ಆಗಾಗ ಕೇಳುವ ಪ್ರಶ್ನೆಗಳು

ಸೂಪರ್‌ಕಾರ್ಡ್ ಬೇರೆ ಯಾವುದೇ ಕ್ರೆಡಿಟ್ ಕಾರ್ಡಿನಿಂದ ಹೇಗೆ ಭಿನ್ನವಾಗಿದೆ?

ಹೆಸರೇ ಸೂಚಿಸುವಂತೆ, ಸೂಪರ್‌ಕಾರ್ಡ್ ಕೆಲವು ಸೂಪರ್ ಫೀಚರ್‌‌ಗಳನ್ನು ಹೊಂದಿದೆ. ಇದು ನಿಯಮಿತ ಕ್ರೆಡಿಟ್ ಕಾರ್ಡ್ ಫೀಚರ್‌ಗಳನ್ನು ಒದಗಿಸುತ್ತದೆ ಆದರೆ 50 ದಿನಗಳವರೆಗೆ ಬಡ್ಡಿ ರಹಿತ ನಗದು ವಿತ್‌ಡ್ರಾವಲ್ ಮತ್ತು ಕ್ರೆಡಿಟ್ ಕಾರ್ಡ್ ಮೇಲೆ ಲೋನ್ ಪಡೆಯುವಂತಹ ಹೆಚ್ಚುವರಿ ಫೀಚರ್‌ಗಳೊಂದಿಗೆ ಕೂಡ ಬರುತ್ತದೆ. ಬಜಾಜ್ ಫಿನ್ಸರ್ವ್‌ ಲಿಮಿಟೆಡ್ ನೆಟ್ವರ್ಕ್‌ನಲ್ಲಿ ಬಹುಮಾನಗಳು, ಆಕರ್ಷಕ ರಿಯಾಯಿತಿಗಳು ಮತ್ತು ವಿಶೇಷ ಸವಲತ್ತುಗಳು ತುಂಬಿವೆ*.

ಸೂಪರ್‌ಕಾರ್ಡ್ ಎಟಿಎಂ ಕ್ಯಾಶ್ ವಿತ್‌ಡ್ರಾವಲ್‌ಗಳನ್ನು ಒದಗಿಸುತ್ತದೆಯೇ?

ಹೌದು, ಇದು ನೀಡುತ್ತದೆ. ಅದು ಕೂಡ 50 ದಿನಗಳವರೆಗೆ ಯಾವುದೇ ಬಡ್ಡಿ ಇಲ್ಲದೆ. ನೀವು 2.5% ಪ್ರಕ್ರಿಯಾ ಶುಲ್ಕವನ್ನು ಪಾವತಿಸಬೇಕು. ನೀವು ವಿತ್‌ಡ್ರಾ ಮಾಡಬಹುದಾದ ಮೊತ್ತವು ಸಾಲದಾತರ ನೀತಿಗಳು ಮತ್ತು ನಿಮ್ಮ ಸೂಪರ್‌ಕಾರ್ಡಿಗೆ ನಿಯೋಜಿಸಲಾದ ಮಿತಿಯನ್ನು ಅವಲಂಬಿಸಿರುತ್ತದೆ.

ಸೂಪರ್‌ಕಾರ್ಡ್ ಎಷ್ಟು ಸುರಕ್ಷಿತವಾಗಿದೆ?

ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಸೂಪರ್‌ಕಾರ್ಡ್ 'ಇನ್‌ಹ್ಯಾಂಡ್' ಭದ್ರತಾ ಫೀಚರ್‌ನೊಂದಿಗೆ ಬರುತ್ತದೆ, ಇದರಲ್ಲಿ ನೀವು ನಿಮ್ಮ ಕ್ರೆಡಿಟ್ ಮತ್ತು ನಗದು ಮಿತಿಯನ್ನು ನಿಯಂತ್ರಿಸಬಹುದು ಮತ್ತು RBL MyCard‌ ಮೂಲಕ ಅಂತಾರಾಷ್ಟ್ರೀಯ ಟ್ರಾನ್ಸಾಕ್ಷನ್‌ಗಳ ಮೇಲೆ ಮಿತಿ ಹೇರಬಹುದು

ಸೂಪರ್‌ಕಾರ್ಡ್‌ನೊಂದಿಗೆ ನಾನು ಯಾವ ರೀತಿಯ ಆಫರ್‌ಗಳನ್ನು ಪಡೆಯುತ್ತೇನೆ?

