ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡಿನ ಫೀಚರ್‌ಗಳು
-
ವೆಲ್ಕಮ್ ಬೋನಸ್
ವೆಲ್ಕಮ್ ಬೋನಸ್ ಆಗಿ 20,000 ವರೆಗೆ ಕ್ಯಾಶ್ ಪಾಯಿಂಟ್‌ಗಳನ್ನು ಪಡೆಯಿರಿ
-
ಮಾಸಿಕ ಮೈಲ್‌ಸ್ಟೋನ್ ಪ್ರಯೋಜನಗಳು
ಪ್ರತಿ ತಿಂಗಳಿಗೆ ಕನಿಷ್ಠ ರೂ. 20,000 ಖರ್ಚು ಮಾಡಿ 10X ವರೆಗೆ ಕ್ಯಾಶ್ ಪಾಯಿಂಟ್‌ಗಳನ್ನು ಗಳಿಸಿ
-
ಸಬ್‌ಸ್ಕ್ರಿಪ್ಷನ್‌ಗಳ ಮೇಲೆ ರಿಯಾಯಿತಿ
ಮನರಂಜನಾ ವೇದಿಕೆಗಳಿಗೆ ಸಬ್‌ಸ್ಕ್ರೈಬ್ ಮಾಡುವ ಮೂಲಕ ವರ್ಷದಲ್ಲಿ 40% ವರೆಗೆ ರಿಯಾಯಿತಿ (12,000 ವರೆಗೆ ನಗದು ಪಾಯಿಂಟ್‌ಗಳು) ಪಡೆಯಿರಿ, ಅವುಗಳಲ್ಲಿ ಹಾಟ್‌ಸ್ಟಾರ್, Gaana.com, Voot ಇನ್ನೂ ಮುಂತಾದವುಗಳು ಸೇರಿವೆ. ಇದಕ್ಕಾಗಿ ನಮ್ಮ ರಿವಾರ್ಡ್ಸ್ ಪೋರ್ಟಲ್ ಬಳಸಿ
-
ಎಕ್ಸೆಲರೇಟೆಡ್ ರಿವಾರ್ಡ್‌ಗಳು
ಟ್ರಾವೆಲ್ ಮತ್ತು ಹಾಲಿಡೇ ಬುಕಿಂಗ್‌ಗಳಂತಹ ಕೆಟಗರಿಗಳಲ್ಲಿ ನಮ್ಮ ಆ್ಯಪ್ ಮೂಲಕ ಮಾಡಿದ ಖರ್ಚುಗಳ ಮೇಲೆ 20x ವರೆಗಿನ ರಿವಾರ್ಡ್‌ಗಳನ್ನು ಗಳಿಸಿ
-
ಆರೋಗ್ಯ ಪ್ರಯೋಜನಗಳು
ಬಜಾಜ್ ಹೆಲ್ತ್ ಮೊಬೈಲ್ ಆ್ಯಪ್ ಮೂಲಕ ಎಲ್ಲಾ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಟೆಲಿಕನ್ಸಲ್ಟೇಶನ್‌ಗಳ ಮೇಲೆ ಹೆಚ್ಚಿನ ರಿಯಾಯಿತಿಗಳನ್ನು, ಫಾರ್ಮಸಿಗಳಲ್ಲಿ 20% ವರೆಗಿನ ರಿಯಾಯಿತಿಗಳನ್ನು ಆನಂದಿಸಿ
-
ಏರ್ಪೋರ್ಟ್ ಲೌಂಜ್ ಅಕ್ಸೆಸ್
10 ವರೆಗಿನ ಕಾಂಪ್ಲಿಮೆಂಟರಿ ಏರ್ಪೋರ್ಟ್ ಲಾಂಜ್ ಅಕ್ಸೆಸ್
-
ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ
ಇಂಧನ ಮೇಲ್ತೆರಿಗೆ ವೆಚ್ಚಗಳ ಮೇಲೆ ತಿಂಗಳಿಗೆ ರೂ. 200 ವರೆಗೆ ಮನ್ನಾ ಪಡೆಯಿರಿ
