ಕ್ರೆಡಿಟ್‌ ಕಾರ್ಡ್ ಪಾಯಿಂಟ್‌ಗಳನ್ನು ಬಳಸುವುದು ಹೇಗೆ?

ಗ್ರಾಹಕರು ಕೊಳ್ಳಲು ಬಯಸುವ ಎಲ್ಲಾ ವಸ್ತುಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದನ್ನು ಪ್ರೋತ್ಸಾಹಿಸಲು ಹಣಕಾಸು ಸಂಸ್ಥೆಗಳು ಮತ್ತು ಸಾಲದಾತರು ರಿವಾರ್ಡ್ ಪಾಯಿಂಟ್‌ಗಳನ್ನು ಪರಿಚಯಿಸಿದ್ದಾರೆ. ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು (NBFC) ಇಂದು ಕ್ರೆಡಿಟ್ ಕಾರ್ಡ್ ಟ್ರಾನ್ಸಾಕ್ಷನ್‌ಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತವೆ. ನಿಮ್ಮ ಕ್ರೆಡಿಟ್ ಕಾರ್ಡನ್ನು ನೀವು ಹೆಚ್ಚು ಬಳಸಿದಷ್ಟೂ ಹೆಚ್ಚು ಪಾಯಿಂಟ್‌ಗಳನ್ನು ನೀವು ಸಂಗ್ರಹಿತ್ತೀರಿ.

ಒಮ್ಮೆ ನೀವು ನಿಗದಿತ ನಂಬರಿನ ರಿವಾರ್ಡ್ ಪಾಯಿಂಟ್‌ಗಳನ್ನು ಸಂಗ್ರಹಿಸಿದ ನಂತರ, ಕ್ಯಾಶ್‌ಬ್ಯಾಕ್‌ಗಳು, ಗಿಫ್ಟ್‌ ವೌಚರ್‌ಗಳು, ಏರ್‌ ಮೈಲ್ಸ್, ಕೂಪನ್‌ಗಳು ಮತ್ತು ಮುಂತಾದವುಗಳನ್ನು ರಿಡೀಮ್ ಮಾಡಬಹುದು. ವಾಸ್ತವವಾಗಿ, ನೀವು ವೆಚ್ಚ ಮಾಡಿದಂತೆಲ್ಲಾ ನಿಮಗೆ ಹೆಚ್ಚಿನ ಅನುಕೂಲಗಳನ್ನು ನೀಡುವ ಕ್ರೆಡಿಟ್‌ ಕಾರ್ಡ್ ಆರಿಸಿಕೊಂಡರೆ ಅದರಲ್ಲಿ ಅರ್ಥವಿದೆ. ಉದಾಹರಣೆಗೆ, ನೀವು ಆಗಾಗ್ಗೆ ವಿಮಾನ ಪ್ರಯಾಣ ಮಾಡುವವರಾಗಿದ್ದರೆ, ನೀವು ಬುಕ್ ಮಾಡುವ ಎಲ್ಲಾ ಟಿಕೆಟ್‌ಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವ ಕ್ರೆಡಿಟ್‌ ಕಾರ್ಡ್‌ನ್ನು ಆರಿಸಿಕೊಳ್ಳುವುದು ಒಳ್ಳೆಯದು. ಉತ್ತಮ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವ ಅನೇಕ ನಂಬರಿನ ಕ್ರೆಡಿಟ್‌ ಕಾರ್ಡ್‌ಗಳು ಲಭ್ಯವಿದೆ. ಉದಾಹರಣೆಗೆ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್‌‌ಕಾರ್ಡ್ ತೆಗೆದುಕೊಳ್ಳಿ. 1 ಕಾರ್ಡಿನಲ್ಲಿ ನೀವು 4 ಕಾರ್ಡ್‌ಗಳ ಬಲವನ್ನು ಪಡೆಯುವುದಷ್ಟೇ ಅಲ್ಲದೆ, ಅಧ್ಭುತವಾದ ರಿವಾರ್ಡ್‌ ಪ್ರೊಗ್ರಾಮ್ ಜೊತೆಗೆ, ನೀವು ಪ್ರತಿ ಟ್ರಾನ್ಸಾಕ್ಷನ್ನಿನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು. RBL ಕ್ರೆಡಿಟ್‌ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ನೇರವಾಗಿ ಗ್ರಾಹಕರ ಅಕೌಂಟಿಗೆ ಪ್ರತಿ ತಿಂಗಳ ಕೊನೆಯಲ್ಲಿ ಜಮಾ ಮಾಡುತ್ತದೆ ಮತ್ತು ಇದನ್ನು ತಿಂಗಳ ಕೊನೆಯಲ್ಲಿ ನಲ್ಲಿ ರಿಡೀಮ್ ಮಾಡಿಕೊಳ್ಳಬಹುದು. 

