ಭದ್ರತೆ ರಹಿತ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?
2 ನಿಮಿಷದ ಓದು
ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ. ನಿಮಗೆ ಅಗತ್ಯವಿರುವ ಹಣ ಪಡೆಯಲು ಈ ಸರಳ ಹಂತಗಳನ್ನು ಅನುಸರಿಸಿ:
1 ಅಪ್ಲೈ ಮಾಡುವ ಮೊದಲು ಪರ್ಸನಲ್ ಲೋನ್ ಬಗ್ಗೆ ಹೆಚ್ಚು ತಿಳಿದುಕೊಳ್ಳಿ
- ಬಜಾಜ್ ಫಿನ್‌ಸರ್ವ್ ನೀಡುವ ಪರ್ಸನಲ್ ಲೋನ್ ಫೀಚರ್‌ಗಳನ್ನು ಪರಿಗಣಿಸಿ.
- ಗರಿಷ್ಠ ಲೋನ್ ಮೊತ್ತ, ಕಾಲಾವಧಿ, ಬಡ್ಡಿದರಗಳು ಮತ್ತು ಇತರ ಶುಲ್ಕಗಳಂತಹ ಲೋನ್ ಸಂಬಂಧಿತ ಪದಗಳ ಬಗ್ಗೆ ತಿಳಿದುಕೊಳ್ಳಿ.
2. ನಿಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ನಿಮ್ಮ ಇಎಂಐಗಳನ್ನು ಅಂದಾಜು ಮಾಡಿ
- ನೀವು ಅಪ್ಲೈ ಮಾಡುವ ಮೊದಲು, ಸುಲಭವಾದ ಆನ್ಲೈನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಪರ್ಸನಲ್ ಲೋನ್ ಅರ್ಹತೆಯನ್ನು ಪರಿಶೀಲಿಸಿ. ನಿಮಗೆ ಕೊಡಬಹುದಾದ ಮೊತ್ತವನ್ನು ನೋಡಲು ನಿಮ್ಮ ಮೂಲಭೂತ ಮಾಹಿತಿಯನ್ನು ದಾಖಲಿಸಿ.
- ನೀವು ಅರ್ಹತೆ ಖಚಿತವಾದ ಮೇಲೆ, ನಿಮ್ಮ ಸಂಭವನೀಯ ಇಎಂಐ ಲೆಕ್ಕ ಹಾಕಿ ಮತ್ತು ಮರುಪಾವತಿಯನ್ನು ಯೋಜಿಸಿ.
3. ನಿಮಗೆ ಬೇಕಾದ ಹಣಕ್ಕಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ
- ಸಾಕಷ್ಟು ತಿಳಿದುಕೊಂಡ ಮೇಲೆ, ಪರ್ಸನಲ್ ಲೋನ್ ಪಡೆಯಲು ಅಪ್ಲಿಕೇಶನ್ ಪ್ರಕ್ರಿಯೆ ಶುರುಮಾಡಿ.
- ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಗೆ ಹೋಗಿ, ನಿಮ್ಮ ವೈಯಕ್ತಿಕ ವಿವರವನ್ನು ದಾಖಲಿಸಿ. ನಿಮ್ಮ ಮೊಬೈಲ್ ನಂಬರ್‌ಗೆ ಕಳುಹಿಸಲಾದ ಒಟಿಪಿ ನಮೂದಿಸುವ ಮೂಲಕ ನಿಮ್ಮ ಗುರುತನ್ನು ದೃಢೀಕರಿಸಿ.
- ನಮ್ಮ ಸದ್ಯದ ಗ್ರಾಹಕರು ತಮಗೆ ಲಭ್ಯವಿರುವ ಪೂರ್ವ-ಅನುಮೋದಿತ ಪರ್ಸನಲ್ ಲೋನ್ ಆಫರ್ ನೋಡಬಹುದು. ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿರುವ ಅರ್ಜಿದಾರರಿಗೆ ಅವರ ಹಣಕಾಸು ಮತ್ತು ಉದ್ಯೋಗದ ಮಾಹಿತಿ ಕೊಡುವಂತೆ ಕೇಳಲಾಗುತ್ತದೆ.
- ಹೊಸ ಅರ್ಜಿದಾರರಿಗೆ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ಮತ್ತು ಅವರ ಅರ್ಜಿಯನ್ನು ಪೂರ್ಣಗೊಳಿಸಲು ಕೇಳಲಾಗುತ್ತದೆ.
4. ತಕ್ಷಣವೇ ಅನುಮೋದನೆ ಪಡೆಯಿರಿ
- ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಕೇವಲ 5 ನಿಮಿಷಗಳಲ್ಲಿ ತ್ವರಿತ ಆನ್ಲೈನ್ ಅನುಮೋದನೆಗೆ ಅರ್ಹರಾಗಿರುತ್ತೀರಿ.
- ನೀವು ನಿಮ್ಮ ಲೋನ್ ವಿವರಗಳನ್ನು ಆಯ್ಕೆಮಾಡಿದ ನಂತರ, ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡಿ, ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.
- ಲೋನ್ ಮೊತ್ತವನ್ನು 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ವಿತರಿಸಲಾಗುತ್ತದೆ*.
*ಷರತ್ತು ಅನ್ವಯ
ಇನ್ನಷ್ಟು ಓದಿರಿ
ಕಡಿಮೆ ಓದಿ