ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಲೋನ್

ನಮ್ಮ ಆಸ್ತಿ ಮೇಲಿನ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು

ಆಸ್ತಿ ಮೇಲಿನ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿವರಗಳು

ನಮ್ಮ ಆಸ್ತಿ ಮೇಲಿನ ಲೋನ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋ ನೋಡಿ: ಫೀಚರ್‌ಗಳು ಮತ್ತು ಪ್ರಯೋಜನಗಳು, ಫೀಗಳು ಮತ್ತು ಶುಲ್ಕಗಳು, ಅರ್ಹತಾ ಮಾನದಂಡ ಮತ್ತು ಇನ್ನಷ್ಟು.

  • Loan amount

    ರೂ. 10.50 ಕೋಟಿಯ ಲೋನ್ ಮೊತ್ತ*

    ನಿಮ್ಮ ಅಡಮಾನದ ಆಸ್ತಿಯ ಆಧಾರದಲ್ಲಿ ಮಂಜೂರಾದ ರೂ. 10.50 ಕೋಟಿ* ಗಣನೀಯ ಲೋನ್ ಮೊತ್ತದೊಂದಿಗೆ ನಿಮ್ಮ ತುರ್ತು ಹಣಕಾಸು ಅಗತ್ಯಗಳನ್ನು ನಿರ್ವಹಿಸಿ.

  • Low interest rates

    ಕಡಿಮೆ ಬಡ್ಡಿ ದರಗಳು

    ನಮ್ಮ ಆಸ್ತಿ ಮೇಲಿನ ಲೋನ್ ವರ್ಷಕ್ಕೆ 9% - 14% (ಫ್ಲೋಟಿಂಗ್ ಬಡ್ಡಿ ದರ) ರಿಂದ ಆರಂಭವಾಗುವ ಕೈಗೆಟಕುವ ಬಡ್ಡಿ ದರಗಳೊಂದಿಗೆ ಬರುತ್ತದೆ.

  • Disbursal in 72 hours*

    72 ಗಂಟೆಗಳಲ್ಲಿ ವಿತರಣೆ*

    ಅನುಮೋದನೆಯ 72 ಗಂಟೆಗಳ* ಒಳಗೆ, ಕೆಲವು ಸಂದರ್ಭಗಳಲ್ಲಿ ಅದಕ್ಕೂ ಮುಂಚೆಯೇ, ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ.

  • Tenure of up to

    15 ವರ್ಷಗಳವರೆಗಿನ ಅವಧಿ*

    15 ವರ್ಷಗಳವರೆಗಿನ ಮರುಪಾವತಿ ಅವಧಿಯೊಂದಿಗೆ ನೀವು ನಿಮ್ಮ ಲೋನ್ ಮೊತ್ತವನ್ನು ಅನುಕೂಲಕರವಾಗಿ ಮರುಪಾವತಿಸಬಹುದು*.

  • Multiple end-use options

    ಅನೇಕ ಅಂತಿಮ ಬಳಕೆಯ ಆಯ್ಕೆಗಳು

    ಯಾವುದೇ ಅಂತಿಮ ಬಳಕೆಯ ನಿರ್ಬಂಧಗಳಿಲ್ಲದೆ, ತುರ್ತು ಪರಿಸ್ಥಿತಿ ಅಥವಾ ಮದುವೆ ಖರ್ಚು, ಉನ್ನತ ಶಿಕ್ಷಣ ಅಥವಾ ಬಿಸಿನೆಸ್ ವಿಸ್ತರಣೆಗೆ ಈ ಲೋನ್ ಮೊತ್ತವನ್ನು ಬಳಸಿ.

  • No foreclosure charges

    ಫೋರ್‌ಕ್ಲೋಸರ್ ಶುಲ್ಕಗಳಿಲ್ಲ

    ಫ್ಲೋಟಿಂಗ್ ಬಡ್ಡಿ ದರವನ್ನು ಆಯ್ಕೆ ಮಾಡುವ ವೈಯಕ್ತಿಕ ಸಾಲಗಾರರು ಹೆಚ್ಚುವರಿ ಶುಲ್ಕ ಅಥವಾ ದಂಡವಿಲ್ಲದೆ ಭಾಗಶಃ ಮುಂಪಾವತಿ ಮಾಡಬಹುದು ಅಥವಾ ಸಂಪೂರ್ಣ ಲೋನ್ ಅನ್ನು ಮುಚ್ಚಬಹುದು.

  • Externally benchmarked interest rates

    ಹೊರಗಿನಿಂದ ಗುರುತು ಮಾಡಲಾದ ಬಡ್ಡಿ ದರಗಳು

    ಅನುಕೂಲಕರ ಮಾರುಕಟ್ಟೆ ಟ್ರೆಂಡ್‌ಗಳಲ್ಲಿ ರೆಪೋ ದರ ಮತ್ತು ಪ್ರಯೋಜನದಂತಹ ಬಾಹ್ಯ ಬೆಂಚ್‌ಮಾರ್ಕ್‌ಗೆ ನಿಮ್ಮ ಲೋನ್ ಅನ್ನು ಲಿಂಕ್ ಮಾಡಿ.

  • *ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ
EMI Calculator

ಆಸ್ತಿ ಮೇಲಿನ ಲೋನ್ ಇಎಂಐ ಕ್ಯಾಲ್ಕುಲೇಟರ್ 

ಕೆಲವು ವಿವರಗಳನ್ನು ನಮೂದಿಸಿ, ಆಸ್ತಿ ಮೇಲಿನ ಲೋನ್ ಇಎಂಐಗಳನ್ನು ಪರಿಶೀಲಿಸಿ.

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಕೆಳಗೆ ನಮೂದಿಸಿದ ಮಾನದಂಡಗಳನ್ನು ಪೂರೈಸುವವರೆಗೆ ಯಾರಾದರೂ ನಮ್ಮ ಆಸ್ತಿ ಮೇಲಿನ ಲೋನ್‌ಗೆ ಅರ್ಜಿ ಹಾಕಬಹುದು.

ಅರ್ಹತಾ ಮಾನದಂಡ

  • ರಾಷ್ಟ್ರೀಯತೆ: ನಾವು ಕಾರ್ಯನಿರ್ವಹಿಸುವ ನಗರದಲ್ಲಿ ಆಸ್ತಿ ಹೊಂದಿರುವ ಹಾಗೂ ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರಾಗಿರಬೇಕು.
  • ವಯಸ್ಸು: ಅರ್ಜಿದಾರರ ಕನಿಷ್ಠ ವಯಸ್ಸು 25 ವರ್ಷಗಳಾಗಿರಬೇಕು* (ಹಣಕಾಸು ಅಲ್ಲದ ಆಸ್ತಿಯ ಮಾಲೀಕರಿಗೆ 18 ವರ್ಷಗಳು)
    * ವೈಯಕ್ತಿಕ ಅರ್ಜಿದಾರ/ಸಹ-ಅರ್ಜಿದಾರರ ಲೋನ್ ಅಪ್ಲಿಕೇಶನ್‌ ಸಂದರ್ಭದಲ್ಲಿ ವಯಸ್ಸು.
    ಅರ್ಜಿದಾರರ ಗರಿಷ್ಠ ವಯಸ್ಸು 70 ವರ್ಷಗಳಾಗಿರಬೇಕು* (ಹಣಕಾಸು ಅಲ್ಲದ ಆಸ್ತಿ ಮಾಲೀಕರಿಗೆ 80 ವರ್ಷಗಳು)
    * ಲೋನ್ ಮೆಚ್ಯೂರಿಟಿಯಲ್ಲಿ ವೈಯಕ್ತಿಕ ಅರ್ಜಿದಾರ/ಸಹ-ಅರ್ಜಿದಾರರ ವಯಸ್ಸು.
  • ಸಿಬಿಲ್ ಸ್ಕೋರ್: ಆಸ್ತಿ ಮೇಲಿನ ಅನುಮೋದಿತ ಲೋನ್ ಪಡೆಯಲು 700 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಸೂಕ್ತವಾಗಿದೆ.
  • ಉದ್ಯೋಗ: ಸಂಬಳ ಪಡೆಯುವವರು, ಡಾಕ್ಟರ್‌ಗಳು ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಮುಂತಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಗತ್ಯವಿರುವ ಡಾಕ್ಯುಮೆಂಟ್‌ಗಳು:

  • ಗುರುತಿನ ಪುರಾವೆ/ನಿವಾಸ
  • ಆದಾಯದ ಪುರಾವೆ
  • ಪ್ರಾಪರ್ಟಿ-ಸಂಬಂಧಿತ ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಪುರಾವೆ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಮತ್ತು
  • ಕಳೆದ 6 ತಿಂಗಳ ಅಕೌಂಟ್ ಸ್ಟೇಟ್ಮೆಂಟ್‌ಗಳು

ಗಮನಿಸಿ: ಇದು ನಿಮ್ಮ ನಿಜವಾದ ಲೋನ್ ಅಪ್ಲಿಕೇಶನ್ ಆಧಾರದ ಮೇಲೆ ಬದಲಾಗಬಹುದಾದ ಸೂಚನಾತ್ಮಕ ಪಟ್ಟಿಯಾಗಿದೆ.

Eligibility Calculator

ಆಸ್ತಿ ಮೇಲಿನ ಲೋನ್‌ಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ

ನೀವು ಎಷ್ಟು ಲೋನ್ ಮೊತ್ತವನ್ನು ಪಡೆಯಬಹುದು ಎಂಬುದನ್ನು ಕಂಡುಕೊಳ್ಳಿ.

ಆಸ್ತಿ ಮೇಲಿನ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಆಸ್ತಿ ಮೇಲಿನ ಲೋನ್‌ಗೆ ಅರ್ಜಿ ಹಾಕಲು ಹಂತವಾರು ಮಾರ್ಗದರ್ಶಿ

  1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ ಪಿನ್ ಕೋಡ್ ನಮೂದಿಸಿ, ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಪೂರ್ತಿ ಹೆಸರು ಮತ್ತು ಮೊಬೈಲ್ ನಂಬರ್‌ನಂತಹ ಮೂಲಭೂತ ವಿವರಗಳನ್ನು ಒದಗಿಸಿ.
  4. ಈಗ ನೀವು ಅಪ್ಲೈ ಮಾಡಲು ಬಯಸುವ ಲೋನ್ ವಿಧ, ನಿಮ್ಮ ನಿವ್ವಳ ಮಾಸಿಕ ಆದಾಯ, ನಿಮ್ಮ ಪ್ರದೇಶದ ಪಿನ್ ಕೋಡ್ ಮತ್ತು ಅಗತ್ಯವಿರುವ ಲೋನ್ ಮೊತ್ತವನ್ನು ಆಯ್ಕೆಮಾಡಿ.
  5. ನಿಮ್ಮ ಫೋನ್ ನಂಬರನ್ನು ಪರಿಶೀಲಿಸಲು ಒಟಿಪಿ ಜನರೇಟ್ ಮಾಡಿ ಮತ್ತು ಸಲ್ಲಿಸಿ.
  6. ನಿಮ್ಮ ಆಸ್ತಿಯ ಸ್ಥಳ, ಪ್ರಸ್ತುತ ಇಎಂಐ ಮೊತ್ತ/ ಮಾಸಿಕ ಜವಾಬ್ದಾರಿ ಮತ್ತು ಪ್ಯಾನ್ ನಂಬರ್‌ನಂತಹ ಹೆಚ್ಚುವರಿ ವಿವರಗಳನ್ನು ನಮೂದಿಸಿ.
  7. 'ಸಲ್ಲಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ.

ಅಷ್ಟೇ! ನಿಮ್ಮ ಲೋನ್ ಕೋರಿಕೆ ಸಲ್ಲಿಸಲಾಗಿದೆ. ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿ, ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು

ಶುಲ್ಕದ ವಿಧ

ಅನ್ವಯವಾಗುವ ಶುಲ್ಕಗಳು

ಬಡ್ಡಿ ದರ (ವಾರ್ಷಿಕವಾಗಿ)

ವೇತನದಾರ

ಸ್ವಯಂ ಉದ್ಯೋಗಿ

ವೈದ್ಯರು

9% ರಿಂದ 14% (ಫ್ಲೋಟಿಂಗ್ ಬಡ್ಡಿ ದರ)

