ಪರ್ಸನಲ್ ಲೋನ್ ವೈಶಿಷ್ಟ್ಯಗಳು
-
ಫ್ಲೆಕ್ಸಿ ಲೋನ್ನೊಂದಿಗೆ 45%* ಕಡಿಮೆ ಇಎಂಐಗಳು
ಬಡ್ಡಿ-ಮಾತ್ರದ ಇಎಂಐಗಳ ಮೂಲಕ ಮರುಪಾವತಿ ಮಾಡಿ ಮತ್ತು ನಮ್ಮ ಫ್ಲೆಕ್ಸಿ ಸೌಲಭ್ಯ ಬಳಸಿ ನಿಮ್ಮ ಮಾಸಿಕ ಕಂತುಗಳನ್ನು ಕಡಿಮೆ ಮಾಡಿ.
-
5 ನಿಮಿಷಗಳಲ್ಲಿ ಅನುಮೋದನೆ ಪಡೆಯಿರಿ
-
24 ಗಂಟೆಗಳು* ವಿತರಣೆ
ಸರಳವಾದ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ, ಅನುಮೋದನೆಯ ದಿನದಂದೇ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಹಣ ಪಡೆಯಿರಿ*.
-
60 ತಿಂಗಳುಗಳಲ್ಲಿ ಮರುಪಾವತಿ ಮಾಡಿ
-
ಅಡಮಾನದ ಅವಶ್ಯಕತೆಯಿಲ್ಲ
ನಿಮ್ಮ ಲೋನ್ ಅಪ್ಲಿಕೇಶನ್ ಅನುಮೋದನೆ ಪಡೆಯಲು ಯಾವುದೇ ಖಾತರಿದಾರರು ಅಥವಾ ಅಡಮಾನದ ಅಗತ್ಯವಿಲ್ಲ.
-
ಭಾಗಶಃ-ಮುಂಗಡ ಪಾವತಿ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
ಫ್ಲೆಕ್ಸಿ ಲೋನ್ನೊಂದಿಗೆ ನಿಮ್ಮ ಬಳಿ ಹೆಚ್ಚಿನ ಹಣವಿದ್ದಾಗ ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ಲೋನ್ ಮರುಪಾವತಿಸಿ.
-
ಮುಂಚಿತ-ಅನುಮೋದಿತ ಗ್ರಾಹಕರಿಗೆ ವಿಶೇಷ ಆಫರ್ಗಳು
ಈಗಾಗಲೇ ನಿಮಗೆ ತಿಳಿದಿರುವ ಖರ್ಚುಗಳೇ ಇರಲಿ, ಧಿಡೀರನೆ ಬರುವುದೇ ಆಗಿರಲಿ, ತುರ್ತಿನ ಅಥವಾ ಆಯ್ದ ಅಗತ್ಯಗಳೇನೇ ಇದ್ದರೂ, ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಪಡೆಯಿರಿ, ತ್ವರಿತ ಅನುಮೋದನೆ ಆನಂದಿಸಿ. ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ ಒಂದು ಇನ್ಸ್ಟಂಟ್ ಪರ್ಸನಲ್ ಲೋನ್ ಆಗಿದ್ದು, ಇದಕ್ಕೆ ಯಾವುದೇ ಮೇಲಾಧಾರ ಅಥವಾ ಸೆಕ್ಯೂರಿಟಿಯ ಅಗತ್ಯವಿಲ್ಲ. ಇದನ್ನು ಯಾವುದೇ ಉದ್ದೇಶಕ್ಕಾಗಿ ಅಥವಾ ಯಾವುದೇ ಗುರಿ ಪೂರೈಸಲು ಯಾವ ನಿರ್ಬಂಧವೂ ಇಲ್ಲದೆ ಬಳಸಿ. ಇನ್ಸ್ಟಂಟ್ ಪರ್ಸನಲ್ ಲೋನ್ ಸಾಮಾನ್ಯವಾಗಿ ವೈದ್ಯಕೀಯ ಚಿಕಿತ್ಸೆ, ಮನೆ ನವೀಕರಣ, ಮದುವೆ, ಪ್ರಯಾಣ ಅಥವಾ ಶಿಕ್ಷಣ ಮುಂತಾದ ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ.
ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಕನಿಷ್ಠ ಡಾಕ್ಯುಮೆಂಟ್ಗಳೊಂದಿಗೆ ರೂ. 25 ಲಕ್ಷದವರೆಗೆ ಲೋನ್ ಪಡೆಯಿರಿ ಮತ್ತು ಅನುಮೋದನೆಯ 24 ಗಂಟೆಗಳ* ಒಳಗೆ ನಿಮ್ಮ ಬ್ಯಾಂಕಿನಲ್ಲಿ ನಿಮಗೆ ಅಗತ್ಯವಿರುವ ಹಣವನ್ನು ಪಡೆಯಿರಿ. ನಿಮಗೆ ಹೊಂದುವ ಮರುಪಾವತಿ ಅವಧಿ ಆಯ್ಕೆ ಮಾಡಿ, ಸುಲಭವಾಗಿ ಲೋನ್ ಮರುಪಾವತಿಸಿ. ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಯಾವುದೇ ಸಮಯದಲ್ಲಿ ಲೋನ್ ಮುಂಪಾವತಿಸಿ.
ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಲೋನ್ ಮಿತಿಯೊಳಗೆ ಹಣವನ್ನು ವಿತ್ಡ್ರಾ ಮಾಡಲು ಮತ್ತು ಮುಂಗಡ-ಪಾವತಿ ಮಾಡಲು ನೀವು ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದ ಪ್ರಯೋಜನ ಪಡೆಯಬಹುದು. ಇದಲ್ಲದೆ, ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಲು ಅವಧಿಯ ಮೊದಲ ಭಾಗಕ್ಕೆ ನೀವು ಬಡ್ಡಿ-ಮಾತ್ರ ಇಎಂಐಗಳಲ್ಲಿ ಪಾವತಿಸಲು ಆಯ್ಕೆ ಮಾಡಬಹುದು*.
ತ್ವರಿತ ಪ್ರಕ್ರಿಯೆ, ಕನಿಷ್ಠ ಪೇಪರ್ ವರ್ಕ್ ಮತ್ತು ಮೇಲಾಧಾರ ಬೇಕಿಲ್ಲದಿರುವುದು ನಮ್ಮ ಇನ್ಸ್ಟಂಟ್ ಪರ್ಸನಲ್ ಲೋನ್ ಅನ್ನು ಭಾರತದ ವೃತ್ತಿಪರರಿಗೆ ಒಂದು ಸ್ಮಾರ್ಟ್ ಆಯ್ಕೆಯನ್ನಾಗಿ ಮಾಡುತ್ತದೆ. ಸ್ಪರ್ಧಾತ್ಮಕ ಬಡ್ಡಿದರ ಮತ್ತು ಯಾವುದೇ ಮರೆಮಾಚಿದ ಶುಲ್ಕ ಇಲ್ಲದಿರುವುದು ಮರುಪಾವತಿಯನ್ನು ಕೂಡ ಸುಲಭವಾಗಿಸುತ್ತವೆ. ಫಂಡ್ಗಳಿಗೆ ತ್ವರಿತ ಅಕ್ಸೆಸ್ ಪಡೆಯಲು, ಬಜಾಜ್ ಫಿನ್ಸರ್ವ್ನಿಂದ ನಿಮ್ಮ ಮುಂಚಿತ-ಅನುಮೋದಿತ ಆಫರನ್ನು ಪರಿಶೀಲಿಸಿ.
*ಷರತ್ತು ಅನ್ವಯ
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನ್ಗೆ ಅನ್ವಯವಾಗುವ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ನೀವು ರೂ. 25 ಲಕ್ಷದವರೆಗೆ ಹಣ ಪಡೆಯಬಹುದು. ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸುವುದರಿಂದ ಹಿಡಿದು ನಿಮ್ಮ ಲೋನ್ ಅನ್ನು ಒಟ್ಟುಗೂಡಿಸುವವರೆಗೆ, ಪರ್ಸನಲ್ ಲೋನ್ ಅನೇಕ ವೆಚ್ಚಗಳನ್ನು ನಿರ್ವಹಿಸಲು ಬಹುಮುಖ ಪರಿಹಾರವಾಗಿದೆ ಎಂದು ನೀವು ಕಂಡುಕೊಳ್ಳುತ್ತೀರಿ.
