ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪಡೆಯುವುದು ಹೇಗೆ?

2 ನಿಮಿಷದ ಓದು

ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಎಂಬುದು ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನೀವು ತಿಂಗಳು ಅಥವಾ ಬಿಲ್ಲಿಂಗ್ ಸೈಕಲ್‌ನಲ್ಲಿ ಮಾಡಿದ ಎಲ್ಲಾ ಟ್ರಾನ್ಸಾಕ್ಷನ್‌ಗಳ ದಾಖಲೆಯಾಗಿದೆ. ಸ್ಟೇಟ್ಮೆಂಟನ್ನು ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ವಿತರಕರು ಕಳುಹಿಸುತ್ತಾರೆ ಮತ್ತು ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಆನ್ಲೈನಿನಲ್ಲಿ ಕೂಡ ನೋಡಬಹುದು.

ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸುವುದು ಹೇಗೆ?

 • ನೆಟ್ ಬ್ಯಾಂಕಿಂಗ್ ಮೂಲಕ
  ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ, ಸ್ಟೇಟ್ಮೆಂಟನ್ನು ನೋಡಿ ಮತ್ತು ಡೌನ್ಲೋಡ್ ಮಾಡಿ. ಒಂದು ವೇಳೆ ನೀವು ಆನ್ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ನೋಂದಾವಣಿ ಮಾಡಿಕೊಂಡಿಲ್ಲವಾದರೆ, ಸೈನ್ ಅಪ್ ಆಗಲು ನಿಮ್ಮ 16- ಡಿಜಿಟ್‌‌ನ ಕ್ರೆಡಿಟ್ ಕಾರ್ಡ್ ನಂಬರನ್ನು ನಮೂದಿಸಿ.
 • ಇಮೇಲ್ ಮೂಲಕ
  ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಕೂಡ ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗಿದೆ. ನಿಮ್ಮ ಇಮೇಲ್ ಪರಿಶೀಲಿಸಿ ಮತ್ತು ಕೆಲವೇ ಕ್ಲಿಕ್‌ಗಳಲ್ಲಿ ಅದನ್ನು ಡೌನ್ಲೋಡ್ ಮಾಡಿ.

ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಆಫ್‌ಲೈನ್‌ನಲ್ಲಿ ಪಡೆಯುವುದು ಹೇಗೆ?

 • ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಮತ್ತು ಪೋಸ್ಟ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪಡೆಯಿರಿ
  ಗ್ರಾಹಕ ಸಹಾಯವಾಣಿ ನಂಬರನ್ನು ಡಯಲ್ ಮಾಡಿ ಮತ್ತು ಪೋಸ್ಟ್ ಮೂಲಕ ನಿಮ್ಮ ವಸತಿ ವಿಳಾಸದಲ್ಲಿ ಸ್ಟೇಟ್ಮೆಂಟನ್ನು ಪಡೆಯಲು ನಮ್ಮ ಪ್ರತಿನಿಧಿ ನಿಮಗೆ ಸಹಾಯ ಮಾಡುತ್ತಾರೆ.
 • ಎಸ್‌ಎಂಎಸ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪಡೆಯಲು ಸೈನ್ ಅಪ್ ಮಾಡಿ:
  ನಿಮ್ಮ ನೋಂದಣಿಯಾದ ಮೊಬೈಲ್ ನಂಬರ್‌ನಿಂದ 'GREEN’ ಎಂದು ಟೈಪ್ ಮಾಡಿ 5607011 ನಂಬರಿಗೆ ಎಸ್‌ಎಂಎಸ್ ಕಳಿಸಿ. ಈ ಆಫ್‌ಲೈನ್ ಪ್ರಕ್ರಿಯೆಯು ನಿಮ್ಮ ಕ್ರೆಡಿಟ್ ಕಾರ್ಡಿಗೆ ಇ-ಸ್ಟೇಟ್ಮೆಂಟ್ ಸೇವೆಯನ್ನು ಸಕ್ರಿಯಗೊಳಿಸುತ್ತದೆ. ಒಮ್ಮೆ ನೀವು ಮೆಸೇಜ್ ಕಳುಹಿಸಿದ ನಂತರ, ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಮತ್ತು ನೀವು 48 ಗಂಟೆಗಳ ಒಳಗೆ ಅನುಮೋದನೆಯನ್ನು ಪಡೆಯುತ್ತೀರಿ. ಈ ಸಕ್ರಿಯಗೊಳಿಸುವಿಕೆಯೊಂದಿಗೆ, ನೀವು ಮುಂದಿನ ಬಿಲ್ಲಿಂಗ್ ಸೈಕಲ್‌ನಿಂದ ನಿಮ್ಮ ಇ-ಸ್ಟೇಟ್ಮೆಂಟ್‌ಗಳನ್ನು ಪರಿಶೀಲಿಸಬಹುದು.

