ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವುದು ಹೇಗೆ?
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದು ಸುಲಭ ಮತ್ತು ತೊಂದರೆ ರಹಿತವಾಗಿದೆ. ನೆಟ್ ಬ್ಯಾಂಕಿಂಗ್, ಎನ್‌ಇಎಫ್‌ಟಿ, ಎನ್‌ಎಸಿಎಚ್ ಮ್ಯಾಂಡೇಟ್, RBL MyCard ಆ್ಯಪ್, BillDesk ಅಥವಾ ಚೆಕ್ ಅಥವಾ ನಗದು ಪಾವತಿಗಳ ಮೂಲಕ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಅನೇಕ ಆನ್ಲೈನ್ ಮತ್ತು ಆಫ್ಲೈನ್ ಆಯ್ಕೆಗಳ ಮೂಲಕ ಪಾವತಿಸಬಹುದು. Razorpay ಮೂಲಕವೂ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಬಹುದು.
ಆನ್ಲೈನ್ ಕ್ರೆಡಿಟ್ ಕಾರ್ಡ್ ಪಾವತಿ ಸೌಲಭ್ಯವು ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಬಾಕಿ ಮೊತ್ತವನ್ನು ಮರುಪಾವತಿಸಲು ನಿಮಗೆ ಅನುಮತಿ ನೀಡುತ್ತದೆ. ನಿಮಗೆ ಬೇಕಾಗಿರುವುದು ಸಕ್ರಿಯ ಇಂಟರ್ನೆಟ್ ಕನೆಕ್ಷನ್ ಆಗಿದೆ ಮತ್ತು ಬಾಕಿ ಮೊತ್ತವನ್ನು ತ್ವರಿತವಾಗಿ ಕ್ಲಿಯರ್ ಮಾಡಲು ನೀವು ಮೊಬೈಲ್ ಆ್ಯಪ್, ನೆಟ್ ಬ್ಯಾಂಕಿಂಗ್ ಅಥವಾ ಇತರ ವಿಧಾನಗಳನ್ನು ಬಳಸಬಹುದು. ನಿಮ್ಮ ಬ್ಯಾಂಕ್ ಅಕೌಂಟಿನಿಂದ ನೇರವಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಪಾವತಿಸಬಹುದು ಮತ್ತು ಯಶಸ್ವಿ ಪಾವತಿಗಳ ಬಗ್ಗೆ ತ್ವರಿತ ನೋಟಿಫಿಕೇಶನ್‌ಗಳನ್ನು ಪಡೆಯಬಹುದು.
ನೀವು ಆನ್ಲೈನ್ ವಿಧಾನಗಳನ್ನು ಬಳಸಲು ಬಯಸದಿದ್ದರೆ ಚೆಕ್ ಅಥವಾ ನಗದು ಮೂಲಕ ಕೂಡ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಮಾಡಬಹುದು.
ನಿಮ್ಮ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಕೆಲವು ಅನುಕೂಲಕರ ವಿಧಾನಗಳನ್ನು ನೋಡಿ.
ಬಜಾಜ್ ಫಿನ್‌ಸರ್ವ್ ಬಿಬಿಪಿಎಸ್ (ಭಾರತ್ ಬಿಲ್ ಪಾವತಿ ವ್ಯವಸ್ಥೆ) ಬಳಸಿ ಆನ್ಲೈನ್ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ
- ಬಜಾಜ್ ಫಿನ್‌ಸರ್ವ್‌ನ ಬಿಬಿಪಿಎಸ್ ಲಾಗಿನ್ ಪುಟಕ್ಕೆ ಭೇಟಿ ನೀಡಿ
- ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ನಮೂದಿಸಿದಂತೆ ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
- ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ ಮತ್ತು 'ಒಟಿಪಿ ಜನರೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ’
- ನಿಮ್ಮ ಮೊಬೈಲ್ ನಂಬರ್‌ನಲ್ಲಿ ಹಂಚಿಕೊಳ್ಳಲಾದ 6-ಅಂಕಿಯ ಒಟಿಪಿಯನ್ನು ನಮೂದಿಸಿ
- 'ಒಟಿಪಿ ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ’
- ಹೋಮ್‌ಪೇಜ್‌ನಲ್ಲಿ, 'ಹಣಕಾಸು ಸೇವೆಗಳು ಮತ್ತು ತೆರಿಗೆಗಳು' ವಿಭಾಗಕ್ಕೆ ಹೋಗಿ’
- ಕ್ರೆಡಿಟ್ ಕಾರ್ಡ್ ಐಕಾನ್ ಮೇಲೆ ಕ್ಲಿಕ್ ಮಾಡಿ
- ಡ್ರಾಪ್-ಡೌನ್ ಮೆನುವಿನಿಂದ ಬಿಲ್ಲರ್ ಆಯ್ಕೆಮಾಡಿ
- ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್‌ನ ಕೊನೆಯ 4 ಅಂಕಿಗಳನ್ನು ನಮೂದಿಸಿ
- 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ’
- ನೆಟ್ ಬ್ಯಾಂಕಿಂಗ್, ಯುಪಿಐ ಐಡಿ ಅಥವಾ ಡೆಬಿಟ್ ಕಾರ್ಡ್ ಬಳಸಿ ಮೊತ್ತವನ್ನು ಪಾವತಿಸಿ
NEFT ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
ಎನ್ಇಎಫ್‌ಟಿ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸಾಮಾನ್ಯವಾಗಿ ಬಳಸಲಾಗುವ ಡಿಜಿಟಲ್ ಪಾವತಿ ಆಯ್ಕೆಗಳಲ್ಲಿ ಒಂದಾಗಿದೆ. ಎನ್‌ಇಎಫ್‌ಟಿ ಬ್ಯಾಂಕ್‌ಗಳ ನಡುವೆ ಎಲೆಕ್ಟ್ರಾನಿಕ್ ಆಗಿ ಕ್ರೆಡಿಟ್ ಕಾರ್ಡ್ ಬಿಲ್‌ಗಳ ಪಾವತಿಯನ್ನು ಅನುಮತಿಸುತ್ತದೆ ಮತ್ತು ಅದನ್ನು ಆರ್‌ಬಿಐ ನಿರ್ವಹಿಸುತ್ತದೆ. ಪಾವತಿಗಳನ್ನು ಮಾಡಲು ನಿಮಗೆ ಸಾಧ್ಯವಾಗಲು ಕ್ರೆಡಿಟ್ ಕಾರ್ಡ್ ವಿತರಕರು ಎನ್ಇಎಫ್‌ಟಿ-ಸಕ್ರಿಯಗೊಳಿಸಿರಬೇಕು.
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಮಾಡಲು ಎನ್ಇಎಫ್‌ಟಿ ಬಳಸುವ ಕೆಲವು ಪ್ರಯೋಜನಗಳೆಂದರೆ ಇದು ಸುರಕ್ಷಿತ ವೇದಿಕೆಯಾಗಿದೆ, ಆನ್ಲೈನ್‌ನಲ್ಲಿ ಪಾವತಿ ಮಾಡಬಹುದು ಮತ್ತು ಸಂಪೂರ್ಣ ಕಾಗದರಹಿತವಾಗಿದೆ ಹಾಗೂ ಬಿಲ್ ಪಾವತಿಯ ಇತರ ವಿಧಾನಗಳಿಗೆ ಹೋಲಿಸಿದರೆ ಕಡಿಮೆ ಪಾವತಿ ಶುಲ್ಕಗಳು ಹೊಂದಿವೆ.
ನಿಮ್ಮ ಎನ್‌ಇಎಫ್‌ಟಿ ಪಾವತಿ ಮಾಡುವಾಗ ಈ ಕೆಳಗಿನ ಪಾವತಿದಾರರ ವಿವರಗಳನ್ನು ಆಯ್ಕೆಮಾಡಿ:
- ಪಾವತಿ ಪಡೆಯುವವರ ಹೆಸರು : ನಿಮ್ಮ ಸೂಪರ್‌ಕಾರ್ಡ್ ಮೇಲಿರುವ ಹೆಸರು
- ಪಾವತಿ ಪಡೆಯುವವರ ಅಕೌಂಟ್ ನಂಬರ್: ಸೂಪರ್‌ಕಾರ್ಡ್ 16-ಡಿಜಿಟ್ ನಂಬರ್
- ಬ್ಯಾಂಕ್ ಹೆಸರು: ಆರ್‌ಬಿಎಲ್ ಬ್ಯಾಂಕ್
- ಐಎಫ್‌ಎಸ್‌ಸಿ ಕೋಡ್: RATN0CRCARD
- ಶಾಖೆಯ ಸ್ಥಳ: ಎನ್‌ಒಸಿ ಗೋರೆಗಾಂವ್, ಮುಂಬೈ
ನೆಟ್ ಬ್ಯಾಂಕಿಂಗ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
ನಿಮ್ಮ ಸೂಪರ್‌ಕಾರ್ಡಿಗೆ ಪಾವತಿ ಮಾಡಲು ನಿಮ್ಮ ಅಸ್ತಿತ್ವದಲ್ಲಿರುವ RBL ಬ್ಯಾಂಕ್ ಅಕೌಂಟಿಗೆ ನೀವು ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ಬಳಸಬಹುದು. RBL ಕ್ರೆಡಿಟ್ ಕಾರ್ಡ್ ಲಾಗಿನ್ ರಚಿಸಲು ಮತ್ತು ಪಾವತಿ ಮಾಡಲು, ಇಲ್ಲಿ ಕ್ಲಿಕ್ ಮಾಡಿ.
NACH ಸೌಲಭ್ಯದ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
ನಿಮ್ಮ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಗಾಗಿ ಎನ್‌ಎಸಿಎಚ್ ಸೌಲಭ್ಯಕ್ಕಾಗಿ ನೋಂದಣಿ ಮಾಡಿ ಮತ್ತು ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಪಾವತಿ ಮಾಡಲು ನೆನಪಿಡುವ ತೊಂದರೆಯನ್ನು ನಿವಾರಿಸಿ. ಎನ್‌ಎಸಿಎಚ್ ಸೌಲಭ್ಯವನ್ನು ಬಳಸಿ ಯಾವುದೇ ಬ್ಯಾಂಕ್‌ನಲ್ಲಿ ಅಸ್ತಿತ್ವದಲ್ಲಿರುವ ನಿಮ್ಮ ಅಕೌಂಟ್ ಅನ್ನು ನಿಮ್ಮ ಸೂಪರ್‌ಕಾರ್ಡ್‌ಗೆ ಲಿಂಕ್ ಮಾಡಿ. ಫಾರ್ಮ್‌ನಲ್ಲಿ ನೀಡಲಾದ ವಿಳಾಸದಲ್ಲಿ ಎನ್‌ಎಸಿಎಚ್ ಫಾರ್ಮ್ ಅನ್ನು ನಮಗೆ ಸಲ್ಲಿಸುವ ಮೂಲಕ ನೋಂದಾಯಿಸಿ. ಹಾಗೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.
RBL MyCard ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
RBL MyCard ಮೊಬೈಲ್ ಆ್ಯಪ್ ಬಳಸಿ ಸುಲಭವಾಗಿ ನಿಮ್ಮ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಬಿಲ್ ಪಾವತಿಗಳನ್ನು ಮಾಡಿ. ನೀವು ನಿಮ್ಮ ಅಕೌಂಟ್ ಅನ್ನು ನಿರ್ವಹಿಸಬಹುದು, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಬಹುದು ಮತ್ತು ಬೇರೊಂದು ಬ್ಯಾಂಕ್ ಅಕೌಂಟನ್ನು ಬಳಸಿಕೊಂಡು ತಕ್ಷಣವೇ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಬಹುದು.
ನೀವು ಇದುವರೆಗೂ RBL MyCard ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡದಿದ್ದರೆ, MyCard 5607011 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಅಥವಾ Google Play Store ಅಥವಾ App Store ನಿಂದ ಡೌನ್ಲೋಡ್ ಮಾಡಬಹುದು.
ಬಿಲ್ ಡೆಸ್ಕ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
ನಿಮ್ಮ ಬಾಕಿಗಳನ್ನು ಪಾವತಿಸಲು ಮತ್ತು ತ್ವರಿತ ಪಾವತಿ ದೃಢೀಕರಣವನ್ನು ಪಡೆಯಲು ಇತರ ಬ್ಯಾಂಕ್ ಅಕೌಂಟ್‌ಗಳನ್ನು ಬಳಸಿಕೊಂಡು ನಿಮ್ಮ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಪಾವತಿಯನ್ನು ತಕ್ಷಣವೇ ಮಾಡಿ.
ತ್ವರಿತ ಬಿಲ್ ಬಳಸಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಆನ್ಲೈನಿನಲ್ಲಿ ಪಾವತಿಸಿ.
ಚೆಕ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
ನಿಮ್ಮ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಪರವಾಗಿ ನೀವು ಚೆಕ್ ಅನ್ನು ಕೂಡ ಡ್ರಾ ಮಾಡಬಹುದು.
ನಗದು ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
ಆನ್ಲೈನ್ ಪಾವತಿ ವಿಧಾನವು ನಿಮಗೆ ಅನಾನುಕೂಲಕರವಾಗಿದ್ದರೆ, ನೀವು ನಿಮ್ಮ ಮಾಸಿಕ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಗದು ರೂಪದಲ್ಲಿ ಪಾವತಿಸಬಹುದು. ಬಿಲ್ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲು ನಿಮ್ಮ ಹತ್ತಿರದ ಬಜಾಜ್ ಫಿನ್‌ಸರ್ವ್ ಬ್ರಾಂಚ್ ಅಥವಾ RBL ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ನಿಮ್ಮ ಹೆಸರು ಮತ್ತು ಅಕೌಂಟ್ ನಂಬರಿನೊಂದಿಗೆ ಅದನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಅಕೌಂಟ್‌ಗೆ ಡೆಪಾಸಿಟ್ ಮಾಡಿ. ನಗದು ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಮೇಲೆ ಹೆಚ್ಚುವರಿ ಶುಲ್ಕಗಳು ಮತ್ತು ತೆರಿಗೆಗಳು ಅನ್ವಯವಾಗುತ್ತವೆ.
ಆಗಾಗ ಕೇಳುವ ಪ್ರಶ್ನೆಗಳು
ನಿಮ್ಮ ಕ್ರೆಡಿಟ್ ಕಾರ್ಡ್ ನ ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸುವುದರಿಂದ ಕಾರ್ಡ್ ಮೇಲಿನ ದಂಡ ಶುಲ್ಕವನ್ನು ತಪ್ಪಿಸಲು ನಿಮಗೆ ಅನುಮತಿ ನೀಡುತ್ತದೆ. ಆದಾಗ್ಯೂ, ಬಾಕಿ ಉಳಿಕೆಯನ್ನು ಮುಂದಿನ ತಿಂಗಳ ಬಿಲ್‌ಗೆ ಸೇರಿಸುವುದರಿಂದ, ನೀವು ದೊಡ್ಡ ಮೊತ್ತವನ್ನು ಪಾವತಿಸಲು ಉಳಿದಿರುತ್ತದೆ. ಇದು ಬಾಕಿ ಮೊತ್ತದ ಮೇಲೆ ಬಡ್ಡಿಯನ್ನು ಕೂಡ ಆಕರ್ಷಿಸುತ್ತದೆ.
ಪ್ರತಿ ತಿಂಗಳು ಪಾವತಿ ಗಡುವು ದಿನಾಂಕದೊಳಗೆ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುವುದು ಈ ಕೆಳಗಿನ ಪ್ರಯೋಜನಗಳನ್ನು ಹೊಂದಿರುತ್ತದೆ:
- ಬಾಕಿ ಉಳಿಕೆಯ ಮೇಲೆ ಹೆಚ್ಚಿನ ಬಡ್ಡಿಯನ್ನು ಪಡೆಯುವುದರಿಂದ ನಿಮ್ಮನ್ನು ತಡೆಯುತ್ತದೆ
- ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕ್ರೆಡಿಟ್ ವರದಿಯನ್ನು ಬಲಪಡಿಸುತ್ತದೆ
- ನಿಮ್ಮ ಅಸ್ತಿತ್ವದಲ್ಲಿರುವ ಸಾಲವನ್ನು ತೆರವುಗೊಳಿಸುತ್ತದೆ ಮತ್ತು ಹೊಸ ವೆಚ್ಚಗಳಿಗಾಗಿ ನಿಮಗೆ ಪೂರ್ಣ ಕ್ರೆಡಿಟ್ ಮಿತಿಯನ್ನು ನೀಡುತ್ತದೆ
ನೀವು ಈಗ ಎನ್‌ಇಎಫ್‌ಟಿ ಟ್ರಾನ್ಸ್‌ಫರ್ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಅನುಕೂಲಕರವಾಗಿ ಪಾವತಿಸಬಹುದು. ಆದಾಗ್ಯೂ, ಪಾವತಿಯನ್ನು ಪಡೆಯಲು ಕ್ರೆಡಿಟ್ ಕಾರ್ಡ್ ವಿತರಕರು ಎನ್ಇಎಫ್‌ಟಿ- ಸಕ್ರಿಯಗೊಳಿಸಬೇಕು.
ಎನ್‌ಇಎಫ್‌ಟಿ ಟ್ರಾನ್ಸ್‌ಫರ್ ಬಳಸಿ ನಿಮ್ಮ ಸೂಪರ್‌ಕಾರ್ಡ್ ಬಿಲ್ ಪಾವತಿಸಲು ಈ ಹಂತಗಳನ್ನು ಅನುಸರಿಸಿ:
ಹಂತ 1: ನಿಮ್ಮ ನೆಟ್ ಬ್ಯಾಂಕಿಂಗ್ ಅಕೌಂಟಿಗೆ ಲಾಗಿನ್ ಮಾಡಿ ಮತ್ತು ಥರ್ಡ್ ಪಾರ್ಟಿ ಟ್ರಾನ್ಸ್‌ಫರ್ ಅಡಿಯಲ್ಲಿ RBL ಬ್ಯಾಂಕನ್ನು ಫಲಾನುಭವಿಯಾಗಿ ಸೇರಿಸಿ
ಹಂತ 2: ಕ್ರೆಡಿಟ್ ಕಾರ್ಡ್ ಪಾವತಿ ಮಾಡಲು ಐಎಫ್ಎಸ್‌ಸಿ ಕೋಡನ್ನು RATN0CRCARD ಆಗಿ ಸೇರಿಸಿ
ಹಂತ 3: ಬ್ಯಾಂಕಿಂಗ್ ಪೇಜಿನಲ್ಲಿ ಅಕೌಂಟ್ ನಂಬರ್ ಜಾಗದಲ್ಲಿ ನಿಮ್ಮ 16-ಅಂಕಿಯ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ನಂಬರ್ ನಮೂದಿಸಿ
ಹಂತ 4: ಬ್ಯಾಂಕ್ ಹೆಸರನ್ನು RBL ಬ್ಯಾಂಕ್ ಆಗಿ ನಮೂದಿಸಿ
ಹಂತ 5: ಎನ್‌ಒಸಿ ಗೋರೆಗಾಂವ್, ಮುಂಬೈ ಆಗಿ ಬ್ಯಾಂಕ್ ವಿಳಾಸವನ್ನು ನಮೂದಿಸಿ
ಹಂತ 6: ನಿಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಸಲ್ಲಿಸಿ' ಕ್ಲಿಕ್ ಮಾಡಿ