RBL ಕ್ರೆಡಿಟ್ ಕಾರ್ಡ್ ರಿವಾರ್ಡ್‌ಗಳು

RBL ಕ್ರೆಡಿಟ್ ಕಾರ್ಡ್ ರಿವಾರ್ಡ್ ಪ್ರೊಗ್ರಾಮನ್ನು RBL ಬ್ಯಾಂಕ್ ತಮ್ಮ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗಾಗಿ ಪ್ರಾರಂಭಿಸಿದ ವಿಶೇಷ ಲಾಯಲ್ಟಿ ಪ್ರೊಗ್ರಾಮ್ ಆಗಿದ್ದು, ಇದರಲ್ಲಿ ಕಾರ್ಡ್ ಹೊಂದಿರುವವರು ತಮ್ಮ ಟ್ರಾನ್ಸಾಕ್ಷನ್‌ಗಳಿಗೆ ಪಾಯಿಂಟ್‌ಗಳನ್ನು ಸಂಗ್ರಹಿಸುತ್ತಾರೆ.. ಏರ್‌ಲೈನ್ ಟಿಕೆಟ್‌ಗಳು, ಬಸ್ ಟಿಕೆಟ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಮನೆ, ಫ್ಯಾಷನ್, ಬ್ಯೂಟಿ ಪ್ರಾಡಕ್ಟ್‌ಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಹಲವಾರು ಶ್ರೇಣಿಯ ಗ್ರಾಹಕ ಪ್ರಾಡಕ್ಟ್‌ಗಳಿಗೆ ಪಾವತಿಸಲು ಇವುಗಳನ್ನು ರಿಡೀಮ್ ಮಾಡಬಹುದು.

RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವುದು ಹೇಗೆ?

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿನೊಂದಿಗೆ, ರಿವಾರ್ಡ್ ಪಾಯಿಂಟ್‌ಗಳ ರಿಡೆಂಪ್ಶನ್ ಸುಲಭ! www.rblrewards.com/SuperCard ನಲ್ಲಿ RBL ರಿವಾರ್ಡ್‌ಗಳ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು 'ನನ್ನ ಅಕೌಂಟ್ ಸಕ್ರಿಯಗೊಳಿಸಿ' ಲಿಂಕ್ ಆಯ್ಕೆ ಮಾಡುವ ಮೂಲಕ ನಿಮ್ಮ ಅಕೌಂಟನ್ನು ಸಕ್ರಿಯಗೊಳಿಸಿ. ಕೆಲವು ಮೂಲಭೂತ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಅಕೌಂಟನ್ನು ಸಕ್ರಿಯಗೊಳಿಸಿ. ನೀವು RBL ರಿವಾರ್ಡ್ ಸರ್ವಿಸ್ ಸೆಂಟರನ್ನು 022 71190900 ನಲ್ಲಿ ಕೂಡ ಸಂಪರ್ಕಿಸಬಹುದು ಮತ್ತು ನಿಮ್ಮ ಅಕೌಂಟನ್ನು ಸಕ್ರಿಯಗೊಳಿಸಬಹುದು.

ಮುಂಚಿತ ಅನುಮೋದಿತ ಆಫರ್