-
ಸುಲಭ EMI ಪರಿವರ್ತನೆ
ರೂ. 2,500 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ನಿಮ್ಮ ಖರ್ಚುಗಳನ್ನು ಕೈಗೆಟಕುವ ಇಎಂಐ ಗಳಾಗಿ ಪರಿವರ್ತಿಸಿ
-
ಬಡ್ಡಿ ರಹಿತ ನಗದು ವಿತ್‌ಡ್ರಾವಲ್‌ಗಳು
ಭಾರತದಾದ್ಯಂತ ಯಾವುದೇ ಎಟಿಎಂ ನಿಂದ 50 ದಿನಗಳವರೆಗೆ ಬಡ್ಡಿ ರಹಿತ ನಗದು ವಿತ್‌ಡ್ರಾ ಮಾಡಿ
-
ಬಜಾಜ್ ಫಿನ್‌ಸರ್ವ್ ಇಎಂಐ ನೆಟ್ವರ್ಕ್‌ನಲ್ಲಿ ಉಳಿತಾಯ
ಯಾವುದೇ ಬಜಾಜ್ ಫಿನ್‌ಸರ್ವ್ ನೆಟ್ವರ್ಕ್ ಪಾಲುದಾರ ಮಳಿಗೆಯಲ್ಲಿ ಮಾಡಿದ ಡೌನ್ ಪೇಮೆಂಟ್‌ಗಳ ಮೇಲೆ 5% ಕ್ಯಾಶ್‌ಬ್ಯಾಕ್ ಪಡೆಯಿರಿ
-
ಸಂಪರ್ಕರಹಿತ ಪಾವತಿ
ನಮ್ಮ ಟ್ಯಾಪ್ ಮತ್ತು ಪೇ ಸೌಲಭ್ಯವನ್ನು ಬಳಸಿ ತೊಂದರೆ ರಹಿತ ಪಾವತಿಗಳನ್ನು ಆನಂದಿಸಿ
ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಎಂಬುದು ವರ್ಷವಿಡೀ ಹಲವಾರು ಪ್ರಯೋಜನಗಳಾದ ವೆಲ್ಕಮ್ ರಿವಾರ್ಡ್ ಪಾಯಿಂಟ್‌ಗಳು, ಮಾಸಿಕ ಖರ್ಚುಗಳ ಮೇಲೆ ನಗದು ಪಾಯಿಂಟ್‌ಗಳು, ಎಕ್ಸಲರೇಟೆಡ್ ರಿವಾರ್ಡ್‌ಗಳು, ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಇನ್ನೂ ಹೆಚ್ಚಿನವುಗಳ ರೂಪದಲ್ಲಿ 10x ರಿವಾರ್ಡ್‌ಗಳನ್ನು ಒಳಗೊಂಡ ವಿಶೇಷ ಕೊಡುಗೆಯಾಗಿದೆ.
ನಮ್ಮ 8 ಕ್ರೆಡಿಟ್ ಕಾರ್ಡ್‌ಗಳ ವೈವಿಧ್ಯಮಯ ಆಯ್ಕೆಯು ನಿಮ್ಮ ಜೀವನಶೈಲಿಗೆ ಸೂಕ್ತವಾದ ಕಾರ್ಡ್ ಆಯ್ಕೆ ಮಾಡುವುದನ್ನು ಸುಲಭಗೊಳಿಸುತ್ತದೆ. ನಿಮ್ಮ ಆಫರ್ ಆಧಾರದ ಮೇಲೆ ಕಾರ್ಡ್ ಆಯ್ಕೆಮಾಡಿ ಮತ್ತು ನಿಮ್ಮ ಸ್ವಂತ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆಯಲು ತಕ್ಷಣವೇ ಆನ್ಲೈನಿನಲ್ಲಿ ಅಪ್ಲೈ ಮಾಡಿ.