ಸೂಪರ್‌ಕಾರ್ಡ್ ಗ್ರಾಹಕರಾಗಿ, ನೀವು ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಿಂದ ವಿಶೇಷ ಪ್ರಯೋಜನಗಳಿಗೆ ಮತ್ತು ರೂ. 2,500 ಕ್ಕಿಂತ ಹೆಚ್ಚಿನ ಖರ್ಚುಗಳಿಗೆ ತೊಂದರೆ ರಹಿತ EMI ಪರಿವರ್ತನೆಗೆ ಅರ್ಹರಾಗಿದ್ದೀರಿ. ಸೂಪರ್‌ಕಾರ್ಡ್‌ನಲ್ಲಿರುವ ಇತ್ತೀಚಿನ ಆಫರ್‌ಗಳಿಗಾಗಿ, ಬಜಾಜ್ ಫಿನ್‌ಸರ್ವ್‌ MobiKwik ವಾಲೆಟ್ ಆ್ಯಪ್‌ ಡೌನ್ಲೋಡ್ ಮಾಡಿ.

ಗ್ರಾಹಕರು ವೆಲ್ಕಮ್ ರಿವಾರ್ಡ್ ಪಾಯಿಂಟ್‌ಗಳನ್ನು ಹೇಗೆ ಗಳಿಸಬಹುದು?

ಸೇರ್ಪಡೆ ಶುಲ್ಕವನ್ನು ಹೊಂದಿರುವ ಯಾವುದೇ ಸೂಪರ್‌ಕಾರ್ಡ್ ವೇರಿಯಂಟ್ ವೆಲ್‌ಕಮ್ ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಬರುತ್ತದೆ. ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಲು, ಕಾರ್ಡ್ ನೀಡಿದ 30 ದಿನಗಳ ಒಳಗೆ ಕನಿಷ್ಠ ರೂ. 2,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಟ್ರಾನ್ಸಾಕ್ಷನ್ ಮಾಡಲು ಗ್ರಾಹಕರು ಸೂಪರ್ ಕಾರ್ಡನ್ನು ಬಳಸಬೇಕು.

ಸೂಪರ್‌ಕಾರ್ಡ್‌ಗೆ ವಾರ್ಷಿಕ ಶುಲ್ಕ ಎಷ್ಟು?

ಕಾರ್ಡಿನ ವಾರ್ಷಿಕ ಶುಲ್ಕವು ಕಾರ್ಡಿನ ಪ್ರತಿ ರೂಪಾಂತರಕ್ಕೆ ಬದಲಾಗುತ್ತದೆ.

ಸೂಪರ್‌ಕಾರ್ಡ್‌ನೊಂದಿಗೆ ನಾನು ರಿವಾರ್ಡ್ ಪಾಯಿಂಟ್‌ಗಳನ್ನು ಹೇಗೆ ಗಳಿಸಬಹುದು?

ಸೂಪರ್‌ಕಾರ್ಡ್ ಬಳಸುವಾಗ ಗ್ರಾಹಕರು ಮಾಡುವ ಪ್ರತಿಯೊಂದು ಟ್ರಾನ್ಸಾಕ್ಷನ್ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸುತ್ತಾರೆ. ರಿವಾರ್ಡ್ ಪಾಯಿಂಟ್‌ಗಳನ್ನು ತಿಂಗಳ ಕೊನೆಯಲ್ಲಿ ಗ್ರಾಹಕರ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ಅದನ್ನು RBL ರಿವಾರ್ಡ್ಸ್ ವೆಬ್‌ಸೈಟ್ ನಲ್ಲಿ ರಿಡೀಮ್ ಮಾಡಿಕೊಳ್ಳಬಹುದು.

ನನ್ನ ನಗದು ಮಿತಿಯನ್ನು ನಾನು ಬಡ್ಡಿ-ಮುಕ್ತ ಲೋನ್ ಆಗಿ ಹೇಗೆ ಪರಿವರ್ತಿಸಬಹುದು?

ನೀವು ನಿಮ್ಮ ಲಭ್ಯವಿರುವ ನಗದು ಮಿತಿಯನ್ನು RBL MyCard ಕಾರ್ಡ್ ಆ್ಯಪ್‌ ಬಳಸಿ 90 ದಿನಗಳವರೆಗೆ ಬಡ್ಡಿ ರಹಿತ ಲೋನ್ ಆಗಿ ಪರಿವರ್ತಿಸಬಹುದು.

ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆಯ ಮಿತಿ ಎಂದರೇನು?

ನಿಮ್ಮ ಸೂಪರ್‌ಕಾರ್ಡ್ ಬಳಸಿ ನೀವು ಎಟಿಎಂನಿಂದ ನಗದನ್ನು ವಿತ್‌ಡ್ರಾ ಮಾಡಬಹುದು. ಈ ವಿತ್‌ಡ್ರಾವಲ್ 50 ದಿನಗಳವರೆಗೆ ಬಡ್ಡಿ ರಹಿತವಾಗಿದೆ; ಆದಾಗ್ಯೂ, ಇದು 2.5% ಫ್ಲಾಟ್ ಪ್ರಕ್ರಿಯಾ ಶುಲ್ಕದೊಂದಿಗೆ ಬರುತ್ತದೆ ಮತ್ತು ರಿಸ್ಕ್ ಪಾಲಿಸಿಗಳ ಮೇಲೆ ಅವಲಂಬಿತವಾಗಿರುತ್ತದೆ.

ಕ್ಯಾಶ್‌ಬ್ಯಾಕ್ ಅನ್ನು ಯಾರು ಕ್ಲೈಮ್ ಮಾಡಬಹುದು ಮತ್ತು ಆತ/ಆಕೆ ಅದನ್ನು ಯಾವಾಗ ಪಡೆಯುತ್ತಾರೆ?

ಕ್ಯಾಶ್‌‌ಬ್ಯಾಕ್ ಆಫರ್ ಶೂನ್ಯ ಅಸಲು ಬಾಕಿಯ ಮಾನ್ಯ ಕಾರ್ಡ್ ಅನ್ನು ಹೊಂದಿರುವ ಅದು 30 ಕ್ಕಿಂತ ಅಧಿಕ ದಿನಗಳಿಗೆ ಮಿತಿ ಹೊಂದಿರುವ ಕೇವಲ ಆಯ್ದ ಸದಸ್ಯರಿಗೆ ಮಾತ್ರ ಮಾನ್ಯವಾಗಿರುತ್ತದೆ. ನೀವು ವಹಿವಾಟನ್ನು ಮಾಡಿದ ನಂತರ 45 ದಿನಗಳ ಒಳಗೆ ಕ್ಯಾಶ್‌‌ಬ್ಯಾಕ್ ರಿವಾರ್ಡ್ ದೊರಕುತ್ತದೆ.

ಕ್ಯಾಶ್‌‌ಬ್ಯಾಕ್ ಮೊತ್ತ ಎಷ್ಟು?

ಕಾರ್ಡ್‌ಹೋಲ್ಡರ್‌ಗಳು ಒಂದೇ ಟ್ರಾನ್ಸಾಕ್ಷನ್‌ನಲ್ಲಿ ಗರಿಷ್ಠ ರೂ. 1,000 ವರೆಗೆ 5% ಕ್ಯಾಶ್‌ಬ್ಯಾಕ್ ಪಡೆಯಬಹುದು.

ಯಾವ ವಹಿವಾಟುಗಳು ಕ್ಯಾಶ್‌‌ಬ್ಯಾಕ್ ಅನ್ನು ಒದಗಿಸುತ್ತವೆ?

RBL ಬ್ಯಾಂಕ್ ಪಾಲುದಾರ ಮಳಿಗೆಯಲ್ಲಿ ಸೂಪರ್‌ಕಾರ್ಡ್‌ನೊಂದಿಗೆ ಮಾಡಿದ ಡೌನ್ ಪೇಮೆಂಟ್ ಮೇಲೆ ಮಾತ್ರ ಕ್ಯಾಶ್‌ಬ್ಯಾಕ್ ಮಾನ್ಯವಾಗಿರುತ್ತದೆ ಪಾವತಿ ಸಂದರ್ಭ ಅಥವಾ ಇತರೆ ಯಾವುದೇ ವಹಿವಾಟಿನಲ್ಲಿ ಪಾವತಿಸಿದ ಎಲ್ಲಾ ಮೊತ್ತದ ಮೇಲೆ ಈ ಆಫರ್ ಮಾನ್ಯವಾಗಿರುವುದಿಲ್ಲ.

ಇನ್ನಷ್ಟು ಓದಿರಿ ಕಡಿಮೆ ಓದಿ