ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ?

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್ ಕಾರ್ಡ್ ಸಾಕಷ್ಟು ಹಣಕಾಸು ಪಡೆಯಲು, ಆಕರ್ಷಕ ಆಫರ್‌ಗಳು ಮತ್ತು ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಆಫರ್‌ಗಳು, ರಿವಾರ್ಡ್ ಪಾಯಿಂಟ್‌ಗಳು, ಆಹಾರ, ಪ್ರಯಾಣ ಮತ್ತು ಶಾಪಿಂಗ್ ಸಂಬಂಧಿತ ಪ್ರಯೋಜನಗಳು ಮತ್ತು ಇತರ ಮೌಲ್ಯವರ್ಧಿತ ಪ್ರಯೋಜನಗಳನ್ನು ಪಡೆಯಲು ನಿಮ್ಮ ಒನ್-ಸ್ಟಾಪ್ ಪರಿಹಾರವಾಗಿದೆ. ಈ ಸೂಪರ್‌ಕಾರ್ಡ್ ನಿಮಗೆ ಕ್ರೆಡಿಟ್ ಕಾರ್ಡ್, ಕ್ಯಾಶ್ ಕಾರ್ಡ್, ಲೋನ್ ಕಾರ್ಡ್ ಮತ್ತು EMI ಕಾರ್ಡ್‌ಗಳ ಪ್ರಯೋಜನಗಳನ್ನು ಒದಗಿಸುತ್ತದೆ. 4-in-1 ಕ್ರೆಡಿಟ್ ಕಾರ್ಡ್ ಉದ್ಯಮದಲ್ಲೇ ಮೊದಲ ಫೀಚರ್‌ಗಳನ್ನು ಒದಗಿಸುತ್ತದೆ ಮತ್ತು ನಿಮ್ಮ ಪ್ರೊಫೈಲ್ ಮತ್ತು ಅವಶ್ಯಕತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಸ್ಟಮೈಜ್ ಮಾಡಿದ ವಿವಿಧ ರೂಪಾಂತರಗಳಲ್ಲಿ ಲಭ್ಯವಾಗುತ್ತದೆ.


ವಿವರವಾದ ಸರಳ 3-ಹಂತದ ಪ್ರಕ್ರಿಯೆ ಇಲ್ಲಿದೆ ಕ್ರೆಡಿಟ್ ಕಾರ್ಡ್‌ಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು.
 
  • ಹಂತ 1: ಸೂಪರ್‌ಕಾರ್ಡ್‌ಗಳು ನೀಡುವ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಹೋಲಿಕೆ ಮಾಡಿ

  • ಪ್ರತಿ ಕ್ರೆಡಿಟ್ ಕಾರ್ಡ್ ವೇರಿಯಂಟ್ ವಿಶೇಷವಾಗಿದೆ, ಮತ್ತು ವಿಶೇಷ ಫೀಚರ್‌‌ಗಳು ಮತ್ತು ಪ್ರಯೋಜನಗಳೊಂದಿಗೆ ಲೋಡ್ ಆಗಿ ಬರುತ್ತದೆ. ಆದ್ದರಿಂದ, ನಿಮ್ಮ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಅಗತ್ಯತೆಗಳನ್ನು ಕಾರ್ಡ್ ಪ್ರಯೋಜನಗಳೊಂದಿಗೆ ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ನೀವು ಸರಿಯಾದ ಕ್ರೆಡಿಟ್ ಕಾರ್ಡ್ ಅನ್ನು ಆರಿಸಿಕೊಳ್ಳುವುದು ಮುಖ್ಯವಾಗಿದೆ, ಮತ್ತು ಕ್ರೆಡಿಟ್ ಕಾರ್ಡ್ ಹೋಲಿಕೆ ಪುಟದಲ್ಲಿ ಸೂಪರ್ ಕಾರ್ಡ್‌‌ಗಳ ಫೀಚರ್‌‌ಗಳನ್ನು ಹೋಲಿಸಿ ನೋಡಿ


  •  
  • ಹಂತ 2: ನಿರ್ದಿಷ್ಟ ಅರ್ಹತಾ ನಿಯಮಗಳನ್ನು ಪೂರೈಸಿ

  • ಒಂದು ಬಾರಿ ನೀವು ನಿಮಗೆ ಪರ್ಫೆಕ್ಟ್ ಆಗುವ ಸೂಪರ್ ಕಾರ್ಡ್ ಆಯ್ಕೆ ಮಾಡಿದ ನಂತರ, ನಿಮ್ಮ ವಯಸ್ಸು, ವಿಳಾಸ, ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಹಿಸ್ಟ್ರಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ನೋಡಿ. ನಂತರ, ನಿಮ್ಮ ಅರ್ಹತೆಯನ್ನು ದೃಢೀಕರಿಸಲು ನಿಮ್ಮ ಗುರುತು ಮತ್ತು ಆದಾಯ ಪುರಾವೆಗಳಂತಹ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಶ್ರದ್ಧೆಯಿಂದ ಮಾಡಿದರೆ, ಅದು ಅನುಮೋದನೆಯ ಪ್ರಕ್ರಿಯೆಯನ್ನು ತ್ವರಿತ, ನಯವಾಗಿ ಮತ್ತು ತೊಂದರೆ ರಹಿತವನ್ನಾಗಿ ಮಾಡುತ್ತದೆ.  •  
  • ಹಂತ 3: ಮುಂಚಿತ-ಅನುಮೋದಿತ ಆಫರ್ ಮೂಲಕ ತ್ವರಿತ ಇ-ಅನುಮೋದನೆಯನ್ನು ಪಡೆಯಿರಿ

  • ಸೂಪರ್‌‌ಕಾರ್ಡ್‌‌ಗೆ ಅಪ್ಲೈ ಮಾಡಲು ಇನ್ನೊಂದು ಮಾರ್ಗವೆಂದರೆ ನಿಮ್ಮ ಮುಂಚಿತ-ಅನುಮೋದಿತ ಆಫರ್‌‌ಗಳನ್ನು ಪರಿಶೀಲಿಸುವುದು, ಇದು ಅದರ ಪ್ರಯೋಜನಗಳಿಗೆ ತ್ವರಿತ ಪ್ರವೇಶವನ್ನು ಖಾತ್ರಿಗೊಳಿಸುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ಮೂಲಭೂತ ವಿವರಗಳಾದ ನಿಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಫಾರ್ಮಿನಲ್ಲಿ ನಮೂದಿಸುವುದು, ಮತ್ತು ಕಸ್ಟಮೈಜ್ ಮಾಡಿದ ಕ್ರೆಡಿಟ್ ಕಾರ್ಡ್ ಹಣಕಾಸು ಒಪ್ಪಂದದ ಮೂಲಕ ತ್ವರಿತ ಅನುಮೋದನೆಯನ್ನು ಪಡೆಯಿರಿ.

ತ್ವರಿತ ಕ್ರಮ