ಪರ್ಸನಲ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ನಮ್ಮ ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಬೇಕಾದ ಮಾನದಂಡಗಳನ್ನು ತಿಳಿದುಕೊಳ್ಳಲು ಓದಿ.

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಈ ಕೆಳಗೆ ನಮೂದಿಸಿದ ಐದು ಬೇಸಿಕ್ ಮಾನದಂಡಗಳನ್ನು ನೀವು ಪೂರೈಸುವವರೆಗೆ ಯಾರಾದರೂ ನಮ್ಮ ಪರ್ಸನಲ್ ಲೋನಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಡಾಕ್ಯುಮೆಂಟ್‌ಗಳ ಸೆಟ್ ಅಗತ್ಯವಿರುತ್ತದೆ. ನಮ್ಮ ಆನ್ಲೈನ್ ಪರ್ಸನಲ್ ಲೋನಿನೊಂದಿಗೆ, ನೀವು ರೂ. 40 ಲಕ್ಷದವರೆಗೆ ತ್ವರಿತ ಅನುಮೋದನೆಯನ್ನು ಪಡೆಯಬಹುದು. ಸುಲಭ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ಅನುಮೋದನೆಯ 24 ಗಂಟೆಗಳ* ಒಳಗೆ ನಿಮಗೆ ಅಗತ್ಯವಿರುವ ಹಣವನ್ನು ಪಡೆಯಲು ನಿಮ್ಮ ಪ್ರಮುಖ ಡಾಕ್ಯುಮೆಂಟೇಶನ್ ಪೂರ್ಣಗೊಳಿಸಿ.

ಅರ್ಹತಾ ಮಾನದಂಡ

  • ರಾಷ್ಟ್ರೀಯತೆ: ಭಾರತೀಯ
  • ವಯಸ್ಸು: 21 ವರ್ಷಗಳಿಂದ 80 ವರ್ಷಗಳು*.
  • ಉದ್ಯೋಗಿ: ಸಾರ್ವಜನಿಕ, ಖಾಸಗಿ, ಅಥವಾ ಎಂಎನ್‌ಸಿ.
  • ಸಿಬಿಲ್ ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚು.
  • ಮಾಸಿಕ ಸಂಬಳ: ನೀವು ವಾಸಿಸುವ ನಗರದ ಆಧಾರದ ಮೇಲೆ ರೂ. 25,001 ರಿಂದ ಆರಂಭ.

ಅಗತ್ಯವಿರುವ ಡಾಕ್ಯುಮೆಂಟ್‌ಗಳು

  • ಕೆವೈಸಿ ಡಾಕ್ಯುಮೆಂಟ್‌ಗಳು: ಆಧಾರ್/ ಪ್ಯಾನ್ ಕಾರ್ಡ್/ ಪಾಸ್‌ಪೋರ್ಟ್/ ವೋಟರ್ ಐಡಿ/ ಡ್ರೈವಿಂಗ್ ಲೈಸೆನ್ಸ್/ ರಾಷ್ಟ್ರೀಯ ಜನಸಂಖ್ಯೆಯ ನೋಂದಣಿ ಪತ್ರ
  • ಉದ್ಯೋಗಿ ಐಡಿ ಕಾರ್ಡ್
  • ಕಳೆದ 3 ತಿಂಗಳುಗಳ ಸಂಬಳದ ಸ್ಲಿಪ್‌ಗಳು
  • ಹಿಂದಿನ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್

*ಲೋನ್ ಅವಧಿಯ ಕೊನೆಯಲ್ಲಿ ನೀವು 80 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಹೆಚ್ಚಿನ ವಿವರಗಳು

ನೀವು ವಾಸಿಸುವ ನಗರ ಮತ್ತು ನಿಮ್ಮ ಸಂಬಳವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಲು ನೀವು ಪೂರೈಸಬೇಕಾದ ಅತ್ಯಂತ ಪ್ರಮುಖ ಅರ್ಹತಾ ಮಾನದಂಡಗಳಲ್ಲಿ ಎರಡು ಪ್ರಮುಖವಾದುವು ಆಗಿದೆ.
ರೂ. 25,001 ರಿಂದ ಆರಂಭವಾಗುವ ಕನಿಷ್ಠ ಸಂಬಳದ ಅವಶ್ಯಕತೆಯೊಂದಿಗೆ ನಾವು ಭಾರತದಲ್ಲಿ 3,000 ಕ್ಕಿಂತ ಹೆಚ್ಚು ನಗರಗಳಲ್ಲಿ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತೇವೆ. ಈ ಅವಶ್ಯಕತೆಗಳು ನಿಮ್ಮ ನಿವಾಸದ ನಗರದ ಆಧಾರದ ಮೇಲೆ ಬದಲಾಗುತ್ತವೆ.