ಈ ಕೆಳಗಿನ ವಿವರಗಳನ್ನು ತಿಳಿದುಕೊಳ್ಳಲು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಓದಿ:

 • ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ, ಕಟ್ಟಲು ಬಾಕಿಯಿರುವ ಒಟ್ಟು ಮೊತ್ತ ಹಾಗೂ ಕಟ್ಟಬೇಕಾದ ಕನಿಷ್ಠ ಮೊತ್ತ
 • ಪಾವತಿಯ ಕಡೆಯ ದಿನಾಂಕ
 • ನಿಮ್ಮ ಲಭ್ಯವಿರುವ ಕ್ರೆಡಿಟ್ ಮಿತಿ
 • ಮಾಡಿದ ಟ್ರಾನ್ಸಾಕ್ಷನ್‍ಗಳು ಹಾಗೂ ಕಡಿತಗೊಂಡ ತೆರಿಗೆಗಳು
 • ಪ್ರಸ್ತುತ ಬಿಲ್ಲಿಂಗ್ ಸೈಕಲ್‌ಗಾಗಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ತೆರೆಯುವುದು ಮತ್ತು ಮುಚ್ಚುವುದು
 • ಗಳಿಸಿದ ರಿವಾರ್ಡ್ ಪಾಯಿಂಟ್‍ಗಳು, ರೆಡೀಮ್ ಮಾಡದ ರಿವಾರ್ಡ್ ಪಾಯಿಂಟ್‍ಗಳು ಮುಂತಾದ ವಿವರಗಳು.

ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸುವುದು ಮುಖ್ಯವಾಗಿದೆ. ಇದು ಸಮಯಕ್ಕೆ ಸರಿಯಾಗಿ ಪಾವತಿಗಳನ್ನು ಮಾಡಲು ಮಾತ್ರವಲ್ಲದೆ ಅನಧಿಕೃತ ಅಥವಾ ಅನುಮಾನಾಸ್ಪದ ಟ್ರಾನ್ಸಾಕ್ಷನ್‌ಗಳನ್ನು ಗುರಿತಿಸಲು ಮತ್ತು ರಿಪೋರ್ಟ್ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ನನ್ನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ನಾನು ಹೇಗೆ ಪರಿಶೀಲಿಸಬಹುದು?

ಈ ಕೆಳಗಿನ ವಿಧಾನಗಳ ಮೂಲಕ ನೀವು ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಪಡೆಯಬಹುದು:

ಆಫ್ಲೈನ್

 • ನಿಮ್ಮ ವಸತಿ ವಿಳಾಸದಲ್ಲಿ ನಿಮ್ಮ ಸ್ಟೇಟ್ಮೆಂಟ್ ಪಡೆಯಲು ನೀವು ಗ್ರಾಹಕ ಸಹಾಯವಾಣಿ ಪ್ರತಿನಿಧಿಯನ್ನು ಸಂಪರ್ಕಿಸಬಹುದು
 • ಎಸ್ಎಂಎಸ್ ಸೇವೆಯನ್ನು ಬಳಸಿಕೊಂಡು ಕೂಡ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಪರಿಶೀಲಿಸಬಹುದು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ‘GREEN” ಎಂದು ಟೈಪ್ ಮಾಡಿ ಮತ್ತು 5607011 ಗೆ ಮೆಸೇಜ್ ಕಳುಹಿಸಿ ಒಮ್ಮೆ ಸೇವೆ ಸಕ್ರಿಯಗೊಂಡ ನಂತರ, ನೀವು ಮುಂದಿನ ಬಿಲ್ಲಿಂಗ್ ಸೈಕಲ್‌ನಿಂದ ನಿಮ್ಮ ಇ-ಸ್ಟೇಟ್ಮೆಂಟನ್ನು ಪಡೆಯಬಹುದು

ಆನ್ಲೈನ್‌

 • ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್‌ಗಳನ್ನು ನೀವು ಪರಿಶೀಲಿಸಬಹುದು. ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್‌ಗಳನ್ನು ನೋಡಲು ಮತ್ತು ಡೌನ್ಲೋಡ್ ಮಾಡಲು ಲಾಗಿನ್ ಮಾಡಿ
 • ನಿಮ್ಮ ಮಾಸಿಕ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್‌ಗಳನ್ನು ಕೂಡ ನಿಮ್ಮ ನೋಂದಾಯಿತ ಇಮೇಲ್ id ಗೆ ಕಳುಹಿಸಲಾಗುತ್ತದೆ
ನನ್ನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ನಾನು ಆನ್ಲೈನಿನಲ್ಲಿ ಹೇಗೆ ನೋಡಬಹುದು?

ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಆನ್ಲೈನಿನಲ್ಲಿ ನೋಡಲು, ಈ ಹಂತಗಳನ್ನು ಅನುಸರಿಸಿ:

 • ನಿಮ್ಮ ನೋಂದಾಯಿತ ಮೊಬೈಲ್ ನಂಬರನ್ನು ಬಳಸಿಕೊಂಡು ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ
 • ಆಯಾ ತಿಂಗಳ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ನೋಡಿ ಮತ್ತು ಡೌನ್ಲೋಡ್ ಮಾಡಿ

ನೀವು ಆನ್ಲೈನ್ ಸೇವೆಗಳಿಗೆ ನೋಂದಣಿಯಾಗಿಲ್ಲದಿದ್ದರೆ, ಸೈನ್ ಅಪ್ ಮಾಡಲು ನಿಮ್ಮ ಮೊಬೈಲ್ ನಂಬರ್ ಮತ್ತು 16-ಅಂಕಿಯ ಕ್ರೆಡಿಟ್ ಕಾರ್ಡ್ ನಂಬರನ್ನು ಬಳಸಿ.

ನನ್ನ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ನಾನು ಎಲ್ಲಿ ಪರಿಶೀಲಿಸಬಹುದು?

RBL ಬ್ಯಾಂಕ್ ವೆಬ್‌ಸೈಟ್ ಅಥವಾ ಮೈ RBL ಬ್ಯಾಂಕ್ ಆ್ಯಪ್‌ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಡ್ಯಾಶ್‌ಬೋರ್ಡಿಗೆ ಲಾಗಿನ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.