ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಆಯ್ಕೆಗಳನ್ನು ಪಟ್ಟಿ ಮಾಡಿ. ನಿಮಗೆ ಏನು ಬೇಕೆಂದು ನಿಖರವಾಗಿ ತಿಳಿದಿದ್ದರೆ ಸರಿಯಾದ ಕ್ರೆಡಿಟ್ ಕಾರ್ಡನ್ನು ಶಾರ್ಟ್ಲಿಸ್ಟ್ ಮಾಡಲು ಸುಲಭವಾಗುತ್ತದೆ.
ನೀವು ಕ್ರೆಡಿಟ್ ಕಾರ್ಡ್ ಆಯ್ಕೆಮಾಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ:
1: ಲಭ್ಯತೆಯನ್ನು ಪರೀಕ್ಷಿಸಿಕೊಳ್ಳಿ:
ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಬೇಕಾದ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌ಗಳನ್ನು ನೋಡಿಕೊಳ್ಳಿ.
2: ಫೀಚರ್‌ಗಳನ್ನು ಪರೀಕ್ಷಿಸಿ:
ಹೆಚ್ಚುವರಿ ಫೀಚರ್‌ಗಳು ಇರುವ, ಹೆಚ್ಚುವರಿ ಬಡ್ಡಿ ರಹಿತ ಅವಧಿ, ಸುಲಭ ಮರುಪಾವತಿ, ಭದ್ರತೆ, ಆನ್ಲೈನ್ ಅಪ್ಲಿಕೇಶನ್ ಇನ್ನೂ ಮುಂತಾದ ಫೀಚರ್ ಹೊಂದಿರುವ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ.
3: ಇನ್ಸೆಂಟೀವ್ಸ್ ಪರೀಕ್ಷಿಸಿ:
ರಿಯಾಯಿತಿಗಳು, ಕ್ಯಾಶ್‌ಬ್ಯಾಕ್, ಆಫರ್‌ಗಳು, ಲಾಯಲ್ಟಿ ಪಾಯಿಂಟ್ ಅಥವಾ ವಿಶೇಷ ಸವಲತ್ತುಗಳನ್ನು ನೀಡಲಾಗುವ ಮತ್ತು ನಿಮಗೆ ಹಾಗೂ ನಿಮ್ಮ ಅಗತ್ಯಗಳಿಗೆ ಸಂಬಂಧಿಸಿದಂತೆ ಇನ್ಸೆಂಟೀವ್ಸ್ ಹೊಂದಿರುವ ಕಾರ್ಡನ್ನು ಆಯ್ಕೆಮಾಡಿ.
4:ಫೀಗಳು ಮತ್ತು ಶುಲ್ಕಗಳು:
ಪ್ರಯೋಜನಗಳ ಬದಲಿಗೆ ಹೆಚ್ಚಿನ ವಾರ್ಷಿಕ ಫೀ ಮತ್ತು ಶುಲ್ಕದ ವೆಚ್ಚ ವಿಧಿಸಿರಬಾರದು. ಕೈಗೆಟುಕುವ ವಾರ್ಷಿಕ ಶುಲ್ಕವನ್ನು ಹೊಂದಿರುವ ಕ್ರೆಡಿಟ್ ಕಾರ್ಡನ್ನು ನೋಡಿ.
5: ಕಾರ್ಡ್ ಹೈಲೈಟ್:
ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್ ಕಾರ್ಡಿನಲ್ಲಿ ಇರುವಂತಹ ಬಡ್ಡಿ ರಹಿತ ತಕ್ಷಣ ಲೋನ್ ಹಾಗೂ ನಗದು ವಿತ್ಡ್ರಾ ಪ್ರಯೋಜನಗಳು ಕಾರ್ಡ್ನಲ್ಲಿ ವಿಶೇಷವಾದ ಹೈಲೈಟ್ ಇದೆಯೇ ನೋಡಿ.
6: ಕ್ರೆಡಿಟ್ ಮಿತಿ:
ನಿಮ್ಮ ಸರಾಸರಿ ಮಾಸಿಕ ಖರ್ಚು ಮತ್ತು ನಿಮ್ಮ ಮಾಸಿಕ ಆದಾಯವನ್ನು ಲೆಕ್ಕಹಾಕಿ. ನಂತರ ನೀವು ಹೆಚ್ಚಿನ ಕ್ರೆಡಿಟ್ ಮಿತಿಯನ್ನು ಮತ್ತು ನಮ್ಯತೆಯನ್ನು ನೀಡುವ ಒಂದು ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ.
7: ಅಪ್ಲಿಕೇಶನ್ ಪ್ರಕ್ರಿಯೆ:
ಕನಿಷ್ಠ ಪ್ರಕ್ರಿಯೆ ಸಮಯ ಮತ್ತು ಸುಲಭ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ.
8: CIBIL ಸ್ಕೋರ್:
ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ಕ್ರೆಡಿಟ್ ಸ್ಕೋರನ್ನು ಹಾಳುಮಾಡುತ್ತವೆ ಎನ್ನುವುದು ಬರೀ ವದಂತಿಯಾಗಿದೆ. ನೀವು ಸಮಯಕ್ಕೆ ಮರುಪಾವತಿ ಮಾಡಿದರೆ, ಕ್ರೆಡಿಟ್ ಕಾರ್ಡ್‌ಗಳು ನಿಮ್ಮ CIBIL ಸ್ಕೋರ್ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಬಹುದು.
ಹೆಚ್ಚುವರಿ ಓದು: ಕ್ರೆಡಿಟ್ ಕಾರ್ಡನ್ನು ಹೇಗೆ ಆಯ್ಕೆ ಮಾಡುವುದು