ಅಗ್ರಿ ಗೋಲ್ಡ್ ಲೋನ್ ಯೋಜನೆ
ಹಣಕಾಸಿನ ಅವಶ್ಯಕತೆಗಳು ಸಂಬಳದಾರರು ಮತ್ತು ಬಿಸಿನೆಸ್ ಮಾಡುವವರಿಗೆ ಮಾತ್ರ ಸೀಮಿತವಾಗಿಲ್ಲ. ಕೃಷಿ ಮತ್ತು ಕೃ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೂ ತಮ್ಮ ಕ್ರೆಡಿಟ್ ಅವಶ್ಯಕತೆಗಳನ್ನು ಪೂರೈಸಲು ಸಮಯಕ್ಕೆ ಸರಿಯಾಗಿ ಹಣ ಬೇಕಾಗುತ್ತದೆ.
ಭಾರತದ ಜಿಡಿಪಿಯಲ್ಲಿ ಕೃಷಿಗೆ ನಿರ್ಣಾಯಕ ಪಾತ್ರ ಇರುವುದರಿಂದ, ರೈತ ಬಾಂಧವರು ಕ್ರೆಡಿಟ್ ಪಡೆಯಲು ಸರ್ಕಾರ ಮತ್ತು ಪ್ರಮುಖ ಹಣಕಾಸು ಸಂಸ್ಥೆಗಳು ಅನುಕೂಲಕರ ಹಣಕಾಸು ಆಯ್ಕೆಗಳನ್ನು ಒದಗಿಸುತ್ತಿವೆ. ಬಜಾಜ್ ಫಿನ್‌ಸರ್ವ್ ಕೂಡಾ ಕೃಷಿ ಸಮುದಾಯಕ್ಕೆ ಸಹಾಯಹಸ್ತ ಚಾಚಲು ಅಗ್ರಿ ಗೋಲ್ಡ್ ಲೋನ್ ಯೋಜನೆಯನ್ನು ಒದಗಿಸುತ್ತದೆ.
ಕೃಷಿ ಗೋಲ್ಡ್ ಲೋನ್ ಎನ್ನುವುದು ಒಂದು ಅಡಮಾನದ ಲೋನ್ ಸೌಲಭ್ಯವಾಗಿದ್ದು, ಇದು ರೈತರಿಗೆ ಚಿನ್ನದ ಮೇಲೆ ಲೋನ್ ಪಡೆಯಲು ಅನುವು ಮಾಡಿಕೊಡುತ್ತದೆ. ಒಟ್ಟಾರೆಯಾಗಿ, ರೈತರಿಗೆ ಕೃಷಿ ಅವಶ್ಯಕತೆಗಳನ್ನು ಪರಿಹರಿಸಲು ತ್ವರಿತ ಕ್ರೆಡಿಟ್ ಅಕ್ಸೆಸ್ ಒದಗಿಸುವುದೇ ಈ ಗೋಲ್ಡ್ ಲೋನ್ ಸೌಲಭ್ಯದ ಉದ್ದೇಶ.
ಸಾಮಾನ್ಯವಾಗಿ, ರೈತರ ಗೋಲ್ಡ್ ಲೋನ್‌ಗಳು ಈ ಕೆಳಗಿನ ಹಣಕಾಸು ಅವಶ್ಯಕತೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತವೆ:
- ಕೃಷಿ ಚಟುವಟಿಕೆ
- ಕೃಷಿ-ಸಂಬಂಧಿತ ಚಟುವಟಿಕೆಗಳು
ವಿವರವಾಗಿ ಹೇಳುವುದಾದರೆ, ಭೂಮಿ, ಯಂತ್ರೋಪಕರಣಗಳು, ಸಲಕರಣೆಗಳು, ದಾಸ್ತಾನು ಖರೀದಿ, ಕಚ್ಚಾ ವಸ್ತುಗಳು, ಸೇರಿದಂತೆ ಹಲವಾರು ವೆಚ್ಚಗಳನ್ನು ಪೂರೈಸಲು ರೈತರು ಕಿಸಾನ್ ಗೋಲ್ಡ್ ಲೋನ್ ಯೋಜನೆಯ ಮೂಲಕ ಹಣ ಪಡೆಯಬಹುದು.