ತ್ವರಿತ ಮತ್ತು ತಡೆರಹಿತ ಅಪ್ಲಿಕೇಶನ್ ಪ್ರಕ್ರಿಯೆಯ ಅನುಭವ ಪಡೆಯಿರಿ:
- ಆನ್ಲೈನ್ ಅಪ್ಲೈ ಮಾಡಿ
- ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ
- ನಿಮ್ಮ ಅಪ್ಲಿಕೇಶನ್ ಅನುಮೋದನೆ ಪಡೆಯಿರಿ
- ನಿಮ್ಮ ಕಾರ್ಡನ್ನು ನೋಡಿ ಮತ್ತು ಬಳಸಿ
ಅರ್ಹತಾ ಮಾನದಂಡ
-
ರಾಷ್ಟ್ರೀಯತೆ
ಭಾರತೀಯ
-
ವಯಸ್ಸು
21 ರಿಂದ 70 ವರ್ಷಗಳು
-
ಉದ್ಯೋಗ
ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
-
ಕ್ರೆಡಿಟ್ ಸ್ಕೋರ್
720 ಅಥವಾ ಅದಕ್ಕಿಂತ ಹೆಚ್ಚು
ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡುವುದು ಹೇಗೆ?
ಈ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ. ನಿಮ್ಮ ಕ್ರೆಡಿಟ್ ಕಾರ್ಡ್ ಪಡೆಯಲು, ಕೆಲವು ಸರಳ ಹಂತಗಳಲ್ಲಿ ಆನ್ಲೈನಿನಲ್ಲಿ ಅಪ್ಲೈ ಮಾಡಿ.
- 1 ಕ್ಲಿಕ್ ಮಾಡಿ ಇಲ್ಲಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
- 2 ನೀವು ಪಡೆದ ಒಟಿಪಿ ಯನ್ನು ಸಲ್ಲಿಸಿ ಮತ್ತು ನೀವು ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಹೊಂದಿದ್ದೀರಾ ಎಂದು ಪರಿಶೀಲಿಸಿ
- 3 ನಿಮ್ಮ ಬಳಿ ಆಫರ್ ಇದ್ದರೆ, ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
- 4 ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
- 5 ನಿಮ್ಮ ಕಾರ್ಡ್ ಬಳಕೆಗೆ ಸಿದ್ಧವಾಗಿದೆ
ಬಜಾಜ್ ಫಿನ್‌ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು
ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಮ್ಮ ದೈನಂದಿನ ಕ್ರೆಡಿಟ್ ಅಗತ್ಯಗಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ಯಾವುದೇ ತುರ್ತು ನಗದು ಅವಶ್ಯಕತೆಗಳಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ನೀವು ನಿಮ್ಮ ಖರ್ಚುಗಳ ಮೇಲೆ ಎಕ್ಸಲರೇಟೆಡ್ ರಿವಾರ್ಡ್‌ಗಳನ್ನು, ಪೂರಕ ಆರೋಗ್ಯ ಸದಸ್ಯತ್ವ, ವಿವಿಧ ಕೆಟಗರಿಗಳಲ್ಲಿ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಮತ್ತು ಸುಲಭ ಇಎಂಐ ಫೈನಾನ್ಸ್ ಆಯ್ಕೆಗಳನ್ನು ಗಳಿಸಬಹುದು.
ಕಾರ್ಡ್ ನಷ್ಟ, ಕಳ್ಳತನ, ಹಾನಿ ಅಥವಾ ವಂಚನೆಯ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸಲು ಕಾರ್ಡ್ ಪ್ರೊಟೆಕ್ಷನ್ ಪ್ಲಾನ್ ಸೇವೆಗಳನ್ನು ಒದಗಿಸುತ್ತದೆ. ಕಾರ್ಡ್ ಪ್ರೊಟೆಕ್ಷನ್ ಪ್ಲಾನ್ ಸದಸ್ಯತ್ವವು ಪಾವತಿ ಕಾರ್ಡ್‌ಗಳನ್ನು ಬ್ಲಾಕ್ ಮಾಡುವ, ತುರ್ತು ನಗದು ಪಡೆಯುವ, ನಿಮ್ಮ ಕಳೆದುಹೋದ ಪ್ಯಾನ್ ಕಾರ್ಡ್ ಬದಲಾಯಿಸುವ ಮತ್ತು ಇತರ ಕಾಂಪ್ಲಿಮೆಂಟರಿ ಪ್ರಯೋಜನಗಳನ್ನು ಹೊಂದಿದೆ.