ಇನ್ಸ್ಟಂಟ್ ಪರ್ಸನಲ್ ಲೋನ್ ಸೇರಿದಂತೆ ಬಜಾಜ್ ಫಿನ್ಸರ್ವ್ ತನ್ನ ಎಲ್ಲಾ ಲೋನ್ಗಳಿಗೆ ಭಾಗಶಃ ಮುಂಪಾವತಿ ಸೌಲಭ್ಯವನ್ನು ನೀಡುತ್ತದೆ. ನಿಮ್ಮ ಮೊದಲ ಇಎಂಐ ಪಾವತಿಯಾದ ನಂತರ, ನೀವು ವರ್ಷಕ್ಕೆ ಆರು ಬಾರಿ ಭಾಗಶಃ ಮುಂಪಾವತಿ ಮಾಡಬಹುದು. ಆದರೆ, ಭಾಗಶಃ ಮುಂಪಾವತಿಯ ಕನಿಷ್ಠ ಮೊತ್ತವು ನಿಮ್ಮ ಇಎಂಐ ಮೊತ್ತದ ಮೂರು ಪಟ್ಟಿನಷ್ಟು ಇರಬೇಕು. ನೀವು ಫ್ಲೆಕ್ಸಿ ಲೋನನ್ನು ಆಯ್ಕೆ ಮಾಡಿದ್ದರೆ, ಯಾವುದೇ ಶುಲ್ಕವಿಲ್ಲದೆ ಲೋನನ್ನು ವಿತರಿಸಿದ ತಕ್ಷಣವೇ ನಮ್ಮ ಗ್ರಾಹಕ ಪೋರ್ಟಲ್ ಮೂಲಕ ನೀವು ಭಾಗಶಃ ಮುಂಪಾವತಿ ಮಾಡಬಹುದು.
ನಮ್ಮ ಅನುಕೂಲಕರ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ, ನಿಮ್ಮ ಲೋನ್ ಮಿತಿಯಿಂದ ನಿಮಗೆ ಅಗತ್ಯವಿರುವಷ್ಟು ಬಾರಿ ನೀವು ಹಣವನ್ನು ವಿತ್ಡ್ರಾ ಮಾಡಬಹುದು ಮತ್ತು ಮುಂಗಡ ಪಾವತಿ ಮಾಡಬಹುದು. ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸಿ, ಹೆಚ್ಚಿನ ಫ್ಲೆಕ್ಸಿಬಿಲಿಟಿ ಆನಂದಿಸಿ. ಬಡ್ಡಿಯನ್ನು ಮಾತ್ರ ಕಂತಾಗಿ ಪಾವತಿಸುವ ಆಯ್ಕೆ ಮಾಡಿ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಿಕೊಳ್ಳಿ. ಇದು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅಸಲನ್ನು ಮುಂಪಾವತಿಸಲು ಅಥವಾ ಅದನ್ನು ಅವಧಿಯ ಕೊನೆಗೆ ಮರುಪಾವತಿಸಲು ಅನುವು ಮಾಡಿಕೊಡುತ್ತದೆ.
ಬಜಾಜ್ ಫಿನ್ಸರ್ವ್ 13% ನಿಂದ ಆರಂಭವಾಗುವ ಆಕರ್ಷಕ ದರಗಳಲ್ಲಿ ಪರ್ಸನಲ್ ಲೋನ್ ಒದಗಿಸುತ್ತದೆ. ನಿಮ್ಮ ಲೋನ್ಗೆ ಅನ್ವಯವಾಗುವ ಪರ್ಸನಲ್ ಲೋನ್ ಬಡ್ಡಿದರಗಳು ಮತ್ತು ಇತರ ಶುಲ್ಕಗಳ ಬಗ್ಗೆ ಮತ್ತಷ್ಟು ಓದಿ.
ನೀವು ಪರ್ಸನಲ್ ಲೋನ್ಗೆ ಅಪ್ಲೈ ಮಾಡುವ ಸಂಬಳದಾರ ವೃತ್ತಿಪರರಾಗಿದ್ದರೆ, ಕೇವಲ 5 ನಿಮಿಷಗಳಲ್ಲಿ ನಿಮ್ಮ ಆನ್ಲೈನ್ ಲೋನ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಬಹುದು. ನಿಮ್ಮ ಡಾಕ್ಯುಮೆಂಟ್ಗಳನ್ನು ಪರಿಶೀಲಿಸಿದ ನಂತರ, ನೀವು 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಪರ್ಸನಲ್ ಲೋನ್ ಮೊತ್ತವನ್ನು ಪಡೆಯಬಹುದು*.
*ಷರತ್ತು ಅನ್ವಯ