ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸೇವಾ ಮಾಹಿತಿ
ಬಜಾಜ್ ಫಿನ್ಸರ್ವ್ ತನ್ನ ಎಲ್ಲಾ ಗ್ರಾಹಕರಿಗೂ ಸುಗಮ ಮತ್ತು ತಡೆರಹಿತ ಅನುಭವವನ್ನು ನೀಡಲು ಬದ್ಧವಾಗಿದೆ. ನಿಮ್ಮ ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ, ನೀವು ನಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳನ್ನು 1860 267 6789 ರಲ್ಲಿ ಅಥವಾ supercardcare@dbs.com ಗೆ ಇಮೇಲ್ ಕಳುಹಿಸುವ ಮೂಲಕ ಸಂಪರ್ಕಿಸಬಹುದು.
ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು
ಬಜಾಜ್ ಫಿನ್ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಮ್ಮ ದೈನಂದಿನ ಕ್ರೆಡಿಟ್ ಅಗತ್ಯಗಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ಯಾವುದೇ ತುರ್ತು ನಗದು ಅವಶ್ಯಕತೆಗಳಿಗೆ ಸಹಾಯ ಮಾಡುತ್ತದೆ. ಅದಲ್ಲದೆ, ನೀವು ನಿಮ್ಮ ಖರ್ಚುಗಳ ಮೇಲೆ ವೇಗದ ರಿವಾರ್ಡ್ಗಳನ್ನು, ಪೂರಕ ಆರೋಗ್ಯ ಸದಸ್ಯತ್ವ, ವಿವಿಧ ವರ್ಗಗಳ ರಿಯಾಯಿತಿ ಮತ್ತು ಕ್ಯಾಶ್ಬ್ಯಾಕ್ಗಳನ್ನು ಹಾಗೂ ಸುಲಭ ಇಎಂಐ ಫೈನಾನ್ಸ್ ಆಯ್ಕೆಗಳನ್ನು ಪಡೆದುಕೊಳ್ಳಬಹುದು.
ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ಅರ್ಹರಾಗಲು, ನೀವು ಈ ಕೆಳಗೆ ನಮೂದಿಸಲಾದ ಮಾನದಂಡವನ್ನು ಪೂರೈಸಬೇಕು:
- ಕ್ರೆಡಿಟ್ ಅರ್ಹತೆ: 720 ಪಾಯಿಂಟ್ಗಳು ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ನಿರ್ವಹಿಸಲು ಪ್ರಮುಖ ಅಂಶ. ಇದು ಉತ್ತಮ ಕ್ರೆಡಿಟ್ ಇತಿಹಾಸದ ಸೂಚಿಯಾಗಿದ್ದು, ನಿಮ್ಮ ಅಪ್ಲಿಕೇಶನ್ ಬಲಪಡಿಸುತ್ತದೆ
- ವಯಸ್ಸು: ನೀವು 21 ರಿಂದ 70 ವರ್ಷ ವಯಸ್ಸಿನವರಾಗಿರಬೇಕು
- ವಾಸದ ವಿಳಾಸ: ನೀವು ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಲಭ್ಯವಾಗುವ ಭಾರತದ ವಸತಿ ವಿಳಾಸವನ್ನು ಹೊಂದಿರಬೇಕು
ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಖರೀದಿಸಿದಾಗ, ನೀವು ವೆಲ್ಕಮ್ ಬೋನಸ್ ಎಂದು ಕರೆಯಲ್ಪಡುವ ಬೋನಸ್ ಕ್ಯಾಶ್ ಪಾಯಿಂಟ್ಗಳನ್ನು ಪಡೆಯುತ್ತೀರಿ. ಇದು ಸೇರ್ಪಡೆ ಶುಲ್ಕದ ಪಾವತಿ ಮತ್ತು ಕ್ರೆಡಿಟ್ ಕಾರ್ಡ್ ಪಡೆದುಕೊಂಡ ಮೊದಲ 60 ದಿನಗಳ ಒಳಗೆ ನಡೆಸುವ ವಹಿವಾಟಿಗೆ ಒಳಪಟ್ಟಿರುತ್ತದೆ.
ಪ್ರತಿ ತಿಂಗಳು, ನೀವು ಒಂದು ಮೈಲ್ಸ್ಟೋನ್ ತಲುಪಲು ಅವಕಾಶವಿರುತ್ತದೆ. ಅದರಲ್ಲಿ ನಿಮಗೆ ಹೆಚ್ಚುವರಿ ನಗದು ಪಾಯಿಂಟ್ಗಳನ್ನು ರಿವಾರ್ಡ್ ಆಗಿ ನೀಡಲಾಗುತ್ತದೆ. ಒಂದು ತಿಂಗಳ ಸ್ಟೇಟ್ಮೆಂಟ್ನಲ್ಲಿ ನೀವು ಎಲ್ಲಾ ಮಾಸಿಕ ಖರ್ಚುಗಳ ನಿರ್ದಿಷ್ಟ ಮಿತಿಯನ್ನು ಮೀರಿದರೆ, ನೀವು ಎಲ್ಲಾ ಮಾಸಿಕ ಖರ್ಚುಗಳ ಮೇಲೆ ಶುಲ್ಕ ರಹಿತವಾಗಿ 10X ಕ್ಯಾಶ್ ಪಾಯಿಂಟ್ಗಳನ್ನು ಪಡೆದುಕೊಳ್ಳಬಹುದು. ಪ್ರತಿ ಸ್ಟೇಟ್ಮೆಂಟ್ನ ಮಾಸಿಕ ಮೈಲ್ಸ್ಟೋನ್ ಕಾರ್ಯಕ್ರಮದ ನಗದು ಪಾಯಿಂಟ್ಗಳ ಮೇಲೆ ಗರಿಷ್ಠ ಮಿತಿ ಇರುತ್ತದೆ.**
*ಪ್ರತಿ ಬಜಾಜ್ ಫಿನ್ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ವೇರಿಯಂಟ್ನಲ್ಲಿ ಮಿತಿಯು ವಿಭಿನ್ನವಾಗಿರುತ್ತದೆ.
**ಖರೀದಿಸಲಾದ ಕ್ರೆಡಿಟ್ ಕಾರ್ಡ್ ವೇರಿಯಂಟ್ನ ಮೇಲೆ ಮಿತಿ ಅವಲಂಬಿತವಾಗಿರುತ್ತದೆ.
ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ತನ್ನ ವೇಗದ ರಿವಾರ್ಡ್ ಕಾರ್ಯಕ್ರಮದ ಅಡಿ, ಸಾಮಾನ್ಯ ಕ್ಯಾಶ್ ಪಾಯಿಂಟ್ಗಳು ಮತ್ತು ಮಾಸಿಕ ಮೈಲ್ಸ್ಟೋನ್ ಅನ್ನು ಮೀರಿಸಿ ನೀವು ಹೆಚ್ಚುವರಿ ಕ್ಯಾಶ್ ಪಾಯಿಂಟ್ ಗಳಿಸಲು ಅನುಮತಿಸುತ್ತದೆ. ನೀವು ಖರ್ಚುಗಳ ಮೇಲೆ 20X ವರೆಗೆ ಕ್ಯಾಶ್ ಪಾಯಿಂಟ್ಗಳನ್ನು ಗಳಿಸಬಹುದು.
ನಿಮ್ಮ ಕಾರ್ಡ್ ಅಪ್ಲಿಕೇಶನ್ ಅನುಮೋದನೆಯಾದ ದಿನಾಂಕದಿಂದ 7 ದಿನಗಳ ಒಳಗಾಗಿ ನಿಮ್ಮ ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡೆಲಿವರಿ ಮಾಡಲಾಗುತ್ತದೆ. ಅಪ್ಲಿಕೇಶನ್ ಅನುಮೋದನೆಗೊಂಡು, ಕಾರ್ಡ್ ಅನ್ನು ನಿಮ್ಮ ಸಂಪರ್ಕ ವಿಳಾಸಕ್ಕೆ ರವಾನಿಸಲಾದ ನಂತರ ನಿಮಗೆ ನೋಟಿಫಿಕೇಶನ್ ಕಳುಹಿಸಲಾಗುವುದು.
ನೀವು ಪ್ಯಾನ್ ಅಥವಾ ಆಧಾರ್ ಕಾರ್ಡ್ ಹೊಂದಿದ್ದರೆ ಮಾತ್ರ ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ಗಳನ್ನು ಪ್ರೊಸೆಸ್ ಮಾಡಬಹುದು.
ಪ್ಯಾನ್ ಅಥವಾ ಆಧಾರ್ ಕಾರ್ಡ್ ಇಟ್ಟುಕೊಂಡು ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಸಲ್ಲಿಸುವುದು ಉತ್ತಮ. ಹಾಗೆ ಮಾಡುವುದರಿಂದ ನೀವು ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಎದುರಿಸುವುದಿಲ್ಲ.
ನಿಮ್ಮ ಕಾರ್ಡ್ ಕಳೆದುಹೋಗಿದ್ದರೆ, ಕಳ್ಳತನವಾಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ, ನಿಮ್ಮ ಕಾರ್ಡ್ ಅನ್ನು ತಕ್ಷಣ ಬ್ಲಾಕ್ ಮಾಡುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ. ನಿಮ್ಮ ಕಾರ್ಡ್ ಬ್ಲಾಕ್ ಮಾಡಲು ಈ ಹಂತಗಳನ್ನು ಅನುಸರಿಸಿ:
- ಡಿಬಿಎಸ್ ಕಾರ್ಡ್+ IN ಆ್ಯಪ್ಗೆ ಲಾಗಿನ್ ಆಗಿ
- ಕ್ರೆಡಿಟ್ ಕಾರ್ಡ್ ಡ್ಯಾಶ್ಬೋರ್ಡ್ನಲ್ಲಿ 'ಸೆಟ್ಟಿಂಗ್ಸ್'ಗೆ ಹೋಗಿ
- 'ಕಳೆದುಕೊಂಡ ಅಥವಾ ಕಳ್ಳತನದ ವರದಿ' ಅಥವಾ 'ಹಾನಿಗೊಳಗಾದ ಕಾರ್ಡ್ ಬದಲಾವಣೆ'ಗೆ ಹೋಗಿ'
- ನಿಮ್ಮ ಕಾರ್ಡ್ ಬ್ಲಾಕ್ ಮಾಡಿ, ಕಾರ್ಡ್ ಬದಲಾವಣೆ ಅಥವಾ ಮರುವಿತರಣೆಗೆ ಕೋರಿಕೆ ಸಲ್ಲಿಸಿ
ಮರುವಿತರಣೆಯಾಗುವ ನಿಮ್ಮ ಕಾರ್ಡ್ನ ಡೆಲಿವರಿ ವಿಳಾಸವನ್ನು ಬದಲಾಯಿಸಲು ಬಯಸಿದರೆ, ನಮ್ಮನ್ನು 1860 267 6789 ರಲ್ಲಿ ಸಂಪರ್ಕಿಸಿ.
ನಿಮ್ಮ ಬಜಾಜ್ ಫಿನ್ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ರದ್ದು ಮಾಡಲು, ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು 1860 267 6789 ರಲ್ಲಿ ಅಥವಾ supercardcare@dbs.com ನಲ್ಲಿ ಇಮೇಲ್ ಕಳುಹಿಸುವ ಮೂಲಕ ನಮ್ಮನ್ನು ಸಂಪರ್ಕಿಸಿ.
ಹೌದು, ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಬಜಾಜ್ ಫಿನ್ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಬಹುದು:
- ಡಿಬಿಎಸ್ ಕಾರ್ಡ್+ IN ಆ್ಯಪ್ಗೆ ಲಾಗಿನ್ ಆಗಿ
- ಕ್ರೆಡಿಟ್ ಕಾರ್ಡ್ ಡ್ಯಾಶ್ಬೋರ್ಡ್ನಲ್ಲಿ 'ಸೆಟ್ಟಿಂಗ್ಸ್'ಗೆ ಹೋಗಿ
- ಟಾಗಲ್ ಬಟನ್ ಸ್ಲೈಡ್ ಮಾಡುವ ಮೂಲಕ ನಿಮ್ಮ ಕಾರ್ಡ್ ಟರ್ನ್ ಆಫ್ ಮಾಡಿ
ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ನೀವು ಬದಲಾಯಿಸಬಹುದು:
- ಡಿಬಿಎಸ್ ಕಾರ್ಡ್+ IN ಆ್ಯಪ್ಗೆ ಲಾಗಿನ್ ಆಗಿ
- ಕ್ರೆಡಿಟ್ ಕಾರ್ಡ್ ಡ್ಯಾಶ್ಬೋರ್ಡ್ನಲ್ಲಿ 'ಸೆಟ್ಟಿಂಗ್ಸ್'ಗೆ ಹೋಗಿ
- 'ಕಾರ್ಡ್ ಪಿನ್ ಬದಲಾಯಿಸಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪಿನ್ ರಿಸೆಟ್ ಮಾಡಿ