ಗೋಲ್ಡ್ ಲೋನ್ ವರ್ಸಸ್ ಪರ್ಸನಲ್ ಲೋನ್: ನೀವು ಯಾವುದನ್ನು ಆಯ್ಕೆ ಮಾಡಬೇಕು?
2 ನಿಮಿಷದ ಓದು
ನಿಮಗೆ ಅಲ್ಪಾವಧಿಯಲ್ಲಿ ಹಣದ ಅಗತ್ಯವಿದ್ದಾಗ ಗೋಲ್ಡ್ ಲೋನ್ ಮತ್ತು ಪರ್ಸನಲ್ ಲೋನ್ ಎರಡು ಅನುಕೂಲಕರ ಹಣಕಾಸು ಆಯ್ಕೆಗಳಾಗಿವೆ. ನೀವು ನಿರ್ಧಾರ ತೆಗೆದುಕೊಳ್ಳುವ ಮೊದಲು ಅವುಗಳ ಅನುಕೂಲಗಳು ಮತ್ತು ಅನನುಕೂಲಗಳನ್ನು ವಿವರವಾಗಿ ಓದಿ.
ಗೋಲ್ಡ್ ಲೋನ್ ಸಾಧಕ ಮತ್ತು ಬಾಧಕಗಳು
- ಇದು ಸುರಕ್ಷಿತ ಲೋನ್ ಆಗಿರುವುದರಿಂದ, ಸಾಲದಾತರು ಸಾಮಾನ್ಯವಾಗಿ ನೀವು ಅಡಮಾನವಾಗಿ ನೀಡುವ ಚಿನ್ನದ ಮೌಲ್ಯದ 75% ವರೆಗೆ ಒದಗಿಸುತ್ತಾರೆ.
- ಲೋನ್ ಅನುಮೋದನೆ ಮತ್ತು ವಿತರಣೆ ಪ್ರಕ್ರಿಯೆಯು ತ್ವರಿತ ಮತ್ತು ಸುಲಭವಾಗಿದೆ.
- ಸುರಕ್ಷಿತ ಲೋನ್ ಆಗಿರುವುದರಿಂದ ನಿಮ್ಮ ಕ್ರೆಡಿಟ್ ಇತಿಹಾಸ ಅಥವಾ ಸ್ಕೋರ್ ನಿರ್ಣಾಯಕವಾಗಿರುವುದಿಲ್ಲ.
- ನೀವು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಹೊಂದಿದ್ದೀರಿ
- ನೀವು ಲೋನನ್ನು ಮರುಪಾವತಿಸಲು ವಿಫಲವಾದರೆ, ಸಾಲದಾತರು ಹಣವನ್ನು ಮರುಪಡೆಯಲು ನಿಮ್ಮ ಆಸ್ತಿಯನ್ನು ಲಿಕ್ವಿಡೇಟ್ ಮಾಡಬಹುದು.
ಪರ್ಸನಲ್ ಲೋನ್ ಸಾಧಕ ಮತ್ತು ಬಾಧಕಗಳು
- ಇದು ಸುರಕ್ಷಿತವಲ್ಲದ ಲೋನ್ ಆಗಿದೆ, ಆದ್ದರಿಂದ ನೀವು ಪರ್ಸನಲ್ ಲೋನಿಗೆ ಅಪ್ಲೈ ಮಾಡಲು ಯಾವುದೇ ಅಡಮಾನವನ್ನು ಇಡಬೇಕಾಗಿಲ್ಲ
- ಹಣವನ್ನು ಪಡೆಯಲು ಸರಳ ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿ. ಸುಲಭವಾಗಿ ಲೋನ್ ಪಡೆಯಲು ನೀವು 685 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ
- ಕನಿಷ್ಠ ಡಾಕ್ಯುಮೆಂಟೇಶನ್ ಸಲ್ಲಿಸಿ, ಮತ್ತು ಪರಿಶೀಲನೆ ಮಾಡಿದ ನಂತರ, ಅನುಮೋದನೆಯ 24 ಗಂಟೆಗಳ* ಒಳಗೆ ಮೊತ್ತವನ್ನು ನಿಮ್ಮ ಅಕೌಂಟ್‌ನಲ್ಲಿ ವಿತರಿಸಲಾಗುತ್ತದೆ
- ಕೈಗೆಟುಕುವಿಕೆಯ ಆಧಾರದ ಮೇಲೆ 1 ರಿಂದ 5 ವರ್ಷಗಳವರೆಗಿನ ನಿಮ್ಮ ಮರುಪಾವತಿ ಅವಧಿಯನ್ನು ನೀವು ಆಯ್ಕೆ ಮಾಡಬಹುದು
- ಫ್ಲೆಕ್ಸಿ ಪರ್ಸನಲ್ ಲೋನ್, ಜೊತೆಗೆ ನೀವು ಮಂಜೂರಾದ ಲೋನ್ ಮೊತ್ತದಿಂದ ಲೋನ್ ಪಡೆಯಬಹುದು ಮತ್ತು ನಿಮಗೆ ಸಾಧ್ಯವಾದಾಗ ಮುಂಗಡ ಪಾವತಿ ಮಾಡಬಹುದು. ನೀವು ಬಡ್ಡಿಯನ್ನು ಮಾಸಿಕ ಕಂತುಗಳಾಗಿ ಮಾತ್ರ ಪಾವತಿಸಲು ಆಯ್ಕೆ ಮಾಡಿದಾಗ ಇದು ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ
*ಷರತ್ತು ಅನ್ವಯ
ಇನ್ನಷ್ಟು ಓದಿರಿ
ಕಡಿಮೆ ಓದಿ