ಕ್ರೆಡಿಟ್ ಕಾರ್ಡ್ ಬ್ಲಾಕ್ ಮತ್ತು ಅನ್‌ಬ್ಲಾಕ್ ಮಾಡುವುದು ಹೇಗೆ?

2 ನಿಮಿಷದ ಓದು

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅನ್ನು ಬ್ಲಾಕ್ ಮಾಡುವುದು ತೊಂದರೆ ರಹಿತವಾಗಿದೆ. ಕಾರ್ಡ್‌ಹೋಲ್ಡರ್‌ಗಳು ಅದನ್ನು RBL MyCard ಆ್ಯಪ್‌ನಿಂದ ಮಾಡಬಹುದು ಅಥವಾ ಟೋಲ್-ಫ್ರೀ ಕ್ರೆಡಿಟ್ ಕಾರ್ಡ್ ಗ್ರಾಹಕ ಸಹಾಯವಾಣಿ ನಂಬರ್ 022-7119 0900 ಗೆ ಕರೆ ಮಾಡಬಹುದು ಮತ್ತು ತಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವಂತೆ ಗ್ರಾಹಕರ ಪ್ರತಿನಿಧಿಯನ್ನು ಕೇಳಬಹುದು. ಪ್ರಕ್ರಿಯೆಯ ಮೂಲಕ ನಿಮಗೆ ಸಹಾಯ ಮಾಡಲು ಗ್ರಾಹಕ ಪ್ರತಿನಿಧಿಗೆ ಸುಲಭವಾಗಿಸಲು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ನಿಂದ ಕರೆ ಮಾಡುವುದನ್ನು ಮತ್ತು ಅಗತ್ಯ ವೈಯಕ್ತಿಕ ವಿವರಗಳನ್ನು , ವಿಶೇಷವಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಅನ್‌ಬ್ಲಾಕ್ ಮಾಡುವುದು ಹೇಗೆ?

ಸೂಪರ್‌ಕಾರ್ಡ್ ಅನ್‌ಬ್ಲಾಕ್ ಮಾಡಲು, ಕಾರ್ಡ್‌ಹೋಲ್ಡರ್‌ಗಳು ಅದನ್ನು RBL ಆ್ಯಪ್‌ನಿಂದ ಮಾಡಬಹುದು ಅಥವಾ ಟೋಲ್-ಫ್ರೀ ನಂಬರ್ 022-71190900 ಗೆ ಕರೆ ಮಾಡಿ ತಮ್ಮ ಕ್ರೆಡಿಟ್ ಕಾರ್ಡ್ ಅನ್‌ಬ್ಲಾಕ್ ಮಾಡುವಂತೆ ಗ್ರಾಹಕರ ಪ್ರತಿನಿಧಿಯನ್ನು ಕೇಳಬಹುದು.

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳ್ಳತನವಾಗಿದ್ದರೆ ಅನುಸರಿಸಬೇಕಾದ ಹಂತಗಳು?

ಹಂತ 1: ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿ

ಹಂತ 2: ಎಫ್‌ಐಆರ್ ನೋಂದಾಯಿಸಲು ಮರೆಯಬೇಡಿ

ಹಂತ 3: ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ

ಹಂತ 4: ಕ್ರೆಡಿಟ್ ಬ್ಯೂರೋವನ್ನು ತಕ್ಷಣ ಸಂಪರ್ಕಿಸಿ

ಹಂತ 5: ಹೊಸ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಿ

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಷ್ಟವನ್ನು ತಡೆಯಿರಿ

ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರವೂ ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಕಾಣೆಯಾದರೆ ಅಥವಾ ಕಳ್ಳತನವಾದರೆ, ನೀವು ಕೆಲವು ತಕ್ಷಣದ ಹಂತಗಳನ್ನು ತೆಗೆದುಕೊಳ್ಳಬೇಕು. ಇದು ನಿಮ್ಮ ಕಾರ್ಡ್‌ನ ದುರುಪಯೋಗವನ್ನು ತಡೆಯುತ್ತದೆ ಮತ್ತು ಯಾವುದೇ ಹೊಣೆಗಾರಿಕೆಯಿಂದ ನಿಮ್ಮನ್ನು ಉಳಿಸುತ್ತದೆ.

  • ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಕಳೆದುಕೊಂಡ ಮೂರು ದಿನಗಳ ಒಳಗೆ 022 – 71190900 ರಲ್ಲಿ ಬಜಾಜ್ ಫಿನ್‌ಸರ್ವ್‌ನ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿ
  • ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಲು ಪ್ರತಿನಿಧಿಯನ್ನು ಕೇಳಿ
  • ಮೊಬೈಲ್ ಅಪ್ಲಿಕೇಶನ್ ಮೂಲಕವೂ ನೀವು ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು
ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ನಿಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿದಾಗ ಏನಾಗುತ್ತದೆ?

ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿದಾಗ, ನಿಮ್ಮ ಕಾರ್ಡ್ ನೀಡುವ ಬ್ಯಾಂಕ್/ ಹಣಕಾಸು ಸಂಸ್ಥೆಯು ಕಾರ್ಡನ್ನು ಅನ್‌ಬ್ಲಾಕ್ ಮಾಡುವವರೆಗೆ ನೀವು ಯಾವುದೇ ಟ್ರಾನ್ಸಾಕ್ಷನ್‌ಗಳನ್ನು ಮಾಡಲು ಸಾಧ್ಯವಿಲ್ಲ.

ನಾವು ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಬಹುದೇ?

ಹೌದು, ನೀವು ನಿಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಬಹುದು. ಟೋಲ್-ಫ್ರೀ ಗ್ರಾಹಕ ಸಹಾಯವಾಣಿ ನಂಬರ್ 022-71190900 ಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಅನ್ನು ಬ್ಲಾಕ್ ಮಾಡಬಹುದು.

ನನ್ನ ಕ್ರೆಡಿಟ್ ಕಾರ್ಡ್ ಅನ್ನು ನಾನು ಆನ್ಲೈನ್‌ನಲ್ಲಿ ಹೇಗೆ ಬ್ಲಾಕ್ ಮಾಡಬಹುದು?

ಕಾರ್ಡ್ ನೀಡುವವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ನಿಮ್ಮ ವಿವರಗಳೊಂದಿಗೆ ಲಾಗಿನ್ ಮಾಡುವ ಮೂಲಕ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಬ್ಲಾಕ್ ಮಾಡಬಹುದು.

ನನ್ನ ಕ್ರೆಡಿಟ್ ಕಾರ್ಡ್ ಅನ್ನು ನಾನು ಹೇಗೆ ಅನ್‌ಬ್ಲಾಕ್ ಮಾಡಬಹುದು?

ಈ ಕೆಳಗಿನ ವಿಧಾನಗಳನ್ನು ಬಳಸಿಕೊಂಡು ನೀವು ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಅನ್‌ಬ್ಲಾಕ್ ಮಾಡಬಹುದು:

  • ಗ್ರಾಹಕ ಸಹಾಯವಾಣಿ ಹೆಲ್ಪ್‌ಲೈನ್ ನಂಬರ್ 022-71190900 ಡಯಲ್ ಮಾಡಿ ಮತ್ತು ನಿಮ್ಮ ಕಾರ್ಡನ್ನು ಅನ್‌ಬ್ಲಾಕ್ ಮಾಡಲು ಗ್ರಾಹಕ ಸಹಾಯವಾಣಿ ಪ್ರತಿನಿಧಿಯನ್ನು ಕೇಳಿಕೊಳ್ಳಿ.
  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ RBL ಮೈಕಾರ್ಡ್ ಆ್ಯಪ್ ಡೌನ್ಲೋಡ್ ಮಾಡಿ ಮತ್ತು ಅನ್‌ಬ್ಲಾಕ್ ಮಾಡಲು ನಿಮ್ಮ ಅಕೌಂಟ್‌ಗೆ ಲಾಗಿನ್ ಮಾಡಿ.
ಕ್ರೆಡಿಟ್ ಕಾರ್ಡನ್ನು ಅನ್‌ಬ್ಲಾಕ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಕ್ರೆಡಿಟ್ ಕಾರ್ಡ್ ಅನ್‌ಬ್ಲಾಕ್ ಆಗಲು ಏಳರಿಂದ ಹದಿನೈದು ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