ರೈತರ ಗೋಲ್ಡ್ ಲೋನ್‌ನ ಫೀಚರ್‌ಗಳು
ಕೃಷಿ ಗೋಲ್ಡ್ ಲೋನ್‌ನ ಗಮನಾರ್ಹ ವೈಶಿಷ್ಟ್ಯಗಳು ಹೀಗಿವೆ:
-
ಲೋನ್ ಮೊತ್ತ
ಅರ್ಹ ರೈತರಿಗೆ ಬಜಾಜ್ ಫಿನ್‌ಸರ್ವ್ ಬೃಹತ್ ಲೋನ್ ಮೊತ್ತವನ್ನು ನೀಡುತ್ತದೆ. ಈ ಭಾರೀ ಪ್ರಮಾಣದ ಲೋನ್ ಮೂಲಕ ಸಾಲಗಾರರು ತಮ್ಮ ಹಣಕಾಸು ಅವಶ್ಯಕತೆಗಳನ್ನು ಬೇಗ ಪೂರೈಸಬಹುದು ಮತ್ತು ಅವರ ಕೃಷಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
-
ಲೋನ್ ಪ್ರಕಾರ
ಕೃಷಿ ಗೋಲ್ಡ್ ಲೋನ್‌ಗಳು ಸಾಮಾನ್ಯವಾಗಿ ಟರ್ಮ್ ಲೋನ್ ಅಥವಾ ಡಿಮ್ಯಾಂಡ್ ಲೋನ್ ರೂಪದಲ್ಲಿ ಸಿಗುತ್ತವೆ. ಅರ್ಜಿದಾರರು ತಮ್ಮ ಅಗತ್ಯಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಈ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
-
ಮಾರ್ಜಿನ್
ಕೃಷಿ ಉತ್ಪಾದನೆಗೆ ಸಾಲದ ಅವಶ್ಯಕತೆ ಇದ್ದ ಸಂದರ್ಭದಲ್ಲಿ, ಮಂಜೂರಾದ ಲೋನ್ ಮೊತ್ತವು ಹಣಕಾಸಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ಅದಲ್ಲದೇ, ಇದು ಅಡ ಇಡಲಾದ ಚಿನ್ನದ ಮಾರುಕಟ್ಟೆ ಮೌಲ್ಯವನ್ನು ಕೂಡ ಅವಲಂಬಿಸಿರಬಹುದು. ಹಣಕಾಸುದಾರರು ಆಂತರಿಕ ಮಾನದಂಡಗಳನ್ನು ಆಧರಿಸಿ ಅದರ ಶೇಕಡಾವಾರನ್ನು ನಿರ್ಧರಿಸುತ್ತಾರೆ.
-
ಬಡ್ಡಿ ದರ
ಅರ್ಹ ಅರ್ಜಿದಾರರು ಸ್ಪರ್ಧಾತ್ಮಕ ಗೋಲ್ಡ್ ಲೋನ್ ಬಡ್ಡಿದರ ಹೊಂದಿರುವ ಬೃಹತ್ ಲೋನ್ ಮೊತ್ತವನ್ನು ಪಡೆಯಬಹುದು. ಅದಕ್ಕೆ ಸಂಬಂಧಿಸಿದ ಶುಲ್ಕಗಳು ಕೂಡಾ ತುಂಬಾ ಕಡಿಮೆ ಇರುತ್ತವೆ. ಸಾಮಾನ್ಯವಾಗಿ, ಸ್ಥಿರ ಆದಾಯ ಮತ್ತು ಸ್ವಚ್ಛ ಕ್ರೆಡಿಟ್ ಹಿನ್ನೆಲೆ ಹೊಂದಿರುವ ಅರ್ಜಿದಾರರು ಸ್ಪರ್ಧಾತ್ಮಕ ದರಗಳು ಮತ್ತು ಸರಳ ಮರುಪಾವತಿ ನಿಯಮಗಳ ಆಧಾರದಲ್ಲಿ ಗೋಲ್ಡ್ ಲೋನ್ ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
-
ಅಡಮಾನ
ಅರ್ಜಿದಾರರು ಚಿನ್ನದ ಆಭರಣಗಳು ಅಥವಾ ಚಿನ್ನದ ನಾಣ್ಯಗಳನ್ನು ಅಡಮಾನವಾಗಿ ಒದಗಿಸಬಹುದು. ಬಹಳಷ್ಟು ಸಂದರ್ಭಗಳಲ್ಲಿ, ಗೋಲ್ಡ್ ಬುಲಿಯನ್‌ಗಳನ್ನು ಅಡಮಾನವಾಗಿ ಅಂಗೀಕರಿಸುವುದಿಲ್ಲ. ಲೋನ್ ಅನುಮೋದನೆಗೆ ಮುಂಚೆ ಅಡಮಾನವಾಗಿ ನೀಡಲಾದ ಚಿನ್ನದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ.