9% ರಿಂದ 14% (ಫ್ಲೋಟಿಂಗ್ ಬಡ್ಡಿ ದರ)

9% ರಿಂದ 14% (ಫ್ಲೋಟಿಂಗ್ ಬಡ್ಡಿ ದರ)

ಪ್ರಕ್ರಿಯಾ ಶುಲ್ಕಗಳು

ಲೋನ್ ಮೊತ್ತದ 3.54% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು

ರೂ. 2,360/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಫ್ಲೆಕ್ಸಿ ಫೀಸ್ ಟರ್ಮ್ ಲೋನ್ - ಅನ್ವಯವಾಗುವುದಿಲ್ಲ
ಫ್ಲೆಕ್ಸಿ ವೇರಿಯಂಟ್ - ಅನ್ವಯವಾಗುವುದಿಲ್ಲ

ಮುಂಗಡ ಪಾವತಿ ಶುಲ್ಕಗಳು

  • ಪೂರ್ತಿ ಮುಂಗಡ- ಪಾವತಿ
    ಟರ್ಮ್ ಲೋನ್‌: ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).
    ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).
    ಫ್ಲೆಕ್ಸಿ ಹೈಬ್ರಿಡ್ ಲೋನ್: ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

  • ಭಾಗಶಃ ಮುಂಪಾವತಿ
    ಅಂತಹ ಭಾಗಶಃ ಮುಂಗಡ ಪಾವತಿಯ ದಿನಾಂಕದಂದು ಪೂರ್ವಪಾವತಿ ಮಾಡಿದ ಲೋನ್‌ನ ಅಸಲು ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).
    ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್) ಮತ್ತು ಹೈಬ್ರಿಡ್ ಫ್ಲೆಕ್ಸಿಗೆ ಅನ್ವಯವಾಗುವುದಿಲ್ಲ

    ಬಿಸಿನೆಸ್ ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ, ಸಹ-ಅರ್ಜಿದಾರ(ರು) ಇರುವ ಅಥವಾ ಇಲ್ಲದ ವೈಯಕ್ತಿಕ ಸಾಲಗಾರರಿಗೆ ಮಂಜೂರು ಮಾಡಿದ ಯಾವುದೇ ಫ್ಲೋಟಿಂಗ್ ದರದ ಟರ್ಮ್ ಲೋನ್ ಮೇಲೆ ಫೋರ್‌ಕ್ಲೋಸರ್ ಶುಲ್ಕಗಳು/ ಮುಂಗಡ ಪಾವತಿ ದಂಡಗಳು ಅನ್ವಯವಾಗುವುದಿಲ್ಲ.

ವಾರ್ಷಿಕ ನಿರ್ವಹಣಾ ಶುಲ್ಕಗಳು

ಟರ್ಮ್ ಲೋನ್‌: ಅನ್ವಯಿಸುವುದಿಲ್ಲ

ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಅನ್ವಯಿಸುವುದಿಲ್ಲ

ಫ್ಲೆಕ್ಸಿ ಹೈಬ್ರಿಡ್ ಲೋನ್: ಆರಂಭಿಕ ಲೋನ್ ಅವಧಿಯಲ್ಲಿ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 0.295% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು). ನಂತರದ ಲೋನ್ ಅವಧಿಗೆ ಅನ್ವಯವಾಗುವುದಿಲ್ಲ.

ಬೌನ್ಸ್ ಶುಲ್ಕಗಳು

ರೂ. 1500 ಪ್ರತಿ ಬೌನ್ಸ್‌ಗೆ

ದಂಡದ ಬಡ್ಡಿ

ಮಾಸಿಕ ಕಂತು ಪಾವತಿಯಲ್ಲಿ ಯಾವುದೇ ವಿಳಂಬವು ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು ಸ್ವೀಕರಿಸುವವರೆಗೆ ಬಾಕಿ ಉಳಿದ ಮಾಸಿಕ ಕಂತುಗಳ ಮೇಲೆ ಪ್ರತಿ ತಿಂಗಳಿಗೆ 3.50% ದರದಲ್ಲಿ ದಂಡದ ಬಡ್ಡಿಯನ್ನು ವಿಧಿಸಲಾಗುತ್ತದೆ.

