ಫ್ಲೆಕ್ಸಿ ಪರ್ಸನಲ್ ಲೋನ್ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು
-
ನೀವು ಬಯಸಿದಾಗ ಪಡೆಯಿರಿ
ಅನುಮೋದನೆ ದೊರೆತ ಲೋನ್ ಮಿತಿಯಿಂದ ನಿಮಗೆ ಬೇಕಾದಷ್ಟು ಸಲ ಹಣ ವಿತ್‌ಡ್ರಾ ಮಾಡಿ.
-
ನಿಮಗೆ ಸಾಧ್ಯವಾದಾಗ ಮರುಪಾವತಿಸಿ
-
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ
ಹಣ ವಿತ್‌ಡ್ರಾ ಮಾಡಿ ಮತ್ತು ಯಾವುದೇ ಶುಲ್ಕ ಪಾವತಿಸದೆ ಅವುಗಳನ್ನು ಮುಂಗಡವಾಗಿ ಪಾವತಿಸಿ.
-
ಯಾವುದೇ ಅಪ್ಲಿಕೇಶನ್‌ಗಳನ್ನು ಸೇರಿಸಲಾಗಿಲ್ಲ
-
ಆನ್ಲೈನ್ ಟ್ರಾನ್ಸಾಕ್ಷನ್‌ಗಳು
ನಿಮ್ಮ ಲೋನ್ ಮಿತಿಯಿಂದ ನಿಮ್ಮ ಲೋನ್ ಅಕೌಂಟಿಗೆ ಹಣವನ್ನು ಟ್ರಾನ್ಸ್‌ಫರ್ ಮಾಡಲು ಮತ್ತು ಮುಂಗಡ ಪಾವತಿ ಮಾಡಲು ನಮ್ಮ ಗ್ರಾಹಕ ಪೋರ್ಟಲ್ – ನನ್ನ ಅಕೌಂಟ್ ಬಳಸಿ.
-
ಬಡ್ಡಿ-ಮಾತ್ರ ಕಟ್ಟುವ ಇಎಂಐಗಳು
ಅವಧಿಯ ಮೊದಲ ಭಾಗದಲ್ಲಿ ಕೇವಲ ಬಡ್ಡಿಯನ್ನು ಮಾತ್ರ ಇಎಂಐ ಆಗಿ ಪಾವತಿಸಿ, ಅಸಲನ್ನು ನಂತರದ ಭಾಗದಲ್ಲಿ ಪಾವತಿಸುವ ಆಯ್ಕೆ ಮಾಡಿ, ಇದರಿಂದ ನಿಮ್ಮ ಇಎಂಐ 45%ವರೆಗೆ ಕಡಿಮೆಯಾಗುವುದು*.
-
ದಿನದ ಲೆಕ್ಕದ ಬಡ್ಡಿ
ಆ ದಿನದ ಕೊನೆಯಲ್ಲಿ ನೀವು ಬಳಸುವುದರ ಮೇಲೆ ಮಾತ್ರ ಬಡ್ಡಿ ಪಾವತಿಸಿ. ಒಳನೋಟಕ್ಕಾಗಿ ಫ್ಲೆಕ್ಸಿ ಬಡ್ಡಿ ಕ್ಯಾಲ್ಕುಲೇಟರ್ ಬಳಸಿ.