-
ಮರುಪಾವತಿ ಕಾಲಾವಧಿ
ರೈತರ ಗೋಲ್ಡ್ ಲೋನ್‌ನ ಮರುಪಾವತಿ ಅವಧಿಯು ಲೋನ್ ವಿಧವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಮರುಪಾವತಿ ಅವಧಿಯು ಫ್ಲೆಕ್ಸಿಬಲ್ ಆಗಿರುತ್ತದೆ. ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ, ರೈತರು ಅತ್ಯಂತ ಸೂಕ್ತ ಅವಧಿಯನ್ನು ಆಯ್ಕೆ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಇಎಂಐ ಪಾವತಿಸಬಹುದು. ಅನುಕೂಲಕರ ಇಎಂಐ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆ ಮಾಡಲು ಅವರು ಆನ್ಲೈನ್‌ನಲ್ಲಿ ಲಭ್ಯವಿರುವ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.
-
ಮೌಲ್ಯಮಾಪನ
ಚಿನ್ನದ ಆಭರಣವನ್ನು ಅರ್ಜಿದಾರರ ಮನೆಯಲ್ಲೇ ಸುರಕ್ಷಿತವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಜೊತೆಗೆ, ಅಡವಿಟ್ಟ ಚಿನ್ನವನ್ನು ಮೌಲ್ಯಮಾಪನ ಮಾಡಲು ಇಂಡಸ್ಟ್ರಿ-ಗ್ರೇಡ್ ಕ್ಯಾರೆಟ್ ಮೀಟರ್ ಬಳಸಲಾಗುತ್ತದೆ. ಇದು ನೈಜತೆ ಮತ್ತು ನಿಖರತೆಯನ್ನು ಖಚಿತಪಡಿಸುತ್ತದೆ.
-
ಸುರಕ್ಷತಾ ಪ್ರೋಟೋಕಾಲ್
ಅಡವಿಟ್ಟ ಚಿನ್ನವನ್ನು 24x7 ಕಣ್ಗಾವಲು ಮತ್ತು ಇನ್-ಬಿಲ್ಟ್ ಮೋಷನ್ ಡಿಟೆಕ್ಷನ್ ತಂತ್ರಜ್ಞಾನ ಹೊಂದಿರುವ ಸೇಫ್ಟಿ ವಾಲ್ಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ಸುರಕ್ಷತಾ ಪ್ರೋಟೋಕಾಲ್‌ಗಳು ಇಡೀ ದೇಶದಲ್ಲೇ ಅತ್ಯುತ್ತಮವಾಗಿವೆ.
-
ಡಾಕ್ಯುಮೆಂಟೇಶನ್
ತೊಂದರೆಯಿಲ್ಲದ ಪರಿಶೀಲನೆಯ ಮೂಲಕ ಫಂಡಿಂಗ್‌ಗೆ ತ್ವರಿತ ಆಕ್ಸೆಸ್ ಒದಗಿಸಲು ಸರಳ ಡಾಕ್ಯುಮೆಂಟೇಶನ್ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ.
-
ಫೋರ್‌ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿ
ಈ ಗೋಲ್ಡ್ ಲೋನ್‌ನಲ್ಲಿ ಯಾವುದೇ ಶುಲ್ಕವಿಲ್ಲದೇ ಭಾಗಶಃ-ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಮಾಡುವ ಸೌಲಭ್ಯವೂ ಸಿಗುತ್ತದೆ. ಅಂತಹ ಸೌಲಭ್ಯಗಳು ಸಾಲಗಾರರಿಗೆ ಲೋನ್ ಹೊರೆಗಳನ್ನು ಸರಿದೂಗಿಸಲು ಮತ್ತು ಅನುಕೂಲಕರವಾಗಿ ಮರುಪಾವತಿ ಮಾಡಲು ಅವಕಾಶ ನೀಡುತ್ತವೆ.