ಇತರ ಕ್ರೆಡಿಟ್ ಕಾರ್ಡ್‌ಗಳನ್ನು ಹೊರತುಪಡಿಸಿ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಕೆಲವು ವಿಶಿಷ್ಟ ಫೀಚರ್‌ಗಳು:
- ನಿಮ್ಮ ಎಲ್ಲಾ ಖರ್ಚುಗಳ ಮೇಲೆ ಕ್ಯಾಶ್ ಪಾಯಿಂಟ್‌ಗಳ ರೂಪದಲ್ಲಿ ರಿವಾರ್ಡ್ಸ್: ಈ ಸೂಪರ್‌ಕಾರ್ಡ್ 20,000 ವರೆಗಿನ ಬೋನಸ್ ರಿವಾರ್ಡ್ ಪಾಯಿಂಟ್‌ಗಳನ್ನು, ಎಲ್ಲಾ ಮಾಸಿಕ ಖರ್ಚುಗಳ ಮೇಲೆ 10X ವರೆಗೆ ರಿವಾರ್ಡ್‌ಗಳನ್ನು, ಬಜಾಜ್ ಫಿನ್‌ಸರ್ವ್ ಅಥವಾ DBS ಆ್ಯಪ್‌ಗಳ ಮೂಲಕ ಮಾಡಿದ ಎಲ್ಲಾ ಟ್ರಾನ್ಸಾಕ್ಷನ್‌ಗಳ ಮೇಲೆ 20X ವರೆಗಿನ ಎಕ್ಸಲರೇಟೆಡ್ ಕ್ಯಾಶ್ ಪಾಯಿಂಟ್‌ಗಳನ್ನು ಒದಗಿಸುತ್ತದೆ
- ಆಕರ್ಷಕ ರಿಯಾಯಿತಿಗಳು: ನಮ್ಮ ರಿವಾರ್ಡ್ಸ್ ಪೋರ್ಟಲ್ ಮೂಲಕ ಮಾಡಲಾದ ವಿವಿಧ ಮನರಂಜನಾ ವೇದಿಕೆಗಳ ವಾರ್ಷಿಕ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 40% ವರೆಗೆ ರಿಯಾಯಿತಿ
- ಕಾಂಪ್ಲಿಮೆಂಟರಿ ಬಜಾಜ್ ಫಿನ್‌ಸರ್ವ್ ಹೆಲ್ತ್ ಸದಸ್ಯತ್ವ
- ಕ್ಯಾಶ್‌ಬ್ಯಾಕ್ ಮತ್ತು ಹೆಚ್ಚುವರಿ ಪರ್ಕ್‌ಗಳು: ಯಾವುದೇ ಬಜಾಜ್ ಫಿನ್‌ಸರ್ವ್ ನೆಟ್ವರ್ಕ್ ಪಾಲುದಾರ ಮಳಿಗೆಯಲ್ಲಿ ಇಎಂಐ ಲೋನ್‌ಗಳ ಡೌನ್ ಪೇಮೆಂಟ್ ಮೇಲೆ 5% ಕ್ಯಾಶ್‌ಬ್ಯಾಕ್
- 10 ವರೆಗಿನ ಕಾಂಪ್ಲಿಮೆಂಟರಿ ಏರ್ಪೋರ್ಟ್ ಲಾಂಜ್ ಅಕ್ಸೆಸ್
- ಭಾರತದಾದ್ಯಂತದ ಎಟಿಎಂ ಗಳಿಂದ ನಗದು ವಿತ್‌ಡ್ರಾವಲ್ ಮತ್ತು ಅಲ್ಪಾವಧಿಯ ಪರ್ಸನಲ್ ಲೋನ್ ಸೌಲಭ್ಯ
ನಿಯಮ ಮತ್ತು ಷರತ್ತು ಅನ್ವಯ
ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡಿಗೆ ಅರ್ಹರಾಗಲು ನೀವು ಈ ಕೆಳಗೆ ನಮೂದಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸಬೇಕು:
- ಕ್ರೆಡಿಟ್ ಅರ್ಹತೆ: ಸಿಬಿಲ್ ಸ್ಕೋರ್ ನಿರ್ವಹಿಸುವಲ್ಲಿ 720 ಅಥವಾ ಅದಕ್ಕಿಂತ ಹೆಚ್ಚಿನ ಪಾಯಿಂಟ್‌ಗಳು ಪ್ರಮುಖ ಅಂಶವಾಗಿದೆ. ಇದು ಉತ್ತಮ ಕ್ರೆಡಿಟ್ ಇತಿಹಾಸವನ್ನು ಸೂಚಿಸುತ್ತದೆ, ಇದು ನಿಮ್ಮ ಅಪ್ಲಿಕೇಶನನ್ನು ಬಲಪಡಿಸುತ್ತದೆ