ಫ್ಲೆಕ್ಸಿ ಪರ್ಸನಲ್ ಲೋನ್
ಬಜಾಜ್ ಫಿನ್‌ಸರ್ವ್‌ನ ಫ್ಲೆಕ್ಸಿ ಲೋನ್‌ಗಳು ಭಾರತದಲ್ಲಿ ಸಾಲ ಪಡೆಯುವ ಹೊಸ ಮಾರ್ಗಗಳಾಗಿವೆ. ನಿಮ್ಮ ಕ್ರೆಡಿಟ್ ಪ್ರೊಫೈಲ್ ಆಧಾರದ ಮೇಲೆ ನಿಮಗೆ ಒಂದು ಪೂರ್ವ-ಅನುಮೋದಿತ ಲೋನ್ ಮಿತಿ ಸಿಗುತ್ತದೆ, ಇದನ್ನು ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಬಳಸಬಹುದು. ನಿಮಗೆ ಹಣಕಾಸಿನ ಅಗತ್ಯವಿದ್ದಾಗ ಈ ಮಿತಿಯಿಂದ ಹಣ ವಿತ್‌ಡ್ರಾ ಮಾಡಬಹುದು ಮತ್ತು ನಿಮ್ಮ ಬಳಿ ಹೆಚ್ಚಿನ ಹಣವಿದ್ದಾಗ ಪೂರ್ವಪಾವತಿ ಮಾಡಬಹುದು. ಲೋನ್ ಮಿತಿಯಿಂದ ನೀವು ವಿತ್‌ಡ್ರಾ ಮಾಡಿದ ಹಣದ ಮೇಲೆ ಮಾತ್ರ ಬಡ್ಡಿ ಕಟ್ಟುತ್ತೀರಿ, ಮಂಜೂರಾದ ಪೂರ್ತಿ ಮೊತ್ತದ ಮೇಲೆ ಅಲ್ಲ. ಈ ರೀತಿಯಲ್ಲಿ ನೀವು ಕೇಸ್-ಟು-ಕೇಸ್ ಆಧಾರದ ಮೇಲೆ ನಿಮ್ಮ ನಿರಂತರ ಅಗತ್ಯಗಳನ್ನು ಪೂರೈಸಬಹುದು. ದಿನದ ಕೊನೆಯಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ ಮತ್ತು ಲೋನ್ ಅನ್ನು ಸರಿಯಾಗಿ ಬಳಸಲು ಫ್ಲೆಕ್ಸಿ ಡೇ-ವೈಸ್ ಬಡ್ಡಿ ಕ್ಯಾಲ್ಕುಲೇಟರ್ ಬಳಸಬಹುದು.
ನೀವು ಮಾಡುವ ಪ್ರತಿ ವಿತ್‌ಡ್ರಾವಲ್ ಮತ್ತು ಭಾಗಶಃ-ಮುಂಗಡ ಪಾವತಿಗೆ ನಾವು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ಆದ್ದರಿಂದ, ನಿಮ್ಮ ಬಡ್ಡಿ ಹಣದ ಹೊರಹರಿವನ್ನು ತಡೆಗಟ್ಟಲು ನೀವು ನಿಮ್ಮ ಲೋನ್ ಅವಧಿ ಪೂರ್ಣಗೊಳ್ಳುವ ಮುಂಚೆಯೇ ಅದನ್ನು ಕ್ಲೋಸ್ ಮಾಡಬಹುದು. ಅದೇ ರೀತಿ, ವಿತ್‌ಡ್ರಾವಲ್‌ಗಳು ಮತ್ತು ಭಾಗಶಃ-ಮುಂಗಡ ಪಾವತಿಗಳಿಗಾಗಿ ನಾವು ಹೆಚ್ಚುವರಿ ಕಾಗದಪತ್ರಗಳನ್ನು ಕೇಳುವುದಿಲ್ಲ. ನೀವು ಕೇವಲ ಆನ್ಲೈನ್‌ನಲ್ಲಿ ಟ್ರಾನ್ಸಾಕ್ಷನ್ ನಡೆಸಬಹುದು ಮತ್ತು ನಮ್ಮ ಗ್ರಾಹಕ ಪೋರ್ಟಲ್ – ನನ್ನ ಅಕೌಂಟ್ ಮೂಲಕ ಹಣವನ್ನು ಡೆಪಾಸಿಟ್ ಮಾಡಬಹುದು.
ನಮ್ಮ ಫ್ಲೆಕ್ಸಿ ಪರ್ಸನಲ್ ಲೋನ್‌ಗಳು ಸಂಬಳದಾರ ವ್ಯಕ್ತಿಗಳು, ಸ್ವಯಂ ಉದ್ಯೋಗಿಗಳು, ವೃತ್ತಿಪರರು ಮತ್ತು ವ್ಯಾಪಾರಿಗಳಿಗೆ ಸಿಗುತ್ತವೆ. ನಾವು ಸರಳ ಅರ್ಹತಾ ಮಾನದಂಡಗಳನ್ನು ಹೊಂದಿದ್ದೇವೆ ಮತ್ತು ನಿಮ್ಮ ಲೋನನ್ನು ಅನುಮೋದಿಸಲು ಬೇಸಿಕ್ ಡಾಕ್ಯುಮೆಂಟ್‌ಗಳು ಸಾಕಾಗುತ್ತವೆ.
