾದ ಮೊತ್ತದ ಮೇಲೆ ಸೆಸ್ ಕಟ್ಟಬೇಕು.
ನಿಮ್ಮ ಲೋನ್ ಡಾಕ್ಯುಮೆಂಟ್ ಮತ್ತು ಸ್ಟೇಟ್ಮೆಂಟ್ಗಳನ್ನು ನೋಡಲು, ಗ್ರಾಹಕ ಪೋರ್ಟಲ್ – ಎಕ್ಸ್ಪೀರಿಯ. ಗೆ ಭೇಟಿ ನೀಡಿ. ಎಕ್ಸ್ಪೀರಿಯದಿಂದ ಇ-ಸ್ಟೇಟ್ಮೆಂಟ್, ಪತ್ರ, ಪ್ರಮಾಣಪತ್ರ ಮುಂತಾದವುಗಳನ್ನು ಡೌನ್ಲೋಡ್ ಮಾಡಬಹುದು. ಹಾರ್ಡ್ ಕಾಪಿಗಾಗಿ, ಹತ್ತಿರದ ಬಜಾಜ್ ಫಿನ್ಸರ್ವ್ ಬ್ರಾಂಚ್ಗೆ ಭೇಟಿ ನೀಡಿ, ಕೇವಲ ರೂ. 50 ಶುಲ್ಕ ಪಾವತಿಸುವ ಮೂಲಕ ನಿಮಗೆ ಬೇಕಿರುವ ಪ್ರತಿಯನ್ನು ಪಡೆಯಬಹುದು.
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಪ್ರಕ್ರಿಯಾ ಶುಲ್ಕವು ಲೋನ್ ಮೊತ್ತದ 4% ವರೆಗೆ ಮತ್ತು ತೆರಿಗೆಗಳವರೆಗೆ ಹೋಗಬಹುದು. ಈ ಶುಲ್ಕವು ಲೋನ್ ಮೊತ್ತ ಮತ್ತು ನಿಮ್ಮ ಅರ್ಹತೆ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ.
ಭಾಗಶಃ-ಮುಂಗಡ ಪಾವತಿ ಮಾಡುವಾಗ, ನೀವು ಮಾಡಿದ ಭಾಗಶಃ-ಮುಂಗಡ ಪಾವತಿ ಮೊತ್ತದ ಮೇಲೆ 2% ಮತ್ತು ತೆರಿಗೆಗಳನ್ನು ಪಾವತಿಸಬೇಕು. ಆದರೆ, ನೀವು ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಪಡೆದಿದ್ದರೆ ನಿಮಗೆ ಭಾಗಶಃ ಮುಂಗಡ ಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ.
ಬೌನ್ಸ್ ಶುಲ್ಕ ಎಂದರೆ ನೀವು ಇಎಂಐ ಪಾವತಿಯನ್ನು ತಪ್ಪಿಸಿಕೊಂಡಾಗ ವಿಧಿಸುವ ದಂಡವಾಗಿದೆ. ಬಜಾಜ್ ಫಿನ್ಸರ್ವ್ ಪ್ರತಿ ತಪ್ಪಿದ ಇಎಂಐ ನ ಪ್ರತಿ ಬೌನ್ಸ್ಗೆ ರೂ. 600 ರಿಂದ ರೂ. 1,200 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) ಶುಲ್ಕಗಳನ್ನು ವಿಧಿಸುತ್ತದೆ. ಅಲ್ಲದೆ, ತಡವಾದ ಪಾವತಿ ಅಥವಾ ಇಎಂಐ ಡೀಫಾಲ್ಟ್ ಸಂದರ್ಭದಲ್ಲಿ, ದಂಡದ ಬಡ್ಡಿಯನ್ನು 2% - 4% ದರದಲ್ಲಿ ವಿಧಿಸಲಾಗುತ್ತದೆ.
ನೀವು 13% ರಿಂದ ಆರಂಭವಾಗುವ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನನ್ನು ಪಡೆಯಬಹುದು.
ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡುವಾಗ, ನೀವು ಟರ್ಮ್ ಲೋನ್ ತೆಗೆದುಕೊಂಡರೆ ಬಾಕಿ ಅಸಲಿನ ಮೇಲೆ 4% ಮತ್ತು ತೆರಿಗೆಗಳ ಫೋರ್ಕ್ಲೋಸರ್ ಶುಲ್ಕವನ್ನು ನೀಡಬೇಕು. ಫ್ಲೆಕ್ಸಿ ಟರ್ಮ್ ಲೋನ್ ಅಥವಾ ಫ್ಲೆಕ್ಸಿ ಹೈಬ್ರಿಡ್ ಲೋನಿಗೆ, ಫೋರ್ಕ್ಲೋಸರ್ ಶುಲ್ಕವು 4% ಮತ್ತು ತೆರಿಗೆ ಮತ್ತು ಒಟ್ಟು ವಿತ್ಡ್ರಾ ಮಾಡಬಹುದಾದ ಮೊತ್ತದ ಮೇಲೆ ಸೆಸ್.
ಸಿಬಿಲ್ ಸ್ಕೋರ್: 750 ಪರ್ಸನಲ್ ಲೋನಿಗೆ ಅಗತ್ಯವಿರುವ ಕನಿಷ್ಠ ಸಿಬಿಲ್ ಸ್ಕೋರ್ ಆಗಿದೆ. ಹೆಚ್ಚಿನ ಸಿಬಿಲ್ ಸ್ಕೋರ್ಗಳು ಉತ್ತಮವಾದ ಹಣಕಾಸಿನ ಟ್ರ್ಯಾಕ್ ರೆಕಾರ್ಡ್ ಅನ್ನು ಸೂಚಿಸುತ್ತವೆ ಮತ್ತು ಕಡಿಮೆ ಬಡ್ಡಿ ದರವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತವೆ. ಉಚಿತವಾಗಿ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಉದ್ಯೋಗ: ಸಂಬಳದ ವ್ಯಕ್ತಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ತಮ್ಮ ಆದಾಯದ ಸ್ವರೂಪದಿಂದಾಗಿ ವಿವಿಧ ಬಡ್ಡಿ ದರಗಳನ್ನು ನೀಡಬಹುದು. ಸಾಮಾನ್ಯವಾಗಿ, ಸಂಬಳದ ವ್ಯಕ್ತಿಗಳನ್ನು ಕಡಿಮೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಆದಾಯ: ಹೆಚ್ಚಿನ ಆದಾಯವು ಕಡಿಮೆ ಬಡ್ಡಿ ದರವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ ಏಕೆಂದರೆ ಸಾಲದಾತರು ಮರುಪಾವತಿಯ ಭರವಸೆಯನ್ನು ನೀಡಬಹುದು.
ಡೆಟ್-ಟು-ಇನ್ಕಮ್ ರೇಶಿಯೋ: ಈ ಅನುಪಾತವನ್ನು ಕಡಿಮೆ ಮಾಡುವುದರಿಂದ ಡೀಫಾಲ್ಟ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಏಕೆಂದರೆ ನಿಮ್ಮ ಇಎಂಐ ಗಳನ್ನು ಪಾವತಿಸಲು ನೀವು ಹೆಚ್ಚು ಹಣವನ್ನು ಹೊಂದಿರುತ್ತೀರಿ. ಬಡ್ಡಿ ದರವು ಅದಕ್ಕೆ ಅನುಗುಣವಾಗಿ ಕಡಿಮೆ ಇರಬಹುದು.
ವಯಸ್ಸು: ಯುವ ಅರ್ಜಿದಾರರು ಹೆಚ್ಚು ಕಾಲ ಗಳಿಸಬಹುದಾದ ಕಾರಣ, ಅವರು ನಿವೃತ್ತಿಯ ಹತ್ತಿರದಲ್ಲಿ ಇರುವವರಿಗಿಂತ ಹೆಚ್ಚು ಕೈಗೆಟಕುವ ದರಗಳನ್ನು ಪಡೆಯಬಹುದು.
