ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಲೋನ್ ಬಡ್ಡಿ ದರ

2 ನಿಮಿಷದ ಓದು
24 ಏಪ್ರಿಲ್ 2021

ಹಣಕಾಸಿನ ತುರ್ತುಸ್ಥಿತಿ ಇದೆಯೇ, ಅಥವಾ ತ್ವರಿತ ಹಣವನ್ನು ಸಾಲ ಪಡೆಯಬೇಕೇ? ನಿಮ್ಮ ಸೂಪರ್‌ಕಾರ್ಡ್ ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಮೇಲಿನ ಲೋನಿಗೆ ಅಪ್ಲೈ ಮಾಡುವ ಮೂಲಕ ನೀವು ಈಗ ನಿಮ್ಮ ತುರ್ತು ಹಣಕಾಸಿನ ಅಗತ್ಯಗಳನ್ನು ಪೂರೈಸಬಹುದು.

ಅದರ ವಿವಿಧ ಪಾವತಿ, ವಿತ್‌ಡ್ರಾವಲ್ ಮತ್ತು ಸವಲತ್ತು ಪ್ರಯೋಜನಗಳಿಗಾಗಿ ನೀವು ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡನ್ನು ಬಳಸಬಹುದು ಮಾತ್ರವಲ್ಲದೆ, ನೀವು ಈಗ ಸ್ಪರ್ಧಾತ್ಮಕ ಕ್ರೆಡಿಟ್ ಕಾರ್ಡ್ ಲೋನ್ ಬಡ್ಡಿ ದರದಲ್ಲಿ ನಿಮ್ಮ ನಗದು ಮಿತಿಯ ಮೇಲೆ ತುರ್ತು ಮುಂಗಡವನ್ನು ಅನುಕೂಲಕರವಾಗಿ ಪಡೆಯಬಹುದು.

ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳವರೆಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸುವ ಮೂಲಕ ತುರ್ತು ಮುಂಗಡ* ಪಡೆಯಬಹುದು ಈ ಲೋನ್ ಶೂನ್ಯ ಪ್ರಕ್ರಿಯಾ ಶುಲ್ಕ ಮತ್ತು ತಿಂಗಳಿಗೆ 1.16% ನಷ್ಟು ನಾಮಮಾತ್ರದ ಬಡ್ಡಿ ದರದೊಂದಿಗೆ ಬರುತ್ತದೆ.

ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಎಂದರೇನು?

ಕ್ರೆಡಿಟ್ ಕಾರ್ಡ್‌ಗಳು ಕಾರ್ಡ್ ಹೋಲ್ಡರ್ ಬಳಸಬಹುದಾದ ಕಾರ್ಡ್ ಮಿತಿಯೊಂದಿಗೆ ಬರುತ್ತವೆ ಆದಾಗ್ಯೂ, ನೀವು ಹೆಚ್ಚುವರಿ ಹಣದ ಅಗತ್ಯವಿದ್ದರೆ, ನಿಮ್ಮ ಕ್ರೆಡಿಟ್ ಕಾರ್ಡ್ ವಿತರಕರು ನಿಮಗೆ ನಾಮಮಾತ್ರದ ಬಡ್ಡಿ ದರದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಲೋನನ್ನು ಒದಗಿಸಬಹುದು.

ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಕಾರ್ಡ್‌ಹೋಲ್ಡರ್‌ಗೆ ಮುಂಚಿತ-ಅನುಮೋದಿತವಾಗಿ ಬರುತ್ತದೆ, ಹೀಗಾಗಿ ಅದಕ್ಕೆ ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಅಥವಾ ಅಡಮಾನದ ಅಗತ್ಯವಿಲ್ಲ. ಕ್ರೆಡಿಟ್ ಕಾರ್ಡ್ ಪೂರೈಕೆದಾರರು ಸಾಮಾನ್ಯವಾಗಿ ಕಾರ್ಡಿನ ಕ್ರೆಡಿಟ್ ಮಿತಿ, ಬಳಕೆಯ ಮಾದರಿಗಳು ಮತ್ತು ಕಾರ್ಡ್‌ದಾರರ ಮರುಪಾವತಿ ಇತಿಹಾಸದಂತಹ ಅಂಶಗಳನ್ನು ಪರಿಗಣಿಸುತ್ತಾರೆ. ಒಮ್ಮೆ ನೀವು ಲೋನಿಗೆ ಅಪ್ಲೈ ಮಾಡಿದ ನಂತರ, ಮೊತ್ತವನ್ನು ತಕ್ಷಣವೇ ವಿತರಿಸಲಾಗುತ್ತದೆ.

*RBL ಬ್ಯಾಂಕ್ ತನ್ನ ವಿವೇಚನೆಗೆ ಅನುಗುಣವಾಗಿ ಸಾಲವನ್ನು ಒದಗಿಸುತ್ತದೆ ಮತ್ತು ಅದು ಅದರ ನೀತಿಗಳಿಗೆ ಒಳಪಟ್ಟಿರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