ಫ್ಲೆಕ್ಸಿ ಲೋನ್‌ನ ಒಂದು ವೈಶಿಷ್ಟ್ಯವೆಂದರೆ, ಅವಧಿಯ ಮೊದಲ ಭಾಗದಲ್ಲಿ ಇಎಂಐನ ಬಡ್ಡಿಯನ್ನು ಮಾತ್ರ ಪಾವತಿಸುವ ಆಯ್ಕೆ ಮಾಡಬಹುದು. ನಂತರ ನೀವು ಅಸಲನ್ನು ಪಾವತಿಸಬಹುದು. ಇದು ನಿಮ್ಮ ಕಂತುಗಳನ್ನು 45% ವರೆಗೆ ಕಡಿಮೆ ಮಾಡುತ್ತದೆ*. ಬಡ್ಡಿ-ಮಾತ್ರ ಕಟ್ಟುವ ಇಎಂಐಗಳು ನಿಮ್ಮ ಮರುಪಾವತಿಯನ್ನು ಸುಲಭಗೊಳಿಸಲು ಮತ್ತು ಇಎಂಐಗಳನ್ನು ಒಂದು ಕಟ್ಟುನಿಟ್ಟಾದ ಬಜೆಟ್‍ಗೆ ಹೊಂದಿಸಲು ಸಹಾಯ ಮಾಡುತ್ತವೆ. ನೀವು 84 ತಿಂಗಳುಗಳಲ್ಲಿ** ಮರುಪಾವತಿಯನ್ನು ಕೂಡ ಹರಡಬಹುದು ಮತ್ತು ಲೋನನ್ನು ಇನ್ನಷ್ಟು ಕೈಗೆಟಕುವಂತೆ ಮಾಡಬಹುದು.
ಮನೆ ನವೀಕರಣ, ಮದುವೆ ಅಥವಾ ಪ್ರಯಾಣ ಅಥವಾ ಯಾವ ಉದ್ದೇಶಕ್ಕೆ ಫಂಡಿಂಗ್ ಬೇಕೆಂದು ನಿಖರವಾಗಿ ಹೇಳಲಾಗದ ಸಂದರ್ಭಗಳಿಗೆ ಫ್ಲೆಕ್ಸಿ ಪರ್ಸನಲ್ ಲೋನ್‌ಗಳು ಹೆಚ್ಚು ಸೂಕ್ತವಾಗಿವೆ.
ಫ್ಲೆಕ್ಸಿ ಲೋನ್ ಬಡ್ಡಿ ದರವನ್ನು ಪರಿಶೀಲಿಸಿ
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
**ಫ್ಲೆಕ್ಸಿ ಹೈಬ್ರಿಡ್ ಲೋನ್‌ಗಳಿಗೆ ಅನ್ವಯವಾಗುತ್ತದೆ
ಸಂಬಳದಾರ ವ್ಯಕ್ತಿಗಳಿಗೆ ಬೇಕಾದ ದಾಖಲೆಗಳು
- ಕೆವೈಸಿ ಡಾಕ್ಯುಮೆಂಟ್‌ಗಳು
- ಫಾರಂ 16 ಅಥವಾ ಇತ್ತೀಚಿನ ಸಂಬಳ ಸ್ಲಿಪ್‌ಗಳು
- ಹಿಂದಿನ ಆರು ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
(ಇಲ್ಲಿ ಹೇಳಲಾದ ದಾಖಲೆಗಳ ಪಟ್ಟಿಯು ಸೂಚಕವಷ್ಟೇ. ನಿಮ್ಮ ಹಣಕಾಸಿನ ಪ್ರೊಫೈಲ್ ಆಧರಿಸಿ ನಿಮ್ಮನ್ನು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಕೇಳಬಹುದು.)
ಫ್ಲೆಕ್ಸಿ ಪರ್ಸನಲ್ ಲೋನ್‍ಗೆ ಅರ್ಹತಾ ಮಾನದಂಡ
ಸಂಬಳದ ವ್ಯಕ್ತಿಗಳಿಗೆ:
- ನೀವು 21 ವರ್ಷದಿಂದ 67 ವರ್ಷಗಳ* ವಯಸ್ಸಿನವರಾಗಿರಬೇಕು
- ನೀವು ಎಂಎನ್‌ಸಿ, ಸಾರ್ವಜನಿಕ ಅಥವಾ ಖಾಸಗಿ ಕಂಪನಿಯ ಸಂಬಳದ ಉದ್ಯೋಗಿಯಾಗಿರಬೇಕು
- ನೀವು ಅರ್ಹ ನಗರದಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರಾಗಿರಬೇಕು
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಫ್ಲೆಕ್ಸಿ ಪರ್ಸನಲ್ ಲೋನ್‍ಗೆ ಅರ್ಜಿ ಸಲ್ಲಿಸುವುದು ಹೇಗೆ
- 1 ನಮ್ಮ ಸರಳ ಆನ್‍ಲೈನ್ ಫಾರ್ಮ್ ತೆರೆಯಲು 'ಅಪ್ಲೈ ಆನ್‍ಲೈನ್' ಮೇಲೆ ಕ್ಲಿಕ್ ಮಾಡಿ.