ಉದ್ಯೋಗ: ಹೆಸರಾಂತ ಸಂಸ್ಥೆಯ ಉದ್ಯೋಗಿಗಳಿಗೆ ಉದ್ಯೋಗ ಮತ್ತು ಆದಾಯ ಸ್ಥಿರತೆ ಹೆಚ್ಚಾಗಿರುವ ಕಾರಣ, ಅವರು ಇನ್ನಷ್ಟು ಉತ್ತಮ ದರವನ್ನು ಪಡೆಯಬಹುದು.
ಸಾಲದಾತರೊಂದಿಗಿನ ಸಂಬಂಧ: ಪ್ರಸ್ತುತ ಗ್ರಾಹಕರು ಹೆಚ್ಚು ಲಾಭದಾಯಕ ಬಡ್ಡಿದರಗಳನ್ನು ಪಡೆಯಬಹುದು.
ನೀವು 60 ತಿಂಗಳವರೆಗಿನ ಅವಧಿಯಲ್ಲಿ ಲೋನ್ ಮರುಪಾವತಿಸಬಹುದು. ಅಂದರೆ, ನೀವು ಗರಿಷ್ಠ 5 ವರ್ಷಗಳಿಗೆ ನಿಮ್ಮ ಇಎಂಐಗಳನ್ನು ಹೊಂದಿಸಿಕೊಳ್ಳಬಹುದು.
ಫ್ಲಾಟ್-ರೇಟ್ ವಿಧಾನದಲ್ಲಿ ನಿಮಗೆ ಕಾಲಾವಧಿಯುದ್ದಕ್ಕೂ ಪೂರ್ತಿ ಅಸಲಿನ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಇದು ಬಹಳ ದುಬಾರಿಯಾಗುತ್ತದೆ. ರೆಡ್ಯೂಸಿಂಗ್ ಬ್ಯಾಲೆನ್ಸ್ ವಿಧಾನದಲ್ಲಿ, ಬಾಕಿ ಉಳಿದಿರುವ ಅಸಲಿನ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ನೀವು ಪಾವತಿಸುವ ಪ್ರತಿ ಇಎಂಐ ನೊಂದಿಗೆ, ಬಾಕಿಯಿರುವ ಅಸಲು ಕಡಿಮೆಯಾಗುತ್ತದೆ. ಈ ವಿಧಾನವು ಕಡಿಮೆ ಖರ್ಚಿನದ್ದಾಗಿದೆ.
ನೀವು ಪರ್ಸನಲ್ ಲೋನ್ಗೆ ಅಪ್ಲೈ ಮಾಡಿದಾಗ, ನೀವು ಸಾಲದಾತರಿಗೆ ಅಸಲಿನ ಜೊತೆಗೆ ಬಡ್ಡಿ ಮೊತ್ತವನ್ನೂ ಮರುಪಾವತಿ ಮಾಡಬೇಕು. ಆದಾಗ್ಯೂ, ನೀವು ಪಾವತಿಸಬೇಕಾದ ಪರ್ಸನಲ್ ಲೋನ್ ಮೊತ್ತ ಎಷ್ಟು ಎಂಬುದನ್ನು ಮಾನ್ಯುಯಲ್ ಆಗಿ ಅಂದಾಜು ಮಾಡುವುದು ಸುಲಭವಲ್ಲ.
ಅದನ್ನು ಮಾಡಲು, ನೀವು ಬಜಾಜ್ ಫಿನ್ಸರ್ವ್ ವೆಬ್ಸೈಟ್ನಲ್ಲಿ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಪರಿಶೀಲಿಸಬಹುದು.
ನೀವು ಬಯಸಿದ ಲೋನ್ ಮೊತ್ತ, ಅವಧಿ ಮತ್ತು ಅನ್ವಯವಾಗುವ ಬಡ್ಡಿ ದರವನ್ನು ಆಯ್ಕೆ ಮಾಡಿದ ನಂತರ, ಕ್ಯಾಲ್ಕುಲೇಟರ್ EMI ಮೊತ್ತವನ್ನು ಸೂಚಿಸುತ್ತದೆ. ಇದು ನಿಖರವಾದ ಪರ್ಸನಲ್ ಲೋನ್ ಬಡ್ಡಿ ಮೊತ್ತವನ್ನು ಕೂಡ ತೋರಿಸುತ್ತದೆ.