ನಾವು ಪರ್ಸನಲ್ ಲೋನ್ ಒದಗಿಸುವ ನಗರಗಳ ಪಟ್ಟಿಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಬಜಾಜ್ ಫೈನಾನ್ಸ್ ರೂ. 40 ಲಕ್ಷದವರೆಗಿನ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ನೀವು ನಮ್ಮ ಪರ್ಸನಲ್ ಲೋನ್ ಬಡ್ಡಿ ದರ ಮತ್ತು ಶುಲ್ಕಗಳ ಬಗ್ಗೆ ಇಲ್ಲಿ ಓದಬಹುದು.

ನೀವು ಅಪ್ಲೈ ಮಾಡಲು ಸಿದ್ಧರಾದಾಗ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ಇರಿಸಿಕೊಳ್ಳಿ. ಆನ್ಲೈನ್ ಅಪ್ಲಿಕೇಶನ್ ಫಾರ್ಮ್‌ನಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿದ ನಂತರ ನೀವು ಇವುಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಫಿಸಿಕಲ್ ಕಾಪಿಗಳನ್ನು ಸಂಗ್ರಹಿಸಲು ನಮ್ಮ ಒಬ್ಬ ಪ್ರತಿನಿಧಿಯು ನಿಮಗೆ ಕರೆ ಮಾಡುತ್ತಾರೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

Calculator

ನಿಮ್ಮ ಪರ್ಸನಲ್‌ ಲೋನ್‌ ಅರ್ಹತೆಯನ್ನು ಪರಿಶೀಲಿಸಿ

ನೀವು ಎಷ್ಟು ಲೋನ್ ಮೊತ್ತವನ್ನು ಪಡೆಯಬಹುದು ಎಂಬುದನ್ನು ಕಂಡುಕೊಳ್ಳಿ.

ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ತೆರೆಯಲು ಈ ಪುಟದ ಮೇಲ್ಭಾಗದಲ್ಲಿರುವ 'ಅಪ್ಲೈ' ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ನಿಮ್ಮ ಫೋನಿಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ.
  3. ನಿಮ್ಮ ಪೂರ್ಣ ಹೆಸರು, ಪ್ಯಾನ್, ಹುಟ್ಟಿದ ದಿನಾಂಕ ಮತ್ತು ಪಿನ್ ಕೋಡ್‌ನಂತಹ ನಿಮ್ಮ ಬೇಸಿಕ್ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ.
  4. ಈಗ, ಲೋನ್ ಆಯ್ಕೆ ಪುಟಕ್ಕೆ ಭೇಟಿ ನೀಡಲು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
  5. ನಿಮಗೆ ಬೇಕಾದ ಲೋನ್ ಮೊತ್ತವನ್ನು ನಮೂದಿಸಿ. ನಮ್ಮ ಮೂರು ಪರ್ಸನಲ್ ಲೋನ್ ರೂಪಾಂತರಗಳಾದ ಟರ್ಮ್, ಫ್ಲೆಕ್ಸಿ ಟರ್ಮ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್‌ನಿಂದ ಆಯ್ಕೆಮಾಡಿ.
  6. ಮರುಪಾವತಿ ಅವಧಿಯನ್ನು ಆಯ್ಕೆಮಾಡಿ - ನೀವು 6 ತಿಂಗಳಿಂದ 96 ತಿಂಗಳವರೆಗಿನ ಅವಧಿಯ ಆಯ್ಕೆಗಳನ್ನು ಆರಿಸಿಕೊಂಡು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ’.
  7. ನಿಮ್ಮ ಕೆವೈಸಿ ಪೂರ್ಣಗೊಳಿಸಿ ಮತ್ತು ನಿಮ್ಮ ಅಪ್ಲಿಕೇಶನ್ ಸಲ್ಲಿಸಿ.

ಮುಂದಿನ ಹಂತಗಳ ಬಗ್ಗೆ ನಮ್ಮ ಪ್ರತಿನಿಧಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆಯ ನಂತರ ಲೋನ್ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಸಂಬಳ ಪಡೆಯುವ ಅರ್ಜಿದಾರರಿಗೆ ಪರ್ಸನಲ್ ಲೋನ್ ಪಡೆಯಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಬಜಾಜ್ ಫೈನಾನ್ಸ್‌ನಿಂದ ಪರ್ಸನಲ್ ಲೋನಿಗಾಗಿ ಹುಡುಕುತ್ತಿರುವ ವ್ಯಕ್ತಿಗಳು ಸಲ್ಲಿಸಬೇಕು:

  • ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರಗಳು
  • ಕೆವೈಸಿ ದಾಖಲೆಗಳು - ಆಧಾರ್, ಪ್ಯಾನ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್
  • ಹಿಂದಿನ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು
  • ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
     
ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ ಅರ್ಹತೆ ಪಡೆಯಲು ಬೇಕಾದ ಸಿಬಿಲ್ ಸ್ಕೋರ್ ಎಷ್ಟು?