- 2 ನಿಮ್ಮ ಫೋನ್ ನಂಬರ್ ಹಂಚಿಕೊಳ್ಳಿ ಮತ್ತು ಒಟಿಪಿಯೊಂದಿಗೆ ನಿಮ್ಮನ್ನು ಪ್ರಮಾಣೀಕರಿಸಿಕೊಳ್ಳಿ.
- 3 ಬೇಸಿಕ್ ಕೆವೈಸಿ, ಆದಾಯ ಮತ್ತು ಉದ್ಯೋಗ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ.
- 4 ತ್ವರಿತ ಅನುಮೋದನೆ ಪಡೆಯಲು ನಿಮಗೆ ಬೇಕಾದ ಲೋನ್ ಮೊತ್ತ ಮತ್ತು ಅವಧಿಯನ್ನು ಆಯ್ಕೆಮಾಡಿ.
- 5 ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‍ಲೋಡ್ ಮಾಡಿ ಹಾಗೂ ಆನ್‍ಲೈನ್‍ನಲ್ಲಿ ಫಾರ್ಮ್ ಸಲ್ಲಿಸಿ.
- 6 ನಿಮ್ಮ ಲೋನ್ ಅಕೌಂಟ್‍ಗೆ ಹಣ ಕ್ರೆಡಿಟ್ ಆಗುವವರೆಗೆ ಕಾಯಿರಿ.
- 7 ನಿಮಗೆ ಬೇಕಾದಷ್ಟು ಫಂಡ್ಗಳನ್ನು ವಿತ್‌ಡ್ರಾ ಮಾಡಿಕೊಳ್ಳಿ ಮತ್ತು 2 ಗಂಟೆಗಳೊಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ಅದನ್ನು ವರ್ಗಾವಣೆ ಮಾಡಿ.
*ಷರತ್ತು ಅನ್ವಯ
ಬಜಾಜ್ ಫಿನ್‌ಸರ್ವ್ ಡ್ರಾಡೌನ್ ಕೋರಿಕೆಯನ್ನು ಸಲ್ಲಿಸಲು, ಇಲ್ಲಿ ಪರಿಶೀಲಿಸಿ!
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಸೌಲಭ್ಯವು ಒಂದು ವಿಶಿಷ್ಟ ಕ್ರೆಡಿಟ್ ಆಯ್ಕೆಯಾಗಿದ್ದು, ಇದು ನಿಮ್ಮ ಅನುಮೋದಿತ ಲೋನ್ ಮಿತಿಯಿಂದ ವಿತ್‌ಡ್ರಾ ಮಾಡಲು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಭಾಗಶಃ ಮುಂಪಾವತಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಪ್ರತಿ ವಿತ್‌ಡ್ರಾವಲ್‌ಗೆ ಹೊಸ ಅಪ್ಲಿಕೇಶನ್ ಅನ್ನು ಒದಗಿಸಬೇಕಾಗಿಲ್ಲ, ಮತ್ತು ನೀವು ಬಳಸುವ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ. ಫ್ಲೆಕ್ಸಿ ಸೌಲಭ್ಯದೊಂದಿಗೆ, ನೀವು ಬಡ್ಡಿ-ಮಾತ್ರ ಕಂತುಗಳನ್ನು ಆಯ್ಕೆ ಮಾಡಬಹುದು ಮತ್ತು ಅವಧಿಯ ಆರಂಭಿಕ ಭಾಗಕ್ಕೆ 45%* ವರೆಗೆ ಕಡಿಮೆ ಇಎಂಐ ಗಳನ್ನು ಪಾವತಿಸಬಹುದು.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಫ್ಲೆಕ್ಸಿ ಲೋನ್ ಸೌಲಭ್ಯವು ನಿಮ್ಮ ಪರ್ಸನಲ್ ಲೋನ್ ಇಎಂಐಗಳನ್ನು ಕಡಿಮೆ ಮಾಡಿ, ಲೋನ್ ಅನ್ನು ಇನ್ನಷ್ಟು ಚೆನ್ನಾಗಿ ನಿಭಾಯಿಸಲು ಸಹಾಯ ಮಾಡುವ ಒಂದು ವಿಶಿಷ್ಟ ಹಣಕಾಸಿನ ಕೊಡುಗೆಯಾಗಿದೆ. ನೀವು ಫ್ಲೆಕ್ಸಿ ಲೋನ್ ಪಡೆಯಲು ಬಯಸಿದಾಗ, ಅರ್ಹ ಲೋನ್ ಮೊತ್ತವನ್ನು ನಿಮಗೆ ನಿಯೋಜಿಸಲಾಗುತ್ತದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಈ ಮಂಜೂರಾದ ಮೊತ್ತದಿಂದ ನೀವು ಸಾಲ ಪಡೆಯಲು ಸ್ವತಂತ್ರರಾಗಿದ್ದೀರಿ. ನೀವು ಬಳಸುವ ಮೊತ್ತದ ಮೇಲೆ ಮಾತ್ರ ನಿಮಗೆ ಬಡ್ಡಿಯನ್ನು ವಿಧಿಸಲಾಗುತ್ತದೆ ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀವು ವಿತ್‌ಡ್ರಾ ಮಾಡಲು ಮತ್ತು ಭಾಗಶಃ-ಮುಂಪಾವತಿ ಮಾಡಲು ಮುಕ್ತರಾಗಿರುತ್ತೀರಿ. ಅವಧಿಯ ಆರಂಭಿಕ ಭಾಗಕ್ಕೆ ಬಡ್ಡಿ-ಮಾತ್ರ ಇಎಂಐ ಗಳನ್ನು ಪಾವತಿಸುವ ಆಯ್ಕೆಯೊಂದಿಗೆ, ನೀವು ಇಎಂಐ ಗಳ ಹೊರೆಯನ್ನು 45% ವರೆಗೆ ಕಡಿಮೆ ಮಾಡಬಹುದು*.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಮತ್ತು ಸಾಮಾನ್ಯ ಟರ್ಮ್ ಲೋನ್‌ಗಳ ಮೇಲೆ 13% ರಿಂದ ಶುರುವಾಗುವ ಆಕರ್ಷಕ ಬಡ್ಡಿದರಗಳಲ್ಲಿ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ಆದಾಗ್ಯೂ, ಫ್ಲೆಕ್ಸಿ ಸೌಲಭ್ಯದೊಂದಿಗೆ, ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ, ಒಟ್ಟು ಮಂಜೂರಾದ ಲೋನ್ ಅಲ್ಲ.
ಪರ್ಸನಲ್ ಲೋನ್ ಮೇಲೆ ಲೋನ್ ಮೊತ್ತದ 4% (ಜೊತೆಗೆ ತೆರಿಗೆಗಳು) ವರೆಗಿನ ಸಂಸ್ಕರಣಾ ಶುಲ್ಕ ಅನ್ವಯವಾಗುತ್ತದೆ. ಹೆಚ್ಚುವರಿಯಾಗಿ, ನೀವು ಫ್ಲೆಕ್ಸಿ ಸೌಲಭ್ಯವನ್ನು ಆಯ್ಕೆ ಮಾಡಿದರೆ, ಅಂತಹ ಶುಲ್ಕಗಳನ್ನು ವಿಧಿಸುವ ದಿನಾಂಕದಂದು ಬಳಕೆಯನ್ನು ಹೊರತುಪಡಿಸಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ ನೀವು ವಾರ್ಷಿಕ ನಿರ್ವಹಣಾ ಶುಲ್ಕವನ್ನು 0.295% (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಪಾವತಿಸಬೇಕಾಗುತ್ತದೆ.
ಇನ್ನಷ್ಟು ತಿಳಿದುಕೊಳ್ಳಲು, ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳನ್ನು ನೋಡಿ.
ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಲೋನ್ ವಿಶಿಷ್ಟ ವಿತ್‌ಡ್ರಾವಲ್ ಮತ್ತು ಭಾಗಶಃ-ಮುಂಗಡ ಪಾವತಿ ಸೌಲಭ್ಯದೊಂದಿಗೆ ಬರುತ್ತದೆ, ಇದರಲ್ಲಿ ನೀವು ದಿನಕ್ಕೆ ಗರಿಷ್ಠ ಐದು ಬಾರಿ ವಿತ್‌ಡ್ರಾ ಮಾಡಬಹುದು.
ಒಂದು ವೇಳೆ ನೀವು ಫ್ಲೆಕ್ಸಿ ಲೋನ್ ಅಕೌಂಟ್ ಫೋರ್‌ಕ್ಲೋಸ್ ಮಾಡಲು ಬಯಸಿದರೆ, ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ 4% (ಜೊತೆಗೆ ತೆರಿಗೆಗಳು) ಮತ್ತು ಸೆಸ್ ಅನ್ನು ಫೋರ್‌ಕ್ಲೋಸರ್ ಶುಲ್ಕವಾಗಿ ವಿಧಿಸಲಾಗುತ್ತದೆ.