ನನ್ನ ಸೂಪರ್‌ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ನಾನು ಎಲ್ಲಿ ರಿಡೀಮ್ ಮಾಡಬಹುದು?

2 ನಿಮಿಷದ ಓದು

ವೆಲ್ಕಮ್ ಬೋನಸ್‌ಗಳು, ನಿಯಮಿತ ಖರೀದಿಗಳು, ಮೈಲ್‌ಸ್ಟೋನ್ ಬೋನಸ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಬಹುದು.

ಕಾರ್ಡ್‌ಹೋಲ್ಡರ್‌ಗಳು ತಮ್ಮ RBL ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು:

  • ಫ್ಲೈಟ್ ಟಿಕೆಟ್‌ಗಳು
  • ಹೋಟೆಲ್ ಬುಕಿಂಗ್

  • ಮೊಬೈಲ್ ರೀಚಾರ್ಜ್
  • ವೈಯಕ್ತಿಕಗೊಳಿಸಿದ ಉಡುಗೊರೆಗಳು
  • Apple, Samsung, Google, Oppo, Vivo ಮತ್ತು ಇತರ ಬ್ರ್ಯಾಂಡ್‌ಗಳಿಂದ ಸ್ಮಾರ್ಟ್‌ಫೋನ್‌ಗಳು ಮತ್ತು ಗ್ಯಾಜೆಟ್‌ಗಳು
  • Samsung, LG ಮತ್ತು Reliance Digital, Croma ಮುಂತಾದ ವ್ಯಾಪಾರಿಗಳಿಂದ ಹೋಮ್ ಅಪ್ಲಾಯನ್ಸ್‌ಗಳು.
  • KAFF, Faber, Duraflex ಮತ್ತು Gilma ದಂತಹ ಬ್ರ್ಯಾಂಡ್‌ಗಳಿಂದ ಪೀಠೋಪಕರಣಗಳು, ಅಡುಗೆಮನೆ ವಸ್ತುಗಳು ಮತ್ತು ನೈರ್ಮಲ್ಯ ವಸ್ತುಗಳು
  • Apollo Hospitals, Manipal Hospitals, Ruby Hall Clinic ಮುಂತಾದ ಆಸ್ಪತ್ರೆಗಳಿಂದ ಆರೋಗ್ಯ ಸೇವೆಗಳು.

ಕಾರ್ಡ್‌ಹೋಲ್ಡರ್‌ಗಳು ತಮ್ಮ ಖರೀದಿಗಳಿಗೆ ಡೌನ್ ಪೇಮೆಂಟ್‌ಗಳನ್ನು ಮಾಡಲು ತಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು. ಈ ಮೊತ್ತವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಸಂಗ್ರಹಿಸಿದ ಕ್ರೆಡಿಟ್ ಕಾರ್ಡ್ ರಿವಾರ್ಡ್‌ಗಳೊಂದಿಗೆ ಪಾವತಿಸಬಹುದು.

ಕಾರ್ಡ್‌ಹೋಲ್ಡರ್‌ಗಳು ತಮ್ಮ RBL ಬ್ಯಾಂಕ್ ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಡೌನ್ ಪೇಮೆಂಟ್‌ಗಳನ್ನು ಮಾಡುವಾಗ ರೂ. 1,000 ವರೆಗೆ 5% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.

RBL ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