ಸ್ಟಾಂಪ್ ಡ್ಯೂಟಿ ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ ಮತ್ತು ಲೋನ್ ಮೊತ್ತದಿಂದ ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ
ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು ಹೊಸ ಮ್ಯಾಂಡೇಟ್ ನೋಂದಣಿಯಾಗುವವರೆಗೆ ಗ್ರಾಹಕರ ಬ್ಯಾಂಕ್ ಮ್ಯಾಂಡೇಟ್ ತಿರಸ್ಕರಿಸಿದ ಗಡುವು ದಿನಾಂಕದ ಮೊದಲ ತಿಂಗಳಿನಿಂದ ತಿಂಗಳಿಗೆ ರೂ. 450/
ಬ್ರೋಕನ್ ಪೀರಿಯಡ್ ಬಡ್ಡಿ/ ಇಎಂಐ-ಪೂರ್ವ ಬಡ್ಡಿ

"ಬ್ರೋಕನ್ ಪೀರಿಯಡ್ ಬಡ್ಡಿ/ ಪ್ರಿ-ಇಎಂಐ ಬಡ್ಡಿ" ಎಂಬುದು ಲೋನ್ ಸಂದಾಯವಾದ ದಿನಾಂಕದಿಂದ ಅನ್ವಯವಾಗುವ ಬಡ್ಡಿಯಾಗಿದ್ದು, ಅದರಲ್ಲಿ ಎರಡು ವಿಧಗಳಿವೆ:

ಸನ್ನಿವೇಶ 1:: ಲೋನ್ ವಿತರಣೆಯ ದಿನಾಂಕದಿಂದ 30 (ಮೂವತ್ತು) ದಿನಗಳ ಅವಧಿಗಿಂತ ಮೇಲ್ಪಟ್ಟು

ಬ್ರೋಕನ್ ಪೀರಿಯಡ್ ಬಡ್ಡಿ/ ಪ್ರಿ-ಇಎಂಐ ಬಡ್ಡಿಯನ್ನು ಮರುಪಡೆಯುವ ವಿಧಾನ:
ಟರ್ಮ್ ಲೋನಿಗಾಗಿ: ವಿತರಣೆಯಿಂದ ಕಡಿತ
ಫ್ಲೆಕ್ಸಿ ಟರ್ಮ್ ಲೋನಿಗೆ: ಮೊದಲ ಕಂತು ಮೊತ್ತಕ್ಕೆ ಸೇರಿಸಲಾಗುತ್ತದೆ
ಹೈಬ್ರಿಡ್ ಫ್ಲೆಕ್ಸಿ ಲೋನಿಗೆ: ಮೊದಲ ಕಂತು ಮೊತ್ತಕ್ಕೆ ಸೇರಿಸಲಾಗುತ್ತದೆ

ಸನ್ನಿವೇಶ 2: ಲೋನ್ ವಿತರಣೆಯ ದಿನಾಂಕದಿಂದ 30 (ಮೂವತ್ತು) ದಿನಗಳಿಗಿಂತ ಕಡಿಮೆಗೆ, ಮೊದಲ ಕಂತಿನ ಮೇಲಿನ ಬಡ್ಡಿಯನ್ನು ನೈಜ ದಿನಗಳಿಗೆ ವಿಧಿಸಲಾಗುತ್ತದೆ

ಅಡಮಾನ ಮೂಲ ಶುಲ್ಕಗಳು ರೂ. 3000/-
ಆಸ್ತಿ ಒಳನೋಟ (ಪಡೆದಿದ್ದರೆ)
ರೂ. 6999/- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಆಗಾಗ ಕೇಳುವ ಪ್ರಶ್ನೆಗಳು

ಆಸ್ತಿ ಮೇಲಿನ ಲೋನ್ ಅನ್ನು ಯಾರು ಪಡೆಯಬಹುದು?

ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ಸಂಬಳದಾರ ವ್ಯಕ್ತಿ ಅಥವಾ ಸ್ವಯಂ ಉದ್ಯೋಗಿಗಳು ಬಜಾಜ್ ಫಿನ್‌ಸರ್ವ್‌ನೊಂದಿಗೆ ಆಸ್ತಿ ಮೇಲಿನ ಲೋನ್‌ಗೆ ಅರ್ಜಿ ಹಾಕಬಹುದು. ನಿಮ್ಮ ವಯಸ್ಸು, ಉದ್ಯೋಗದ ಸ್ಥಿತಿ ಮತ್ತು ವಾಸವಿರುವ ನಗರವು ಇತರ ಪ್ರಮುಖ ಮಾನದಂಡಗಳಾಗಿವೆ.

ಆಸ್ತಿ ಮೇಲಿನ ಲೋನ್‌ಗೆ ನಾನು ಅರ್ಹನೇ?

ನೀವು 25 ರಿಂದ 70 ವರ್ಷಗಳ ನಡುವಿನ ಸಂಬಳದಾರ ಭಾರತೀಯ ನಾಗರಿಕ ಅಥವಾ 25 ರಿಂದ 70 ವರ್ಷಗಳ ನಡುವಿನ ಸ್ವಯಂ ಉದ್ಯೋಗಿ ಭಾರತೀಯರಾಗಿದ್ದರೆ, ನೀವು ಅರ್ಹರಾಗಿರುತ್ತೀರಿ. ಆಸ್ತಿ ಮೇಲಿನ ಲೋನ್‌ಗೆ ಅಪ್ಲೈ ಮಾಡುವಾಗ ನಿಮ್ಮ ಆದಾಯದ ಪ್ರೊಫೈಲ್, ಸಿಬಿಲ್ ಸ್ಕೋರ್ ಮತ್ತಿತರ ಅಂಶಗಳನ್ನು ಕೂಡ ಪರಿಗಣಿಸಲಾಗುತ್ತದೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ನನ್ನ ಆಸ್ತಿಯ ಮೇಲೆ ನನಗೆ ಎಷ್ಟು ಲೋನ್ ಸಿಗುತ್ತದೆ?

ಆಸ್ತಿ ಮೇಲಿನ ಲೋನ್ ಒಂದು ಸೆಕ್ಯೂರ್ಡ್ ಲೋನ್ ಆಗಿದ್ದು, ಇದರಲ್ಲಿ ನಿಮ್ಮ ವೆಚ್ಚಗಳನ್ನು ನಿಭಾಯಿಸಲು ನೀಡುವ ಗಣನೀಯ ಮಂಜೂರಾತಿ ಮೊತ್ತಕ್ಕೆ ಬದಲಾಗಿ ನಿಮ್ಮ ಆಸ್ತಿಯನ್ನು ಸಾಲದಾತರಿಗೆ ಅಡಮಾನ ಇಡುತ್ತೀರಿ. ಸಾಲಗಾರ ವ್ಯಕ್ತಿಯ ಪ್ರೊಫೈಲ್ ಮತ್ತು ಮರುಪಾವತಿ ಸಾಮರ್ಥ್ಯ, ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ಸಾಲದಾತರ ಲೋನ್ ಮತ್ತು ಆಸ್ತಿ ಮೌಲ್ಯದ ಅನುಪಾತ ಸೇರಿದಂತೆ ಹಲವಾರು ಅಂಶಗಳು ಅಂತಿಮ ಲೋನ್ ಮೊತ್ತದ ಮೇಲೆ ಪ್ರಭಾವ ಬೀರುತ್ತವೆ.

ಆಸ್ತಿ ಮೇಲಿನ ಲೋನ್‌ಗೆ ಗರಿಷ್ಠ ಮರುಪಾವತಿ ಅವಧಿ ಎಷ್ಟು?

15 ವರ್ಷಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಯಲ್ಲಿ ನೀವು ಪಡೆದ ಒಟ್ಟು ಮೊತ್ತವನ್ನು ಮರುಪಾವತಿ ಮಾಡಬಹುದು*.

ನಾನು ಆಸ್ತಿ ಮೇಲಿನ ಲೋನ್‌ಗೆ ಅಪ್ಲೈ ಮಾಡಲು ಬಯಸಿದರೆ ನನ್ನ ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯ ಪ್ರಮುಖ ಸೂಚಕವಾಗಿದೆ. ಆಸ್ತಿ ಮೇಲಿನ ಲೋನ್ ಪಡೆಯಲು, 700 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ನಿರ್ವಹಿಸಿದರೆ ಉತ್ತಮ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