ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ಪರ್ಸನಲ್ ಲೋನ್‌ - ರೂ. 12,000 ಕ್ಕಿಂತ ಕಡಿಮೆ ಸಂಬಳದವರಿಗೆ

ಮೇಲ್ನೋಟ:

ನೀವು ಪರ್ಸನಲ್ ಲೋನ್‌ ಪಡೆಯಲು ಎದುರು ನೋಡುತ್ತಿದ್ದರೆ, ನಿಮ್ಮ ಸಾಲದಾತರು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು. ಇದರಲ್ಲಿ ಹೆಸರುವಾಸಿಯಾದ ಕಂಪನಿಯಲ್ಲಿ ನೌಕರರಾಗಿರುವುದು ಮತ್ತು ಕನಿಷ್ಠ ಮೂಲ ವೇತನವನ್ನು ಹೊಂದಿರುವುದು ಒಳಗೊಂಡಿರಬಹುದು.

ನೀವು ರೂ. 12,000 ಕ್ಕಿಂತ ಕಡಿಮೆ ಸಂಬಳವನ್ನು ಗಳಿಸುತ್ತಿದ್ದರೆ. ನಿಮ್ಮ ಲೋನ್ ಮರುಪಾವತಿಗೆ ನಿಮಗೆ ಸಹಾಯ ಮಾಡುವ ಆದಾಯದ ಇತರ ಮೂಲಗಳ ಬಗ್ಗೆ ಸಾಲದಾತರಿಗೆ ಮನವರಿಕೆ ಮಾಡಬೇಕಾಗಬಹುದು. ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ ಪಡೆದುಕೊಳ್ಳಲು ಬಯಸುತ್ತಿದ್ದರೆ, ನೀವು ಮುಂಚಿತ-ಅನುಮೋದಿತ ಲೋನ್ ರೂಪದಲ್ಲಿ ನಿಮ್ಮ ಮೂಲ ವಿವರಗಳನ್ನು ಹಂಚಿಕೊಳ್ಳುವುದರ ಮೂಲಕ ಮತ್ತು ನೀವು ಆಫರ್ ಹೊಂದಿದ್ದೀರಾ ಎಂದು ಪರಿಶೀಲಿಸುವ ಮೂಲಕ ಆರಂಭಿಸಬಹುದು. ಬಜಾಜ್ ಫಿನ್‌ಸರ್ವ್ ಪ್ರತಿನಿಧಿಯೊಂದಿಗೆ ಮಾತನಾಡಿದ ನಂತರ, ನಿಮ್ಮ ಪರ್ಸನಲ್ ಲೋನ್‌ ಅನುಮೋದನೆಯನ್ನು ನೀವು ಪಡೆದುಕೊಳ್ಳಬಹುದು.

ಫೀಚರ್‌ಗಳು ಮತ್ತು ಪ್ರಯೋಜನಗಳು

 • ನಿಮಿಷಗಳಲ್ಲಿ ಅನುಮೋದನೆ

  ನಿಮ್ಮ ಅಪ್ಲಿಕೇಶನನ್ನು ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಅನುಮೋದಿಸಲಾಗುತ್ತದೆ, ಇದರಿಂದ ನೀವು ಬಹಳ ಕಾಲ ಕಾಯದೇ ಲೋನ್ ಪಡೆಯಬಹುದು.

 • ಸರಳ ಡಾಕ್ಯುಮೆಂಟೇಶನ್

  ಲೋನ್ ಅನುಮೋದನೆಯನ್ನು ಪಡೆಯಲು, ಕೆಲವೇ ಕೆಲವು ಸರಳ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳಿ ಮತ್ತು ನಿಮ್ಮ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಿ.

 • ವೇಗವಾದ ವಿತರಣೆ

  ನಿಮ್ಮ ಅಪ್ಲಿಕೇಶನ್ ಅನುಮೋದನೆಯ ನಂತರ, 24 ಗಂಟೆಗಳಲ್ಲಿ ನಿಮ್ಮ ಅಕೌಂಟ್‌ಗೆ ಲೋನ್ ವಿತರಿಸಲಾಗುವುದು.

 • ಸೂಕ್ತವಾದ ಅವಧಿಗಳು

  12 ತಿಂಗಳುಗಳಿಂದ 60 ತಿಂಗಳವರೆಗೆ, ಫ್ಲೆಕ್ಸಿಬಲ್ ಅವಧಿಗಳಲ್ಲಿ ನೀವು ನಿಮ್ಮ ಪರ್ಸನಲ್ ಲೋನನ್ನು ಮರುಪಾವತಿ ಮಾಡಬಹುದು.

 • ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ ಅನುಮೋದಿತ ಆಫರ್‌ಗಳು

  ಮುಂಚಿತ-ಅನುಮೋದಿತ ಲೋನ್ ಆಫರ್‌ಗಳೊಂದಿಗೆ, ಕೆಲವೇ ನಿಮಿಷಗಳಲ್ಲಿ ನೀವು ಅರ್ಹವಾಗಿರುವ ಲೋನ್ ಮೊತ್ತವನ್ನು ಪರಿಶೀಲಿಸಬಹುದು. ನಿಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಿ, ನಿಮ್ಮ ಒಂದು-ಬಾರಿಯ ಪಾಸ್‌ವರ್ಡ್ ನಮೂದಿಸಿ (OTP) ಮತ್ತು ನಿಮ್ಮ ಮುಂಚಿತ-ಅನುಮೋದಿತ ಆಫರ್ ಅನ್ನು ಕಂಡುಕೊಳ್ಳಿ.