- ವಯಸ್ಸು: ನೀವು 21 ರಿಂದ 70 ವರ್ಷಗಳ ವಯಸ್ಸಿನ ಒಳಗಿರಬೇಕು
- ವಸತಿ ವಿಳಾಸ: ಭಾರತದಲ್ಲಿ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಲಭ್ಯವಿರುವ ಸ್ಥಳದಲ್ಲಿ ನೀವು ವಸತಿ ವಿಳಾಸವನ್ನು ಹೊಂದಿರಬೇಕು
- ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಯಾವುದೇ ಹಾರ್ಡ್ ಕಾಪಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿಲ್ಲ.
- ನಿಮ್ಮ ಬಯೋಮೆಟ್ರಿಕ್ ಅಥವಾ ವಿಡಿಯೋ ಕೆವೈಸಿ ಯನ್ನು ಪೂರ್ಣಗೊಳಿಸಲು ನೀವು ಕೇವಲ ನಿಮ್ಮ ಆಧಾರ್ ನಂಬರನ್ನು ಹೊಂದಿರಬೇಕು.
ಯಾವುದೇ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಖರೀದಿಯ ಮೇಲೆ ವೆಲ್ಕಮ್ ರಿವಾರ್ಡ್‌ಗಳು ಎಂದು ಕರೆಯಲ್ಪಡುವ ಬೋನಸ್ ಕ್ಯಾಶ್ ಪಾಯಿಂಟ್‌ಗಳನ್ನು ನೀವು ಪಡೆಯುತ್ತೀರಿ. ಇದು ಸೇರ್ಪಡೆ ಶುಲ್ಕದ ಪಾವತಿ ಮತ್ತು ಕ್ರೆಡಿಟ್ ಕಾರ್ಡ್ ಪಡೆದ ಮೊದಲ 60 ದಿನಗಳ ಒಳಗೆ ಟ್ರಾನ್ಸಾಕ್ಷನ್ ಮಾಡುವ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
ಪ್ರತಿ ತಿಂಗಳು, ನೀವು ರಿವಾರ್ಡ್ ಮೈಲ್‌ಸ್ಟೋನ್ ತಲುಪಲು ಅವಕಾಶವನ್ನು ಪಡೆಯುತ್ತೀರಿ, ಇದರಲ್ಲಿ ನಿಮಗೆ ಹೆಚ್ಚುವರಿ ಕ್ಯಾಶ್ ಪಾಯಿಂಟ್‌ಗಳೊಂದಿಗೆ ರಿವಾರ್ಡ್ ನೀಡಲಾಗುತ್ತದೆ. ಫೀಸ್ ಅನ್ನು ಹೊರತುಪಡಿಸಿ ಒಂದು ಸ್ಟೇಟ್ಮೆಂಟ್ ತಿಂಗಳಲ್ಲಿ ಒಂದು ನಿರ್ದಿಷ್ಟ ಮಿತಿಯನ್ನು ಮೀರಿದರೆ ನೀವು ಎಲ್ಲಾ ಮಾಸಿಕ ಖರ್ಚುಗಳ ಮೇಲೆ 10X ವರೆಗೆ ಕ್ಯಾಶ್ ಪಾಯಿಂಟ್‌ಗಳನ್ನು ಗಳಿಸಬಹುದು. ಪ್ರತಿ ಸ್ಟೇಟ್ಮೆಂಟಿಗೆ ಮಾಸಿಕ ಮೈಲ್‌ಸ್ಟೋನ್ ಬೋನಸ್ ಪ್ರೋಗ್ರಾಮ್‌ಗೆ ಕ್ಯಾಶ್ ಪಾಯಿಂಟ್‌ಗಳ ಮೇಲೆ ಗರಿಷ್ಠ ಕ್ಯಾಪಿಂಗ್ ಇದೆ.
*ಪ್ರತಿ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ವೇರಿಯಂಟ್‌ನಲ್ಲಿ ಮಿತಿಯು ವಿಭಿನ್ನವಾಗಿರುತ್ತದೆ.
*ಖರೀದಿಸಲಾದ ಕ್ರೆಡಿಟ್ ಕಾರ್ಡ್ ವೇರಿಯಂಟ್‌ನ ಮೇಲೆ ಮಿತಿ ಅವಲಂಬಿತವಾಗಿರುತ್ತದೆ.
ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಾಮಾನ್ಯ ರಿವಾರ್ಡ್‌ಗಳ ಮೇಲೆ ಮತ್ತು ಅದಕ್ಕಿಂತ ಹೆಚ್ಚು ಕ್ಯಾಶ್ ಪಾಯಿಂಟ್‌ಗಳನ್ನು ಗಳಿಸಲು ಮತ್ತು ಎಕ್ಸಲರೇಟೆಡ್ ರಿವಾರ್ಡ್ಸ್ ಪ್ರೋಗ್ರಾಮ್‌ನಲ್ಲಿ ನಿಮ್ಮ ಮಾಸಿಕ ಮೈಲಿಗಲ್ಲನ್ನು ಗಳಿಸಲು ನಿಮಗೆ ಅನುಮತಿ ನೀಡುತ್ತದೆ. ಖರ್ಚುಗಳ ಮೇಲೆ ನೀವು ಗಳಿಸುವ ಸಾಮಾನ್ಯ ರಿವಾರ್ಡ್‌ಗಳಿಗೆ ನೀವು 20 ಪಟ್ಟು ಗಳಿಸಬಹುದು.
ಬಜಾಜ್ ಫೈನಾನ್ಸ್ ಲಿಮಿಟೆಡ್ ಮತ್ತು DBS ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಮಾಡಿದ ಎಲ್ಲಾ ಖರೀದಿಗಳು ಮತ್ತು ವೆಚ್ಚಗಳ ಮೇಲೆ ನೀವು ಎಕ್ಸಲರೇಟೆಡ್ ರಿವಾರ್ಡ್‌ಗಳನ್ನು ಗಳಿಸಬಹುದು. ಇವುಗಳಲ್ಲಿ ಏರ್ ಟ್ರಾವೆಲ್ ಮತ್ತು ಗಿಫ್ಟ್ ವೌಚರ್‌ಗಳನ್ನು ಹೊರತುಪಡಿಸಿ, ಇನ್ಶೂರೆನ್ಸ್, ಹೋಟೆಲ್ ಮತ್ತು ಹಾಲಿಡೇ ಬುಕಿಂಗ್‌ಗಳಂತಹ ಬಿಲ್ ಪಾವತಿಗಳು ಮತ್ತು ಖರ್ಚುಗಳು ಕೂಡಾ ಒಳಗೊಂಡಿವೆ.
ಗಳಿಸಿದ ಎಕ್ಸಲರೇಟೆಡ್ ರಿವಾರ್ಡ್‌ಗಳು ನೀವು ಆಯ್ಕೆ ಮಾಡುವ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ರೂಪಾಂತರವನ್ನು ಅವಲಂಬಿಸಿರುತ್ತದೆ.