ಬಡ್ಡಿ ದರವು ಅರ್ಜಿದಾರರ ವಿಧ ಮತ್ತು ಅವರ ಕ್ರೆಡಿಟ್ ಸ್ಕೋರ್ (750 ಅಥವಾ ಅಧಿಕ), ಆದಾಯ, ವಯಸ್ಸು, ಹಣಕಾಸು ಸಂಸ್ಥೆಯೊಂದಿಗೆ ಸಂಬಂಧ, ಅಸ್ತಿತ್ವದಲ್ಲಿರುವ ಸಾಲಗಳು ಮತ್ತು ಇತರ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅನುಕೂಲಕರ ಹಿನ್ನೆಲೆ ಮತ್ತು ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿರುವ ಗ್ರಾಹಕರು ಕಡಿಮೆ ಬಡ್ಡಿ ದರಗಳನ್ನು ಪಡೆಯಬಹುದು.
ಬಜಾಜ್ ಫಿನ್ಸರ್ವ್ನಲ್ಲಿ ಪರ್ಸನಲ್ ಲೋನ್ ಶುಲ್ಕಗಳು ಪ್ರಕ್ರಿಯಾ ಶುಲ್ಕವನ್ನು ಒಳಗೊಂಡಿವೆ, ಇದು ಒಟ್ಟು ಪಡೆದ ಮೊತ್ತದ 4.13% ವರೆಗೆ ಇರುತ್ತದೆ.
ನಮ್ಮ ಗ್ರಾಹಕ ಪೋರ್ಟಲ್, ಎಕ್ಸ್ಪೀರಿಯ ಮೂಲಕ ಇ-ಸ್ಟೇಟ್ಮೆಂಟ್ಗಳನ್ನು ಡೌನ್ಲೋಡ್ ಮಾಡುವ ಮೇಲೆ ಯಾವುದೇ ಶುಲ್ಕಗಳಿಲ್ಲ. ಆದಾಗ್ಯೂ, ನೀವು ಹಸ್ತ ಪ್ರತಿಗಳನ್ನು ಪಡೆಯಲು ಬಯಸಿದರೆ ನೀವು ರೂ. 50 + ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ದರವನ್ನು ರೆಪೊ ರೇಟ್ ಎನ್ನಲಾಗುತ್ತದೆ. ರೆಪೋ ದರದಲ್ಲಿ ಕಡಿತವು ಸಾಮಾನ್ಯವಾಗಿ ವ್ಯಕ್ತಿಗಳು ಮತ್ತು ಬ್ಯಾಂಕುಗಳಿಗೆ ಬಡ್ಡಿ ದರಗಳು ಮತ್ತು EMI ಗಳಂತಹ ಕಡಿಮೆ ಸಾಲದ ವೆಚ್ಚಗಳಿಗೆ ಕಾರಣವಾಗುತ್ತದೆ.
ನೀವು ಫ್ಲೋಟಿಂಗ್ ಬಡ್ಡಿ ದರವನ್ನು ಆಯ್ಕೆ ಮಾಡಿದರೆ ಮಾತ್ರ ಪರ್ಸನಲ್ ಲೋನ್ಗಳ ಮೇಲಿನ ಬಡ್ಡಿ ದರದ ಮೇಲೆ ರೆಪೋ ದರವು ಪರಿಣಾಮ ಬೀರುತ್ತದೆ. ಫಿಕ್ಸೆಡ್ ಬಡ್ಡಿ ದರಗಳಲ್ಲಿ ನೀಡಲಾಗುವ ಪರ್ಸನಲ್ ಲೋನ್ಗಳು ರೆಪೋ ದರದಲ್ಲಿನ ಕಡಿತದಿಂದ ಪರಿಣಾಮ ಬೀರುವುದಿಲ್ಲ.