 • ಅಡಮಾನವಿಲ್ಲದ ಲೋನ್‌

  ಒಂದು ಸುರಕ್ಷಿತವಲ್ಲದ ಲೋನ್ ಆಗಿ, ನೀವು ಯಾವುದೇ ಅಡಮಾನ ಅಥವಾ ಭದ್ರತೆಯನ್ನು ನೀಡದೇ ಲೋನನ್ನು ಪಡೆಯಬಹುದು.

 • ಯಾವುದೇ ಗುಪ್ತ ಶುಲ್ಕಗಳಿಲ್ಲ

  ನಿಮ್ಮ ಪರ್ಸನಲ್ ಲೋನ್‌ ಮೇಲೆ ಗುಪ್ತ ಶುಲ್ಕಗಳು ಇಲ್ಲ. ನಿಯಮ ಮತ್ತು ಷರತ್ತುಗಳನ್ನು ಓದಿರಿ ಮತ್ತು ಮಾಹಿತಿಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳಿ.

 • ಆನ್ಲೈನ್ ​​ಲೋನ್‌ ಅಕೌಂಟ್

  ಸುಲಭವಾಗಿ ನಿರ್ವಹಿಸಬಹುದಾದ ಒಂದು ಆನ್‌ಲೈನ್ ಅಕೌಂಟಿನ ಮೂಲಕ, ನಿಮ್ಮ ಲೋನ್ ಅಕೌಂಟಿನ ಸ್ಟೇಟ್ಮೆಂಟ್ ಪರಿಶೀಲಿಸಿ, ನಿಮ್ಮ ಮರುಪಾವತಿಗಳನ್ನು ಟ್ರ್ಯಾಕ್ ಮಾಡಿ ಮತ್ತು ನಿಮ್ಮ ಲೋನ್ ಬಗ್ಗೆ ಟ್ರ್ಯಾಕ್ ಇಟ್ಟುಕೊಳ್ಳಿ.

ಪರ್ಸನಲ್ ಲೋನ್ ಅರ್ಹತೆ

ಮುಂಚಿತ-ಅನುಮೋದಿತ ಪರ್ಸನಲ್ ಲೋನ್ ಆಫರ್ ಹೊಂದಿರುವ ಪ್ರಸ್ತುತವಿರುವ ಗ್ರಾಹಕರು, ಪರ್ಸನಲ್ ಲೋನನ್ನು ಸುಲಭವಾಗಿ ಪಡೆಯಬಹುದು. ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ನಿಮ್ಮ ಮರುಪಾವತಿಯ ಶೆಡ್ಯೂಲನ್ನು ಯೋಜಿಸಲು ನಿಮ್ಮ ಗೋ-ಟು ಸಾಧನ ಆಗಿರಬಹುದು. ಇದು ನಿಮ್ಮ EMI ನ ಸಕಾಲಿಕ ಪಾವತಿಗೆ ಸಹಾಯ ಮಾಡುತ್ತದೆ.

ಆನ್‌ಲೈನ್‌ನಲ್ಲಿ ಲೋನಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಲು, ನೀವು ಪರ್ಸನಲ್ ಲೋನ್‌ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.

ರೂ. 12, 000 ಕ್ಕಿಂತ ಕಡಿಮೆ ಸಂಬಳದೊಂದಿಗೆ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ

ಕೇವಲ 6 ಸರಳ ಹಂತಗಳಲ್ಲಿ ಅರ್ಜಿ ಫಾರಂ ಅನ್ನು ಪೂರ್ಣಗೊಳಿಸುವುದರ ಮೂಲಕ, ನಿಮ್ಮ ಮುಂಚಿತ-ಅನುಮೋದಿತ ಪರ್ಸನಲ್ ಲೋನ್‌ ಆಫರ್‌ ಅನ್ನು ನೋಡಿ:

ಹಂತ 1

ನಿಮ್ಮ ಫೋನ್ ನಂಬರನ್ನು ಹಂಚಿಕೊಳ್ಳಿ.

ಹಂತ 2

ನಿಮ್ಮ ವೈಯಕ್ತಿಕ ಇಮೇಲ್ ID ಸಲ್ಲಿಸಿ.

ಹಂತ 3

ನೀವು ಪಡೆಯಬೇಕಾದ ಲೋನ್ ಮೊತ್ತವನ್ನು ನಮೂದಿಸಿ.

ಹಂತ 4

'ನಾನು ಅಧಿಕಾರ ನೀಡುತ್ತೇನೆ' ಚೆಕ್-ಬಾಕ್ಸ್ ಅನ್ನು ಟಿಕ್ ಮಾಡಿ.

ಹಂತ 5

'ಈಗ ಸಲ್ಲಿಸಿ' ಕ್ಲಿಕ್ ಮಾಡಿ.

ಹಂತ 6

ನಮ್ಮ ಗ್ರಾಹಕ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುವ ತನಕ ಕಾಯಿರಿ.