ಒಮ್ಮೆ ನೀವು ನೋಂದಣಿಯಾದ ನಂತರ, ಪಾವತಿ ಮಾಡಿ. ನಿಮ್ಮ ಪಾವತಿಯು ನಿಮ್ಮ RBL ಸೂಪರ್‌ಕಾರ್ಡ್ ಅಕೌಂಟಿನಲ್ಲಿ 3 ಬ್ಯಾಂಕಿಂಗ್ ಗಂಟೆಗಳ ಒಳಗೆ ಕಾಣಿಸಿಕೊಳ್ಳುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ ಹೊರ ಬಂದ ಮೇಲೆ, ಪ್ರತಿ ತಿಂಗಳ ಕೊನೆಯ ಪಾವತಿ ದಿನಾಂಕದ ಒಳಗೆ ಯಾವಾಗ ಬೇಕಾದರೂ ನೀವು ಪಾವತಿ ಮಾಡಬಹುದು. ಹಾಗೆ ಮಾಡಲು ವಿಫಲವಾಗುವುದು ಅನಗತ್ಯವಾಗಿ ಹೆಚ್ಚುವರಿ ಬಡ್ಡಿಯನ್ನು ಆಕರ್ಷಿಸುತ್ತದೆ.
ಕ್ರೆಡಿಟ್ ಕಾರ್ಡ್ ಬಾಕಿಗಳ ಮೇಲಿನ ಬಡ್ಡಿಯನ್ನು ತಪ್ಪಿಸಲು ಉತ್ತಮ ಅಭ್ಯಾಸವೆಂದರೆ ಪಾವತಿ ಗಡುವು ದಿನಾಂಕದೊಳಗೆ ಪೂರ್ಣ ಬಾಕಿ ಮೊತ್ತವನ್ನು ಪಾವತಿಸುವುದು.
ತಡವಾದ ಪಾವತಿಯಿಂದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಇಳಿಕೆಯು ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ, ಇದರಲ್ಲಿ ಪಾವತಿಯು ತಡವಾಗಿದೆ.
- ಒಂದು ದಿನದ ವಿಳಂಬ ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ರಿಪೋರ್ಟಿನಲ್ಲಿ ರೆಕಾರ್ಡ್ ಆಗುವುದಿಲ್ಲ.
- 30 ರಿಂದ 60 ದಿನಗಳ ವಿಳಂಬ ಪಾವತಿ ಮಾಡುವವರೆಗೆ ಒಮ್ಮೊಮ್ಮೆ ರೆಕಾರ್ಡ್ ಆಗುತ್ತದೆ.
- 30 ಮತ್ತು 60 ದಿನಗಳ ನಡುವೆ ಆಗಾಗ್ಗೆ ಡೀಫಾಲ್ಟ್ ಆಗುವುದರಿಂದ ನಿಮ್ಮ ಸಿಬಿಲ್ ಸ್ಕೋರ್ ಹಾನಿಯಾಗುತ್ತದೆ.
ಅನುಕೂಲಕರ ಪಾವತಿ ವಿಧಾನವನ್ನು ಬಳಸಿಕೊಂಡು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಗಳನ್ನು ಮಾಡಿ ಮತ್ತು ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡಿನ ಪ್ರಯೋಜನಗಳನ್ನು ತೊಂದರೆ ರಹಿತವಾಗಿ ಆನಂದಿಸಿ.
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ಲಿನ ಮುಂಚಿತ ಪಾವತಿಯು ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ. ಇದು ಬಡ್ಡಿ ಶುಲ್ಕಗಳನ್ನು ತಪ್ಪಿಸಲು, ಹೆಚ್ಚಿನ ಟ್ರಾನ್ಸಾಕ್ಷನ್‌ಗಳಿಗಾಗಿ ನಿಮ್ಮ ಕ್ರೆಡಿಟ್ ಲೈನನ್ನು ಮುಕ್ತಗೊಳಿಸಲು ಮತ್ತು ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಲು ಸಹಾಯ ಮಾಡುತ್ತದೆ.