ಕ್ರೆಡಿಟ್ ಕಾರ್ಡ್

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನಡುವಿನ ವ್ಯತ್ಯಾಸ

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?

ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌‌ಗಳು ಆನ್ಲೈನ್ ವಹಿವಾಟು ಮಾಡಲು ಬಯಸಿದರೆ ಅಥವಾ ನಿಮ್ಮ ವಾಲೆಟ್‍ನಲ್ಲಿ ಸಾಕಷ್ಟು ಹಣವನ್ನು ಹೊಂದಿಲ್ಲದಿದ್ದರೂ ಪಾವತಿಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ. ಆದರೆ ಇವೆರಡರ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ.
ನೀವು ಹಣವನ್ನು ಪಾವತಿಸಿದಾಗ ಅಥವಾ ಖರೀದಿಸುವಾಗ ಹಣವು ಹೇಗೆ ಕಡಿತವಾಗುತ್ತದೆ ಎಂಬುದರಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡಿನ ನಡುವಿನ ಪ್ರಮುಖ ವ್ಯತ್ಯಾಸವಿದೆ.

ಡೆಬಿಟ್ ಕಾರ್ಡ್ ಎಂದರೇನು?
ನಿಮ್ಮ ಚಾಲ್ತಿಯಲ್ಲಿರುವ ಅಥವಾ ಉಳಿತಾಯ ಅಕೌಂಟ್‌ಗಳ ಮೇಲೆ ಬ್ಯಾಂಕ್‌‌ಗಳು ಡೆಬಿಟ್ ಕಾರ್ಡ್‌‌ಗಳನ್ನು ನೀಡುತ್ತವೆ ಮತ್ತು ನಿಮ್ಮ ಅಕೌಂಟ್‌‌ಗಳಲ್ಲಿ ಈಗಾಗಲೆ ಲಭ್ಯವಿರುವ ಹಣವನ್ನು ಮಾತ್ರ ಖರ್ಚು ಮಾಡಲು ನೀವು ಇದನ್ನು ಬಳಸಬಹುದು. ಪಾವತಿಗಾಗಿ ಅಥವಾ ATM ನಿಂದ ಹಣ ವಿತ್ ಡ್ರಾ ಮಾಡಲು ನಿಮ್ಮ ಡೆಬಿಟ್ ಕಾರ್ಡ್ ಅನ್ನು ನೀವು ಸ್ವೈಪ್ ಮಾಡಿದಾಗ, ಹಣವನ್ನು ನೇರವಾಗಿ ನಿಮ್ಮ ಅಕೌಂಟಿನಿಂದ ತಕ್ಷಣ ಕಡಿತಗೊಳಿಸಲಾಗುತ್ತದೆ. ಖರ್ಚು ಮಾಡಲು ನಿಮ್ಮ ಅಕೌಂಟಿನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ತುರ್ತುಸ್ಥಿತಿಗಳಲ್ಲಿ ಇದು ಸಮಸ್ಯೆಯಾಗಬಹುದು.

ಕ್ರೆಡಿಟ್ ಕಾರ್ಡ್ ಎಂದರೇನು?
ಇನ್ನೊಂದು ರೀತಿಯಲ್ಲಿ, ಕ್ರೆಡಿಟ್ ಕಾರ್ಡ್ಅಗತ್ಯವಿದ್ದಾಗ ಪಾವತಿಗಳನ್ನು ಮಾಡಲು ನೀವು ಹಣವನ್ನು ಸಾಲ ಪಡೆದುಕೊಂಡಲ್ಲಿಂದ ನಿಮಗೆ ಕ್ರೆಡಿಟ್ ಲಿಮಿಟ್ ಅನ್ನು ನೀಡಲಾಗುವುದು. ನಿಗಧಿ ಪಡಿಸಿದ ಸಮಯದೊಳಗೆ ಸಾಲ ಪಡೆದುಕೊಂಡ ಹಣವನ್ನು ವಾಪಸ್ ಪಾವತಿ ಮಾಡಬೇಕಾಗುತ್ತದೆ. ಕ್ರೆಡಿಟ್ ಲಿಮಿಟ್, ನಿಮ್ಮ ಕ್ರೆಡಿಟ್ ಸ್ಕೋರ್, ವಯಸ್ಸು, ಆದಾಯ ಮುಂತಾದ ಅನೇಕ ವಿಚಾರಗಳನ್ನು ಅವಲಂಬಿತವಾಗಿದೆ. ವಿಳಂಬ ಪಾವತಿಗಳ ಸಂದರ್ಭದಲ್ಲಿ ಮಾತ್ರ ಬಾಕಿ ಉಳಿಕೆ ಮೊತ್ತದ ಮೇಲೆ ಬಡ್ಡಿ ಶುಲ್ಕ ವಿಧಿಸಲಾಗುವುದು. ನೀವು ಗಣನೀಯ ರಿವಾರ್ಡ್ ಪಾಯಿಂಟ್‌‌ಗಳು, ಕ್ಯಾಶ್‌‌ಬ್ಯಾಕ್ ಮತ್ತು ಚಲನ ಚಿತ್ರ ಟಿಕೆಟ್‌‌ಗಳ ಮೇಲೆ ರಿಯಾಯಿತಿ, ಆನ್ಲೈನ್ ಖರೀದಿ, ಪ್ರಯಾಣದ ಬುಕ್ಕಿಂಗ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಕೂಡ ಪಡೆದುಕೊಳ್ಳಬಹುದು.

ನೀವು ಭಾರತದಲ್ಲಿ ಉತ್ತಮ ಕ್ರೆಡಿಟ್ ಕಾರ್ಡಿಗೆ ಎದುರು ನೋಡುತ್ತಿದ್ದರೆ, ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಡ್ಡಿ- ರಹಿತ ಲೋನ್ ಮತ್ತು ನಗದು ವಿತ್ ಡ್ರಾವಲ್, ಯಾವುದೇ ವೆಚ್ಚವಿಲ್ಲದ EMI ಸೌಲಭ್ಯದೊಂದಿಗೆ ಶಾಪಿಂಗ್, ಉತ್ತಮ ರಿವಾರ್ಡ್‌‌ಗಳು ಮತ್ತು ಅದರ ಜತೆಗಿನ ಪ್ರಯೋಜನಗಳನ್ನು ಆಫರ್ ಮಾಡುತ್ತದೆ ವಿವಿಧ ಬಗೆಯ ಕ್ರೆಡಿಟ್ ಕಾರ್ಡ್‌‌ಗಳುನಿಮ್ಮ ವಿಶೇಷ ಅವಶ್ಯಕತೆಗಳಿಗೆ ಹೊಂದಿಕೊಳ್ಳುವಂತೆ.

ಹೆಚ್ಚುವರಿ ಓದಿಗಾಗಿ: ಕ್ರೆಡಿಟ್ ಕಾರ್ಡ್‌‌ಗಳು ಡೆಬಿಟ್ ಕಾರ್ಡ್‌‌ಗಳಿಗಿಂತ ಉತ್ತಮ ಯಾಕೆ

ಮುಂಚಿತ ಅನುಮೋದಿತ ಆಫರ್