ನಿಮ್ಮ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಲು 685 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಸೂಕ್ತವಾಗಿದೆ.

ನನ್ನ ಪರ್ಸನಲ್ ಲೋನ್ ಅರ್ಹತೆಯನ್ನು ನಾನು ಹೇಗೆ ಪರಿಶೀಲಿಸಬಹುದು?

ನಮ್ಮ ಪರ್ಸನಲ್ ಲೋನಿಗೆ ಅರ್ಹರಾಗಲು, ನೀವು ಐದು ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.

ರಾಷ್ಟ್ರೀಯತೆ: ಭಾರತೀಯ
ವಯಸ್ಸು: 21 ವರ್ಷಗಳಿಂದ 80 ವರ್ಷಗಳು**
ಉದ್ಯೋಗಿ: ಸಾರ್ವಜನಿಕ, ಖಾಸಗಿ, ಅಥವಾ ಎಂಎನ್‌ಸಿ
ಸಿಬಿಲ್ ಸ್ಕೋರ್: 685 ಅಥವಾ ಅದಕ್ಕಿಂತ ಹೆಚ್ಚು
ಮಾಸಿಕ ಸಂಬಳ: ನೀವು ವಾಸಿಸುತ್ತಿರುವ ನಗರದ ಆಧಾರದ ಮೇಲೆ ರೂ. 25,001 ರಿಂದ ಆರಂಭ

*ಲೋನ್ ಅವಧಿಯ ಕೊನೆಯಲ್ಲಿ ನೀವು 80 ವರ್ಷ* ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ನಮ್ಮ ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಸಹಾಯದಿಂದ ನೀವು ಲೋನ್ ಪಡೆಯಬಹುದಾದ ಲೋನ್ ಮೊತ್ತವನ್ನು ಪರಿಶೀಲಿಸಿ.
 

ಪರ್ಸನಲ್ ಲೋನಿನೊಂದಿಗೆ ನಾನು ಪಡೆಯಬಹುದಾದ ಗರಿಷ್ಠ ಲೋನ್ ಮೊತ್ತ ಎಷ್ಟು?

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿನೊಂದಿಗೆ, ನೀವು ರೂ. 40 ಲಕ್ಷದವರೆಗಿನ ಹಣವನ್ನು ಪಡೆಯಬಹುದು. ಲೋನ್ ಮೊತ್ತವು ರೂ. 1 ಲಕ್ಷದಿಂದ ರೂ. 40 ಲಕ್ಷದವರೆಗೆ ಇರಬಹುದು, ಇದನ್ನು ನಿಮ್ಮ ಎಲ್ಲಾ ದೊಡ್ಡ ಅಥವಾ ಸಣ್ಣ ವೈದ್ಯಕೀಯ ವೆಚ್ಚಗಳಿಗೆ ಪಾವತಿಸಲು ಬಳಸಬಹುದು.

ಪರ್ಸನಲ್ ಲೋನಿಗೆ ಅರ್ಹರಾಗಲು ಬೇಕಾದ ಕನಿಷ್ಠ ವಯಸ್ಸು ಎಷ್ಟು?

ನೀವು 21 ರಿಂದ 80 ವರ್ಷಗಳ ನಡುವಿನ ವಯಸ್ಸಿನವರಾಗಿದ್ದರೆ ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು**. ಯುವ ಅರ್ಜಿದಾರರು ಸಾಮಾನ್ಯವಾಗಿ ಹೆಚ್ಚಿನ ಲೋನ್ ಮೊತ್ತವನ್ನು ಪಡೆಯುತ್ತಾರೆ ಏಕೆಂದರೆ ಅವರಿಗೆ ಮುಂಚಿತವಾಗಿ ಗಳಿಸುವ ವರ್ಷಗಳು ಇರುತ್ತವೆ.

*ಲೋನ್ ಅವಧಿಯ ಕೊನೆಯಲ್ಲಿ ನೀವು 80 ವರ್ಷ* ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಪರ್ಸನಲ್ ಲೋನ್‍ ಪಡೆಯಲು ಕನಿಷ್ಠ ಸಂಬಳ ಎಷ್ಟಿರಬೇಕು?

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಲು ಕನಿಷ್ಠ ರೂ. 25,001 ಸಂಬಳ ಬೇಕಾಗುತ್ತದೆ. ಆದಾಗ್ಯೂ, ನೀವು ವಾಸಿಸುವ ನಗರವನ್ನು ಅವಲಂಬಿಸಿ ಇದು ಬದಲಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