ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ನೀವು ಇಲ್ಲಿ ನಮೂದಿಸಿದ ಪ್ರಮುಖ ಮಾನದಂಡಗಳನ್ನು ಪೂರೈಸಿದರೆ ಯಾರಾದರೂ ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡಬಹುದು. ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಲವು ಬೇಸಿಕ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ನಿಮ್ಮನ್ನು ಕೇಳಲಾಗುತ್ತದೆ.
ಅರ್ಹತಾ ಮಾನದಂಡ
ರಾಷ್ಟ್ರೀಯತೆ: ಭಾರತೀಯ
ವಯಸ್ಸು: 21 ರಿಂದ 70
ಚಿನ್ನದ ಶುದ್ಧತೆ: 22 ಕ್ಯಾರೆಟ್ ಅಥವಾ ಅದಕ್ಕಿಂತ ಹೆಚ್ಚು
ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಇವುಗಳಲ್ಲಿ ಯಾವುದಾದರೂ ಒಂದು:
- ಆಧಾರ್ ಕಾರ್ಡ್
- ವೋಟರ್ ID ಕಾರ್ಡ್
- ಪಾಸ್‌ಪೋರ್ಟ್
- ಡ್ರೈವಿಂಗ್ ಲೈಸೆನ್ಸ್
ಪ್ಯಾನ್ ಕಾರ್ಡ್ ಅಗತ್ಯವಿಲ್ಲ. ಆದಾಗ್ಯೂ, ನೀವು ರೂ. 5 ಲಕ್ಷಕ್ಕಿಂತ ಹೆಚ್ಚಿನ ಗೋಲ್ಡ್ ಲೋನಿಗೆ ಅಪ್ಲೈ ಮಾಡಿದರೆ ನಿಮ್ಮ ಪ್ಯಾನ್ ಕಾರ್ಡನ್ನು ಸಲ್ಲಿಸಲು ಕೇಳಲಾಗುತ್ತದೆ.
ಹೆಚ್ಚಿನ ವಿವರಗಳು
ನೀವು ಅರ್ಹ ವಯಸ್ಸಿನ ವ್ಯಾಪ್ತಿಯೊಳಗೆ ಇರುವವರೆಗೆ ಮತ್ತು ನಿಮ್ಮ ಚಿನ್ನದ ಆಭರಣವು ಕನಿಷ್ಠ 22 ಕ್ಯಾರೆಟ್ಗಳಾಗಿದ್ದರೆ ನೀವು ಸುಲಭವಾಗಿ ಗೋಲ್ಡ್ ಲೋನಿಗೆ ಅರ್ಹರಾಗಬಹುದು. ಈ ಲೋನಿಗೆ ಅಪ್ಲೈ ಮಾಡಲು ನೀವು ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕಾಗಿಲ್ಲ, ಏಕೆಂದರೆ ನೀವು ನಿಮ್ಮ ಚಿನ್ನದ ವಸ್ತುಗಳನ್ನು ಅಡಮಾನವಾಗಿ ಒದಗಿಸುತ್ತಿದ್ದೀರಿ.
ಈ ಲೋನ್‌ಗಾಗಿ ನೀವು ಚಿನ್ನದ ಆಭರಣವನ್ನು ಮಾತ್ರ ಭದ್ರತೆಯಾಗಿ ಸಲ್ಲಿಸಬಹುದು. ನಾವು ಪ್ರಸ್ತುತ ಚಿನ್ನದ ನಾಣ್ಯಗಳು, ಬಾರ್‌ಗಳು, ಮೂರ್ತಿಗಳು, ಪಾತ್ರೆಗಳು ಅಥವಾ ಇತರ ಯಾವುದೇ ವಸ್ತುಗಳನ್ನು ಅಡಮಾನವಾಗಿ ಅಂಗೀಕರಿಸುವುದಿಲ್ಲ.
ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ?? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.