-
ಭಾಗಶಃ-ಬಿಡುಗಡೆ ಸೌಲಭ್ಯ
ಅಡವಿಟ್ಟ ಚಿನ್ನದ ಒಂದು ಭಾಗವನ್ನು ಭಾಗಶಃ ಬಿಡುಗಡೆ ಮಾಡಿಸಬೇಕಾದಾಗ, ರೈತರು ಅದರ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಮರುಪಾವತಿಸಿದರೆ ಸಾಕು.
-
ಕಾಂಪ್ಲಿಮೆಂಟರಿ ಇನ್ಶೂರೆನ್ಸ್ ಪಾಲಿಸಿ
ಅರ್ಜಿದಾರರು ಕಾಂಪ್ಲಿಮೆಂಟರಿ ಗೋಲ್ಡ್ ಲೋನ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು. ಈ ವೈಶಿಷ್ಟ್ಯವು ಅಡವಿಟ್ಟ ವಸ್ತುಗಳ ನಷ್ಟ ಅಥವಾ ಕಳ್ಳತನ ಮತ್ತು ಕಣ್ಮರೆಯನ್ನು ಕವರ್ ಮಾಡಲು ನೆರವಾಗುತ್ತದೆ.
ಕೃಷಿ ಗೋಲ್ಡ್ ಲೋನ್ ಅರ್ಹತೆ ಮಾನದಂಡ
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಕೃಷಿ ಗೋಲ್ಡ್ ಲೋನ್‌ಗೆ ಅಪ್ಲೈ ಮಾಡಿ:
- 1 ಅರ್ಜಿದಾರರು ಕೆವೈಸಿ ಅವಶ್ಯಕತೆಗಳನ್ನು ಪೂರೈಸಬೇಕು
- 2 ರೈತರ ವಯಸ್ಸು 21 ರಿಂದ 70 ವರ್ಷಗಳ ನಡುವೆ ಇರಬೇಕು
- 3 ಅರ್ಜಿದಾರರು ಕೃಷಿ ಅಥವಾ ಕೃಷಿ-ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರಬೇಕು
- 4 ಅವರು ಆರ್‌ಬಿಐ ಅಥವಾ ಭಾರತ ಸರ್ಕಾರವು ಅನುಮೋದಿಸಿದ ಮತ್ತು ಕೃಷಿ ವಲಯದ ಅಡಿಯಲ್ಲಿ ವರ್ಗೀಕರಿಸಿದ ಯಾವುದೇ ಚಟುವಟಿಕೆಯಲ್ಲಿ ತೊಡಗಿರಬೇಕು
ಕೃಷಿ ಗೋಲ್ಡ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಕೃಷಿ ಗೋಲ್ಡ್ ಲೋನ್ ಪರಿಶೀಲನೆಯನ್ನು ಪೂರ್ಣಗೊಳಿಸಲು ಇವುಗಳನ್ನು ಸಲ್ಲಿಸಿ:
- ಸರಿಯಾಗಿ ತುಂಬಿದ ಲೋನ್ ಅಪ್ಲಿಕೇಶನ್ ಫಾರ್ಮ್
- ಕೆವೈಸಿ ಡಾಕ್ಯುಮೆಂಟ್‌ಗಳು
- ವಿಳಾಸದ ಪುರಾವೆ
- ಪಾಸ್‌ಪೋರ್ಟ್-ಗಾತ್ರದ ಫೋಟೋಗಳು
- ಕೃಷಿ ಭೂಮಿಯ ಮಾಲೀಕತ್ವದ ಪುರಾವೆ
- ಬೆಳೆ ಸಾಗುವಳಿಯ ಪುರಾವೆ
ಇದರ ಜೊತೆಗೆ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ಸಹ ಕೇಳಬಹುದು. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಗತ್ಯ ಡಾಕ್ಯುಮೆಂಟ್‌ಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳಿ.